Homeಮುಖಪುಟಟ್ರಮೋ ನಿಮ್ಮದು ಒಂದೇ ಬುದ್ದಿ : ಜನಸೇವಕರಲ್ಲ - ಮೆರವ ಅರಸರು

ಟ್ರಮೋ ನಿಮ್ಮದು ಒಂದೇ ಬುದ್ದಿ : ಜನಸೇವಕರಲ್ಲ – ಮೆರವ ಅರಸರು

- Advertisement -
- Advertisement -

ದೇಶ ಬೆಲೆ ಏರಿಕೆಯ ಭಾರದಿಂದ ನಲುಗುತ್ತಿದೆ. ದಿನಬಳಕೆಯ ಪದಾರ್ಥಗಳ ಬೆಲೆ ಇಳಿಯುವ ಸೂಚನೆಗಳಂತು ಕಾಣುತ್ತಿಲ್ಲ. ಒಂದೇ ಬಾರಿಗೆ ಅಡುಗೆ ಅನಿಲದ ಬೆಲೆ ದಿಢೀರ್ 145 ರೂಪಾಯಿ ಹೆಚ್ಚಳವಾಯಿತು. ಅಂತಾರಾಷ್ಟ್ರ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಇಳಿಕೆಯಾಗಿದೆ. ಆದರೂ ಭಾರತದ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಇಳಿಸಿ ಜನಸಾಮಾನ್ಯರ ಹೊರೆಯನ್ನು ಅಲ್ಪವಾದರೂ ಇಳಿಸುವ ಬುದ್ದಿಯೂ ಬರಲಿಲ್ಲ.. ಜನರು ಯಾವುದೇ ವಸ್ತುಗಳ ಬೆಲೆಗಳು ಹೆಚ್ಚಳವಾಗುತ್ತಿದ್ದರೂ ಮೌನವನ್ನೇ ಆಭರಣವಾಗಿ ಧರಿಸಿದ್ದಾರೆ ಎಂದು ನೀವು ಅಂದುಕೊಂಡಿದ್ದರೆ, ಅದು ನಿಮ್ಮ ಮೂರ್ಖತನ. ದೇಶದಲ್ಲಿ ನಡೆಯುತ್ತಿರುವ ಎಲ್ಲ ವಿದ್ಯಮಾನಗಳು ಮತ್ತು ಬೆಳವಣಿಗೆಗಳನ್ನು ಹತ್ತಿರದಿಂದಲೇ ಗಮನಿಸುತ್ತಿದ್ದಾರೆ. ಜನರ ಒಡಲೊಳಗೆ ಕುದಿ ಇದೆ. ಮುಖದಲ್ಲಿ  ನಗುವಿದೆ. ಯಾಕೆಂದರೆ ನೀವು ಮನುವಾದಿ ಮನಸ್ಥಿತಿಗಳ ಆರಾಧ್ಯ ದೈವವಲ್ಲವೇ?! ಅದಕ್ಕೆ!

