Homeಅಂಕಣಗಳುನಮ್ಮ ದೇಶದಲ್ಲಿ ಏನಾತು? ಯಾಕ ಹಿಂಗಾತು? ಏನಾಗಬೇಕಿತ್ತು?

ನಮ್ಮ ದೇಶದಲ್ಲಿ ಏನಾತು? ಯಾಕ ಹಿಂಗಾತು? ಏನಾಗಬೇಕಿತ್ತು?

- Advertisement -
- Advertisement -

ಪಂಥ ಪ್ರಧಾನ ಸೇವಕರು ಮತ್ತು ಅವರ ಆಜ್ಞಾಧಾರಕರಾದ ಕೆಲವು ಮಂತ್ರಿಗಳು ಭಾರತದ ಸರಕಾರ 20 ಲಕ್ಷ ಕೋಟಿ ಪರಿಹಾರ ಬಿಡುಗಡೆ ಮಾಡಿದ್ದರಿಂದ ಭರತ ವರ್ಷದ ಎಲ್ಲಾ ಸಮಸ್ಯೆಗಳು ಮುಗದು ಹೋದವು ಅಂತ ಹೇಳಾಕ ಹತ್ಯಾರ. ಅದ ಖರೆ ಅಂತ ಕೆಲವರು ತಿಳಕೊಂಡೂ ಬಿಟ್ಟಾರ.

ಆದರು ಅದರಾಗ ಚಿಪ್ಸ ಪಾಕೀಟಿನ ಗತೆ ಬರೇ ಹವಾ ಐತಿ, ಆದರ ಅಸಲು ಮಸಾಲೆ ಏನೂ ಇಲ್ಲಾ ಅಂತ ಹೇಳಿ ಕೆಲವು ತಜ್ಞರು ಅಭಿಪ್ರಾಯ ಪಟ್ಟಾರ. ಅದರಾಗ ಬರೇ ಸರಕಾರಿ ಸ್ವತ್ತುಗಳ ಖಾಸಗೀಕರಣ, ಕಾರ್ಮಿಕ ಕಾನೂನುಗಳ ಸಡಿಲಿಕೆ, ರದ್ದು, ಹಾಗೂ ಜನಸಾಮಾನ್ಯರ ಮೇಲಿನ ಸಾಲದ ಹೆಚ್ಚಳ ಬಿಟ್ಟರ ಏನೂ ಇಲ್ಲ ಅಂತ ಅವರ ಅಂಬೋಣ.

ಆ ಮನಿಷಾ ಅಷ್ಟು ಕಷ್ಟ ಪಡಲಿಕ್ಕೆ ಹತ್ಯಾರು, ಏನೇನೋ ಕಸರತ್ತು ಮಾಡತಾರು. ಅವರನ್ನ ಹೊಗಳೋದು ಬಿಟ್ಟು ತೆಗಳಲಿಕ್ಕೆ ಹತ್ತೀರಿ, ನಿಮಗ ಟೀಕೆ ಮಾಡಲಿಕ್ಕೆ ಬ್ಯಾರ ಟೈಮು ಇಲ್ಲೇನು, ನಿಮ ನಿಮ ಟೀಕಾಕಾರ ಒಯ್ದು ಒಂದು ಅಂತ ಕೆಲವರು ಶಾಪ ಹಾಕಾಕ ಹತ್ಯಾರು.

ನಿಮ್ಮ ಹತ್ತರ ಬರೇ ಪ್ರಶ್ನೆ ಅದಾವು. ಯಾವುದಕ್ಕರ ಉತ್ತರ ಏನರ ಅದಾವು ಏನು? ಅಂತ ಕೆಲವರು ಕೇಳತಾರು. ನಿಮ್ಮನ್ನೂ ಕೇಳಬಹುದು.
ಅಂಥವರ ಸಲುವಾಗಿ ಕೆಲವು ಉತ್ತರಗಳು.

ಮೊದಲಿಗೆ ಮಾಡಬೇಕಾಗಿದ್ದು ಆಡಳಿತದ ವಿಕೇಂದ್ರೀಕರಣ. ಈಗ ಐತೆಲ್ಲಾ ಗ್ರಾಮ ಪಂಚಾಯಿತಿ – ನಗರ ಸಭೆ -ಪಟ್ಟಣ ಪಂಚಾಯಿತಿ ಎಲ್ಲಾನೂ ಅದಾವು ಅಂತ ನೀವು ಅನ್ನಬಹುದು. ಆದರ ಅದು ನಿಜವಾದ ಅರ್ಥದೊಳಗ ಇಲ್ಲ.

