Homeಮುಖಪುಟಕೆ.ಆರ್‌ ಪೇಟೆಯಲ್ಲಿ ಮುಸ್ಲಿಂ ಯುವಕರ ಬಗ್ಗೆ ಸುಳ್ಳು ಸುದ್ದಿ: ಕೊನೆಗೆ ಸಿಕ್ಕ ಆರೋಪಿಗಳು ಬೇರೆ ಧರ್ಮದವರು!

ಕೆ.ಆರ್‌ ಪೇಟೆಯಲ್ಲಿ ಮುಸ್ಲಿಂ ಯುವಕರ ಬಗ್ಗೆ ಸುಳ್ಳು ಸುದ್ದಿ: ಕೊನೆಗೆ ಸಿಕ್ಕ ಆರೋಪಿಗಳು ಬೇರೆ ಧರ್ಮದವರು!

ಈ ಪ್ರಕರಣ ಸತ್ಯ ತಿಳಿಯುವ ಮುನ್ನ ಸುಳ್ಳು ಸುದ್ದಿ ಹರಡಬಾರದೆಂಬ ಪಾಠವನ್ನು ಕಲಿಸಿದೆ.

- Advertisement -
- Advertisement -

ಕೃಷ್ಣರಾಜಪೇಟೆ ತಾಲ್ಲೂಕಿನ ತೆಂಡೇಕೆರೆ ಚೆಕ್ ಪೋಸ್ಟ್ ನಲ್ಲಿ ಚೆಕ್ ಪೋಸ್ಟ್ ಅಧಿಕಾರಿಗಳು ಹಾಗೂ ಪೋಲಿಸರಿಗೆ ಬೆದರಿಸಿ ಆಟೋದಲ್ಲಿ ಪರಾರಿಯಾಗಿದ್ದ ಮೂವರು ಯುವಕರನ್ನು ತಹಶಿಲ್ದಾರ್‌ ಶಿವಮಾಧು ಸೇರಿದಂತೆ ಹಲವು ಮಾಧ್ಯಮಗಳು ಮುಸ್ಲಿಂ ಯುವಕರು ಎಂದು ತಪ್ಪು ಸುದ್ದಿ ಹರಡಿದ್ದರಿಂದ ತಾಲ್ಲೂಕಿನಾದ್ಯಂತ ಆತಂಕ ಉಂಟಾಗಿತ್ತು.

ಆದರೆ ಕೆ.ಆರ್.ಪೇಟೆ ಸರ್ಕಲ್ ಇನ್ಸ್ ಪೆಕ್ಟರ್ ಕೆ.ಎನ್.ಸುಧಾಕರ್ ಮತ್ತು ಗ್ರಾಮಾಂತರ ಪೋಲೀಸ್ ಸಬ್ ಇನ್ಸ್ ಪೆಕ್ಟರ್ ಲಕ್ಷ್ಮಣ್ ಅವರ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಿದ ನಂತರ ಆರೋಪಿಗಳು ಪತ್ತೆಯಾಗಿದ್ದು ಅವರನ್ನು ಬೂಕನಕೆರೆ ಹೋಬಳಿಯ ಬಳ್ಳೇಕೆರೆ ಗ್ರಾಮದ ಮಹೇಶ್.ಬಿನ್ ಕೆಂಪಟ್ಟಿಗೌಡ, ಅಭಿಶೇಕ್ ಬಿನ್ ಮಹೇಶ,  ಶ್ರೀನಿವಾಸ್ ಬಿನ್ ಪುಟ್ಟರಾಜು ಎಂದು ಗುರುತಿಸಲಾಗಿದೆ.

ವಿಡಿಯೋ ನೋಡಿ

ಮುಸ್ಲಿಮ್ ಯುವಕರ ಬಗ್ಗೆ ಸುಳ್ಳು ಸುದ್ದಿಗಳು

ಕ್ವಾರಂಟೈನ್‌ನಲ್ಲಿದ್ದ ಮುಸ್ಲಿಮ್ ಹುಡುಗರು ಕೆ.ಆರ್ ಪೇಟೆ ತುಂಬಾ ಓಡಾಡಿದ್ದಾರೆ ಎಂಬ ಸುಳ್ಳು ಹರಡುವಿಕೆ. ಕೊನೆಗೆ ಸಿಕ್ಕಿದ್ದು ಬೇರೆ ಧರ್ಮದವರು. ಸುಳ್ಳು ಸುದ್ದಿ ಹರಡುವ ಮುನ್ನ ಪರಿಶೀಲಿಸಿ..

Posted by Naanu Gauri on Thursday, April 9, 2020

ಇದರಿಂದಾಗಿ ತಾಲ್ಲೂಕಿನ ಜನತೆಯಲ್ಲಿ ಉಂಟಾಗಿದ್ದ ಆತಂಕವನ್ನು ಕೃಷ್ಣರಾಜಪೇಟೆ ಗ್ರಾಮಾಂತರ ಪೋಲಿಸರು ದೂರ ಮಾಡಿದ್ದಾರೆ. ಅಲ್ಲದೇ ಈ ಪ್ರಕರಣ ಸತ್ಯ ತಿಳಿಯುವ ಮುನ್ನ ಸುಳ್ಳು ಸುದ್ದಿ ಹರಡಬಾರದೆಂಬ ಪಾಠವನ್ನು ಕಲಿಸಿದೆ.