ಪ್ರಜಗಳ ರಕ್ಷಣೆ ಪ್ರಭುವಿನ ಕೆಲಸ. ಪ್ರಜಗಳ ಕ್ಷೇಮವೇ ಪ್ರಧಾನ ಸೇವಕನ ಕೆಲಸವಾಗಬೇಕಿತ್ತು. ಆದರೆ ಅಂತಹ ಕೆಲಸ ನಡೆಯುತ್ತಿಲ್ಲ. ಪ್ರಜೆಗಳ ಮತದಿಂದ ಅಧಿಕಾರ ಹಿಡಿದ ಮೇಲೆ ಅರಸನ ಗೆಟಪ್ ಬಂದುಬಿಟ್ಟಿದೆ. ಈ ಗೆಟಪ್ ಕ್ಷಣಕ್ಷಣಕ್ಕೂ ಬದಲಾಗುತ್ತಿದೆ. ಅದೇ ಕಾರಣಕ್ಕೆ ಏನೋ,ಇದು ಪ್ರಜಾಪ್ರಭುತ್ವ ವ್ಯವಸ್ಥೆ,ಎಂಬುದನ್ನೇ ಮರೆತಿದ್ದೀರಿ. ಜನರ ಬೇಕು ಬೇಡಕಗಳು ನಿಮಗೆ ಅರ್ಥವಾಗುತ್ತಿಲ್ಲ. ಆರ್ಥಿಕ ಹಿಂಜರಿತ, ಉದ್ದಿಮೆಗಳ ಮುಚ್ಚುವಿಕೆ, ಕೆಲಸ ಕಳೆದುಕೊಂಡವರ ಪಾಡು, ನಿರುದ್ಯೋಗಿಗಳ ಸ್ಥಿತಿಗತಿ, ರೈತರ ಅಳಲು, ರೈತರ ಆತ್ಮಹತ್ಯೆ, ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ, ಬೆಂಬಲ ಬೆಲೆ, ಸ್ವಾಮಿನಾಥನ್ ಶಿಫಾರಸುಗಳ ಜಾರಿ ಇದ್ಯಾವುದರ ಬಗ್ಗೆಯೂ ಕಿಂಚಿತ್ತೂ ಯೋಚಿಸುತ್ತಿಲ್ಲ.

ಕೋಟ್ಯಂತರ ಮಂದಿ ಕಾರ್ಮಿಕರು ಉದ್ಯೋಗ ಕಳೆದುಕೊಂಡು ಮನೆ ಸೇರಿಸಿದರು. ನಗರದಲ್ಲಿದ್ದವರು ಹಳ್ಳಿಗೆ ತೆರಳಿದರು. ಆ ಕಾರ್ಮಿಕರ ಪಾಡು ಹೇಳತೀರದು. ಜನರ ಕೈಯಲ್ಲಿ ಹಣವೇ ಇಲ್ಲ. ಬದುಕಿನ ಸಾಮಾನ್ಯ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳಲು ಆಗುತ್ತಿಲ್ಲ. ಉದ್ಯೋಗಗಳಿಲ್ಲದೆ ಹಳ್ಳಿ ಸೇರಿದವರು ತಲೆ ಮೇಲೆ ಕೈ ಹೊತ್ತು ಕುಳಿತುಕೊಂಡಿದ್ದಾರೆ. ಅಕ್ಷರಶಃ ಹಿಡಿಶಾಪ ಹಾಕುತ್ತಿದ್ದಾರೆ. ಆದರೆ ದೊರೆಯಂತೆ ವರ್ತಿಸುತ್ತಿರುವ ನೀವು ತುಘಲಕ್ ದರ್ಬಾರ್ ಮಾಡುತ್ತಿದ್ದೀರಿ. ತಾನು ಮಾಡಿದ್ದೇ ಕಾನೂನು. ತಾನು ಹೇಳಿದಂತೆಯೇ ನಡೆಯಬೇಕು. ಇಲ್ಲದಿದ್ದವರು ಇಲ್ಲಿರಲಿಕ್ಕೂ ಅವಕಾಶವಿಲ್ಲ. ಸರ್ವಾಧಿಕಾರದ ಮನೋಭಾವ ನಿಮ್ಮದು. ನಿಮ್ಮನ್ನು ಆರಾಧಿಸುವ ಭಕ್ತಪಡೆ ಜನರ ನೇರ ಪ್ರಶ್ನೆಗಳನ್ನು ಎದುರಿಸಲು ಆಗದೆ ಮೊಂಡುವಾದಕ್ಕೆ ಇಳಿದಿದೆ. ದೈಹಿಕ ದಾಳಿಯನ್ನು ಮಾಡತೊಡಗಿದೆ. ಇದು ನಿಮಗೆ ಕಾಣಿಸುತ್ತಿಲ್ಲವೇ?

