Homeನಿಜವೋ ಸುಳ್ಳೋFact check: ಈ ಎರಡು ಪುಸ್ತಕಗಳು ಕೊರೊನ ವೈರಸ್ ಬಗ್ಗೆ ಮೊದಲೆ ಹೇಳಿದ್ದವೇ?

Fact check: ಈ ಎರಡು ಪುಸ್ತಕಗಳು ಕೊರೊನ ವೈರಸ್ ಬಗ್ಗೆ ಮೊದಲೆ ಹೇಳಿದ್ದವೇ?

- Advertisement -
- Advertisement -

ಡೀನ್ ಕೂಂಟ್ಜ್ ಬರೆದ “ದಿ ಐಸ್ ಆಫ್ ಡಾರ್ಕ್ನೆಸ್” (1981) ಮತ್ತು ಸಿಲ್ವಿಯಾ ಬ್ರೌನ್ ಬರೆದ “ಎಂಡ್ ಆಫ್ ಡೇಸ್” (2008) ಎಂಬ ಎರಡು ಪುಸ್ತಕಗಳು ಕೊರೊನಾ ವೈರಸ್ ಬಗ್ಗೆ ಭವಿಷ್ಯ ನುಡಿದಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಜಾಲತಾಣಿಗರು ಈ ಪುಸ್ತಕಗಳ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಬಗ್ಗೆ “ಭೂಮ್ ಲೈವ್” ಫ್ಯಾಕ್ಟ್ ಚೆಕ್ ಮಾಡಿ ಅದರ ಬಗೆಗಿನ ಸತ್ಯಾಸತ್ಯತೆಯನ್ನು ಬಯಲಿಗೆಳೆದಿದೆ.

ಕೊರೊನ ವೈರಸ್ ಸುತ್ತಲೂ ವೈವಿಧ್ಯಮಯ ತಪ್ಪು ಮಾಹಿತಿ ಮತ್ತು ದಾರಿತಪ್ಪಿಸುವ ವಾದಗಳು ಇಂಟರ್ನೆಟ್‌ನಲ್ಲಿ  ಇತ್ತೀಚೆಗೆ ಹರಿದಾಡುತ್ತಿವೆ. ವೈರಸ್ ಕಾಯಿಲೆಯ ಭವಿಷ್ಯವಾಣಿಯಾಗಿ ಕಾಂಟ್ಯಾಜಿಯನ್ ಚಲನಚಿತ್ರ ಜಾಲತಾಣದಲ್ಲಿ ಹರಿದಾಡಿದ ನಂತರ ಈ ಎರಡು ಪುಸ್ತಕಗಳು ವೈರಸ್ ಬಗ್ಗೆ ಈ ಹಿಂದೆಯೇ ಹೇಳಲಾಗಿತ್ತು ಎಂಬ ವಾದ ಹರಿಯಬಿಡಲಾಗಿದೆ.

ಇದರ ಬಗ್ಗೆ ಇತ್ತೀಚೆಗೆ ರಿಯಾಲಿಟಿ ಟಿವಿ ತಾರೆ ಮತ್ತು ಪ್ರಭಾವಶಾಲಿ ಉದ್ಯಮಿ ಕಿಮ್ ಕಾರ್ಡಶಿಯಾನ್ ವೆಸ್ಟ್ ಸಹ ಸಿಲ್ವಿಯಾ ಬ್ರೌನ್ ಭವಿಷ್ಯವಾಣಿ ಎಂದು ಚಿತ್ರವೊಂದನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದರು.

ಅಲ್ಲದೆ ಕೊರೊನ ವೈರಸ್ ಬಗ್ಗೆ ಹಲವಾರು ಹಲವಾರು ವಾಟ್ಸಪ್ ಸಂದೇಶಗಳು, ಚಿತ್ರಗಳು ವಾಟ್ಸಪ್ ನಾದ್ಯಂತ ಹರಿದಾಡುತ್ತಿದೆ.

