Homeಅಂಕಣಗಳು`#ಮೀಟೂ ಆಂದೋಲನವು ಭಾರತದಲ್ಲಿ ಮಹಿಳೆಯರ ಕುರಿತಾದ ನಮ್ಮ ದೃಷ್ಟಿಕೋನವನ್ನು ಬದಲಿಸಬಲ್ಲುದು’

`#ಮೀಟೂ ಆಂದೋಲನವು ಭಾರತದಲ್ಲಿ ಮಹಿಳೆಯರ ಕುರಿತಾದ ನಮ್ಮ ದೃಷ್ಟಿಕೋನವನ್ನು ಬದಲಿಸಬಲ್ಲುದು’

- Advertisement -
- Advertisement -

ಯಾವುದೇ ಒಂದು ಆರೋಪ ಕೇಳಿಬಂದಾಗ ಅದರ ಸತ್ಯಾಸತ್ಯತೆಯನ್ನು ಪರಾಮರ್ಶಿಸಿಯೇ ನೋಡಬೇಕು ಎಂಬುದು ಸಾರ್ವಜನಿಕ ಜೀವನದಿಂದ ನಾವು ಕಲಿತಿರುವ ಮೊದಲ ಪಾಠ. ಗಂಭೀರ ಆರೋಪಗಳು ನಮ್ಮ ಸಾರ್ವಜನಿಕ ಜೀವನದ, ಅದಕ್ಕೂ ಮಿಗಿಲಾಗಿ ರಾಜಕೀಯ ಜೀವನದ ಅವಿಭಾಜ್ಯ ಅಂಗದಂತಾಗಿ ಹೋಗಿವೆ. ನಮ್ಮ ಸುತ್ತಮುತ್ತಲ ಜನರೊಂದಿಗೆ ಒಡನಾಡುವಾಗಲೇ ಇಂಥ ಆರೋಪಗಳ ಸುಳಿದುಬಿಡುತ್ತವೆ.
ಆರೋಪಗಳಿಗೆ ಗುರಿಯಾದವನು ಗಂಡಸಾಗಿದ್ದರೆ ‘ಅವನು ಹಣ ಕಬಳಿಸಿದ್ದಾನೆ’ ಎಂದು ಹಾಗೂ ಹೆಣ್ಣಾಗಿದ್ದರೆ ‘ಅವಳು ನಡತೆಗೆಟ್ಟವಳು’ ಎಂದು ಹೇಳುವುದು ಸಾಮಾನ್ಯ. ಇದರ ಪ್ರತಿಕ್ರಿಯೆಯಾಗಿ ‘ಮೊದಲು ಸಾಕ್ಷಿ ತೋರಿಸಿ’ ಎನ್ನುವುದು ಕೂಡ ಸಹಜವಾಗಿಬಿಟ್ಟಿದೆ. ಆದುದರಿಂದ ಜಾಗತಿಕ ಮಟ್ಟದಲ್ಲಿ ಶೋಷಕರು ಬಹಿರಂಗಗೊಳ್ಳುತ್ತಿರುವಾಗೆಲ್ಲ ನಾನು ದ್ವಂದ್ವದಲ್ಲಿ ಬೀಳುತ್ತೇನೆ. ಇಲ್ಲಿನ ಎರಡು ನೈತಿಕ ಆದರ್ಶಗಳು ಒಂದಕ್ಕೊಂದು ಡಿಕ್ಕಿ ಹೊಡೆಯುತ್ತವೆ. ಮೊದಲನೆಯದಾಗಿ, ನಮ್ಮ ಸಾರ್ವಜನಿಕ ಜೀವನದಲ್ಲಿ ಹೆಜ್ಜೆಹೆಜ್ಜೆಗೂ ಲೈಂಗಿಕ ಶೋಷಣೆ ವ್ಯಾಪಿಸಿಕೊಂಡಿರುವುದನ್ನು ನೋಡಬೇಕಾದ ದಯನೀಯ ಸ್ಥಿತಿ ನಮ್ಮೆದುರಿಗಿದೆ. ಆದ್ದರಿಂದ ಸಾರ್ವಜನಿಕವಾಗಿ ಇಂಥವು ಬಹಿರಂಗಗೊಳ್ಳುವುದು ಅತ್ಯವಶ್ಯಕ. ಆರೋಪಿಗಳು ಸಿಕ್ಕುಬಿದ್ದಮೇಲೂ ಖುಲ್ಲಂ ಖುಲ್ಲ ತಿರುಗಾಡುತ್ತಿರುವುದು ಯಾವುದೇ ರಾಷ್ಟ್ರೀಯ ಕಳಂಕಕ್ಕೆ ಸಮನಾದ ವಿಚಾರವೇ ಸರಿ. ಹೀಗಾಗಿ, ಈ ಪಿಡುಗು ದೊಡ್ಡ ಪ್ರಮಾಣದಲ್ಲಿ ಬಹಿರಂಗಗೊಂಡು, ಸ್ವಲ್ಪ ನಾಟಕೀಯ ತಿರುವು ಪಡೆದುಕೊಂಡರೆ ಇಂಥಾ ಅನೇಕ ಪ್ರಕರಣಗಳು ಬೆಳಕಿಗೆ ಬರುವಂತಾಗುತ್ತದೆ; ಜನತೆಗೆ ಈ ಕುರಿತು ಪ್ರಜ್ಞೆ ಮೂಡುವಂತಾಗುತ್ತದೆ.

