Homeಮುಖಪುಟಭಾರತದಲ್ಲಿ ಕೊರೊನಾ ವೈರಸ್ ಸಮುದಾಯ ಹರಡುವಿಕೆ ಪ್ರಾರಂಭಿಸಿದೆ: ICMR

ಭಾರತದಲ್ಲಿ ಕೊರೊನಾ ವೈರಸ್ ಸಮುದಾಯ ಹರಡುವಿಕೆ ಪ್ರಾರಂಭಿಸಿದೆ: ICMR

- Advertisement -
- Advertisement -

ಯಾವುದೇ ವಿದೇಶಿ ಪ್ರಯಾಣದ ಇತಿಹಾಸ ಅಥವಾ ಕೊರೊನಾ ಸೋಂಕಿತರ ಸಂಪರ್ಕವಿಲ್ಲದೆಯೂ ಸಹ ಹೆಚ್ಚು ಹೆಚ್ಚು ಜನರು ಕೊರೊನ ವೈರಸ್‌ಗೆ ತುತ್ತಾಗುತ್ತಿದ್ದಾರೆ ಎಂಬುದು ಯಾದೃಚ್ಛಿಕ ಪರೀಕ್ಷೆಗಳಿಂದ (Random coronavirus tests) ದೃಢಪಟ್ಟಿದೆ.

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ICMR) ಸಂಗ್ರಹಿಸಿದ ಮಾಹಿತಿಯು ಈ ಅಂಶವನ್ನು ಹೊರಹಾಕಿದ್ದು, ಜ್ವರ ಮತ್ತು ತೀವ್ರವಾದ ಉಸಿರಾಟದ ಕಾಯಿಲೆಗಳಿರುವ ರೋಗಿಗಳ ಮೇಲೆ ನಡೆಸಿದ ಯಾದೃಚ್ಛಿಕ ಕೊರೊನಾ ವೈರಸ್ ಪರೀಕ್ಷೆಗಳಿಂದ ಶೇಕಡಾ 38 ರಷ್ಟು ರೋಗಿಗಳಿಗೆ ಪ್ರಯಾಣದ ಇತಿಹಾಸವಿಲ್ಲದಿದ್ದರೂ ಸೋಂಕು ಹರಡಿದೆ ಎಂದು ತಿಳಿದುಬಂದಿದೆ.

ಎರಡು ವಾರಗಳ ಹಿಂದೆ ಕೊರೊನ ವೈರಸ್ ಸಮುದಾಯಿಕವಾಗಿ ಹರಡುತ್ತಿಲ್ಲ ಎಂದು ICMR ಪ್ರತಿಕ್ರಿಯಿಸಿತ್ತು. ಆದರೆ ICMR ತೀವ್ರ ಉಸಿರಾಟದ ಕಾಯಿಲೆಯ ವೈರಸ್ ಸಮುದಾಯಿಕವಾಗಿ ಹರಡುತ್ತಿದೆಯೇ ಎಂದು ತಿಳಿಯಲು ಯಾದೃಚ್ಛಿಕ ಪರೀಕ್ಷೆಗಳನ್ನು (Random coronavirus tests)  ನಡೆಸುತ್ತಿದೆ ನಂತರ ಅವರ ಡಾಟಾದಲ್ಲಿ ಮಹತ್ತರ ಬದಲಾವಣೆಗಳು ಕಂಡಿಬಂದಿವೆ.

ಇತ್ತೀಚಿಗಿನವರೆಗೆ ಭಾರತದ ಹೆಚ್ಚಿನ ರೋಗಿಗಳು ತಮ್ಮ ವಿದೇಶ ಪ್ರವಾಸದಿಂದ ಅಥವಾ ವಿದೇಶಕ್ಕೆ ಪ್ರಯಾಣಿಸಿದ ವ್ಯಕ್ತಿಯಿಂದ ಸೋಂಕು ತಗುಲಿಸಿಕೊಂಡಿದ್ದರು. ಇದರಿಂದಾಗಿ ಅವರನ್ನು ಪ್ರತ್ಯೇಕಗೊಳಿಸಿ ರೋಗಿಗಳ ಸಂಖ್ಯೆ ಶೂನ್ಯವಾಗುವಂತೆ ಮಾಡಬಹುದಾಗಿತ್ತು. ಆದರೆ ಈಗಿನ ಸ್ಥಿತಿಯನ್ನು 3 ನೇ ಹಂತ ಅಥವಾ ಸಮುದಾಯ ಹರಡುವಿಕೆ ಎಂದು ಕರೆಯಲಾಗುತ್ತದೆ.

