Homeಮುಖಪುಟಬಿಹಾರ: 'ಜನ್ ಅಧಿಕಾರ್ ಪಕ್ಷ'ವನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸಿದ ಪಪ್ಪು ಯಾದವ್

ಬಿಹಾರ: ‘ಜನ್ ಅಧಿಕಾರ್ ಪಕ್ಷ’ವನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸಿದ ಪಪ್ಪು ಯಾದವ್

- Advertisement -
- Advertisement -

ಪಪ್ಪು ಯಾದವ್ ಅವರು ಇತ್ತೀಚೆಗೆ ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಅವರನ್ನು ಭೇಟಿ ಮಾಡಿದ ನಂತರ ಪಕ್ಷ ವಿಲೀನದ ಊಹಾಪೋಹಗಳು ಹಬ್ಬಿದ್ದವು.

2015ರ ಬಿಹಾರ ವಿಧಾನಸಭೆ ಚುನಾವಣೆಗೂ ಮುನ್ನ, ನಿತೀಶ್ ಕುಮಾರ್ ಮತ್ತು ಲಾಲು ಪ್ರಸಾದ್ ಯಾದವ್ ಅವರ ಮೈತ್ರಿ ವಿರುದ್ಧ ಜನ ಅಧಿಕಾರ ಪಕ್ಷವನ್ನು ಪಪ್ಪು ಯಾದವ್ ಸ್ಥಾಪಿಸಿದ್ದರು.

ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರ ಆಶೀರ್ವಾದದಿಂದ ಕಾಂಗ್ರೆಸ್ ಜೊತೆ ಪಕ್ಷವನ್ನು ವಿಲೀನಗೊಳಿಸಿರುವುದಾಗಿ ಪಪ್ಪು ಯಾದವ್ ಹೇಳಿದ್ದಾರೆ.

ರಾಹುಲ್ ಗಾಂಧಿಯನ್ನು ಹೊಗಳಿದ ಪಪ್ಪು ಯಾದವ್, ಈಗ ರಾಹುಲ್ ಗಾಂಧಿಗಿಂತ ಪರ್ಯಾಯ ಯಾರೂ ಇಲ್ಲ ಎಂದಿದ್ದಾರೆ. ಲಾಲೂ ಪ್ರಸಾದ್ ಯಾದವ್ ಮತ್ತು ಕಾಂಗ್ರೆಸ್ ಜೊತೆಯಲ್ಲಿ ನಾವು 2024 ಮತ್ತು 2025 ರ ಚುನಾವಣೆಗಳಲ್ಲಿ ಗೆಲುವು ದಾಖಲಿಸುತ್ತೇವೆ ಎಂದಿದ್ದಾರೆ.

ಪಪ್ಪು ಯಾದವ್ ತಮ್ಮ ಜನ ಅಧಿಕಾರ ಪಕ್ಷವನ್ನು ಪ್ರಾರಂಭಿಸುವ ಮೊದಲು ಆರ್‌ಜೆಡಿ, ಸಮಾಜವಾದಿ ಮತ್ತು ಲೋಕ ಜನಶಕ್ತಿ ಪಕ್ಷಗಳಲ್ಲಿ ಇದ್ದರು. ಪಕ್ಷ ವಿರೋಧಿ ಚಟುವಟಿಕೆಗಳಿಂದಾಗಿ ಪಪ್ಪು ಯಾದವ್ ಅವರನ್ನು ಆರ್‌ಜೆಡಿಯಿಂದ ಹೊರಹಾಕಿದ ನಂತರ ಜನ ಅಧಿಕಾರ ಪಕ್ಷವನ್ನು ಸ್ಥಾಪಿಸಿದ್ದರು.

ಪ್ರಸ್ತುತ ಲಾಲು ಪ್ರಸಾದ್ ಯಾದವ್ ಅವರ ಜೊತೆ ಯಾವುದೇ ಮನಸ್ತಾಪ ಇಲ್ಲ ಎಂದು ಪಪ್ಪು ಹೇಳಿದ್ದಾರೆ. ಮಂಗಳವಾರ ಲಾಲು ಯಾದವ್ ಮತ್ತು ತೇಜಸ್ವಿ ಯಾವದ್ ಅವರನ್ನು ಭೇಟಿಯಾದ ನಂತರ ಅವರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.

ಪಪ್ಪು ಯಾದವ್ ಅವರ ಪತ್ನಿ ರಂಜೀನ್ ಕಾಂಗ್ರೆಸ್ ನಾಯಕಿಯಾಗಿದ್ದಾರೆ. ಅವರ ಮಗ ಸಾರ್ಥಕ್ ರಂಜನ್ ಕ್ರಿಕೆಟಿಗ.

ಇದನ್ನೂ ಓದಿ : ಬಿಎಸ್‌ಪಿಯಿಂದ ಉಚ್ಚಾಟನೆಗೊಂಡಿದ್ದ ಸಂಸದ ಡ್ಯಾನಿಶ್ ಅಲೀ ಕಾಂಗ್ರೆಸ್ ಸೇರ್ಪಡೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸ್ವಾತಿ ಮಲಿವಾಲ್‌ ವಿರುದ್ಧ ದೂರು ನೀಡಿದ ಕೇಜ್ರಿವಾಲ್ ಸಹಾಯಕ ಬಿಭವ್ ಕುಮಾರ್

0
ದೆಹಲಿ ಎಎಪಿ ನಾಯಕಿ, ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್‌ ಮೇಲಿನ ಹಲ್ಲೆ ಪ್ರಕರಣ ವಿಭಿನ್ನ ತಿರುವನ್ನು ಪಡೆದುಕೊಂಡಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಬಿಭವ್ ಕುಮಾರ್ ಅವರು ಶುಕ್ರವಾರ ಎಎಪಿ...