ಎರಡನೆಯದು, ನಿಷ್ಪಕ್ಷಪಾತ ತನಿಖೆಯ ಅವಶ್ಯಕತೆಯಿದೆ ಎನ್ನುವುದು. ಘಟನೆ ಜರುಗಿ ಎಷ್ಟೋ ವರ್ಷಗಳ ಬಳಿಕ ಯಾವುದೇ ವ್ಯಕ್ತಿಯ ವಿರುದ್ಧ ಗಂಭೀರ ಆರೋಪ ಮಾಡಿದರೆ ಅದಕ್ಕೆ ಗಟ್ಟಿ ಸಾಕ್ಷಿ ಇಲ್ಲದ ಸ್ಥಿತಿ ಉಂಟಾಗಿ ನಿಷ್ಪಕ್ಷಪಾತತೆ ಮತ್ತು ನ್ಯಾಯದ ಮೂಲ ಸಿದ್ಧಾಂತದ ಉಲ್ಲಂಘನೆಯಾಗುತ್ತದೆ. ಇದರ ದುರುಪಯೋಗ ಮಾಡುವ ಸಾಧ್ಯತೆಯಿರುತ್ತದೆ ಮತ್ತು ಇದನ್ನೇ ಮಾಡಲಾಗುತ್ತಿದೆ. ಆದ್ದರಿಂದ ಕಳೆದ ವರ್ಷ ಕೆಲ ಅಕಾಡೆಮಿಕ್ ಅಪರಾಧಿಗಳ ಹೆಸರುಗಳನ್ನು ಒಗ್ಗೂಡಿಸಿ ಸಾರ್ವತ್ರಿಕಗೊಳಿಸಿದಾಗ, ನಾನು ಇದರೊಂದಿಗೆ ನಿಲ್ಲುವುದು ಸಾಧ್ಯವಾಗಿರಲಿಲ್ಲ. ಮುಂದೆ, ಕೆಲವು ಸ್ತ್ರೀವಾದಿಗಳು ಇಂಥಾ ವಿಚಾರದಲ್ಲಿ ಗಂಭೀರವಾಗಿ ಉತ್ತರಿಸುವ ಬೇಡಿಕೆಯಿಟ್ಟಾಗಷ್ಟೇ ನನಗೆ ಈ ಹೊಯ್ದಾಟದಿಂದ ಹೊರ ಬರುವುದು ಸಾಧ್ಯವಾಯಿತು.
ಆದರೆ ಸಾರ್ವಜನಿಕವಾಗಿ ಬಹಿರಂಗಗೊಳಿಸುವ ಸದ್ಯದ ಅಲೆ ಈ ವಿಚಾರಕ್ಕಿಂತ ಕೊಂಚ ಬೇರೆಯಾಗಿದೆ. ಅದು ಉನ್ನತ ಪದವಿಗಳಲ್ಲಿ ಕುಳಿತವರು, ಮಾಧ್ಯಮಗಳ ಗೌರವಾನ್ವಿತ ವ್ಯಕ್ತಿಗಳೂ ತಮ್ಮ ಸ್ಥಾನದ ದುರುಪಯೋಗ ಮಾಡಿ ಮಹಿಳೆಯರನ್ನು ಪೀಡಿಸಿದ್ದಾರೆ, ಅವರನ್ನು ಕೀಳಾಗಿ ಕಾಣಲಾಗಿದೆ ಮತ್ತು ಅವರ ಘನತೆಯನ್ನು ಉಲ್ಲಂಘಿಸಲಾಗಿದೆ ಎನ್ನುವುದು.