 

ಜೊತೆಗೆ ಕೂಂಟ್ಜ್ ಅವರ ಕಾದಂಬರಿಗೆ ಸಂಬಂಧಿಸಿದಂತೆ ಭಾರತದಾದ್ಯಂತ ವಾಟ್ಸಾಪ್ ನಲ್ಲಿ ಪ್ರಸಾರವಾಗುತ್ತಿದೆ. ಅದರಲ್ಲಿ “ದಿ ಐಸ್ ಆಫ್ ಡಾರ್ಕ್ನೆಸ್ ಎಂಬ ಪುಸ್ತಕವನ್ನು 1981 ರಲ್ಲಿ ಪ್ರಕಟಿಸಲಾಯಿತು, ಇದರಲ್ಲಿ ಕರೋನಾ ವೈರಸ್ ಅನ್ನು ಚೀನಾದ ಲ್ಯಾಬ್‌ನಲ್ಲಿ ಕದ್ದುಮುಚ್ಚಿ ತಯಾರಿಸಿದೆ ಎಂದು ಬರೆಯಲಾಗಿದೆ. ನಂತರ ಚೀನಾ ತನ್ನ ಬಡಜನರ ಜನಸಂಖ್ಯೆಯನ್ನು ಕಡಿಮೆ ಮಾಡಿ ಚೀನಾವು ಸೂಪರ್ ಪವರ್ ಆಗಲು ಬಳಸುತ್ತದೆ. ಪುಸ್ತಕದಲ್ಲಿ ಕರೋನಾ ವೈರಸ್ ಹೆಸರನ್ನು ವುಹಾನ್ 400 ಎಂದು ಹೆಸರಿಸಲಾಗಿದೆ. ಚೀನಾ ಈ ವೈರಸ್ ಅನ್ನು ಜೈವಿಕ ಅಸ್ತ್ರವಾಗಿ ಬಳಸುತ್ತದೆ” ಎಂದರ್ಥ ಬರುವ ಹಿಂದಿ ಸಂದೇಶಗಳು ಹರಿದಾಡುತ್ತಿದೆ.

ಇದೇ ರೀತಿಯ ಇನ್ನೊಂದು ಟ್ವೀಟನ್ನು ನೋಡಿ. 2019 ರ ಕೊನೆಯಲ್ಲಿ ವೈರಲ್ ರೋಗ ಸ್ಪೋಟಗೊಂಡ ನಂತರ ಕೂಂಟ್ಜ್ ಮತ್ತು ಬ್ರೌನ್ ಅವರ ಸ್ಪಷ್ಟವಾದ ಘೋಷಣೆಗಳಂತೆ ಕಾಣುವ ಎರಡು ಪುಸ್ತಕಗಳ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅವುಗಳಿಗೆ ಸಂಬಂಧಿಸಿದ ಕೆಲವು ಟ್ವೀಟ್‌ಗಳನ್ನು ಗಮನಿಸಿ:

ಸಿಲ್ವಿಯಾ ಬ್ರೌನ್ ಅವರ ಎಂಡ್ ಆಫ್ ಡೇಸ್ ಕಾದಂಬರಿ ಕೊರೊನಾವೈರಸ್ ಬಗ್ಗೆ ಭವಿಷ್ಯ ನುಡಿದಿದೆಯೇ?

ಬ್ರೌನ್ ಅತಿಂದ್ರಿಯ ಶಕ್ತಿಯೊಂದಿಗೆ ಸಂವಹನ ಮಾಡುತ್ತೇನೆ ಎಂದು ಸ್ವಯಂ ಘೋಷಿಸಿಕೊಂಡ ವ್ಯಕ್ತಿಯಾಗಿದ್ದಾರೆ. ಅತೀಂದ್ರಿಯ ಶಕ್ತಿಯೊಂದಿಗೆ ಇತರ ಆತ್ಮಗಳೊಂದಿಗೆ ಸಂವಹನ ನಡೆಸುತ್ತೇನೆ ಎಂದು ಹೇಳುತ್ತಿದ್ದರು. ಈ ಹಿಂದೆ ಕಾಣೆಯಾದ ಮಕ್ಕಳ ಬಗ್ಗೆ ಪೋಷಕರಿಗೆ ಸುಳ್ಳು ಮಾಹಿತಿಯನ್ನು ನೀಡಿ ಕೋಪಕ್ಕೆ ತುತ್ತಾಗಿದ್ದರು.

