HomeUncategorizedದ್ವೇಷ ಹರಡುವ ಮಾಧ್ಯಮಗಳಿಂದ ಅಭದ್ರರಾಗಿರುವ ಕರ್ನಾಟಕದ ಮುಸ್ಲಿಮರು: ಕ್ವಿಂಟ್ ವಿಶೇಷ ವಿಡಿಯೋ ವರದಿ

ದ್ವೇಷ ಹರಡುವ ಮಾಧ್ಯಮಗಳಿಂದ ಅಭದ್ರರಾಗಿರುವ ಕರ್ನಾಟಕದ ಮುಸ್ಲಿಮರು: ಕ್ವಿಂಟ್ ವಿಶೇಷ ವಿಡಿಯೋ ವರದಿ

ಹೀಗೆ ಹಲ್ಲೆಯಾದವರ ಬಗ್ಗೆ ಅಂತರ್ಜಾಲ ಪತ್ರಿಕೆ "ಕ್ವಿಂಟ್" ವಿಶೇಷ ವರದಿಯನ್ನು ಮಾಡಿದೆ. ಅದರ ಮುಖ್ಯಾಂಶಗಳು ಇಲ್ಲಿವೆ.

- Advertisement -
- Advertisement -

ಕೊರೊನಾ ವೈರಸ್ ವಿಶ್ವದಾದ್ಯಂತ ತನ್ನ ಕರಿಛಾಯೆಯನ್ನು ಬೀರುತ್ತಿರುವಾಗ ಭಾರತವನ್ನೇನು ಬಿಟ್ಟು ಬಿಡುವುದಿಲ್ಲ. ಆದರೆ ಭಾರತದ ಸಂಧರ್ಭಕ್ಕೆ ಕೊರೊನ ಬರುವಾಗ ಅದು ಇಸ್ಲಾಂ ಧರ್ಮಕ್ಕೆ ಮತಾಂತರವಾಯಿತೇ ಎನ್ನುವ ಪ್ರಶ್ನೆಯನ್ನು ಜನರು ಕೇಳುತ್ತಿದ್ದಾರೆ. ನಮ್ಮ ಮುಖ್ಯವಾಹಿನಿಯ ದೃಶ್ಯ ಮಾಧ್ಯಮ, ಪತ್ರಿಕೆಯಾದಿಯಾಗಿ ಸಾಮಾಜಿಕ ಜಾಲತಾಣ ಕೂಡಾ ಸೇರಿಕೊಂಡು ಮಾಡಿದ ಅಪಪ್ರಚಾರದಿಂದಾಗಿ ಕರ್ನಾಟಕದಾದ್ಯಂತ ಮುಸ್ಲಿಮರು ಹಲ್ಲೆಗೊಳಗಾಗಬೇಕಾಯಿತು. ಹೀಗೆ ಹಲ್ಲೆಯಾದವರ ಬಗ್ಗೆ ಅಂತರ್ಜಾಲ ಪತ್ರಿಕೆ “ಕ್ವಿಂಟ್” ವಿಶೇಷ ವರದಿಯನ್ನು ಮಾಡಿದೆ. ಅದರ ಮುಖ್ಯಾಂಶಗಳು ಹೀಗಿವೆ…

ಬಾಗಲಕೋಟೆ ಜಿಲ್ಲೆಯ ಬಿರದಾರಿ ಗ್ರಾಮದಲ್ಲಿ ಹತ್ತರಿಂದ ಹದಿನೈದು ಜನರು ಕೈಯ್ಯಲ್ಲಿ ಕಬ್ಬಿಣದ ರಾಡುಗಳನ್ನು ಹಿಡಿದು ಮೂವರು ಮುಸ್ಲಿಮರನ್ನು ಸುತ್ತುವರೆದು ಗ್ರಾಮದಿಂದ ಹೊರ ಹೋಗುವಂತೆ ಕೂಗುತ್ತಿದ್ದಾರೆ. ಮೂವರಲ್ಲಿ ಒಬ್ಬ ವ್ಯಕ್ತಿ ತುಂಬಾ ದಯನೀಯವಾಗಿ ಬೇಡುತ್ತಿರುವಾಗ “ಅವರನ್ನು ಮುಟ್ಟಬೇಡಿ ರೋಗ ಹರಡುತ್ತಾರೆ” ಎಂದು ಹಲ್ಲೆಕೋರನೊಬ್ಬ ಕೂಗುವ ಶಬ್ದ ವಿಡಿಯೋದಲ್ಲಿ ಕೇಳಿಸುತ್ತದೆ.

