Homeಅಂಕಣಗಳುದಸ್ ಸ್ಪೋಕ್ ಝರತುಷ್ಟ್ರ ನೀಷೆಯ ಕೃತಿ ಹಿಟ್ಲರಿನಿಗೆ ಅರ್ಥವಾಗಿದ್ದು ಹೇಗೆ?

ದಸ್ ಸ್ಪೋಕ್ ಝರತುಷ್ಟ್ರ ನೀಷೆಯ ಕೃತಿ ಹಿಟ್ಲರಿನಿಗೆ ಅರ್ಥವಾಗಿದ್ದು ಹೇಗೆ?

- Advertisement -
- Advertisement -

ದಸ್ ಸ್ಪೋಕ್ ಝರತುಷ್ಟ್ರ ನೀಷೆಯ ಒಂದು ಕೃತಿ. ಅದು ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್‍ನಂತಹ ಸರ್ವಾಧಿಕಾರಿಗೆ ಅತಿಮಾನವತೆಯ ಪಾಠ ಮಾಡಿತೇ? ಯಾವ ರಣ-ರತಿಗಳಿಗೆ ಅಮಾನವೀಯ ರೌದ್ರವನ್ನು ತುಂಬಿ ಮನುಕುಲದಲ್ಲಿಯೇ ರಕ್ತದಲ್ಲಿ ಕೆಟ್ಟ ಇತಿಹಾಸ ಬರೆದ ನಾಜಿಗಳಿಗೆ ಪುಕ್ಕಟೆಯಾಗಿ ಈ ದಸ್ ಸ್ಪೋಕ್ ಝರತುಷ್ಟ್ರ ಹಂಚುವಷ್ಟು ಕೇಡಿನ ಸಂಚಾಗಿತ್ತೇ ಈ ಕೃತಿ.

ಇಲ್ಲ. “ಮನುಷ್ಯತ್ವ ಎಂಬುವುದು ಪಶುತ್ವ ಮತ್ತು ಅತಿಮಾನವತ್ವದ ನಡುವಿನ ಆಳವಾದ ಕಣಿವೆಯ ಮೇಲೆ ಕಟ್ಟಲ್ಪಟ್ಟಿರುವ ಹಗ್ಗ. ಇದರ ಮೇಲೆ ನಡೆಯುವುದಾಗಲಿ, ದಾಟುವುದಾಗಲಿ, ಹಿಂದಕ್ಕೆ ತಿರುಗಿ ನೋಡುವುದಾಗಲಿ, ಅಲ್ಲಿಯೇ ನಿಂತು ತಳಮಳಗೊಳ್ಳುವುದಾಗಲಿ ಅಪಾಯಕರ. ಮನುಷ್ಯನೆಂದರೆ ಪಶುತ್ವ ಮತ್ತು ಅತಿಮಾನವತ್ವ; ಈ ಎರಡರ ನಡುವಿನ ಸೇತುವೆಯೇ ಹೊರತು, ಮನುಷ್ಯತ್ವವು ಗುರಿಯೇನಲ್ಲ.” ಹಾಗೆಂದು ಝರತುಷ್ಟ್ರನಿಂದ ಹೇಳಿಸುವ ನೀಷೆಗೆ ಮನುಷ್ಯನೆಂದರೆ ಇಷ್ಟ. ಏಕೆಂದರೆ ಅವನು ಹಿಂದಕ್ಕೂ ಸರಿಯಬಲ್ಲ. ಮುಂದಕ್ಕೂ ಸಾಗಬಲ್ಲ.

