ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ತನ್ನ ಮೊದಲ ಭೇಟಿಗಾಗಿ ಅಹಮದಾಬಾದ್ ಗೆ ಆಗಮಿಸುವ ಮೊದಲು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರಧಾನಿ ಮೋದಿ ಕೂಡಾ ಹಿಂದಿಯಲ್ಲೇ ಮರು ಉತ್ತರಿಸಿದ್ದಾರೆ.
“ನಾವು ಭಾರತಕ್ಕೆ ಭೇಟಿ ನೀಡಲು ತಯಾರಾಗಿದ್ದೇವೆ, ನಾವು ಅದರ ಹಾದಿಯಲ್ಲಿದ್ದೇವೆ, ಕೆಲವೇ ಗಂಟೆಗಳಲ್ಲಿ ಎಲ್ಲರನ್ನು ಭೇಟಿಯಾಗುತ್ತೇವೆ” ಎಂದು ಹಿಂದಿ ಲಿಪಿಯಲ್ಲಿ ಭಾರತದ ಭೇಟಿಯ ಬಗ್ಗೆ ಟ್ರಂಪ್ ಟ್ವೀಟಿಸಿದ್ದಾರೆ.
हम भारत आने के लिए तत्पर हैं । हम रास्ते में हैँ, कुछ ही घंटों में हम सबसे मिलेंगे!
— Donald J. Trump (@realDonaldTrump) February 24, 2020
ಪ್ರಧಾನಿ ಮೋದಿ ಕೂಡಾ ಟ್ರಂಪ್ ಟ್ವೀಟಿಗೆ “ಅತಿಥಿ ದೇವೋಭವ” ಎಂದು ಮರುಟ್ವೀಟಿಸಿದ್ದಾರೆ. ಅಲ್ಲದೆ “ಭಾರತ ನಿಮ್ಮ ಆಗಮನಕ್ಕಾಗಿ ಕಾಯುತ್ತಿದೆ” ಎಂದು ಪ್ರಧಾನಿ ಮೋದಿ ಈ ಮೊದಲು ಟ್ವೀಟಿಸಿದ್ದರು.
अतिथि देवो भव: https://t.co/mpccRkEJCE
— Narendra Modi (@narendramodi) February 24, 2020
ಅಮೆರಿಕಾ ಅಧ್ಯಕ್ಷ ಟ್ರಂಪ್ 36 ಗಂಟೆಗಳ ಭೇಟಿಯ ಮೊದಲ ದಿನ ಗುಜರಾತ್‌ನ ಅತಿದೊಡ್ಡ ನಗರದಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಲಿದ್ದಾರೆ. ಸಭೆಯ ಮೊದಲು ಇವರಿಬ್ಬರು ಸರಣಿ ಟ್ವೀಟ್‌ಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ.
ಈ ಹಿಂದೆಯೂ ಪ್ರಧಾನಿ ಮೋದಿ ವಿದೇಶಿ ನಾಯಕರನ್ನು ತಮ್ಮ ಭಾಷೆಯಲ್ಲಿ ಟ್ವೀಟ್ ಮಾಡುವ ಮೂಲಕ ಸ್ವಾಗತಿಸಿದ್ದರು.
ಭಾರತಕ್ಕೆ ಆಗಮಿಸಿದ ನಂತರ ಅಧ್ಯಕ್ಷ ಟ್ರಂಪ್ ಮತ್ತು ಪ್ರಧಾನಿ ಮೋದಿ ,ವಿಶ್ವದ ಅತಿದೊಡ್ಡದಾಗದ ಕ್ರೀಡಾಂಗಣ ಎಂದು ಹೇಳಲಾಗುವ ಸರ್ದಾರ್ ವಲ್ಲಭಭಾಯ್ ಪಟೇಲ್ ಕ್ರಿಕೆಟ್ ಕ್ರೀಡಾಂಗಣಕ್ಕೆ ತೆರಳಲಿದ್ದಾರೆ. ಅಲ್ಲಿ “ನಮಸ್ತೆ ಟ್ರಂಪ್” ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.