ಸ್ವಚ್ಚಭಾರತ್ ಅಂದಿರಿ ನಿತ್ಯವೂ ನಗರಗಳಲ್ಲಿ ಸ್ವಚ್ಛಗೊಳಿಸುವವರ ಪಾಡು ಹೇಳತೀರದಾಗಿದೆ. ಅವರ ವೇತನ ತಿಂಗಳಿಗೆ ಸರಿಯಾಗಿ ಸಿಗುತ್ತಿಲ್ಲ. ಉದ್ಯೋಗ ಭದ್ತತೆ ಇಲ್ಲ. ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿದ್ದು ಖಾಯಂ ಮಾಡುವ ನಿರೀಕ್ಷೆಯಲ್ಲೇ ಕಾಲದೂಡುವಂತಾಗಿದೆ. ಸ್ವಚ್ಛತಾಕಾರರ ಆರೋಗ್ಯ ಹದಗೆಟ್ಟಿದೆ. ಮಾನವಹಕ್ಕು ಉಲ್ಲಂಘನೆಯಾಗುತ್ತಿದೆ. ಇನ್ನು ವಯಸ್ಸಿದ್ದಾಗಲೇ ಸಾವು ಬರುತ್ತಿದೆ. ಆದರೆ ಅವರ ಆರೋಗ್ಯದ ಕಡೆ ಸ್ವಚ್ಛ ಭಾರತ ಮುಖಮಾಡುವುದಿಲ್ಲ. ‘ಪೌರಕಾರ್ಮಿಕ’ನೆಂಬ ‘ನವಅಸ್ಪೃಶ್ಯತೆ’.ಮತ್ತೆ ಅಂಟಿಕೊಂಡಿದೆ. ಅವರ ಬದುಕೇ ಬೇರೊಬ್ಬರ ಚಾಕರಿ ಮಾಡುವುದು ಅನ್ನುವಂತಾಗಿದೆ. ಆಧುನಿಕ ತಂತ್ರಜ್ಞಾನ ಮುಂದುವರಿದಿದ್ದರೂ ಪೌರಕಾರ್ಮಿಕರಿಗೆ ಅದರ ಫಲ ಸಿಗುವಂತೆ ನೋಡಿಕೊಳ್ಳಲಾಗಿದೆ. ಮ್ಯಾನ್ಯುಯಲ್ ಸ್ಕ್ಯಾವೆಂಜಿಗ್ ಡೆತ್ ಗಳು ದೇಶದಾದ್ಯಂತ ನಡೆಯುತ್ತಲೇ ಇವೆ. ಸ್ವಚ್ಛಭಾರತದಲ್ಲಿ ಅವರಿಗೆ ಅವಕಾಶವೇ ಇಲ್ಲ.

ಮುದ್ರಾ ಯೋಜನೆಯಡಿ 7 ಕೋಟಿ ಉದ್ಯೋ ಸೃಷ್ಟಿಯಾಗಿದೆ ಎಂದು ಹೇಳಲಾಗುತ್ತದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯಾಗಿದ್ದರೆ ಜನ ಸಮಸ್ಯೆಗಳನ್ನೇಕೆ ಎದುರಿಸುತ್ತಿದ್ದಾರೆ. ನವಅಗ್ರಹಾರಗಳು ಬಂದ ಮೇಲೆ ಬೀದಿಬದಿ ವ್ಯಾಪಾರಿಗಳೇ ಮಾಯವಾಗುತ್ತಿದ್ದಾರೆ. ಬೀದಿಬದಿ ವ್ಯಾಪಾರ ಮಾಡುವವರನ್ನು ಸಣ್ಣ ಕಾರಣ ನೀಡಿ ಎತ್ತಂಗಡಿ ಮಾಡುತ್ತಿದ್ದಾರೆ. ಇಂತಹ ಪರಿಸ್ಥಿತಿ ಇದ್ದಾಗ ನೀವು ಉದ್ಯೋಗ ಸೃಷ್ಟಿಸಿದ್ದಾದರೂ ಎಲ್ಲಿ? ಜನರೇಕೆ ಉದ್ಯೋಗವಿಲ್ಲ ಎಂದು ಹೇಳುತ್ತಿರುವುದು? ಹಾಗಾದರೆ ನೀವು ಯಾರಿಗೆ ನೀಡಿದ್ದೀರಿ ಉದ್ಯೋಗ.