ತೂಗಾಡುವ ಲೋಲಕದಂತಿರುವ ಡೋಲಾಯಮಾನದ ಸ್ಥಿತಿಯಲ್ಲಿರುವ ಮನಸ್ಸಿನ ಒಂದೊಂದು ಅತಿ ಸಣ್ಣ ಚಲನೆಯ ಸ್ಥಿತಿಯನ್ನು ಒಪ್ಪುವ ಅಥವಾ ಮೆಚ್ಚುವ ಝರತುಷ್ಟ್ರ ನೀಷೆಯ ಮನಸ್ಸಿನ ತಾತ್ವಿಕ ತಾಕಲಾಟಗಳೇ ಆಗಿವೆ. ಅವನು ಒಳಿತು ಕೆಡಕುಗಳ ಆಚೆಗೆ ಸಾಗುವ ಚೈತನ್ಯ. ಚೈತನ್ಯವು ಇದು ಸಮ್ಮತ, ಇದು ತಿರಸ್ಕೃತವೆಂದು ನೋಡದು. ಇದು ಒಳ್ಳೆಯದು ಅಥವಾ ಕೆಟ್ಟದು ಎಂದು ನಿರ್ಧರಿಸದು. ಇದು ತಮ್ಮವರು, ಅವರು ಪರಕೀಯರೆಂದು ಪಕ್ಷಪಾತ ಮಾಡದು.

ದೇವರು ಸತ್ತ ಎಂದು ತಾನು ಸ್ಪಷ್ಟವಾಗಿ ಅರಿತವನಂತೆ ಘೋಷಿಸುತ್ತಾ ಕ್ರೈಸ್ತ ಧರ್ಮಕ್ಕೆ ವಿರೋಧದ ದಾರಿಯಲ್ಲಿ ನಡೆದವನಂತೆ ಕಾಣುತ್ತಾನೆ. ಆದರೆ, “ಕೆಳಕ್ಕೆ ಬಿದ್ದಿರುವವರನ್ನು ನಾನು ಪ್ರೀತಿಸುತ್ತೇನೆ. ಏಕೆಂದರೆ ಆಚೆಯ ತೀರಕ್ಕಾಗಿ ಹಾತೊರೆಯುತ್ತಿರುವ ಅವರು ಗೌರವಕ್ಕೆ ಪಾತ್ರರಾಗುತ್ತಾರೆ. ಸ್ವರ್ಗಗಳಿಗಾಗಿ ಬೀಳಲು ಸಿದ್ಧವಿರುವ, ತ್ಯಾಗಗಳನ್ನು ಮಾಡುವವರನ್ನು ನಾನು ಮೆಚ್ಚುವುದಿಲ್ಲ” ಎಂದು ಯೇಸುವಿನ ದನಿಯನ್ನು ಪುನರುಚ್ಚರಿಸುತ್ತಾನೆ.

ಜೂಜಾಡುವಾಗ ದಾಳಗಳು ತನ್ನ ಅನುಕೂಲಕ್ಕೆ ಬಿದ್ದರೆ ನಾನು ಮೋಸಗಾರನೇ ಎಂದು ನಾಚುವವನನ್ನು ಮೆಚ್ಚುವ ನೀಷೆಯಲ್ಲಿ ಅಪರಾಧ ಪ್ರಜ್ಞೆಯೂ ಇರುತ್ತದೆ. ಅದನ್ನು ಅಪರಾಧವೆಂದು ಹೇಳಲು ಸಿದ್ಧವಿಲ್ಲದೇ ಅಸ್ತಿತ್ವದಲ್ಲಿ ಘಟಿಸುತ್ತಿರುವ ಒಂದು ವಿದ್ಯಮಾನದಂತೆ ಮೆಚ್ಚುವ ಮನಸ್ಥಿತಿಯೂ ಇದೆ.

