ಜೂನ್ 4 ರಂದು ನಡೆಯಲಿರುವ ಲೋಕಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಯಲ್ಲಿ ಸಹಾಯಕ ಚುನಾವಣಾಧಿಕಾರಿ (ಎಆರ್‌ಒ) ಟೇಬಲ್‌ಗಳಲ್ಲಿ ಅಭ್ಯರ್ಥಿಗಳ ಎಣಿಕೆ ಏಜೆಂಟ್‌ಗಳಿಗೆ ಅವಕಾಶ ನೀಡುತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡ ಅಜಯ್ ಮಾಕನ್ ಆರೋಪಿಸಿದ್ದಾರೆ.
ರಾಜ್ಯಸಭಾ ಸಂಸದರು ಈ ಸಮಸ್ಯೆಯನ್ನು “ಆಪಾದಿತ ಇವಿಎಂ ರಿಗ್ಗಿಂಗ್‌ಗಿಂತ ದೊಡ್ಡದು” ಎಂದು ಹೇಳಿದ ಅವರು, ಇದನ್ನು ಪರಿಹರಿಸಲು ಚುನಾವಣಾ ಆಯೋಗವನ್ನು ಒತ್ತಾಯಿಸಿದರು.
“ಎಆರ್‌ಒ ಟೇಬಲ್‌ನಲ್ಲಿರುವ ‘ಅಭ್ಯರ್ಥಿಗಳ ಎಣಿಕೆ ಏಜೆಂಟ್’ಗಳನ್ನು ಮೊದಲ ಬಾರಿಗೆ ಅನುಮತಿಸಲಾಗುತ್ತಿಲ್ಲ. ನಾನು ಈ ಹಿಂದೆ 9 ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದೇನೆ ಮತ್ತು ಇದು ಮೊದಲ ಬಾರಿಗೆ ನಡೆಯುತ್ತಿದೆ. ನಿಜವಾಗಿದ್ದರೆ, ಇದು ಆಪಾದಿತ ಇವಿಎಂ ರಿಗ್ಗಿಂಗ್‌ಗಿಂತ ದೊಡ್ಡದಾಗಿದೆ” ಎಂದು ಎಕ್ಸ್ ಮೂಲಕ ಆಘಾತ ವ್ಯಕ್ತಪಡಿಸಿದ್ದಾರೆ ಮಾಕನ್.
“ನಾನು ಈ ಸಮಸ್ಯೆಯನ್ನು ಎಲ್ಲ ಅಭ್ಯರ್ಥಿಗಳಿಗೆ ಗಮನಕ್ಕೆ ತರಲು ಬಯಸುತ್ತೇನೆ! ಭಾರತೀಯ ಚುನಾವಣಾ ಆಯೋಗವು ಅದನ್ನು ಶೀಘ್ರದಲ್ಲೇ ಸರಿಪಡಿಸುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದು ಅವರು ಹೇಳಿದರು.
ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಇದೊಂದು ಸಾಮೂಹಿಕ ರಿಗ್ಗಿಂಗ್ ಎಂದು ಬಣ್ಣಿಸಿದ್ದಾರೆ. ಆದಾಗ್ಯೂ, ಅಭ್ಯರ್ಥಿಗಳ ಏಜೆಂಟರನ್ನು ಎಣಿಕೆ ಮಾಡಲು ಆರ್‌ಒ/ಎಆರ್‌ಒಗಳ ಟೇಬಲ್‌ಗಳಲ್ಲಿ ಅನುಮತಿಸಲಾಗುವುದು ಎಂದು ದೆಹಲಿಯ ಮುಖ್ಯ ಚುನಾವಣಾಧಿಕಾರಿ ಸ್ಪಷ್ಟಪಡಿಸಿದ್ದಾರೆ.
‘Candidate’s Counting Agents’ at the ARO table are NOT being allowed for the first time!!!
I have contested 9 Lok Sabha & Vidhan Sabha elections in the past- And this is happening for the first time.
If true, this is bigger than the alleged EVM rigging!
I am flagging this…
— Ajay Maken (@ajaymaken) June 1, 2024
ಎಲ್ಲಾ 543 ಲೋಕಸಭಾ ಕ್ಷೇತ್ರಗಳಿಗೆ ಜೂನ್ 4 ರಂದು (ಮಂಗಳವಾರ) ಮತ ಎಣಿಕೆ ನಡೆಯಲಿದೆ. ಎಕ್ಸಿಟ್ ಪೋಲ್‌ಗಳು ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟಕ್ಕೆ (ಎನ್‌ಡಿಎ) ಭಾರಿ ಗೆಲುವು ಸಾಧಿಸುವ ಮುನ್ಸೂಚನೆ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಸತತ ಮೂರನೇ ಅವಧಿಗೆ ಅಧಿಕಾರವನ್ನು ಉಳಿಸಿಕೊಳ್ಳಲಿದ್ದಾರೆ ಎಂದು ಅಂದಾಝಿಸಲಾಗಿದೆ.
ಎನ್‌ಡಿಎ ತನ್ನ 2019ರ 353 ಸ್ಥಾನಗಳನ್ನು ಮೀರುವ ಸಾಧ್ಯತೆಯಿದೆ ಮತ್ತು 350-380 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ ಎಂದು ಹೆಚ್ಚಿನ ಸಮೀಕ್ಷೆಗಳು ಹೇಳಿದ್ದಾರೆ. ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ಸೇರಿದಂತೆ ಕನಿಷ್ಠ ಮೂವರು ಸಮೀಕ್ಷೆಗಾರರು ಎನ್‌ಡಿಎ 400 ಸೀಟುಗಳ ಗಡಿ ದಾಟುವ ಸಾಧ್ಯತೆ ಇದೆ ಎಂದು ಭವಿಷ್ಯ ನುಡಿದಿದ್ದಾರೆ.
ಇಂಡಿಯಾ ಟುಡೆ-ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆಯು ವಿರೋಧ ಪಕ್ಷಗಳ ಇಂಡಿಯಾ ಬಣಕ್ಕೆ 131–166 ಸ್ಥಾನಗಳನ್ನು ಭವಿಷ್ಯ ನುಡಿದಿದೆ.
ಇದನ್ನೂ ಓದಿ; ಇಂದು ತಿಹಾರ್ ಜೈಲಿಗೆ ಶರಣಾಗಲಿರುವ ಅರವಿಂದ್ ಕೇಜ್ರಿವಾಲ್; ಬೆಂಬಲಿಗರಿಗೆ ಸಂದೇಶ ರವಾನೆ