ಸ್ಲಂಗಳು ಬೆಳೆಯುತ್ತಿವೆ. ಅವುಗಳನ್ನು ಬೇರೆಯವರ ಕಣ್ಣಿಗೆ ಕಾಣದಂತೆ ಮುಚ್ಚಿಡುವ ಪ್ರಯತ್ನಗಳು ನಿರಂತರ ನಡೆಯುತ್ತಲೇ ಇವೆ. ಅಹಮದಾಬಾದ್ ಗೆ ಅಮೆರಿಕದ ಹುಚ್ಚು ದೊರೆ ಬಂದನೆಂಬ ಕಾರಣಕ್ಕೆ ತಡೆಗೋಡೆ ನಿರ್ಮಿಸಿದಿರಿ. ಅಲ್ಲಿದ್ದ ಬಡಕುಟುಂಬಗಳನ್ನಿ ನಿರ್ದಯವಾಗಿ ಎತ್ತಂಗಡಿ ಮಾಡಿದಿರಿ. ಭಾರತದಲ್ಲಿ ಯಾವುದೇ ಸಮಸ್ಯೆ ಇಲ್ಲವೆಂದು ಅಮೆರಿಕಾದ ಹುಚ್ಚುದೊರೆಯ ಮುಂದೆ ತೋರಿಸಲು ಯತ್ನಿಸಿದಿರಿ. ಹುಚ್ಚುದೊರೆ ನಿಮ್ಮ ಎದುರೇ ನೀವು ಸದಾ ಪಠಿಸುವ ದೇಶವನ್ನೇ ಹೊಗಲಿದನೆಂಬ ಸುದ್ದಿ ನಿಮಗೆ ಕೇಳಿಸಲಿಲ್ಲವೇ? ನಿಮ್ಮದೇ ಗುಂಪಿನ ಮುಖಂಡನೊಬ್ಬ ನಿಮ್ಮ ಆರ್ಥಿಕತೆ ನೀತಿಗಳನ್ನು ಟೀಕಿಸುತ್ತಲೇ ಬರುತ್ತಿದ್ದಾರೆ. ಇದಕ್ಕೆ ನೀವು ಕಿವಿಗೊಡುವುದಿಲ್ಲವೇ? ಮನ್ ಕಿ ಬಾತ್ ನಿಂತು ಹೋಯಿತು. ಟ್ರಂಪ್ ಕಿ ಬಾತ್ ಶುರುವಾಯಿತು ನೀವು ಇಬ್ಬರು ಆದರೆ ನಿಮ್ಮ ಮನಸ್ಥಿತಿ ಒಂದೇ. ಯಾಕೆಂದರೆ ನೀವು ಟ್ರಮೋ!

ಹಳ್ಳಿ ಕಡೆ ಮಾತೊಂದಿದಿದೆ. ಮಾತ್ನಾಗೆ ಎಂಗಣ್ಣ ಗಂಟೆ ಹೊಡ್ದಂಗೆ, ಊಟ್ದಾಗೆ ಎಂಗೆ ಸೆಲಿಕೆಗೆ ತಿರಿವಿ ಹಾಕ್ದಂಗೆ,,ಕೆಲ್ಸದಾಗೆ ಎಂಗೆ ಗೊಣಗೊಣ ಕಣಣ್ಣ’ ಹಾಗೆ ನೀವು. ಮಾತಿನಲ್ಲಿ ಗಂಟೆಯ ಶಬ್ದ, ಊಟದಲ್ಲಿ ಅಣಬೆ ಸಾಂಬಾರೆ ಬೇಕು! ಕೆಲಸ ಮಾತ್ರ ಏನೂ ಆಗಿಲ್ಲ. ಹಿಂದಿನ ಯೋಜನೆಗಳ ಹೆಸರು ಅಳಿಸಿದಿರಿ. ಹೊಸ ನಾಮಕರಣ ಮಾಡಿದಿರಿ. ಇದು ಸರಿಯೇ ದೊರೆಯೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...