ಇಂಥಾ ದ್ವಂದ್ವ ಮನಸ್ಥಿತಿಯನ್ನು ಪ್ರಾಮಾಣಿಕವಾಗಿಯೇ ಹೊಂದಿದ್ದ ನೀಷೆ ಹುಚ್ಚಾಸ್ಪತ್ರೆಯಲ್ಲಿ ದಿನಗಳನ್ನು ಕಳೆಯಬೇಕಾಯಿತು. ಹೊರಗಿದ್ದ ಲೋಕವನ್ನೂ ಮತ್ತು ತಾನು ಕಂಡುಕೊಂಡಿದ್ದ ಲೋಕವನ್ನೂ ಏಕಕಾಲದಲ್ಲಿ ಲೋಲಕದಂತೆ ಡೋಲಾಯಮಾನದ ಸ್ಥಿತಿಯಲ್ಲಿ ನೋಡುತ್ತಿದ್ದ. ಪಕ್ಷಪಾತಗಳಿಲ್ಲದೇ ನೋಡುತ್ತಿದ್ದ. ಒಳಿತು ಕೆಡಕುಗಳ ಭಾವಗಳಿಲ್ಲದೇ ನೋಡುತ್ತಿದ್ದ. ಪಕ್ಷವಹಿಸದ ಕಾರಣ ಅವನ ಮುಕ್ತ ಚೈತನ್ಯವಾಗಿದ್ದ. ಮುಕ್ತವಾದ ಹೃದಯವನ್ನು ಹೊಂದಿದ್ದ. ಸಂಘರ್ಷಪ್ರಿಯ ಸಮಾಜದಲ್ಲಿ ಯಾವುದಾದರೂ ಪಕ್ಷವನ್ನು ವಹಿಸದಿದ್ದರೆ ಅವನನ್ನು ಬೆಂಬಲಿಸಲು ಯಾವ ಪಕ್ಷದವರೂ ಬರುವುದಿಲ್ಲ. ಗಾಯವಾದರೆ ಆಗಲಿ ಎನ್ನುತ್ತಾನೆ. ಹುಚ್ಚನಲ್ಲವೇ ಅವನು? ಗಾಯಗಳನ್ನು ಸಹಿಸಿಕೊಳ್ಳುತ್ತಾ ತನ್ನ ಆಂತರ್ಯವನ್ನು ಕಾಪಾಡಿಕೊಳ್ಳುವವನು ಹೆಚ್ಚಲ್ಲವೇ ಅವನು?

ಖಲೀಲ್ ಗಿಬ್ರಾನನ ಅಲ್‍ಮುಸ್ತಾಫನಂತೆ ಝರತುಷ್ಟ್ರ ಯೌವನದ ಪ್ರೌಡಿಮೆಯ ವಯಸ್ಸಿನಲ್ಲಿ ಮನೆಯನ್ನು ಬಿಟ್ಟು ಬೆಟ್ಟಗುಡ್ಡಗಳ ಕಡೆ ತೆರಳಿ ಏಕಾಂತದಲ್ಲಿ ಹತ್ತು ವರ್ಷಗಳನ್ನು ಕಳೆದ. ಮಿಂಚನ್ನು ಕಂಡುಕೊಂಡ. ಆನಂದದಿಂದಲೇ ಹೊತ್ತುಹೊತ್ತನ್ನೂ ಕಳೆದ. ಕೊನೆಗೊಂದು ದಿನ ತಾನು ಏನನ್ನು ಕಂಡುಕೊಂಡಿದ್ದಾನೆಯೋ, ಅದನ್ನು ಜನರೊಂದಿಗೆ ಹಂಚಿಕೊಳ್ಳಬೇಕೆಂದು ಬಯಸಿದ. ಏಕೆಂದರೆ, “ಅತಿಯಾಗಿ ಮಧುವನ್ನು ಹೀರಿದ ದುಂಬಿಯು ಆಯಾಸಗೊಂಡಿರುವಂತೆ ನಾನು ಪಡೆದಿರುವ ಅರಿವಿನಿಂದ ನಾನು ಬಳಲಿದ್ದೇನೆ. ಈಗ ಈ ಮಧುಕರ ವೃತ್ತಿಯನ್ನು ಮಾಡಬೇಕು. ಸೂರ್ಯನು ಪಡುವಣದಲ್ಲಿ ಸಂಜೆ ಇಳಿಯುವಂತೆ ಈ ಪ್ರವಾದಿಯೂ, ದಾರ್ಶನಿಕನೂ, ಮಿಂಚನ್ನು ಕಂಡುಕೊಂಡಿರುವ ಅತಿಮಾನವನೂ, ಆನಂದದ ಪ್ರತಿಮೆಯಾಗಿರುವವನೂ ಇಳಿಯಬೇಕಿದೆ. ಏಕೆಂದರೆ, ಇಳಿಯದೇ ಹೋದರೆ ಕೆಳಗಿರುವ ಜನರಿಗೆ ನಾವು ಪಡೆದಿರುವುದನ್ನು ನೀಡಲಾಗುವುದಿಲ್ಲ. ಏರುತ್ತಲೇ ಹೋದರೆ ಏರಲಾಗದವರಿಗೆ ಅತಿಮಾನವನ ಚೈತನ್ಯವನ್ನು ತಗುಲಿಸುವುದಾದರೂ ಹೇಗೆ?” ಎನ್ನುತ್ತಾ ಸೂರ್ಯನನ್ನು ಸಮಾನತೆಯ ಕಣ್ಣು ಎಂದು ಕರೆಯುತ್ತಾನೆ.