ಕೊರೊನ ಬಗ್ಗೆ ಹರಡಲಾಗುತ್ತಿರುವ ಸಂದೇಶಗಳಲ್ಲಿ ಅವರ 2008 ರ ಪುಸ್ತಕ ಎಂಡ್ ಆಫ್ ಡೇಸ್‌ನ ಆಯ್ದ ಭಾಗವು ಹೀಗೆ ಹೇಳುತ್ತದೆ “ಸುಮಾರು 2020 ರಲ್ಲಿ ತೀವ್ರವಾದ ನ್ಯುಮೋನಿಯಾ ತರಹದ ಕಾಯಿಲೆ ಪ್ರಪಂಚದಾದ್ಯಂತ ಹರಡುತ್ತದೆ. ಅದು ಶ್ವಾಸಕೋಶ ಮತ್ತು ಶ್ವಾಸನಾಳದ ಮೇಲೆ ದಾಳಿ ಮಾಡುತ್ತದೆ. ಯಾವುದೇ ಚಿಕಿತ್ಸೆಗಳಿಗೂ ಅದು ಬಗ್ಗುವುದಿಲ್ಲ. ತುಂಬಾ ತೊಂದರೆ ಮಾಡುವ ಅದು ಬಂದ ತಕ್ಷಣ ಇದ್ದಕ್ಕಿದ್ದಂತೆ ಕಣ್ಮರೆಯಾಗುತ್ತದೆ. ನಂತರ ಹತ್ತು ವರ್ಷಗಳಲ್ಲಿ ಮತ್ತೆ ದಾಳಿ ಮಾಡುತ್ತದೆ ಮತ್ತು ಅದರ ನಂತರ ಸಂಪೂರ್ಣವಾಗಿ ಕಣ್ಮರೆಯಾಗುತ್ತದೆ.

2013 ರಲ್ಲಿ ಬ್ರೌನ್ ನಿಧನ ಹೊಂದುತ್ತಾರೆ. 2020 ರಲ್ಲಿ ಪ್ರಪಂಚದಾದ್ಯಂತ ಹರಡುವ ಉಸಿರಾಟದ ಕಾಯಿಲೆಯ ಮುನ್ಸೂಚನೆಯು ಸಾಕಷ್ಟು ನಿಖರವಾಗಿದೆಯಾದರೂ ಕೊರೊನ ವೈರಸ್ ಹೊಸತಲ್ಲ. ಇದಕ್ಕೆ ಲಸಿಕೆಗಳು ಅಥವಾ ಚಿಕಿತ್ಸೆಗಳು ಇನ್ನೂ ಕಂಡು ಹಿಡಿದಿಲ್ಲ. ಈ ಕಾಯಿಲೆಯು “ತುಂಬಾ ತೊಂದರೆ ಪಡಿಸುತ್ತದೆ” ಮತ್ತು “ಇದ್ದಕ್ಕಿದ್ದಂತೆ ಕಣ್ಮರೆಯಾಗುತ್ತದೆ” ಎಂದು ಅವರು ಹೇಳಿಕೊಂಡಂತೆ ವೈದ್ಯಕೀಯ ವೃತ್ತಿಪರರು ಮತ್ತು ವಿಜ್ಞಾನಿಗಳು ಕರೋನ ವೈರಸ್ ಕಾಲೋಚಿತ ಕಾಯಿಲೆಯಾಗಬಹುದು ಎಂದು ಊಹಿಸಿದ್ದಾರೆ. ಎಂಡ್ ಆಫ್ ಡೇಸ್: ಪ್ರಿಡಿಕ್ಷನ್ಸ್ ಅಂಡ್ ಪ್ರೊಫೆಸೀಸ್ ಎಬೌಟ್ ಎಂಡ್ ದಿ ವರ್ಲ್ಡ್ (2008) ನಲ್ಲಿನ ‘ಭವಿಷ್ಯವಾಣಿಯು’ 2000 ರ ದಶಕದ ಆರಂಭದಲ್ಲಿ SARS (ತೀವ್ರ ತೀವ್ರವಾದ ಉಸಿರಾಟದ ಸಿಂಡ್ರೋಮ್) ವೈರಸ್ ಪತ್ತೆಯಾಗಿತ್ತು. ಇದರಿಂದಾಗಿ ವಿಶ್ವದಾದ್ಯಂತದ ಎರಡನೇ ಉಸಿರಾಟದ ಕಾಯಿಲೆ ಬರುತ್ತದೆ ಎಂದು ಬ್ರೌನ್ ಊಹಿಸಿರಬಹುದು.