Attacks blaming muslims for COVID-19 reported across KarnatakaFrom heckling to assault, there has been a stark rise in attacks on Muslims, Muslim volunteers and hate speech against the community in the last week, during the 21-day lockdown over coronavirus.Full story: https://bit.ly/2x2KQor#COVID19 #Lockdown #Lockdown21 #India

Posted by Shehzad Khan on Wednesday, April 8, 2020

ಕದರಕೊಪ್ಪ ಗ್ರಾಮದಲ್ಲಿ ಮಸೀದಿಯೊಳಗೆ ಇರುವ ಮೂವರು ವ್ಯಕ್ತಿಗಳನ್ನು ನಮಾಜ್ ಮಾಡುತ್ತಿದ್ದೀರಿ ಎಂದು ಆರೋಪಿಸಿ ಅವರ ಮೇಲೆ ಆಕ್ರಮಣ ಮಾಡುತ್ತಾರೆ. ಈ ವಿಡಿಯೋ ವೈರಲ್ ಆದ ಬಳಿಕ ಪೊಲೀಸರು ಹಲ್ಲೆಕೋರರ ವಿರುದ್ಧ ಕೇಸು ದಾಖಲಿಸುತ್ತಾರೆ.


ಇದನ್ನೂ ಓದಿ: ಮುಖ್ಯಮಂತ್ರಿಗಳ ಎಚ್ಚರಿಕೆಯ ನಂತರವೂ ಸುಳ್ಳು ಸುದ್ದಿ ಹರಡುತ್ತಿರುವ ಪೋಸ್ಟ್‌ ಕಾರ್ಡ್‌ ಕನ್ನಡ: ಕ್ರಮ ಯಾವಾಗ? 


ಬೆಂಗಳೂರಿನಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ ಲಾಕ್ ಡೌನ್ ನಿಂದಾಗಿ ಕಷ್ಟಕ್ಕೊಳಗಾಗಿರುವ ಜನರಿಗೆ ಪಡಿತರ ಹಂಚುತ್ತಿದ್ದ ಸ್ವರಾಜ್ ಅಭಿಯಾನದ ಕಾರ್ಯಕರ್ತರಿಗೆ ಮುಸ್ಲಿಮರು ರೋಗ ಹರಡುತ್ತಿದ್ದಾರೆ ಎಂದು ಹೇಳಿ ಕ್ರಿಕೆಟ್ ಬ್ಯಾಟುಗಳಿಂದ ಹಲ್ಲೆ ನಡೆಸಿದ್ದಾರೆ. ಈ ಘಟನೆಯ ಬಗ್ಗೆ ಮಾತನಾಡಿದ ಸ್ವರಾಜ್ ಅಭಿಯಾನದ ಕಾರ್ಯಕರ್ತರಾದ ಸಯದ್ ತಬ್ರೀಜ್, ಪೋಲಿಸರಿಂದ ಅನುಮತಿ ಪಡೆದು ಪಡಿತರವನ್ನು ಹಂಚುವುದಕ್ಕೆ ಹೊರಟಾಗ ಹಿಂದಿನಿಂದ ಬಂದು ಬ್ಯಾಟ್ ಹಾಗೂ ಕೋಲುಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಹೇಳುತ್ತಾರೆ. ಅಮೃತಹಳ್ಳಿಯಿಂದ ದಾಸರಹಳ್ಳಿಗೆ ಹೋಗುತ್ತಿರುವಾಗ ಇದರ ಮದ್ಯೆ ಹದಿನೈದು ಮಂದಿ ನಮ್ಮ ಮೇಲೆ ಆಕ್ರಮಣ ನಡೆಸಿದ್ದಾರೆ, ಜೊತೆಗೆ ನಿಮ್ಮ ಪಡಿತರ ಮುಸ್ಲಿಮರಿಗೆ ಮಾತ್ರ ನೀಡಿ ಇಲ್ಲಿಗೆ ಅದರ ಅಗತ್ಯವಿಲ್ಲ ಎಂದು ಹೇಳಿ ನಮ್ಮ ಜೊತೆಯಿದ್ದ ಆರು ಮಂದಿಗೆ ಹದಿನೈದು ಮಂದಿ ಸೇರಿ ಹಲ್ಲೆ ನಡೆಸಿದ್ದಾರೆ ಎಂದು ಸ್ವರಾಜ್ ಅಭಿಯಾನದ ಕಾರ್ಯದರ್ಶಿ ಝರೀನ್ ತಾಜ್ ಹೇಳುತ್ತಾರೆ.

