Homeಅಂತರಾಷ್ಟ್ರೀಯಮೂರು ಹಂತದ ಕದನ ವಿರಾಮ ಪ್ರಸ್ತಾಪ; ಯುದ್ಧ ಕೊನೆಗೊಳಿಸುತ್ತಾ ಇಸ್ರೇಲ್‌?

ಮೂರು ಹಂತದ ಕದನ ವಿರಾಮ ಪ್ರಸ್ತಾಪ; ಯುದ್ಧ ಕೊನೆಗೊಳಿಸುತ್ತಾ ಇಸ್ರೇಲ್‌?

- Advertisement -
- Advertisement -

ಗಾಝಾದಲ್ಲಿ ಕದನ ವಿರಾಮಕ್ಕೆ ಸಂಬಂಧಿಸಿ ಇಸ್ರೇಲ್‌ ಮೂರು ಹಂತದ ಕದನ ವಿರಾಮಕ್ಕೆ ಪ್ರಸ್ತಾಪವನ್ನು ಮಾಡಿದೆ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಹೇಳಿದ್ದು, ಯುದ್ಧ ಅಂತ್ಯಗೊಳಿಸಲು ಇದು ಸಕಾಲ ಎಂದು ಹೇಳಿದ್ದಾರೆ. ಈಜಿಪ್ಟ್‌ ಮತ್ತು ಕತಾರ್‌ ಅಮೆರಿಕ ಸೇರಿದಂತೆ ರಾಷ್ಟ್ರಗಳ ಮಧ್ಯಸ್ಥಿಕೆ ಇದೀಗ ಹೊಸ ಭರವಸೆಯನ್ನು ಮೂಡಿಸಿದ್ದರೂ ನೆತನ್ಯಾಹು ಮಾತ್ರ ಇದಕ್ಕೆ ಸಮ್ಮತಿಸುವ ಲಕ್ಷಣ ಕಂಡು ಬರುತ್ತಿಲ್ಲ.

ಗಾಝಾದಲ್ಲಿ ಹಮಾಸ್‌ ವಶದಲ್ಲಿರುವ ಒತ್ತೆಯಾಳುಗಳ ಕುಟುಂಬಸ್ಥರು ಅಮೆರಿಕದ ಅಧ್ಯಕ್ಷ  ಜೋ ಬೈಡೆನ್ ಅವರು ಪ್ರಸ್ತಾಪಿಸಿದ ‘ಕದನ ವಿರಾಮ’ ಒಪ್ಪಂದವನ್ನು ಒಪ್ಪಿಕೊಳ್ಳುವಂತೆ ಇಸ್ರೇಲ್‌ ಸರಕಾರ ಮತ್ತು ಪ್ರಧಾನಿ ಬೆಂಜಮಿನ್ ನೆತನ್ಯಾಹುಗೆ ಆಗ್ರಹಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಒತ್ತೆಯಾಳುಗಳು ಮತ್ತು ನಾಪತ್ತೆಯದವರ ಕಟುಂಬ್ಥರ ವೇದಿಕೆಯು ಒಪ್ಪಂದವನ್ನು ಸ್ವೀಕರಿಸುವಂತೆ ಇಸ್ರೇಲ್ ನಾಗರಿಕರು ಬೀದಿಗಿಳಿಯುವಂತೆ ಕರೆ ನೀಡಿದೆ. ಯುದ್ಧವನ್ನು ಕೊನೆಗೊಳಿಸಲು ಇಸ್ರೇಲ್  ‘ಹೊಸ ಪ್ರಸ್ತಾಪವನ್ನು’ ಮುಂದಿಟ್ಟಿದೆ ಎಂದು  ಶ್ವೇತಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಅಮೆರಿಕದ ಅಧ್ಯಕ್ಷ ಬೈಡೆನ್ ಹೇಳಿದ ನಂತರ, ನೆತನ್ಯಾಹು ಒಪ್ಪಂದಕ್ಕೆ ಅಡ್ಡಿ ಮಾಡುತ್ತಾರೆ ಎಂದು ಒತ್ತೆಯಾಳುಗಳು ಮತ್ತು ನಾಪತ್ತೆಯದವರ ಕಟುಂಬ್ಥರ ವೇದಿಕೆಯು ಸಂಶಯ ವ್ಯಕ್ತಪಡಿಸಿದೆ.