ಡೀನ್ ಕೂಂಟ್ಜ್ ಅವರ ದಿ ಐಸ್ ಆಫ್ ಡಾರ್ಕ್ನೆಸ್ ಬಗ್ಗೆ ಏನು?

ಅಮೆರಿಕಾದ ಲೇಖಕ ಡೀನ್ ಕೂಂಟ್ಜ್ ಅವರು 1981ರಲ್ಲಿ ಪ್ರಕಟಿಸಿದ ಕಾಲ್ಪನಿಕ ಕೃತಿಯಾಗಿದೆ. ಕೂಂಟ್ಜ್ ತನ್ನ ಪುಸ್ತಕದಲ್ಲಿ ನಿರೂಪಿಸಲ್ಪಟ್ಟ ಘಟನೆಗಳು ವಾಸ್ತವವಾಗುತ್ತದೆ ಎಂದು ಹೇಳಿಕೊಂಡಿಲ್ಲ. ಇದು ವುಹಾನ್ ನಗರದ ಹೊರಗಿನ ಚೀನೀ ಮಿಲಿಟರಿ ಲ್ಯಾಬ್‌ನ ನಿರೂಪಣೆಯನ್ನು ಹೊಂದಿದೆ, ಅಲ್ಲಿ ಜೈವಿಕ ಶಸ್ತ್ರಾಸ್ತ್ರವನ್ನು ರಚಿಸಲಾಗುತ್ತದೆ ಮತ್ತು ಅದಕ್ಕೆ “ವುಹಾನ್ -400” ಎಂದು  ಹೆಸರಿಸಲಾಗಿದೆ. ಚೀನಾದ ಪ್ರಖ್ಯಾತ ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ವುಹಾನ್ ಪ್ರಾಂತ್ಯದಲ್ಲಿದೆ, ಇಲ್ಲಿಂದಲೇ ಕೊರೊನಾವೈರಸ್ ಹರಡಿದೆ ಎಂದು ಹೇಳಲಾಗುತ್ತಿದೆ.

ಆದರೂ ಪುಸ್ತಕದಲ್ಲಿರುವ ಕಾಲ್ಪನಿಕ ವುಹಾನ್ -400 ಮತ್ತು ಕೊರೊನ ವೈರಸ್ ನಡುವೆ ಇಲ್ಲಿ ಹಲವಾರು ಹೋಲಿಕೆಗಳಿವೆ. ಅವುಗಳ ನಡುವಿನ ಕೆಲವು ಪ್ರಮುಖ ವ್ಯತ್ಯಾಸಗಳನ್ನು ಕೆಳಗೆ ನೀಡಲಾಗಿದೆ:

• ದಿ ಐಸ್ ಆಫ್ ಡಾರ್ಕ್ನೆಸ್ “ಹೊಸ ಮತ್ತು ಅಪಾಯಕಾರಿ” ಬಯೋ ಶಸ್ತ್ರಾಸ್ತ್ರ ವೈರಸ್ ಕಥೆಯು ಆಕಸ್ಮಿಕವಾಗಿ ನಾಗರಿಕರಿಂದ ಸಂಕುಚಿತಗೊಳಿಸುತ್ತದೆ. ಅವರು ಕೇವಲ ನಾಲ್ಕು ಗಂಟೆಗಳ ಕಾಲಾವಧಿಯಲ್ಲಿ ಸೋಂಕಿಗೆ ಒಳಗಾಗುತ್ತಾರೆ. ಆದರೆ ಕೊರೊನ 1-14 ದಿನಗಳ ಕಾಲಾವಧಿಯಲ್ಲಿ ಬರುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಕೊರೊನಾದ ಸಾಮಾನ್ಯ ಸಮಯ ಸುಮಾರು ಐದು ದಿನಗಳು.

