Homeಮುಖಪುಟಹಿಂದಿಯಲ್ಲಿ ಟ್ವೀಟಿಸಿದ ಟ್ರಂಪ್...!! ಉತ್ತರಿಸಿದ ಮೋದಿ...!!

ಹಿಂದಿಯಲ್ಲಿ ಟ್ವೀಟಿಸಿದ ಟ್ರಂಪ್…!! ಉತ್ತರಿಸಿದ ಮೋದಿ…!!

- Advertisement -
- Advertisement -

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ತನ್ನ ಮೊದಲ ಭೇಟಿಗಾಗಿ ಅಹಮದಾಬಾದ್ ಗೆ ಆಗಮಿಸುವ ಮೊದಲು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರಧಾನಿ ಮೋದಿ ಕೂಡಾ ಹಿಂದಿಯಲ್ಲೇ ಮರು ಉತ್ತರಿಸಿದ್ದಾರೆ.

“ನಾವು ಭಾರತಕ್ಕೆ ಭೇಟಿ ನೀಡಲು ತಯಾರಾಗಿದ್ದೇವೆ, ನಾವು ಅದರ ಹಾದಿಯಲ್ಲಿದ್ದೇವೆ, ಕೆಲವೇ ಗಂಟೆಗಳಲ್ಲಿ ಎಲ್ಲರನ್ನು ಭೇಟಿಯಾಗುತ್ತೇವೆ” ಎಂದು ಹಿಂದಿ ಲಿಪಿಯಲ್ಲಿ ಭಾರತದ ಭೇಟಿಯ ಬಗ್ಗೆ ಟ್ರಂಪ್ ಟ್ವೀಟಿಸಿದ್ದಾರೆ.

ಪ್ರಧಾನಿ ಮೋದಿ ಕೂಡಾ ಟ್ರಂಪ್ ಟ್ವೀಟಿಗೆ “ಅತಿಥಿ ದೇವೋಭವ” ಎಂದು ಮರುಟ್ವೀಟಿಸಿದ್ದಾರೆ. ಅಲ್ಲದೆ “ಭಾರತ ನಿಮ್ಮ ಆಗಮನಕ್ಕಾಗಿ ಕಾಯುತ್ತಿದೆ” ಎಂದು ಪ್ರಧಾನಿ ಮೋದಿ ಈ ಮೊದಲು ಟ್ವೀಟಿಸಿದ್ದರು.

ಅಮೆರಿಕಾ ಅಧ್ಯಕ್ಷ ಟ್ರಂಪ್ 36 ಗಂಟೆಗಳ ಭೇಟಿಯ ಮೊದಲ ದಿನ ಗುಜರಾತ್‌ನ ಅತಿದೊಡ್ಡ ನಗರದಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಲಿದ್ದಾರೆ. ಸಭೆಯ ಮೊದಲು ಇವರಿಬ್ಬರು ಸರಣಿ ಟ್ವೀಟ್‌ಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ.

ಈ ಹಿಂದೆಯೂ ಪ್ರಧಾನಿ ಮೋದಿ ವಿದೇಶಿ ನಾಯಕರನ್ನು ತಮ್ಮ ಭಾಷೆಯಲ್ಲಿ ಟ್ವೀಟ್ ಮಾಡುವ ಮೂಲಕ ಸ್ವಾಗತಿಸಿದ್ದರು.

ಭಾರತಕ್ಕೆ ಆಗಮಿಸಿದ ನಂತರ ಅಧ್ಯಕ್ಷ ಟ್ರಂಪ್ ಮತ್ತು ಪ್ರಧಾನಿ ಮೋದಿ ,ವಿಶ್ವದ ಅತಿದೊಡ್ಡದಾಗದ ಕ್ರೀಡಾಂಗಣ ಎಂದು ಹೇಳಲಾಗುವ ಸರ್ದಾರ್ ವಲ್ಲಭಭಾಯ್ ಪಟೇಲ್ ಕ್ರಿಕೆಟ್ ಕ್ರೀಡಾಂಗಣಕ್ಕೆ ತೆರಳಲಿದ್ದಾರೆ. ಅಲ್ಲಿ “ನಮಸ್ತೆ ಟ್ರಂಪ್” ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಿಮಾಚಲ ಕಾಂಗ್ರೆಸ್​​ನಲ್ಲಿ ಎಲ್ಲವೂ ಸರಿಯಿದೆ: ಡಿಕೆ ಶಿವಕುಮಾರ್

0
ಬಣ ರಾಜಕೀಯದಿಂದ ಪತನವಾಗುವ ಹಂತ ತಲುಪಿದ್ದ ಹಿಮಾಚಲ ಪ್ರದೇಶ ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲವೂ ಸರಿ ಇದೆ ಎಂಬ ಸಂದೇಶವನ್ನು ಡಿ.ಕೆ ಶಿವಕುಮಾರ್ ರವಾನಿಸಿದ್ದಾರೆ. ಶಿಮ್ಲಾದಲ್ಲಿ ಗುರುವಾರ ಸಂಜೆ ವಿಕ್ರಮಾದಿತ್ಯ ಸಿಂಗ್ ಹಾಗೂ ಪ್ರತಿಭಾ ಸಿಂಗ್...