ಅಮೆರಿಕದ ಅಧ್ಯಕ್ಷ ಬಿಡೆನ್ ವಿವರಿಸಿದ ಮೂರು-ಹಂತದ ಒಪ್ಪಂದವು ಗಾಝಾ ಪಟ್ಟಿಯಲ್ಲಿ ಶಾಶ್ವತ ಕದನ ವಿರಾಮ,  ಗಾಝಾದ ಎಲ್ಲಾ ಜನನಿಬಿಡ ಪ್ರದೇಶಗಳಿಂದ ಇಸ್ರೇಲ್‌ ಪಡೆಗಳ ವಾಪಾಸ್ಸಾತಿ, ಇಸ್ರೇಲ್‌ ಒತ್ತೆಯಾಳುಗಳ ಬಿಡುಗಡೆ ಬಗ್ಗೆ ಹೇಳುತ್ತದೆ. ಹಮಾಸ್ ಪ್ರಸ್ತಾವನೆಗೆ ಸಮ್ಮತಿಸಿದ್ದು, ಇಸ್ರೇಲ್‌ ನಡೆಸುತ್ತಿರುವ ಎಂಟು ತಿಂಗಳ ಯುದ್ಧ ಕೊನೆಗೊಳ್ಳುವ ಭರವಸೆ ಹೆಚ್ಚಳವಾಗಿದೆ.

ಶಾಶ್ವತ ಕದನ ವಿರಾಮ, ಗಾಝಾ ಪಟ್ಟಿಯಿಂದ ಇಸ್ರೇಲ್‌ ಪಡೆಗಳ ವಾಪಾಸ್ಸಾತಿ, ಗಾಝಾ ಪುನರ್ನಿರ್ಮಾಣ, ಸ್ಥಳಾಂತರಗೊಂಡ ಜನರಿಗೆ ಪುನರ್ವಸತಿ ಕುರಿತ ಪ್ರಸ್ತಾಪದೊಂದಿಗೆ ಸಮ್ಮತಿಗೆ ಸಿದ್ಧವಿರುವುದಾಗಿ ಹಮಾಸ್‌ ಪುನರುಚ್ಚರಿಸಿದೆ. ಯುಎಸ್, ಕತಾರ್ ಮತ್ತು ಈಜಿಪ್ಟ್ ಕೂಡ ಜಂಟಿಯಾಗಿ ಒಪ್ಪಂದವನ್ನು ಅಂತಿಮಗೊಳಿಸಲು ಹಮಾಸ್ ಮತ್ತು ಇಸ್ರೇಲ್‌ಗೆ ಕರೆ ನೀಡಿವೆ. ಆದರೆ ನೆತನ್ಯಾಹು ಮಾತ್ರ ಗಾಝಾದ ಮೇಲೆ ಇಸ್ರೇಲ್‌ನ ಯುದ್ಧವು ಕೊನೆಗೊಳ್ಳಬೇಕಾದರೆ, ಹಮಾಸ್‌ನ್ನು ಸಂಪೂರ್ಣವಾಗಿ ನಾಶಪಡಿಸಬೇಕು ಎಂಬ ನಿಲುವನ್ನೇ ಮುಂದುವರಿಸಿದ್ದಾರೆ. ಹಮಾಸ್‌ನ ಮಿಲಿಟರಿ ಮತ್ತು ಆಡಳಿತದ ನಾಶ, ಎಲ್ಲಾ ಒತ್ತೆಯಾಳುಗಳನ್ನು ಮುಕ್ತಗೊಳಿಸುವುದು ಮತ್ತು ಗಾಝಾ ಇನ್ನು ಮುಂದೆ ಇಸ್ರೇಲ್‌ಗೆ ಅಪಾಯವನ್ನುಂಟುಮಾಡುವುದಿಲ್ಲ ಎಂದು ಖಚಿತಪಡಿಸಿಕೊಳ್ಳುವವರೆಗೆ ಯುದ್ಧ ನಿಲ್ಲಿಸುವುದಿಲ್ಲ, ಶಾಶ್ವತ ಕದನ ವಿರಾಮವನ್ನು ಜಾರಿಗೆ ತರುವ ಮೊದಲು ಆ ಷರತ್ತುಗಳನ್ನು ನಾವು ಪೂರೈಸಬೇಕಿದೆ ಎಂದು ನೆತನ್ಯಾಹು ಕಚೇರಿ ಹೇಳಿದೆ.