SARI (Severe Acute Respiratory Illness) ತೀವ್ರ ಉಸಿರಾಟದ ಕಾಯಿಲೆ, ಮತ್ತು ಐಸಿಎಂಆರ್ ವೈರಸ್ನ ಯಾವುದೇ ಸಮುದಾಯ ಹರಡುವಿಕೆ ನಡೆಯುತ್ತಿದೆಯೇ ಎಂದು ಪರೀಕ್ಷಿಸಲು ಅವರ ಮೇಲೆ ಯಾದೃಚ್ಛಿಕ ಪರೀಕ್ಷೆಗಳನ್ನು ನಡೆಸುತ್ತಿದೆ.

ಆದರೆ ಯಾದೃಚಿಕ ಪರೀಕ್ಷೆಗಳ ಬದಲು ತೀವ್ರ ಉಸಿರಾಟದ ಕಾಯಿಲೆಯಿರುವ ಎಲ್ಲಾ ರೋಗಿಗಳನ್ನು ಪರೀಕ್ಷಿಸುವಂತಹ ನೀತಿಯನ್ನು ತಂದಾಗ ಮಾರ್ಚ್ 15 ಮತ್ತು ಮಾರ್ಚ್ 21 ರ ನಡುವೆ 106 ರೋಗಿಗಳಲ್ಲಿ ಇಬ್ಬರಲ್ಲಿ ವೈರಸ್ ಇರುವುದು ಕಂಡುಬಂದಿದೆ.

ಅದರ ನಂತರ ತುಂಬಾ ಬದಲಾವಣೆಗಳು ಆಗಿದೆ. ಮಾರ್ಚ್ 22 ಮತ್ತು ಮಾರ್ಚ್ 28 ರ ನಡುವೆ ಯಾದೃಚಿಕವಾಗಿ ಪರೀಕ್ಷಿಸಲ್ಪಟ್ಟ 2,877 ರೋಗಿಗಳಲ್ಲಿ 48 (ಶೇಕಡಾ 1.7) ರೋಗಿಗಳು ಕೊರೊನಾ ಪಾಸಿಟಿವ್ ಆಗಿದ್ದಾರೆ. ಮಾರ್ಚ್ 29 ಮತ್ತು ಏಪ್ರಿಲ್ 2 ರ ನಡುವೆ 2,069 ತೀವ್ರ ಉಸಿರಾಟದ ಕಾಯಿಲೆಯ ರೋಗಿಗಳಲ್ಲಿ 54 (ಶೇಕಡಾ 2.6) ರೋಗಿಗಳಿಗೆ ಕೊರೊನ ವೈರಸ್ ಇರುವುದು ಪತ್ತೆಯಾಗಿದೆ.

ಒಟ್ಟಾರೆಯಾಗಿ 5,911 ತೀವ್ರ ಉಸಿರಾಟದ ಕಾಯಿಲೆಯ ರೋಗಿಗಳಲ್ಲಿ 104 (ಶೇಕಡಾ 1.8) ರೋಗಿಗಳಿಗೆ ಕೊರೊನ ವೈರಸ್ ಇರುವುದು ಪತ್ತೆಯಾಗಿದೆ .

ಇದರಲ್ಲಿ ನಲವತ್ತು ರೋಗಿಗಳು ಯಾವುದೇ ಅಂತರರಾಷ್ಟ್ರೀಯ ಪ್ರಯಾಣ ಅಥವಾ ಪ್ರಯಾಣಿಸಿದವರ ಸಂಪರ್ಕವನ್ನು ಹೊಂದಿಲ್ಲ. ಭಾರತದ 15 ರಾಜ್ಯಗಳ 36 ಜಿಲ್ಲೆಗಳಿಂದ ಇಂತಹ ಪ್ರಕರಣಗಳು ವರದಿಯಾಗಿವೆ. ICMR ತನ್ನ ವರದಿಯಲ್ಲಿ ” ಕೊರೊನ ವೈರಸ್ ವಿರುದ್ದ ಚಟುವಟಿಕೆಗಳನ್ನು ಗುರಿಯಾಗಿಸಲು ಈ ಜಿಲ್ಲೆಗಳಿಗೆ ಆದ್ಯತೆ ನೀಡಬೇಕಾಗಿದೆ” ಎಂದು ಹೇಳಿದೆ.

ಇದರಲ್ಲಿ ಪುರುಷರಲ್ಲೇ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ಕಂಡುಬಂದಿದೆ. ಅದರಲ್ಲೂ 40 ವರ್ಷಕ್ಕಿಂತ ಮೇಲ್ಪಟ್ಟ ರೋಗಿಗಳಲ್ಲಿ 85 ಪ್ರಕರಣಗಳು (ಶೇಕಡಾ 83.3) ಪುರುಷರಾಗಿದ್ದಾರೆ. ಎಂಭತ್ತಮೂರು ರೋಗಿಗಳು (ಶೇಕಡಾ 81.4) 40 ವರ್ಷಕ್ಕಿಂತ ಹೆಚ್ಚು ವಯಸ್ಸಿನವರಾಗಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...