ಭಾರತದಲ್ಲಿ #ಮೀಟೂ ಅನಾಮಧೇಯ ಸೆರಗಿನಲ್ಲಿ ಅಡಗಿಕೊಂಡಿಲ್ಲ. ಮಹಿಳೆಯರು ಬಹಿರಂಗವಾಗಿ ಹೊರಬರುತ್ತಿದ್ದಾರೆ, ತಮ್ಮ ಪರಿಚಯವನ್ನು ಸಾರ್ವಜನಿಕಗೊಳಿಸುತ್ತಿದ್ದಾರೆ, ಅಪರಾಧಿಗಳ ಹೆಸರುಗಳನ್ನು ಹೇಳುತ್ತಿದ್ದಾರೆ ಮತ್ತು ಅವರಾಡುತ್ತಿರುವ ಮಾತುಗಳಿಗಾಗಿ ತಲೆದಂಡ ತೆರಲು ಅವರು ತಯಾರಾಗಿದ್ದಾರೆ. ಅವರ ಸಾಹಸಗಳನ್ನು ನೋಡುವಾಗ, ಅವರು ಈ ವಿಚಾರವಾಗಿ ದೃಢನಿಲುವು ತಳೆದಿದ್ದಾರೆ, ಅವರನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಅವರ ಕೈಯಲ್ಲಿ ಕೇವಲ ಅವಸರದ ಆರೋಪಗಳಿಲ್ಲ ಎನ್ನುವ ಅಭಿಪ್ರಾಯ ತಳೆಯಬೇಕಾಗುತ್ತದೆ.
ಕಳೆದ ವಾರ ಈ ಕುರಿತು ನಾವು ಓದಿದ ಬಹುತೇಕ ಸುದ್ದಿಗಳು ಸವಿಸ್ತಾರವಾಗಿದ್ದು ಬಹು ಗಂಭೀರ ಸ್ವರೂಪದವುಗಳಾಗಿವೆ, ಮಹಿಳೆಯರು ಹೇಳುತ್ತಿರುವಂತಹ ಸನ್ನಿವೇಶಜನ್ಯ ಸಾಕ್ಷ್ಯಗಳು ಈ ಆರೋಪಗಳನ್ನು ಪುಷ್ಟೀಕರಿಸುತ್ತಿವೆ. ಈ ಸಾಕ್ಷ್ಯಾಧಾರಗಳನ್ನು ನಿಖರ ಸಾಕ್ಷಿಯಾಗಿ ನ್ಯಾಯಾಲಯ ಒಪ್ಪಲಿಕ್ಕಿಲ್ಲ. ಆದರೆ ಇವುಗಳನ್ನು ನಂಬಿಕೆಗೆ ಅರ್ಹವಲ್ಲ ಹಾಗೂ ಪ್ರಾಮಾಣಿಕವಲ್ಲ ಎನ್ನಲು ಸಂವೇದನಾಶೂನ್ಯರಾಗಬೇಕಾಗುತ್ತದೆ. ಈ ಸತ್ಯದ ಜೊತೆಗೆ ಮಹಿಳೆಯರು ಬಲಾಢ್ಯ ವ್ಯಕ್ತಿಗಳ ವಿರುದ್ಧ ನಿಂತಿದ್ದಾರೆ, ಅದು ನಿಮ್ಮ ಮನಸ್ಸನ್ನು ತಟ್ಟಲಾರದು ಎಂದಾದರೆ ನೀವು ದೂಷಣೆಗೆ ಅರ್ಹರೇ ಸರಿ.