ಇನ್ನೊಂದು ಕಡೆ ಒಪ್ಪಂದಕ್ಕೆ ಸಮ್ಮತಿಸದಂತೆ ನೆತನ್ಯಾಹು ಸರಕಾರದಲ್ಲೇ ಒತ್ತಡ ಇದೆ ಎನ್ನಲಾಗಿದೆ.  ಅಮೇರಿಕನ್ ಸುದ್ದಿ ಸಂಸ್ಥೆ ಆಕ್ಸಿಯೋಸ್ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ ಪೋಸ್ಟ್‌ನಲ್ಲಿ, ಇಸ್ರೇಲ್‌ನ ಮಂತ್ರಿ ಇಟಾಮರ್ ಬೆನ್-ಗ್ವಿರ್ ಮತ್ತು ಬೆಜಲೆಲ್ ಸ್ಮೊಟ್ರಿಚ್ ಬಿಡೆನ್ ಮಂಡಿಸಿದ ಒತ್ತೆಯಾಳು ಒಪ್ಪಂದದ ಪ್ರಸ್ತಾಪಕ್ಕೆ ಸಮ್ಮತಿಸಿದರೆ ಒಕ್ಕೂಟವನ್ನು ತೊರೆದು ಸರ್ಕಾರವನ್ನು ಉರುಳಿಸುವುದಾಗಿ ನೆತನ್ಯಾಹುಗೆ ಹೇಳಿದ್ದಾರೆ ಎಂದು ವರದಿ ಮಾಡಿದೆ.

ಕದನ ವಿರಾಮದ ಪ್ರಸ್ತಾಪದಲ್ಲಿನ ಅಂಶಗಳು:

-6 ವಾರಗಳ ಕಾಲ ಸಂಪೂರ್ಣ ಕದನ ವಿರಾಮ ಮತ್ತು ಗಾಝಾದ ಎಲ್ಲಾ ಜನ ನಿಬಿಡ ಪ್ರದೇಶದಿಂದ ಇಸ್ರೇಲ್‌ ಸೇನೆ ವಾಪಾಸ್ಸಾತಿ

-ಮಹಿಳೆಯರು, ಮಕ್ಕಳು ಸೇರಿ ಒತ್ತೆಯಾಳುಗಳನ್ನು ಹಮಾಸ್‌ ಬಿಡುಗಡೆಗೊಳಿಸುವುದು, ಮೃತ ಒತ್ತೆಯಾಳುಗಳ ಮೃತದೇಹ ಒದಗಿಸುವುದು, ಇದಕ್ಕೆ ಪ್ರತಿಯಾಗಿ ಇಸ್ರೇಲ್‌ ಜೈಲಿನಲ್ಲಿರುವ ಪ್ಯಾಲೆಸ್ತೀನ್‌ ಕೈದಿಗಳ ಬಿಡುಗಡೆ

-ಗಾಝಾ ಪಟ್ಟಿಯಿಂದ ವಲಸೆ ಹೋಗಿರುವ ನಿರಾಶ್ರಿತರಿಗೆ ಸ್ಥಳಾಂತರಕ್ಕೆ ಅವಕಾಶ ಮಾಡಿಕೊಡುವುದು. ದಿನಕ್ಕೆ 600 ಟ್ರಕ್‌ಗಳಷ್ಟು ಮಾನವೀಯ ನೆರವು ನೀಡುವುದು.