  • ಸಾಹಿತ್ಯಿಕವಾದ ವುಹಾನ್-400 100% ಸಾವಿನ ಪ್ರಮಾಣವನ್ನು ಹೊಂದಿದೆ, ಸೋಂಕಿತ ವ್ಯಕ್ತಿಗಳು 12-24 ಗಂಟೆಗಳ ಮೀರಿ ಬದುಕುಳಿಯುವುದಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಕೊರೊನ ವೈರಸ್ ಬಾಧಿತರ ಸಾವಿನ ಪ್ರಮಾಣ ಕೇವಲ ಶೇಕಡಾ 3- 4% ರ ನಡುವೆ ಇರುತ್ತದೆ.

ಇನ್ನು ಪುಸ್ತಕದಲ್ಲಿ ಉಲ್ಲೇಖಿಸಲಾದ ಕಾಲ್ಪನಿಕ “ವುಹಾನ್ -400” ನ ಲಕ್ಷಣಗಳು ಕೊರೊನ ವೈರಸ್‌ನ ಲಕ್ಷಣಗಳಿಗಿಂತ ಭಿನ್ನವಾಗಿವೆ.

  • ವುಹಾನ್ -400 ಅಕ್ಷರಶಃ ಮೆದುಳಿನ ಅಂಗಾಂಶವನ್ನು ತಿನ್ನುತ್ತದೆ. ವಿಷದ ಸ್ರವಿಸುವಿಕೆಯು ದೈಹಿಕ ಕ್ರಿಯೆಯ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳುತ್ತದೆ. ಕೊರೊನ ವೈರಸ್ ಜ್ವರ, ಕೆಮ್ಮು, ಉಸಿರಾಟದ ತೊಂದರೆ ಮತ್ತು ಸೌಮ್ಯವಾದ ನೆಗಡಿಯ ಲಕ್ಷಣಗಳನ್ನು ಹೊಂದಿದೆ. ತೀವ್ರವಾದ ನ್ಯುಮೋನಿಯಾ, ತೀವ್ರ ತೀವ್ರವಾದ ಉಸಿರಾಟದ ಕಾಯಿಲೆ, ಮೂತ್ರಪಿಂಡ ವೈಫಲ್ಯ ಇದ್ದರೆ ಸಾವಿಗೆ ಕಾರಣವಾಗಬಹುದು.
  • ದಿ ಐಸ್ ಆಫ್ ಡಾರ್ಕ್ನೆಸ್ ಕಥಾವಸ್ತುವಿನ ಪ್ರಕಾರ ಕಾಲ್ಪನಿಕ “ವುಹಾನ್ -400” ವೈರಸ್ ಅನ್ನು ಪ್ರಯೋಗಾಲಯದಲ್ಲಿ ಬಯೋ ಶಸ್ತ್ರಾಸ್ತ್ರವಾಗಿ ರಚಿಸಲಾಗಿದೆ. ಇದಕ್ಕೆ ತದ್ವಿರುದ್ಧವಾಗಿ ಕರೋನ ವೈರಸ್‌ನ ಹೊರಹೊಮ್ಮುವಿಕೆ ಕಳೆದ ವರ್ಷದ ಕೊನೆಯಲ್ಲಿ ವುಹಾನ್‌ನ ಸಮುದ್ರಾಹಾರ ಮಾರುಕಟ್ಟೆಯಲ್ಲಿ ಅಕ್ರಮವಾಗಿ ವನ್ಯಜೀವಿಗಳನ್ನು ಮಾರಾಟ ಮಾಡುತ್ತಿದ್ದಾಗ ಎಂದು ವರದಿಯಾಗಿದೆ. ಆದಾಗ್ಯೂ, ವಿಜ್ಞಾನಿಗಳು ಇನ್ನೂ ಅದರ ಮೂಲವನ್ನು ಕಂಡುಹಿಡಿದಿಲ್ಲ.
  • ಕಾಲ್ಪನಿಕ “ವುಹಾನ್ -400” ಅನ್ನು ಎಬೋಲಾಗಿಂತ ತುಂಬಾ ಕೆಟ್ಟದಾಗಿದೆ ಎಂದು ವಿವರಿಸಲಾಗಿದೆ, ಆದರೆ ಕರೋನ ವೈರಸ್‌ ಎಬೋಲಾಗಿಂತ ಕಡಿಮೆ ಅಪಾಯಕಾರಿಯಾಗಿದೆ. ಡಬ್ಲ್ಯುಎಚ್‌ಒ ಪ್ರಕಾರ, ಸರಾಸರಿಯಾಗಿ ಎಬೋಲಾ ಪ್ರಕರಣದ ಸಾವಿನ ಪ್ರಮಾಣವು ಸುಮಾರು 50% ರಷ್ಟಿದ್ದರೆ. ಆದರೆ ಕರೋನ ವೈರಸ್‌ ಸೋಂಕಿತ ಸಾವಿನ ಪ್ರಮಾಣ ಶೇಕಡಾ 3- 4% ರ ನಡುವೆ ಇರುತ್ತದೆ.