ಬಂಧಿತರ ಪೈಕಿ ಮಹೇಶ್ ಬೆಂಗಳೂರಿನಲ್ಲಿ ಆಟೋ ಓಡಿಸುವ ವೃತ್ತಿ ಮಾಡುತ್ತಿದ್ದು, ಯುಗಾದಿ ಹಬ್ಬಕ್ಕೆ ಸ್ವಗ್ರಾಮ ಬಳ್ಳೇಕೆರೆಗೆ ಬಂದಿದ್ದರು. ಹಾಗಾಗಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಮಹೇಶ್ ಕೈಗೆ ಗ್ರಾಮ ಪಂಚಾಯಿತಿ ಯವರು ಸೀಲ್ ಹಾಕಿ ಹೋಂ ಕ್ವಾರಂಟೈನ್ ನಲ್ಲಿ ಇರುವಂತೆ ಆದೇಶ ನೀಡಿದ್ದರು. ಆದರೆ ಸ್ನೇಹಿತರೊಂದಿಗೆ ಚನಕುರಳಿಗೆ ಮೆಡಿಕಲ್‌ಗೆ ಹೋಗಿ ವಾಪಸ್ ಬರುವಾಗ ತೆಂಡೇಕೆರೆ ಚೆಕ್ ಪೋಸ್ಟ್ ನಲ್ಲಿ ಅಧಿಕಾರಿಗಳು ಹಿಡಿದುಕೊಳ್ಳುವ ಭಯದಿಂದ ನಮಗೆ ಕೊರೋನೊ ಇದೆ ಮುಟ್ಟಿದರೆ ನಿಮಗೂ ಕೊರೋನೋ ಬರುತ್ತದೆ ನೋಡಿ ಎಂದು ಕೈಯಲ್ಲಿದ್ದ ಸೀಲ್ ತೋರಿಸಿ ಭಯಹುಟ್ಟಿಸಿ ಯುವಕರು ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ನಡೆದ 12 ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಲಾಗಿದ್ದು, ಆರೋಪಿಗಳು ರಾತ್ರಿ ತೆಂಡೆಕರೆ ಚೆಕ್‌ಪೋಸ್ಟ್‌ ಬಳಿ ಹೋಗಿದ್ದು ನಾವೆ. ಔಷಧಿ ತರಲು ಚಿನಕುರಳಿಗೆ ಹೋಗಿದ್ದೇವು. ಪೊಲೀಸ್‌ ಭಯದಿಂದ ಅಲ್ಲಿಂದ ತಪ್ಪಿಸಿಕೊಂಡಿದ್ದೆವು ಎಂದು ಒಪ್ಪಿಕೊಂಡಿದ್ದಾರೆ.

ಆದರೆ ಇಂದು ಬೆಳಿಗ್ಗೆಯಿಂದಲೇ ಕೆ.ಆರ್‌ ಪೇಟೆ ಮತ್ತು ಜಿಲ್ಲೆಯಾದ್ಯಂತ ಕೊರೊನಾ ಸೋಂಕಿತ ಮುಸ್ಲಿಮರು ಕೆ.ಆರ್‌ ಪೇಟೆ ಸುತ್ತುತ್ತಾ ಇತರರಿಗೂ ಹರಡುತ್ತಿದ್ದಾರೆ ಹುಷಾರಾಗಿರಿ ಎಂಬ ಸುಳ್ಳುಗಳನ್ನು ವೈರಲ್‌ ಮಾಡಲಾಗಿತ್ತು. ಆದರೆ ಆರೋಪಿಗಳು ಮುಸ್ಲಿಮರಲ್ಲ ಎಂಬುದು ಬಂಧನದ ನಂತರ ಸ್ಪಷ್ಟವಾಗಿದೆ.


ಇದನ್ನೂ ಓದಿ: ಯಾರೂ ಸಹ ಅಲ್ಪಸಂಖ್ಯಾತ ಮುಸ್ಲಿಂ ಬಂಧುಗಳ ಮೇಲೆ ಒಂದು ಶಬ್ಧ ಮಾತಾಡಕೂಡದು: ಯಡಿಯೂರಪ್ಪ


ಎರಡು ದಿನಗಳ ಕೆಳಗೆ ತಾನೇ ಮುಖ್ಯಮಂತ್ರಿ ಯಡಿಯೂರಪ್ಪನವರು ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ವಿರುದ್ಧ ಸುಳ್ಳು ಸುದ್ದಿ ಹರಡಿದರೆ ಕ್ರಮ ಖಚಿತ ಎಂದು ಎಚ್ಚರಿಕೆ ನೀಡಿದ್ದೆರು. ಆದರೂ ಸಹ ಅಧಿಕಾರಿಗಳು ಸೇರಿದಂತೆ ಈ ಸುಳ್ಳು ಸುದ್ದಿ ಹರಡುವ, ಕೋಮುದ್ವೇಷ ಹರಡುವ ಕೆಲಸಗಳು ನಿಂತಿಲ್ಲ. ಈ ಕುರಿತು ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ.


ಇದನ್ನೂ ಓದಿ: ಮುಖ್ಯಮಂತ್ರಿಗಳ ಎಚ್ಚರಿಕೆಯ ನಂತರವೂ ಸುಳ್ಳು ಸುದ್ದಿ ಹರಡುತ್ತಿರುವ ಪೋಸ್ಟ್‌ ಕಾರ್ಡ್‌ ಕನ್ನಡ: ಕ್ರಮ ಯಾವಾಗ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...