ರಾತ್ರಿ ಸುಖವಾದ ನಿದ್ರೆ ಮಾಡಲು ಇಡೀ ದಿನ ಎಚ್ಚರವಾಗಿರಬೇಕು ಎಂಬ ಅರ್ಥದಲ್ಲಿ ನ್ಶೆತಿಕತೆಯನ್ನು ಬೋಧಿಸುವ ಪಂಡಿತರನ್ನು ಕಂಡು ಕಂಡು ಇವನಿಗೆ ನಗುಬರುತ್ತದೆ. ಬದುಕಿನ ಕೊನೆಯಲ್ಲಿ ಶಾಂತಿಗಾಣಲು ಇಡೀ ಬದುಕು ಸದ್ಗುಣಗಳನ್ನು ಪಾಲಿಸುವುದು, ಒಳ್ಳೆಯವನಾಗಿರುವುದಕ್ಕೆ ಹೆಣಗಾಡುವುದು ನಗೆ ತರುವುದು ನೀಷೆಗೆ. ಇಂತಹ ಆಷಾಢಭೂತಿಗಿಂತ ಪ್ರಾಮಾಣಿಕ ವ್ಯಕ್ತಿಯಾಗಿ ಹುಚ್ಚನ್ನು ಹೊಂದಿರುವುದು ಒಂದು ಅನುಗ್ರಹವೆನ್ನುತ್ತಾನೆ ನೀಷೆ.

“ಯಾರೂ ತಿಳಿಯದ ಅನೇಕಾನೇಕ ಬಗೆಯ ಅಂತರಂಗಗಳು ಈ ಲೋಕದಲ್ಲಿವೆ. ಸರಿ, ಇದನ್ನು ತಿಳಿಯಬೇಕೆಂದರೆ ಮೊದಲು ತನ್ನದೇ ಅಂತರಂಗವನ್ನು ರೂಪಿಸಿಕೊಳ್ಳಬೇಕು. ಆಮೇಲೆ ತಿಳಿದುಕೊಳ್ಳಬೇಕು” ಎನ್ನುವ ಝರತುಷ್ಟ್ರ ವ್ಯಕ್ತಿವಾದಿಯಂತೆ ಕಾಣುತ್ತಾನೆ. ಆದರೆ, ಝರತುಷ್ಟ್ರ ಭೇಟಿ ಮಾಡುವ ಯುವಕನಾಗಲಿ, ಇತರರಾಗಲಿ ಒಬ್ಬೊಬ್ಬರೂ ಒಂದೊಂದು ಅರಿಮೆಗಳಿಂದ, ವ್ಯಸನಗಳಿಂದ, ಗೀಳುಗಳಿಂದ; ಒಟ್ಟಾರೆ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವರು. ಆದರೆ ಝರತುಷ್ಟ್ರ ಅವನ್ನು ಸಮಸ್ಯೆ ಎನ್ನುವುದಿಲ್ಲ. ವಾಸ್ತವ ಎನ್ನುತ್ತಾನೆ. ಆದರೆ ಸಂವಾದಗಳಿಂದ ಸಮಾಲೋಚನೆ ಮಾಡಿ ಅವುಗಳಿಂದ ಹೊರತಾಗಲು ನೆರವಾಗುತ್ತಾನೆ.