ಕೂಂಟ್ಜ್ ಅವರ ಪುಸ್ತಕಕ್ಕೆ ಸಂಬಂಧಿಸಿದ ಮತ್ತೊಂದು ಕುತೂಹಲಕಾರಿ ಅಂಶವೆಂದರೆ, 1981 ರಲ್ಲಿ ಬಂದ ದಿ ಐಸ್ ಆಫ್ ಡಾರ್ಕ್ನೆಸ್ ನ ಮೊದಲ ಆವೃತ್ತಿಯು ಕಾಲ್ಪನಿಕ ವೈರಸ್ ಅನ್ನು ರಷ್ಯಾದ ಪ್ರದೇಶದ “ಗೋರ್ಕಿ -400” ಎಂದು ಹೆಸರಿಸಿದೆ. ಈ ಮೊದಲ ಆವೃತ್ತಿಯಲ್ಲಿನ ಇತರ ವಿವರಗಳು ಸಹ ಅದೇ ಕಥಾವಸ್ತುವಿನೊಂದಿಗೆ ಹೊಂದಿಕೆಯಾಗುತ್ತವೆ. ಉದಾಹರಣೆಗೆ “ಗೋರ್ಕಿ -400” ಅನ್ನು “ಗೋರ್ಕಿ” ಯ ಹೊರಗೆ ಅಭಿವೃದ್ಧಿಪಡಿಸಲಾಗಿದೆ ಮತ್ತು ಇದು “ದಶಕದಲ್ಲಿ ಸೋವಿಯತ್‌ನ ಅತ್ಯಂತ ಪ್ರಮುಖ, ಅಪಾಯಕಾರಿ ಹೊಸ ಜೈವಿಕ ಅಸ್ತ್ರ” ಎಂದು ಹೇಳಲಾಗಿತ್ತು.

ಶೀತಲ ಸಮರದ ನಂತರ 1989 ರಲ್ಲಿ ಕಾದಂಬರಿಯ ಬಿಡುಗಡೆಯ ನಂತರ ವೈರಸ್‌ನ ಹೆಸರನ್ನು ಬದಲಾಯಿಸಲಾಯಿತು. ಈ ಕಾದಂಬರಿಯನ್ನು ಮೊದಲ ಬಾರಿಗೆ ಲೇ ನಿಕೋಲ್ಸ್‌ನ ನಾಮ್ ಡೆ ಪ್ಲುಮ್ ಅಡಿಯಲ್ಲಿ ಪ್ರಕಟಿಸಲಾಗಿತ್ತು.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚಿತ್ರದುರ್ಗ: ಪ್ರೌಢಶಾಲಾ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿ ಗರ್ಭಪಾತ ಮಾಡಿಸಿದ ಶಿಕ್ಷಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲು

ನಾಯಕನಹಟ್ಟಿ (ಚಿತ್ರದುರ್ಗ ಜಿಲ್ಲೆ): ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಮತ್ತು ಆಕೆಯ ಗರ್ಭಪಾತ ಮಾಡಿದ ಆರೋಪದ ಮೇಲೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನೀಡಿದ ದೂರು ಆಧರಿಸಿ...

ಎಸ್‌ಐಆರ್‌ನಲ್ಲಿ ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ : ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕೋರಿದ್ದ ಮಹಿಳೆಯ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವೇಳೆ ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕಿರುವ ಮಹಿಳೆಯೊಬ್ಬರು ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡುವಂತೆ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ (ಏ.10) ತಿರಸ್ಕರಿಸಿದೆ ಎಂದು ಕಾನೂನು...