ಇಂಥ ನೋವಿನ ಕಥೆಗಳನ್ನು ಸಾರ್ವಜನಿಕ ವೇದಿಕೆಗಳಲ್ಲಿಡುವುದು, ಪ್ರತಿಷ್ಠಿತರ ಹೆಸರುಗಳನ್ನೆತ್ತಿ ಛೀಮಾರಿ ಹಾಕುವುದರಿಂದ ನ್ಯಾಯ ಪಡೆಯಬಹುದೆ? ನನ್ನ ಉತ್ತರ ಹೌದು. ಇವರಲ್ಲಿ ಹೆಚ್ಚಿನ ಮಹಿಳೆಯರು ಜ್ಯೂನಿಯರ್ ಉದ್ಯೋಗಿಗಳಾಗಿದ್ದರು ಮತ್ತು ಅಲ್ಲಿ ತಮ್ಮ ಪುರುಷ ಸಹೋದ್ಯೋಗಿಗಳಿಂದ ಕಿರುಕುಳವನ್ನು ಸಹಿಸಿದ್ದಾರೆಂದರೆ ಅವರಿಗೆ ದುಪ್ಪಟ್ಟು ನಷ್ಟ ಸಹಿಸಬೇಕಾದ ಬಿಕ್ಕಟ್ಟಿನ ಸನ್ನಿವೇಶವಿತ್ತು ಎಂದರ್ಥ.
ಕೆಸರೆರಚುವ ಪರವಾನಗಿ ಸಿಕ್ಕಂತಾಗುತ್ತದೆ ಎಂಬುದು ಇಲ್ಲಿನ ಅಪಾಯ. ಪ್ರತಿಯೊಂದು ಪ್ರೇಮ ಪ್ರಸಂಗ, ವಿಕೃತವಾದ ಪ್ರತಿಯೊಂದು ಸಂಬಂಧ, ಎಲ್ಲಾ ದುಡುಕುತನ, ಮೂರ್ಖತನ, ಕೊನೆಗೆ ಭ್ರಾಂತಿಯೂ ಕೂಡ ಪ್ರಹಾರದ ರೀತಿಯಲ್ಲಿ ಬಳಸುವ ಸಾಧ್ಯತೆಯಿದೆ. ಹೌದು, ಈ ಸಾಮೂಹಿಕ ಮತ್ತು ಸಾರ್ವಜನಿಕ ‘ಸತ್ಯೋದ್ಘಾಟನೆ’ಗೆ ತನ್ನದೇ ಮಾನದಂಡ ಹಾಗೂ ಪ್ರೋಟೋಕಾಲ್ ವಿಕಸಿತಗೊಳಿಸಬೇಕಾಗುತ್ತದೆ, ಯಾರೂ ಇದರ ದುರುಪಯೋಗ ಮಾಡದಂತೆ. ಆದರೆ ಭಾರತದಲ್ಲಿ #ಮೀಟೂ ಸಂದರ್ಭವು ತೆರೆದಿರುವ ಅಪರೂಪದ ಬೆಳಕಿಂಡಿಯನ್ನು ಮುಚ್ಚಲು ಯಾರಿಗೂ ಅಧಿಕಾರವಿಲ್ಲ.
ಇದು ನಮ್ಮ ಜನಪ್ರಿಯ ಸಂಸ್ಕೃತಿಯನ್ನು ಬದಲಿಸುವ ಆಂದೋಲನವಾಗಬಹುದೇ ಎಂಬುದು ಇದು ಇನ್ನಷ್ಟು ಪ್ರೋತ್ಸಾಹ, ಪ್ರಚಾರ ಪಡೆದುಕೊಳ್ಳುತ್ತದೋ ಅಥವಾ ಇದನ್ನು ಹತ್ತಿಕ್ಕಲಾಗುತ್ತದೋ ಎಂಬುದರ ಮೇಲೆ ನಿಂತಿದೆ.