ಈ ಘಟನೆಗೂ ಮೊದಲು ಸ್ವರಾಜ್ ಅಭಿಯಾನದ ಪಡಿತರ ಬಂದಾಗಲೆ ಬಿಜೆಪಿ ನಾಯಕ ಇವರೊಂದಿಗೆ ನೀವು ಪಡಿತರ ಹಂಚುವಂತಿಲ್ಲ, ನೀವು ಭಯೋತ್ಪಾದಕರು, ನಿಮ್ಮಿಂದಾಗಿಯೇ ವೈರಸ್ ಹರಡುತ್ತಿದೆ ಎಂದು ಗಲಾಟೆ ಮಾಡಿದ್ದಾರೆ ಎಂದು ಹಲ್ಲೆಗೊಳಗಾದ ತಬ್ರೀಜ್ ಆರೋಪಿಸುತ್ತಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೇವೆ ಅವರು ಅನುಮತಿ ಕೊಟ್ಟ ನಂತರ ನಾವು ಪಡಿತರ ಹಂಚಿದ್ದೇವೆ ಎಂದು ಅವರು ಹೇಳುತ್ತಾರೆ.

ಈ ಘಟನೆಯ ವೀಡಿಯೊದಲ್ಲಿ ಆರೆಸ್ಸೆಸ್ಸಿನ ಸಮವಸ್ತ್ರ ಧರಿಸಿರುವ ವ್ಯಕ್ತಿಗಳು, ಇವರು ಸೋಂಕು ಹರಡುತ್ತಿದ್ದಾರೆ ಇವರಿಂದ ಪಡಿತರವನ್ನು ಪಡೆಯದಂತೆ ಜನರ ಹತ್ತಿರ ಹೇಳುತ್ತಿರುವುದು ಕಾಣಬಹುದಾಗಿದೆ.

ಮತ್ತೊಂದು ಘಟನೆ: ಬೆಳಗಾವಿ ಜಿಲ್ಲೆಯ ಯಮಕನಮರಡಿ ಮತ್ತು ಸದಲಗ ಎಂಬಲ್ಲಿ ಮಸೀದಿಯನ್ನು ಆಕ್ರಮಿಸಿ ಬೆಳಕು ನಂದಿಸಲಿಲ್ಲ ಎಂದು ಆರೋಪಿಸಿ ಗಲಾಟೆ ಮಾಡಿದ್ದಕ್ಕೆ ಪೊಲೀಸರು ಸುಮಾರು ಇಪ್ಪತ್ತು ಜನರನ್ನು ಬಂಧಿಸಿದ್ದಾರೆ.

ಅಲ್ಲದೆ ಮಂಗಳೂರಿನ ಹಲವೆಡೆ ಕೊರೊನಾ ವೈರಸ್ ಹೋಗುವವರೆಗೆ ಮುಸ್ಲಿಮ್ ವ್ಯಾಪಾರಿಗಳಿಗೆ ಊರಿಗೆ ಪ್ರವೇಶವಿಲ್ಲ ಎಂದು ನಿಷೇಧ ಹೇರಿ ನೋಟಿಸುಗಳನ್ನು ಹಾಕಲಾಗಿದೆ.


ಇದನ್ನೂ ಓದಿ: ಕೆ.ಆರ್‌ ಪೇಟೆಯಲ್ಲಿ ಮುಸ್ಲಿಂ ಯುವಕರ ಬಗ್ಗೆ ಸುಳ್ಳು ಸುದ್ದಿ: ಕೊನೆಗೆ ಸಿಕ್ಕ ಆರೋಪಿಗಳು ಬೇರೆ ಧರ್ಮದವರು! 


ಮುಖ್ಯಮಂತ್ರಿ ಯಡಿಯೂರಪ್ಪ ಈಗಾಗಲೆ ಅಲ್ಪಸಂಖ್ಯಾತ ಮುಸ್ಲಿಮರ ಮೇಲೆ ದ್ವೇಷ ಹರಡುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ. ಆದರೂ ಮುಸ್ಲಿಂ ಸಮುದಾಯದ ವಿರುದ್ಧ ಸುಳ್ಳುಗಳು, ಅಪಪ್ರಚಾರಗಳು ಎಗ್ಗಿಲ್ಲದೇ ನಡೆಯುತ್ತಿವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...