ದಸ್ ಸ್ಪೋಕ್ ಝರತುಷ್ಟ್ರ ಜಗತ್ತಿನ ಮಾನವ ಮನಸ್ಥಿತಿಯ ಡೋಲಾಯಮಾನದ ಸ್ಥಿತಿಗತಿಗಳನ್ನು ಒಳಿತು ಕೆಡಕುಗಳಿಂದಾಚೆಗೆ ಮೆಚ್ಚುತ್ತಾ ಬೆತ್ತಲೆಯಾಗಿರುವ ಚೈತನ್ಯವಾಗಿ ನಿಲ್ಲುತ್ತದೆ. ಅದೊಂದು ವಿದ್ಯುತ್ಚಕ್ತಿಯಂತೆ ಬರಿಯ ಚೈತನ್ಯ. ಯಾರು ಯಾವುದಕ್ಕೆ ಬಳಸಿಕೊಳ್ಳುವರೋ ಅವರವರ ವಿವೇಚನೆ ಮತ್ತು ಗ್ರಹಿಕೆಗೆ ಬಿಟ್ಟದ್ದು. ಮೂಲದ್ರವ್ಯದಂತೆ ಒದಗುವ ಯಾವುದೇ ಚೈತ್ಯನ್ಯದ ಜಾಯಮಾನ ಅದೇ ಆಗಿರುತ್ತದೆ.

ಭಗವತ್ಗೀತೆಯನ್ನು ಗೋಡ್ಸೆಯೂ ಓದುತ್ತಿದ್ದ, ಗಾಂಧಿಯೂ ಓದುತ್ತಿದ್ದರು. ಬಾಲ ಗಂಗಾಧರ ತಿಲಕ್ ಓದಿ ರಚಿಸಿದ ಭಾರತೀಯರ ತಾತ್ವಿಕತೆಯು ಡಿ ಡಿ ಕೋಸಾಂಬಿಯವರು ಗೀತೆಯಿಂದ ಗ್ರಹಿಸಿದ್ದಕ್ಕಿಂತ ಭಿನ್ನ. ಆದರೆ ಅವರವರ ಪ್ರಾಮಾಣಿಕ ಬದ್ಧತೆಯಿಂದ ಅವರು ಗ್ರಹಿಸಿದ ತಾತ್ವಿಕತೆಯು ಅವರವರ ನಡೆನುಡಿಗಳಲ್ಲಿ ಪುಟಕಿಟ್ಟುಕೊಳ್ಳುತ್ತದೆ.

ಹಿಟ್ಲರನಿಗೆ ಅರ್ಥವಾದ ನೀಷೆಯ ಅತಿಮಾನವತ್ವವಾದವು ಬೇರೊಬ್ಬರ ಗ್ರಹಿಕೆಯಲ್ಲಿ ಮನುಷ್ಯತ್ವ ಮತ್ತು ಪಶುತ್ವಗಳನ್ನು ಮೀರಿದ ಬಯಲಲ್ಲಿ ಕರುಣೆಯ ಕಣ್ಣ ಮಿಂಚಾದರೆ, ಪಡೆದ ಸಮಭಾವದ ಆನಂದವಾದರೆ ಆಶ್ಚರ್ಯವೇನಿಲ್ಲ. ಏಕೆಂದರೆ ‘ಝರತುಷ್ಟ್ರ ಹಾಗೆಂದದ್ದು’ ಮೂಲದ್ರವ್ಯಗಳನ್ನೇ ಹೊರತು ಸಿದ್ಧವಿಷಯಗಳನ್ನಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...