ಆದರೆ ಇಂದು ಮಹಿಳೆಯರು ಸರ್ವವ್ಯಾಪಿಯಾಗಿರುವ ಅಶ್ಲೀಲ ಪ್ರಪಂಚದಲ್ಲಿ ಪ್ರತಿನಿತ್ಯ ಭೀಷಣ ರೂಪದ ಲೈಂಗಿಕ ದೌರ್ಜನ್ಯಗಳಿಗೆ ಈಡಾಗುತ್ತಲೇ ಇದ್ದಾರೆ. ಅವರ ಪರಿಸ್ಥಿತಿಯನ್ನು ಕೇಳುವವರೇ ಇಲ್ಲ. ಈ ಆಂದೋಲನವು ಮಹಾನಗರಗಳಿಂದ ಕುಗ್ರಾಮಗಳವರೆಗೆ ವಿಸ್ತರಿಸಬೇಕು, ಮಾಧ್ಯಮಗಳಿಂದ ಹಿಡಿದು ಬ್ಯುಸಿನೆಸ್ ಕ್ಷೇತ್ರ ಮತ್ತು ರಾಜಕೀಯ ಕ್ಷೇತ್ರದವರೆಗೆ, ಸಂಘಟಿತ ಕ್ಷೇತ್ರದಿಂದ ಅಸಂಘಟಿತ ಕ್ಷೇತ್ರಗಳತನಕ, ಹಾಗೆಯೇ ಸಾರ್ವಜನಿಕ ಜೀವನದಿಂದ ಬಿಡಿಬಿಡಿ ಕೌಟುಂಬಿಕ ಲೈಂಗಿಕ ದೌರ್ಜನ್ಯಗಳ ತನಕ ವ್ಯಾಪಿಸಬೇಕಿದೆ. ಹೀಗಾದಲ್ಲಿ ಭಾರತದಲ್ಲಿ #ಮೀಟೂ ಚಳವಳಿ ನಮ್ಮ ಲೈಂಗಿಕ ಸಂವೇದನಾಶೀಲತೆ ಮತ್ತು ಸಾಮುದಾಯಿಕ ಕಟ್ಟುಪಾಡುಗಳನ್ನು ಪುನರ್ನಿರ್ಮಿಸಬಲ್ಲದು.
ನಾನು ಭಾರತದಲ್ಲಿ #ಮೀಟೂ ವಿಚಾರದಲ್ಲಿ ಓದುತ್ತಿರುವಾಗಲೇ ಎರಡು ಸುದ್ದಿಗಳು ಗಮನ ಸೆಳೆದವು. ಬಿಹಾರದ ಕೆಲ ಶಾಲಾ ವಿದ್ಯಾರ್ಥಿನಿಯರು ಹಲ್ಲೆಗೊಳಗಾಗಿದ್ದರೂ ಲೈಂಗಿಕ ದೌರ್ಜನ್ಯವನ್ನು ವಿರೋಧಿಸುವ ಸಾಹಸ ಮಾಡಿದ್ದಾರೆ. ಟ್ಯಾಗೋರರ ಕನಸಿನ ವಿಶ್ವವಿದ್ಯಾಲಯವಾದ ವಿಶ್ವಭಾರತಿಯಲ್ಲಿ ಎಂಥಾ ಅಕಾಡೆಮಿಕ್ ವ್ಯಕ್ತಿಯನ್ನು ನಮ್ಮ ಭಾರತದ ರಾಷ್ಟ್ರಪತಿಯವರು ಉಪಕುಲಪತಿಯನ್ನಾಗಿ ನಿಯುಕ್ತಗೊಳಿಸಿದ್ದಾರೆಂದರೆ ಆ ವ್ಯಕ್ತಿ ದೆಹಲಿ ವಿಶ್ವವಿದ್ಯಾಲಯದಲ್ಲಿ ಲೈಂಗಿಕ ದೌರ್ಜನ್ಯದ ಆರೋಪದಲ್ಲಿ ಸಿಕ್ಕುಬಿದ್ದು ಶಿಕ್ಷೆಗೊಳಗಾಗಿದ್ದಾರೆ.
ಈ ಎರಡು ಉದಾಹರಣೆಗಳು ಯಾವ ಕಪ್ಪು ಕಲೆಗಳ ಕಡೆಗೆ ಬೊಟ್ಟುಮಾಡುತ್ತವೆಯೋ ಅತ್ತ #ಮೀಟೂ ಚಳವಳಿಯ ಗಮನ ಹರಿಯಲೇಬೇಕಾಗಿದೆ. ಈಗ ನಾವು ಸಾರ್ವಜನಿಕವಾಗಿ ದಿಟ್ಟ ದನಿಯೆತ್ತಿರುವ ಆ ಮಹಿಳೆಯರಿಗೂ ಹಾಗೂ ದನಿ ಎತ್ತವಂತೆ ಮಾಡಿದ #ಮೀಟೂ ಅಭಿಯಾನದಲ್ಲಿ ಭಾಗಿಯಾದ ಎಲ್ಲರಿಗೂ ಸಲಾಮು ಹೇಳೋಣ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....