ಇಸ್ಲಾಮಾಬಾದ್‌ನಲ್ಲಿ ಅಮೆರಿಕ–ಇರಾನ್ ಶಾಂತಿ ಮಾತುಕತೆ; ಪಾಕಿಸ್ತಾನ ಮಧ್ಯಸ್ಥಿಕೆ

ಹಲವು ರೀತಿಯ ಪ್ರತಿಷ್ಠೆ ಪ್ರದರ್ಶನ, ಭಿನ್ನಾಭಿಪ್ರಾಯಗಳ ನಡುವೆ ಅಮೆರಿಕ-ಇರಾನ್ ಶಾಂತಿ ಮಾತುಕತೆ ಶನಿವಾರ (ಏ.11) ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಪ್ರಾರಂಭಗೊಳ್ಳಲಿದೆ. ಪಾಕಿಸ್ತಾನದ ಪಾಲಿಗೆ ಇದು ಅತ್ಯಂತ ಪ್ರತಿಷ್ಠೆಯ ವಿಷಯವಾಗಿ ಮಾರ್ಪಟ್ಟಿದೆ. ಅಮೆರಿಕದ ಪರವಾಗಿ ಉಪಾಧ್ಯಕ್ಷ ಜೆ.ಡಿ....

ಕಾಂಗ್ರೆಸ್ ನಿಂದ ಏಪ್ರಿಲ್ 12ರಂದು ‘ರನ್ ಫಾರ್ ಅಂಬೇಡ್ಕರ್, ರನ್ ಫಾರ್ ಕಾನ್ಸ್ಟಿಟ್ಯೂಷನ್’ ಮ್ಯಾರಥಾನ್ ಆಯೋಜನೆ

ನವದೆಹಲಿ: ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯ ಅಂಗವಾಗಿ ಕಾಂಗ್ರೆಸ್ ಭಾನುವಾರ 'ಅಂಬೇಡ್ಕರ್‌ಗಾಗಿ ಓಟ, ಸಂವಿಧಾನಕ್ಕಾಗಿ ಓಟ' ಮ್ಯಾರಥಾನ್ ಆಯೋಜಿಸಿದೆ. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಇಲ್ಲಿನ ಮಂಡಿ ಹೌಸ್‌ನಿಂದ ಮ್ಯಾರಥಾನ್‌ಗೆ...

ಮುಖ್ಯವಾಹಿನಿಗೆ ಬಂದ 42 ಕೇಡರ್‌ಗಳು; ರಾಜ್ಯದಲ್ಲಿ’ಮಾವೋವಾದಿ ಕಾರ್ಯಾಚರಣೆ’ ಅಂತ್ಯವಾಗಿದೆ ಎಂದ ತೆಲಂಗಾಣ ಪೊಲೀಸರು

ರಾಜ್ಯದಲ್ಲಿ ಸಿಪಿಐ (ಮಾವೋವಾದಿ) ಸಂಘಟನೆಯ ಕಾರ್ಯಚರಣೆ ಅಂತಿಮವಾಗಿದೆ ಎಂದು ತೆಲಂಗಾಣ ಪೊಲೀಸರು ಘೋಷಣೆ ಮಾಡಿದ್ದಾರೆ. ಬೆಟಾಲಿಯನ್ ಕಮಾಂಡರ್ ಮತ್ತು ಎರಡು ಪ್ರಮುಖ ಗುಂಪುಗಳ ಹಿರಿಯ ನಾಯಕತ್ವ ಸೇರಿದಂತೆ ನಿಷೇಧಿತ ಸಂಘಟನೆಯ 42 ಕೇಡರ್‌ಗಳು...

‘ಹಿಂದಿ ನಿರ್ಮೂಲನೆ ಮಾಡುತ್ತೇವೆ’ ಎಂದು ಸಚಿವರು ಹೇಳಿಲ್ಲ; ಹಿಂದಿ ಪರ ಅರ್ಜಿ ವಜಾ; ₹1 ಲಕ್ಷ ದಂಡ ವಿಧಿಸಿದ ಹೈಕೋರ್ಟ್‌

ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷಾ ವಿಷಯಗಳ ಮೌಲ್ಯಮಾಪನ ಸಂಬಂಧ ರಾಜ್ಯ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ನೀಡಿದ ಹೇಳಿಕೆಯ ವಿರುದ್ಧ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು (ಪಿಐಎಲ್) ಕರ್ನಾಟಕ...

