Homeಕರೋನಾ ತಲ್ಲಣಕೊರೊನಾಗೆ ಲಸಿಕೆ ವಿಚಾರದಲ್ಲಿ ವಿಜ್ಞಾನಿಗಳನ್ನು ತೆಗಳುವುದು ನಿಲ್ಲಲಿ : ವೆಂಕಿ ರಾಮಕೃಷ್ಣನ್

ಕೊರೊನಾಗೆ ಲಸಿಕೆ ವಿಚಾರದಲ್ಲಿ ವಿಜ್ಞಾನಿಗಳನ್ನು ತೆಗಳುವುದು ನಿಲ್ಲಲಿ : ವೆಂಕಿ ರಾಮಕೃಷ್ಣನ್

- Advertisement -
- Advertisement -

ಮೂಲ: ವೆಂಕಿ ರಾಮಕೃಷ್ಣನ್

ಅನುವಾದ: ಟಿ.ಎಸ್‌ ವೇಣುಗೋಪಾಲ್‌

ಕೆಲವು ದಶಕಗಳ ಹಿಂದೆ ತನ್ನ ಜೀವಸಂಕುಲದ ಗಡಿಯನ್ನು ಜಿಗಿದು ಬಂದಿದ್ದ ವೈರಾಣುವೊಂದು 1981ರಲ್ಲಿ ಮನುಷ್ಯರಲ್ಲಿ ಸೋಂಕು ಹರಡಲು ಪ್ರಾರಂಭಿಸಿತ್ತು. ಅದು ಸ್ಯಾನ್ ಫ್ರಾನ್ಸಿಸ್ಕೋ ಹಾಗೂ ನ್ಯೂಯಾರ್ಕಿನಲ್ಲಿ ಸಲಿಂಗಿಗಳಲ್ಲಿ ಅಲ್ಲೋಲಕಲ್ಲೋಲ ಉಂಟುಮಾಡಿತ್ತು. ಈ ಸೋಂಕಿಗೆ ಮೂಲವನ್ನು ಹುಡುಕುವುದಕ್ಕೆ ಒಂದು ಕಾರ್ಯಪಡೆಯನ್ನು ನೇಮಿಸಲಾಯಿತು. ಏಡ್ಸ್‌ಗೆ ನಿಜವಾದ ಕಾರಣ ಹೆಚ್‌ಐವಿ ವೈರಾಣು ಅಂತ ತಿಳಿಯುವುದಕ್ಕೆ ಹಲವು ವರ್ಷಗಳೇ ಹಿಡಿದವು. ಹಾಗೆಯೇ ಆ ವೈರಾಣುವಿನ ಜಿನೋಮಿನ ಅನುಕ್ರಮಣಿಕೆಯನ್ನು ಪತ್ತೆ ಹಚ್ಚುವುದಕ್ಕೆ ಸಾಕಷ್ಟು ವರ್ಷಗಳು ಬೇಕಾಯಿತು. ಆಮೇಲೆ ಈ ಸೋಂಕೇನು ಮರಣದಂಡನೆ ಆಗಬೇಕಾಗಿಲ್ಲ. ಹಲವು ಔಷಧಿಗಳ ಮಿಶ್ರಣವನ್ನು ಅದರ ಶುಶ್ರೂಷೆಗೆ ಬಳಸಿ ಅದನ್ನು ನಿಯಂತ್ರಿಸಬಹುದು ಅಂತ ಕಂಡುಕೊಳ್ಳುವುದಕ್ಕೆ 15 ವರ್ಷ ಹಿಡಿಯಿತು.

45 ವರ್ಷಗಳ ನಂತರ ವುಹಾನ್‌ನಲ್ಲಿ ಕೋವಿಡ್-19 ವೈರಾಣು ಕಾಣಿಸಿಕೊಂಡಿದೆ. ಆದರೆ ಈಗ ಕೆಲವೇ ವಾರಗಳಲ್ಲಿ ಇದಕ್ಕೆ ಸಾರ್ಸ್‌-ಕೋವ್-2 ಕಾರಣ ಅಂತ ಕಂಡುಹಿಡಿಯುವುದಕ್ಕೆ ಸಾಧ್ಯವಾಗಿದೆ. ಅಷ್ಟೇ ಅಲ್ಲ ಅದರ ಅನುಕ್ರಮಣಿ ಪತ್ತೆ ಹಚ್ಚಲಾಗಿದೆ. ಹಾಗಾಗಿ ಈಗ ಸೋಂಕನ್ನು ಪರೀಕ್ಷಿಸುವುದಕ್ಕೆ ಹೆಚ್ಚು ಸೂಕ್ಷ್ಮವಾದ ವಿಧಾನವನ್ನು ಕಂಡುಹಿಡಿಯಲು ಸಾಧ್ಯವಾಗಿದೆ. ಈಗ ಪ್ರತಿಕಾಯ-ಅಂಟಿಬಾಡೀಸ್‌ಗಾಗಿ ಪರೀಕ್ಷೆ ಮಾಡುವ ಮೂಲಕ ಈ ಮೊದಲೇ ಸೋಂಕು ಬಂದಿದ್ದವರನ್ನು ಗುರುತಿಸಬಹುದು. ವಿಜ್ಞಾನದ ಮೇಲೆ ಅಂತರರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕವಾಗಿ ಹೂಡಿಕೆಯಾಗುತ್ತಿರುವುದರಿಂದ ಇಂದು ವಿಜ್ಞಾನ ಆ ಮಟ್ಟಕ್ಕೆ ಬೆಳೆದಿದೆ. ತೀರಾ ಕಡಿಮೆ ಆವಧಿಯಲ್ಲಿ ವೈರಾಣುವಿನ ಬಗ್ಗೆ ಅಷ್ಟೊಂದು ಮಾಹಿತಿಯನ್ನು ಸಂಗ್ರಹಿಸುವುದಕ್ಕೆ ಸಾಧ್ಯವಾಗಿದೆ.
ಆದರೂ ನಮಗೆ ಎಷ್ಟೋ ವಿಷಯಗಳು ಗೊತ್ತಿಲ್ಲ. ಉಳಿದ ವೈರಾಣುವಿಗಿಂತ ಇದು ಏಕೆ ಅಷ್ಟು ಬೇಗ ಹರಡುತ್ತದೆ, ಸೋಂಕಿತರಿಗೆ ರೋಗ ನಿರೋಧಕ ಶಕ್ತಿ ಬರುವುದೇ, ಹಾಗೆ ಬಂದರೆ ಆ ಶಕ್ತಿ ಎಷ್ಟು ಕಾಲ ಉಳಿಯಬಹುದು. ಇದು ಕೆಲವರಲ್ಲಿ ಯಾಕೆ ತೀವ್ರವಾದ ಉರಿಯೂತವನ್ನು ಉಂಟುಮಾಡುತ್ತದೆ, ಕೊನೆಗೆ ಅವರ ಸಾವಿಗೂ ಕಾರಣವಾಗುತ್ತದೆ. ಕೆಲವರು ಮಾತ್ರ ಈ ಸೋಂಕಿನಿಂದ ಯಾಕೆ ಸಾಯುತ್ತಾರೆ? ಹೀಗೆ ಹಲವು ಪ್ರಶ್ನೆಶ್ನೆಗಳು ಹಾಗೆ ಉಳಿದಿವೆ.

ಇಂದು ಇದರ ಲಸಿಕೆಗಾಗಿ ಜಗತ್ತಿನಾದ್ಯಂತ ಹುಡುಕಾಟ ನಡೆದಿದೆ. ಇಷ್ಟೊಂದು ವ್ಯಾಪಕವಾದ ಅನ್ವೇಷಣೆ ಹಿಂದೆಂದೂ ಆಗಿರಲಿಲ್ಲ. ಆದರೆ ಇನ್ನೊಂದು ಸತ್ಯವನ್ನು ಈ ಸಮಯದಲ್ಲಿ ಮರೆಯಬಾರದು. ಏಡ್ಸ್ ಅಥವಾ ಇತರ ಹಲವು ವೈರಾಣುವಿನ ಸೋಂಕಿಗೆ ನಮಗೆ 40ವರ್ಷಗಳ ನಂತರವೂ ಲಸಿಕೆಯನ್ನು ಕಂಡುಹಿಡಿಯುವುದಕ್ಕೆ ಸಾಧ್ಯವಾಗಿಲ್ಲ. ಇದು ಕಟು ವಾಸ್ತವ. ಅದರಿಂದ ಹೊಸ ಔಷಧಿಗಳನ್ನು ಕಂಡುಹಿಡಿಯುವ ನಿಟ್ಟಿನಲ್ಲಿ ಹಾಗೂ ಈಗ ಲಭ್ಯವಿರುವ ಔಷಧಿಗಳನ್ನು ಇದಕ್ಕೆ ಬಳಸುವ ಸಾಧ್ಯತೆಯತ್ತ ಪ್ರಯತ್ನಿಸುವುದು ತುಂಬಾ ಮುಖ್ಯ.

ಹೊಸ ಪುರಾವೆಗಳು ಸಿಕ್ಕಾಗ ವಿಜ್ಞಾನಿಗಳು ತಮ್ಮ ತೀರ್ಮಾನಗಳಲ್ಲಿ ಆಗಿರಬಹುದಾದ ತಪ್ಪನ್ನು ಒಪ್ಪಿಕೊಳ್ಳಬೇಕು. ತಪ್ಪಿನಿಂದ ಹೊಸಪಾಠವನ್ನು ಕಲಿಯುವುದಕ್ಕೆ ತಯಾರಿರಬೇಕು. ವಿಜ್ಞಾನದ ಒಳಗೇ ಅಂತಹ ಅನಿಶ್ಚಿತತೆ ಇದೆ. ನಿಧಾನವಾಗಿ ಪುರಾವೆಗಳು ಸೇರಿಕೊಳ್ಳುತ್ತಾ ಹೋದಂತೆ ಮತ್ತು ಸಮುದಾಯದ ಪರಿಶೀಲನೆಗೆ ಒಳಗಾದಂತೆ ತಪ್ಪುಗಳು ಕಮ್ಮಿಯಾಗುತ್ತಾ, ಅಂತಿಮವಾಗಿ ಒಂದು ಒಮ್ಮತ ಮೂಡುತ್ತದೆ. ವಿಜ್ಞಾನದಲ್ಲಿ ಈ ಕ್ರಮ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಾ ಬಂದಿದೆ. ಆದರೆ ಈಗ ಎಲ್ಲರ ದೃಷ್ಟಿಯೂ ವಿಜ್ಞಾನದ ಮೇಲಿದೆ. ಎಲ್ಲರಿಗೂ ತಕ್ಷಣ ಪರಿಹಾರ ಬೇಕು. ಹಾಗಾಗಿ ವಿಜ್ಞಾನದ ಮೇಲೆ ಒತ್ತಡ ಹೆಚ್ಚಾಗಿದೆ. ಅವರ ನಿರ್ಧಾರಗಳಲ್ಲಿ ಅನಿಶ್ಚತತೆ ಅನಿವಾರ್ಯ. ಅದನ್ನು ವಿಜ್ಞಾನಿಗಳು ಸ್ಪಷ್ಟಪಡಿಸಬೇಕು. ಸ್ವಾಭಾವಿಕವಾಗಿಯೇ ಇಷ್ಟೊಂದು ಅನಿಶ್ಚಿತತೆ ಇದ್ದಾಗ ಮುಂದಿರುವ ಸಾಧ್ಯತೆಗಳ ಬಗ್ಗೆ ಒಂದು ಒಮ್ಮತದ ತೀರ್ಮಾನ ಸಾಧ್ಯವಿಲ್ಲ. ಹಲವು ವಿಭಿನ್ನವಾದ ತೀರ್ಮಾನಗಳು ಸಾಧ್ಯ. ಇದು ವಾಸ್ತವ, ಇದನ್ನು ಎಲ್ಲರೂ ಒಪ್ಪಿಕೊಳ್ಳಬೇಕು.

ತೀರ್ಮಾನಗಳಲ್ಲಿನ ವೈವಿಧ್ಯತೆ ಅವರು ಕೊಡುವ ಸಲಹೆಯನ್ನೂ ಪ್ರಭಾವಿಸುತ್ತದೆ. ಹೊಸ ಪುರಾವೆಗಳು ಸಿಕ್ಕಾಗ ತಮ್ಮ ನಿರ್ಧಾರದ ತಪ್ಪುಗಳು ಅವರಿಗೆ ಕಾಣಿಸಬಹುದು. ತಮ್ಮ ತಪ್ಪನ್ನು ಅವರು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕು. ಮತ್ತು ಅದರಿಂದ ಕಲಿಯಲು ಸಿದ್ದರಿರಬೇಕು. ಸಾಮಾನ್ಯವಾಗಿ ಹೆಚ್ಚಿನ ಉದ್ದಿಮೆಗಳಲ್ಲಿ ಒಂದು ಗುಂಪಾಗಿ ನಿರ್ಧಾರ ತೆಗೆದುಕೊಳ್ಳುವ ಪರಿಪಾಠ ಇರುತ್ತದೆ. ಅದು ತಪ್ಪಬೇಕು. ನಿರ್ಧಾರಗಳಿಗೆ ಜೋತುಬೀಳಬಾರದು. ಆಂತರಿಕ ಚರ್ಚೆ ತುಂಬಾ ಸಕ್ರಿಯವಾಗಿ ನಡೆಯಬೇಕು. ತಮ್ಮ ಪುರಾವೆಗಳು ಮತ್ತು ನಿರ್ಧಾರಗಳ ಬಗ್ಗೆ ಮುಕ್ತವಾಗಿರಬೇಕು. ಆಗಷ್ಟೇ ಅವುಗಳನ್ನು ಪರಿಶೀಲಿಸುವುದಕ್ಕೆ ಸಾಧ್ಯವಾಗುತ್ತದೆ. ಆದರೆ ತೀರಾ ಕ್ಲಿಷ್ಟವಾದ ನೀತಿಗಳಿಗೆ ಸಂಬಂಧಿಸಿದ ನಿರ್ಧಾರಗಳಿಗೆ ವಿಜ್ಞಾನಿಗಳನ್ನು ಬಲಿಪಶುಗಳನ್ನಾಗಿ ಮಾಡಬಾರದು. ತಾವು ಬಲಿಪಶುಗಳಾಗುತ್ತೇವೆ ಎಂಬ ಭಾವನೆ ವಿಜ್ಞಾನಿಗಳಲ್ಲಿ ಬಂದರೆ ಅವರಿಗೆ ಮುಕ್ತವಾಗಿ ಸಲಹೆಗಳನ್ನು ಕೊಡುವುದಕ್ಕೆ ಸಾಧ್ಯವಾಗುವುದಿಲ್ಲ.

ಅಷ್ಟೇ ಅಲ್ಲ ವೈಜ್ಞಾನಿಕ ಸಲಹೆಗಳನ್ನು ಒಂದು ನೀತಿಯಾಗಿ ರೂಪಿಸುವುದಕ್ಕೆ ಹಲವು ದಾರಿಗಳು ಸಾಧ್ಯ. ಜಗತ್ತಿನಾದ್ಯಂತ ಕೋವಿಡ್-19ಕ್ಕೆ ಕಾಣುತ್ತಿರುವ ವಿಭಿನ್ನ ಪ್ರತಿಕ್ರಿಯೆಗಳನ್ನು ನೋಡಿದರೆ ಇದು ಸ್ಪಷ್ಟವಾಗುತ್ತದೆ. ಯಾಕೆಂದರೆ ನೀತಿಗಳನ್ನು ರೂಪಿಸುವುದರಲ್ಲಿ ವೈಜ್ಞಾನಿಕ ಸಲಹೆಗಳು ಒಂದು ಅಂಶ ಅಷ್ಟೆ. ವಿಜ್ಞಾನದ ಸಂದಿಗ್ಧತೆಯನ್ನು ಸರ್ಕಾರ ಒಪ್ಪಿಕೊಳ್ಳಬೇಕು. ಅಷ್ಟೇ ಅಲ್ಲ ಅವುಗಳ ಸಾಧ್ಯತೆಯನ್ನೂ ಸೇರಿದಂತೆ, ಇತರ ಹಲವು ಪ್ರಾಯೋಗಿಕ ಅಂಶಗಳನ್ನು ಗಮನಿಸಬೇಕು. ಈ ಎಲ್ಲಾ ವಿಷಯಗಳಲ್ಲೂ ಅವರು ವಿಜ್ಞಾನಿಗಳಿಂದ ಒಂದು ನಿಖರವಾದ ಹಾಗೂ ನಿಶ್ಚಿತವಾದ ಉತ್ತರ ನಿರೀಕ್ಷಿಸುತ್ತಾರೆ. ಆಗ ಅವರು “ನಾವು ವಿಜ್ಞಾನವನ್ನು ಅನುಸರಿಸುತ್ತಿದ್ದೇವೆ” ಅಂದುಕೊಳ್ಳಬಹುದು ಅಥವಾ ಹೇಳಿಕೊಳ್ಳಬಹುದು. ಆದರೆ ಬಯಸಿದ್ದು ಆಗಬೇಕಾಗಿಲ್ಲ.
ನಾವು ಏನು ಮಾಡುತ್ತಿದ್ದೇವೆ ಎಂಬುದನ್ನು ನಿರಂತರವಾಗಿ ಹೊಸದಾಗಿ ಸಿಗುತ್ತಿರುವ ಪುರಾವೆಗಳ ಬೆಳಕಿನಲ್ಲಿ ಪರಿಶೀಲಿಸುತ್ತಾ ಹೋಗುತ್ತಿರಬೇಕು. ಇಂತಹ ಬಿಕ್ಕಟ್ಟಿನ ಸಮಯದಲ್ಲಿ ಇದು ತುಂಬಾ ಮುಖ್ಯ.

ನಮ್ಮ ನಿಲುವು ಸರಿ ಅಲ್ಲ ಅಂತ ತಿಳಿದ ತಕ್ಷಣ, ಕಚ್ಚಾಡುತ್ತಾ, ಬೇರೆಯವರ ಮೇಲೆ ಆರೋಪ ಹೊರಿಸುತ್ತಾ ಪ್ರಶಸ್ತವಾದ ಸಮಯ ಹಾಳುಮಾಡುತ್ತಾ ಹೋಗಬಾರದು. ಅದರಲ್ಲೂ ಇಂತಹ ಆನಿಶ್ಚಿತತೆಯ ಸಂದರ್ಭದಲ್ಲಿ ವಿಜ್ಞಾನಿಗಳನ್ನು, ಅವರು ನೀಡಿರುವ ಸಲಹೆಗಳಿಗಾಗಿ ಟೀಕಿಸುವುದು ಸರಿಯಲ್ಲ. ಹಾಗೆ ಟೀಕಿಸುವುದು, ವಿಜ್ಞಾನ ಹೇಗೆ ಕೆಲಸ ಮಾಡುತ್ತದೆ ಎಂಬುದರ ಬಗ್ಗೆ ಅವರಿಗಿರುವ ಮೂಲಭೂತ ತಪ್ಪುಕಲ್ಪನೆಯನ್ನು ತೋರಿಸುತ್ತದೆ.

ಇತ್ತೀಚೆಗೆ ಮಂತ್ರಿಯೊಬ್ಬರು ವಿಜ್ಞಾನಿಗಳನ್ನು ಟೀಕಿಸಿದಾಗ ಉಳಿದವರು ಆ ಟೀಕೆಯಿಂದ ದೂರ ಉಳಿದದ್ದು ಸಮಾಧಾನದ ಸಂಗತಿ. ಇಂತಹ ಪರಿಸ್ಥಿತಿಯಲ್ಲಿ ಅದು ವಿಜ್ಞಾನಿಗಳಲ್ಲಿ ವಿಶ್ವಾಸವನ್ನು ಮೂಡಿಸುತ್ತದೆೆ.
ನಾವು ಭಿನ್ನವಾದ ಅಥವಾ ಇನ್ನೂ ಸುಧಾರಿತ ಹಾದಿಯನ್ನು ಹಿಡಿಯಬೇಕು ಅಂತ ಪುರವೆಗಳು ಸೂಚಿಸಿದರೆ ಸರ್ಕಾರ ಹಾಗೂ ವಿಜ್ಞಾನಿಗಳು ಅದನ್ನು ಒಪ್ಪಿಕೊಳ್ಳಬೇಕು. ಅದಕ್ಕೆ ಸರಿಯಾಗಿ ಕಾರ್ಯ-ನೀತಿಯನ್ನು ಬದಲಾಯಿಸಿಕೊಳ್ಳಬೇಕು. ಜನರಿಗೆ ಅದನ್ನು ವಿವರಿಸಬೇಕು. ಜನರು ಅರ್ಥ ಮಾಡಿಕೊಳ್ಳುತ್ತಾರೆ. ಹಿಂದೆ ಲಭ್ಯವಿದ್ದ ಮಾಹಿತಿಯನ್ನು ಆಧರಿಸಿ ಹಾಗೆ ಮಾಡಲಾಗಿತ್ತು. ಅದು ಆ ಪರಿಸ್ಥಿತಿಯಲ್ಲಿ ತೆಗೆದುಕೊಳ್ಳಬಹುದಾಗಿದ್ದ ಒಳ್ಳೆಯ ನಿರ್ಧಾರ ಅನ್ನುವುದು ಜನರಿಗೂ ಅರ್ಥವಾಗುತ್ತದೆ. ಆದರೆ ಅದು ತಪ್ಪು ಎಂದು ಗೊತ್ತಾದಾಗ ಆದಷ್ಟು ಬೇಗ ಅದನ್ನು ಸರಿಪಡಿಸಬೇಕು.

ವೈರಾಣುವಿನ ಪಿಡುಗು ನಮ್ಮ ಎದುರಿಗಿನ ಅತ್ಯಂತ ದೊಡ್ಡ ಅಪಾಯ ಅನ್ನುವುದು ಗೊತ್ತಿತ್ತು. ಅದನ್ನು ಎದುರಿಸಲು ತಾನು ಸಂಪೂರ್ಣ ತಯಾರಾಗಿದ್ದೇನೆ ಅಂತ ಇಂಗ್ಲೆಂಡ್ ಭಾವಿಸಿತ್ತು. ಆದರೆ ನಿಜವಾಗಿ ಸಿದ್ಧವಾಗಿರಲಿಲ್ಲ. ಅದು ಸ್ಪಷ್ಟ. ನಾವು ಈ ಪಿಡುಗಿಗೆ ಸಂಬಂಧಿಸಿದಂತೆ ನಮ್ಮ ಸೋಲು ಗೆಲುವನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಅದರಿಂದ ಪಾಠ ಕಲಿಯಬೇಕು. ಆಗ ಮುಂದೆ ಅಂತಹ ಪಿಡುಗು ಮತ್ತೆ ಬಂದಾಗ- ಬರುವುದು ಅನಿವಾರ್ಯ- ಅದನ್ನು ಎದುರಿಸಲು ಹೆಚ್ಚು ಪರಿಣಾಮಕಾರಿಯಾಗಿ ಸಿದ್ದತೆ ಮಾಡಿಕೊಳ್ಳಬಹುದು.

ಕೃಪೆ: ದಿ ಗಾರ್ಡಿಯನ್

(ಲೇಖಕರು ರಸಾಯನಶಾಸ್ತ್ರದಲ್ಲಿ ನೋಬೆಲ್ ಪ್ರಶಸ್ತಿ ವಿಜೇತರು)


ಇದನ್ನೂ ಓದಿ: ಇದು ಅತ್ಯಾಚಾರದ ಕಥೆಯಲ್ಲ, ವಸಾಹತುವಾಗಿಯೇ ಉಳಿದಿರುವ ‘ಈ ಭಾರತ’ದ ಕಥನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...