ದಾಳಿ ನಡೆಸಿದರೆ ನಮ್ಮ ನೇರ ಗುರಿಯಾಗುತ್ತೀರಿ : ಅಮೆರಿಕ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಇರಾನ್

ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ತಿರುಗೇಟು ನೀಡಿದೆ. ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ "ಅಮೆರಿಕ ಇರಾನ್ ಮೇಲೆ...

ಕೇಂದ್ರ ಸರ್ಕಾರದ ಎಚ್ಜರಿಕೆ ನಂತರ 3,500 ಪೋಸ್ಟ್‌ಗಳ ನಿರ್ಬಂಧ, 600 ಖಾತೆಗಳನ್ನು ಅಳಿಸಿದ ಎಕ್ಸ್ ಪ್ಲಾಟ್ ಫಾರ್ಮ್

ಮಹಿಳೆಯರನ್ನು ಗುರಿಯಾಗಿಸಿಕೊಂಡು AI- ರಚಿತವಾದ ಅಶ್ಲೀಲ ವಿಡಿಯೋಗಳ ವಿಷಯವನ್ನು ಕೇಂದ್ರವು ಗಮನಕ್ಕೆ ತಂದ ಕಠಿಣ ಕಾನೂನು ಜಾರಿಗೊಳಿಸುವಿಕೆಗೆ ಪ್ರತಿಜ್ಞೆ ಮಾಡಿದ ನಂತರ X 3,500 ಪೋಸ್ಟ್‌ಗಳು ಮತ್ತು 600 ಖಾತೆಗಳನ್ನು ಅಳಿಸಿಹಾಕಿದೆ.   ಅಶ್ಲೀಲ ವಿಷಯಗಳ...

ಮಾನವ ತಲೆಬುರುಡೆ, ಹುಲಿಚರ್ಮದಂತಹ ಕಸ್ಟಮೈಸ್ ಚರ್ಮ ಸೇರಿದಂತೆ ಹಲವು ಅನುಮಾನಾಸ್ಪದ ವಸ್ತುಗಳ ಮಾರಾಟ: ಮಾಂತ್ರಿಕನ ಬಂಧನ

ಬೆಂಗಳೂರು ವಲಯ ಘಟಕದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಉತ್ತರ ಬೆಂಗಳೂರಿನ ಭೂಪ್ಸಂದ್ರದ 39 ವರ್ಷದ ವ್ಯಕ್ತಿಯನ್ನು ವನ್ಯಜೀವಿ (ರಕ್ಷಣಾ) ಕಾಯ್ದೆ, 1972 ರ ಅಡಿಯಲ್ಲಿ ಬಂಧಿಸಿದೆ. "ಜನವರಿ 9 ರಂದು ನಡೆದ ಕಾರ್ಯಾಚರಣೆಯಲ್ಲಿ...

ದಲಿತ ಮಹಿಳೆಯನ್ನು ಕೊಂದು ಮಗಳ ಅಪಹರಣ : ಆರೋಪಿಯ ಬಂಧನ

ಉತ್ತರ ಪ್ರದೇಶದ ಮೀರತ್‌ನಲ್ಲಿ ದಲಿತ ಮಹಿಳೆಯನ್ನು ಕೊಂದು, ಆಕೆಯ ಮಗಳನ್ನು ಅಪಹರಿಸಿದ ಆರೋಪಿಯನ್ನು ಪೊಲೀಸರು ಶನಿವಾರ (ಜ.10) ಬಂಧಿಸಿದ್ದಾರೆ. ಬಂಧಿತನನ್ನು 22 ವರ್ಷದ ಪರಾಸ್ ಸೋಮ್ (ಪರಾಸ್ ಠಾಕೂರ್) ಎಂದು ಗುರುತಿಸಲಾಗಿದೆ. ರಜಪೂತ ಸಮುದಾಯದ...

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...