ದೆಹಲಿ| ಮುಸ್ಲಿಮರ ಮೇಲಿನ ದ್ವೇಷಕ್ಕೆ ಜೀವಂತ ಹಂದಿಗಳನ್ನು ಪೂಜಿಸುತ್ತಿರುವ ಹಿಂದೂಗಳು

ಹಳೆಯ ದೆಹಲಿಯ ಹಿಂದೂ-ಮುಸ್ಲಿಂ ಜನರು ವಾಸಿಸುವ ತ್ರನಗರದ ನೆರೆಹೊರೆಯಲ್ಲಿ ಹಿಂದೂ ಕುಟುಂಬಗಳು ಜೀವಂತ ಹಂದಿಗಳನ್ನು ಪೂಜಿಸುತ್ತಿದ್ದಾರೆ. ಮುಸ್ಲಿಮರ ಮೇಲಿನ ದ್ವೇಷಕ್ಕೆ ಮನೆಯ ಮುಂಭಾಗ ಅಲಂಕೃತ ಹಂದಿ (ವರಹಾಸ್ವಾಮಿ) ಚಿತ್ರಗಳನ್ನು ಅಳವಡಿಸಿದ್ದಾರೆ ಎಂದು 'ದಿ...

ಪ. ಬಂಗಾಳ: ಮಹಿಳೆಯರಿಗೆ ₹3,000 ರಿಂದ 6 ತಿಂಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಸೇರಿದಂತೆ ಹಲವು ಭರವಸೆ ನೀಡಿದ ಬಿಜೆಪಿ 

ಕೋಲ್ಕತ್ತಾ : ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಪ್ರಚಾರ ಆರಂಭವಾಗಿದ್ದು, ಮೊದಲ ಹಂತದ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ, ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಪಶ್ಚಿಮ ಬಂಗಾಳದ ಬಿಜೆಪಿ...

ಹಾಸನ| ರೈತ ಮುಖಂಡ ವಾಸುದೇವ ಕಲ್ಕೆರೆ ಮೇಲೆ ಹಲ್ಲೆ; ದುಷ್ಕರ್ಮಿಗಳ ಬಂಧನಕ್ಕೆ ಕೆಪಿಆರ್‌ಎಸ್‌ ಆಗ್ರಹ

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಕರ್ನಾಟಕ ಪ್ರಾಂತ ರೈತ ಸಂಘದ (ಕೆಪಿಆರ್‌ಎಸ್‌) ಕಾರ್ಯದರ್ಶಿ ಹಾಗೂ ಕಲ್ಕೆರೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ, ಡಿವೈಎಫ್‌ಐ ಜಿಲ್ಲಾಧ್ಯಕ್ಷ ವಾಸುದೇವ ಕಲ್ಕೆರೆ ಮೇಲೆ ಹಲ್ಲೆ-ದೌರ್ಜನ್ಯ ನಡೆಸಿರುವ ಗೂಂಡಾಗಳನ್ನು...

ಉತ್ತರ ಪ್ರದೇಶ| ಡಿಜಿಟಲ್ ಬಂಧನದಿಂದ ಪೋಷಕರನ್ನು ರಕ್ಷಿಸಿದ 8ನೇ ತರಗತಿ ವಿದ್ಯಾರ್ಥಿ

ಸುಮಾರು 10 ಗಂಟೆಗಳ ಕಾಲ ವೀಡಿಯೊ ಕರೆ ಮೂಲಕ ಡಿಜಿಟಲ್ ಬಂಧನಕ್ಕೆ ಒಳಗಾಗಿದ್ದ ತನ್ನ ಹೆತ್ತವರು ಹಣ ಕಳೆದುಕೊಳ್ಳದಂತೆ 8ನೇ ತರಗತಿಯ ಬಾಲಕನೊಬ್ಬ ರಕ್ಷಿಸಿರುವ ಘಟನೆ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಬರೇಲಿಯಲ್ಲಿ...