Homeಮುಖಪುಟನನ್ನ ಅಜಾಗರೂಕತೆಯೆ ಕಾರಣ; ಕೊರೊನಾ ಸೋಂಕಿತ ಮಹಾರಾಷ್ಟ್ರ ಸಚಿವ

ನನ್ನ ಅಜಾಗರೂಕತೆಯೆ ಕಾರಣ; ಕೊರೊನಾ ಸೋಂಕಿತ ಮಹಾರಾಷ್ಟ್ರ ಸಚಿವ

- Advertisement -
- Advertisement -

ಮಹಾರಾಷ್ಟ್ರದ ವಸತಿ ಸಚಿವ ಜಿತೇಂದ್ರ ಅವಾದ್ ಅವರು ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದು, “ಸೋಂಕು ಬರಲು ನನ್ನ ಅಜಾಗರೂಕ ನಡವಳಿಕೆಯೇ ಕಾರಣ” ಎಂದು ಹೇಳಿದ್ದಾರೆ.

ಪ್ರಸ್ತುತ ಸೋಂಕಿನಿಂದ ಚೇತರಿಸಿಕೊಂಡಿರುವ ಜಿತೇಂದ್ರ ಅವಾದ್, ಈ ತಿಂಗಳ ಆರಂಭದಲ್ಲಿ ಕೆಲವು ದಿನಗಳನ್ನು ಸೋಂಕಿನಿಂದಾಗಿ ಅವರು ಆಸ್ಪತ್ರೆಯಲ್ಲಿ ಕಳೆದಿದ್ದರು.

“ನನ್ನ ನಡವಳಿಕೆಯಲ್ಲಿನ ಅಜಾಗರೂಕತೆಯೇ ಕೊರೊನಾ ಸೋಂಕಿಗೆ ಕಾರಣವಾಗಿದೆ, ಬಹುಶಃ ನಾನು ಜನರ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಅದಕ್ಕಾಗಿಯೇ ನಾನು ಬಲೆಗೆ ಸಿಕ್ಕಿಬಿದ್ದಿದ್ದೇನೆ ಎಂದು ಎನ್‌ಸಿಪಿ ನಾಯಕರಾಗಿರುವ ಮಹಾರಾಷ್ಟ್ರ ವಸತಿ ಸಚಿವ ಜಿತೇಂದ್ರ ಅವಾದ್ ಹೇಳಿದ್ದಾರೆ. ಅವರು ಬಿಡಿಎ ಡೆವಲಪರ್‌ಗಳ ಲಾಬಿ ಆಯೋಜಿಸಿದ್ದ ಆನ್‌ಲೈನ್ ಸೆಮಿನಾರ್‌ನಲ್ಲಿ ಮಾತನಾಡುತ್ತಿದ್ದರು.

ವಿಶೇಷವೆಂದರೆ, ರಾಜ್ಯದಲ್ಲಿ ಕೊರೊನಾ ಪ್ರಾರಂಭವಾದ ದಿನಗಳಲ್ಲಿ, ಥಾಣೆ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ಜಿತೇಂದ್ರ ಅವಾದ್ ಅವರು ಪರಿಹಾರ ಕಾರ್ಯಗಳಿಗಾಗಿ ತಿರುಗಾಡುತ್ತಿರುವುದು ವರದಿಯಾಗಿತ್ತು.

ಈ ಕಠಿಣ ಹಂತದಿಂದ ಹೊರಬರಲು  ತನ್ನ ಮನೋಬಲ ನೆರವಾಗಿದೆ ಎಂದು ಹೇಳಿರುವ ಸಚಿವ, ಕಳೆದ ಎರಡು ವಾರಗಳಲ್ಲಿ ವೇಗವಾಗಿ ಚೇತರಿಸಿಕೊಂಡಿದ್ದೇನೆ ಎಂದು ಹೇಳಿದರು. ಇತರರಿಗಿಂತ ತಾನು ಬೇಗನೇ ಚೇತರಿಸಿಕೊಂಡಿದ್ದೇನೆ ಎಂದು ಅವರು ಸಂತಸ ವ್ಯಕ್ತ ಪಡಿಸಿದ್ದಾರೆ.

ಇಳಿಮುಖವಾಗಿದ್ದ ಹಿಮೋಗ್ಲೋಬಿನ್ ಮಟ್ಟವು ಏರಿಕೆಯಾಗಿದ್ದು, ಪ್ರಸ್ತುತ ನಿಗದಿತ ಸಮಯಗಳಲ್ಲಿ ಕಟ್ಟುನಿಟ್ಟಿನ ಆಹಾರವನ್ನು ಅನುಸರಿಸುತ್ತಿದ್ದೇನೆ ಎಂದು ಸಚಿವರು ಹೇಳಿದರು.

ಮಹಾರಾಷ್ಟ್ರದ ಹಿರಿಯ ಕಾಂಗ್ರೆಸ್ ಮುಖಂಡರಾಗಿರುವ ಮತ್ತೊಬ್ಬ ರಾಜ್ಯ ಕ್ಯಾಬಿನೆಟ್ ಮಂತ್ರಿಯೂ ಇತ್ತೀಚೆಗೆ ಕೊರೊನಾ ವೈರಸ್‌ಗೆ ಧನಾತ್ಮಕ ಪರೀಕ್ಷೆ ನಡೆಸಿದ್ದಾರೆ ಎಂದು ವರದಿಯಾಗಿದೆ.


ಓದಿ: ಕೊರೊನಾ ವಿರುದ್ದ ಹೋರಾಡಲು ಮಹಾರಾಷ್ಟ್ರಕ್ಕೆ ವೈದ್ಯರ ತಂಡ ಕಳುಹಿಸಲಿರುವ ಕೇರಳ 


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಜಾತಿ ಗಣತಿ ಕುರಿತ ರಾಹುಲ್ ಗಾಂಧಿಯ ವೈರಲ್ ಕ್ಲಿಪ್ ಎಡಿಟೆಡ್

0
ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಭಾಷಣದ ಕ್ಲಿಪ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅನೇಕ ಬಾರಿ ಸುಳ್ಳು ಸುದ್ದಿಗಳನ್ನು ಹಂಚಿಕೊಂಡಿರುವ ಬಲ ಪಂಥೀಯ ಎಕ್ಸ್...