ಎರಡನೇ ಹಂತ

-6 ವಾರಗಳಿಗೆ ಕದನ ವಿರಾಮ ವಿಸ್ತರಣೆ, ಗಾಝಾದಿಂದ ಇಸ್ರೇಲ್‌ ಸೇನೆಯ ಸಂಪೂರ್ಣ ವಾಪಾಸ್ಸಾತಿ, ಇಸ್ರೇಲ್‌ ಯೋಧರ ಸಹಿತ ಬದುಕುಳಿದ ಎಲ್ಲಾ ಒತ್ತೆಯಾಳುಗಳ ಬಿಡುಗಡೆ

ಎರಡೂ ಕಡೆಯವರು ಈ ಒಪ್ಪಂದದ ಅಂಶಗಳನ್ನು ಪಾಲಿಸಿದರೆ ಯುದ್ಧವು ಕೊನೆಗೊಳ್ಳಲಿದೆ.

-ಮೂರನೇ ಹಂತ

-ಅಮೆರಿಕ ಮತ್ತು ಅಂತರಾಷ್ಟ್ರೀಯ ಸಮುದಾಯದ ಬೆಂಬಲದಿಂದ ಗಾಝಾದ ಪುನರ್‌ನಿರ್ಮಾಣ ಮತ್ತು ಸ್ಥಿರೀಕರಣ ಯೋಜನೆಗೆ ಚಾಲನೆ

-ಮನೆಗಳು, ಶಾಲೆಗಳು, ಆಸ್ಪತ್ರೆಗಳ ನಿರ್ಮಾಣ. ಈ ಪ್ರಕ್ರಿಯೆ 5 ವರ್ಷಗಳ ಕಾಲ ಮುಂದುವರಿಯುವ ನಿರೀಕ್ಷೆ, ಹಮಾಸ್‌ ಮತ್ತೆ ಶಸ್ತ್ರಾಸ್ತ್ರ ಸಂಗ್ರಹಿಸದಂತೆ ನೋಡುವುದು, ಹಮಾಸ್ ಒಪ್ಪಂದಕ್ಕೆ ಬದ್ಧವಾಗಿರದಿದ್ದರೆ ಮತ್ತೆ ಮಿಲಿಟರಿ ಕಾರ್ಯಾಚರಣೆ, ಆದರೆ ಷರತ್ತುಗಳಿಗೆ ಬದ್ಧವಾಗಿರುವಂತೆ ಹಮಾಸ್‌ ಬಗ್ಗೆ ಈಜಿಪ್ಟ್‌ ಮತ್ತು ಖತಾರ್‌ ನಿಗಾ ವಹಿಸಲಿದೆ.

ಇದನ್ನು ಓದಿ: ಎಕ್ಸಿಟ್ ಪೋಲ್‌ಗಳನ್ನು ಮೋದಿಯೇ ಸಂಯೋಜಿಸಿದ್ದಾರೆ, ಫಲಿತಾಂಶ ಭಿನ್ನವಾಗಿರಲಿದೆ: ಕಾಂಗ್ರೆಸ್‌

 

 

 

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಿಯಾಂಕ ಗಾಂಧಿ

ಗಾಜಾದಲ್ಲಿ ಇಸ್ರೇಲ್‌ನ ‘ಜನಾಂಗೀಯ ಕೃತ್ಯಗಳು’ ನಿಲ್ಲಬೇಕು: ಪ್ರಿಯಾಂಕಾ ಗಾಂಧಿ

0
ಗಾಜಾದಲ್ಲಿ ಇಸ್ರೇಲ್ ನಡೆಸುತ್ತಿರುವ ಮಿಲಿಟರಿ ದಾಳಿಯನ್ನು ಸ್ವೀಕಾರಾರ್ಹವಲ್ಲ ಮತ್ತು ಹತ್ಯಾಕಾಂಡ ಎಂದು ಹೇಳಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಇದನ್ನು ಜಗತ್ತಿನ ಪ್ರತಿಯೊಂದು ಸರ್ಕಾರ ಖಂಡಿಸಬೇಕು ಎಂದು ಶುಕ್ರವಾರ ಕರೆ...