ಇದರ ಹಿನ್ನೆಲೆ ಭಾಳ ಮಜಾ ಐತಿ. ಸುಮಾರು 1910 ರವರೆಗೆ ಅಫಘಾನಿಸ್ತಾನದಿಂದ ಹಿಡಿದು ಬರ್ಮಾವರೆಗೆ ಭಾರತದ ಭೂಪಟ ಚಾಚಿತ್ತು. ಅಷ್ಟು ದೊಡ್ಡ ದೇಶ ಆಳೋ ಬ್ರಿಟೀಷರ ಸಂಖ್ಯೆ ಮಾತ್ರ ಎರಡು ಸಾವಿರಕ್ಕಿಂತ ಹೆಚ್ಚು ಇರಲಿಲ್ಲ. ಇದರಿಂದ ಏನಾತಪಾ ಅಂದರ ಏಳೂವರೆ ಸಾವಿರ ಕಿಲೋಮೀಟರು ದೂರದ ಇಂಗ್ಲಂಡಿನ ಈಸ್ಟು ಇಂಡಿಯಾ ಕಂಪನಿ ಕಚೇರಿಯೊಳಗ ಕೂತುಗೊಂಡ ಕೆಲವರು ಇಲ್ಲಿನ ಕೆಲವೇ ಜನ ಬಿಳಿಯ ಅಧಿಕಾರಿಗಳ ಮೂಲಕ ಆಡಳಿತ ನಡಸಿದರು. ಸುಮಾರು 200 ವರ್ಷ ಅವರು ಆಡಳಿತ ನಡೆಸಿದರ, ಒಂದು ನೂರು ವರ್ಷ ಅಲ್ಲಿನ ರಾಣಿ ಹೆಸರಿನಲ್ಲಿ ಅಲ್ಲಿನ ಪ್ರಧಾನಿ ಆಡಳಿತ ನಡೆಸಿದರು. ಆಡಳಿತ ಸುಗಮವಾಗಿರಬೇಕು, ದಿನಾ ಬೆಳಿಗ್ಗೆ ಕಿರಿಕಿರಿ ಇರಬಾರದು ಅಂತ ಹೇಳಿ ಅವರು ಈ ದೇಶವನ್ನ ದೊಡ್ಡ ದೊಡ್ಡ ಜಿಲ್ಲೆಗಳಾಗಿ ವಿಭಜನೆ ಮಾಡಿದರು. ಅದು ಇಂದಿಗೂ ನಡಕೊಂಡು ಬಂದೇತಿ. ಈಗ ಕೇಂದ್ರ ಸರಕಾರನೂ ಸಹಿತ ಜಿಲ್ಲಾಡಳಿತದ ಮುಖಾಂತರ ಯೋಜನೆ ಜಾರಿ ಮಾಡತೇತಿ. ಅದರ ಬದಲಿಗೆ ತಾಲೂಕು ಕೇಂದ್ರಿತ ಆಡಳಿತ ಆಗಬಹುದು. ಆವಾಗ ಜನರಿಗೆ ಕಮ್ಮಿ ಕಷ್ಟ ಆಗತೇತಿ.

ಖರೇ ಹೇಳಬೇಕಂದರ ಜನಾ ವಿಚಾರ ಮಾಡೋದು ನಮ್ಮ ಹಳ್ಳಿ- ನಮ್ಮ ಊರು- ನಮ್ಮ ಪಟ್ಟಣ ಅಂತ. ನಮ್ಮ ಜಿಲ್ಲೆ – ತಾಲೂಕು ಅನ್ನೋದು ಭಾವನಾತ್ಮಕ ವಿಷಯ ಅಷ್ಟ. ಹಂಗಾಗಿ ಗ್ರಾಮ ಪಂಚಾಯಿತಿ ಹಾಗೂ ನಗರ ಸಭೆ ಮುಂತಾದ ಘಟಕಗಳಿಗೆ ಆದ್ಯತೆ ಸಿಗಬೇಕು. ಇದು ಹೆಚ್ಚು ಆದಂತೆ, ಪ್ರಾದೇಶಿಕ ಅಸಮತೋಲನ ಕಮ್ಮಿ ಆಗತೇತಿ.

ಅಲ್ಲೆ ಒಳ್ಳೆಯದಾದರೂ ಜಲ್ದೀ ತಿಳೀತೇತಿ, ಬ್ರಷ್ಟಾಚಾರ ಆದರೂ ಎಲ್ಲಾರ ಮುಂದ ಆಗತೇತಿ, ಎಲ್ಲಾರಿಗೂ ಕಾಣತೇತಿ. ಅದರಿಂದ ಅದು ಕಮ್ಮಿ ಆದರೂ ಆಗಬಹುದು. ಪಾರದರ್ಶಕತೆ ಇಲ್ಲಾ ಅಂದರ ಅದು ಕಮ್ಮಿ ಆಗೋ ಸಾಧ್ಯತೆ ಇಲ್ಲ.

ಎರಡನೇಯದಾಗಿ ಸ್ಥಳೀಯ ಮಾರುಕಟ್ಟೆಗಳ ಆರಂಭ ಮತ್ತು ಪುನರುಜ್ಜೀವನ. ಗಾಂಧೀವಾದಿ ಇಳಾ ಭಟ್ ಅವರು ಹೇಳಿದಂತೆ ಆಹಾರ, ನೀರು- ಬಟ್ಟೆ- ವಸತಿ ಎನ್ನುವ ಸರಕುಗಳು ಹಾಗೂ ಆರೋಗ್ಯ- ಶಿಕ್ಷಣ- ಬ್ಯಾಂಕಿಂಗ್ ಅಥವಾ ಹಣಕಾಸು ಅನುಕೂಲ ಈ ಸೇವೆಗಳನ್ನ ಮೂಲಭೂತವಾದವು ಅಂತ ಪರಿಗಣಿಸಬೇಕು. ಇವುಗಳನ್ನ ಸಾಧ್ಯವಾದಷ್ಟು ಮಟ್ಟಿಗೆ ಸ್ಥಳೀಯವಾಗಿ ತಯಾರು ಮಾಡಬೇಕು, ಸ್ಥಳೀಯವಾಗಿ ಮಾರಾಟ- ಖರೀದಿ ಮಾಡಬೇಕು. ಇದರಿಂದ ಸಾಗಾಣಿಕೆ ವೆಚ್ಚ ಉಳಿತಾಯ, ಸ್ಥಳೀಯ ಕೆಲಸಗಾರರು ಬದುಕುತ್ತಾರೆ ಹಾಗೂ ವ್ಯವಸ್ಥೆ ಪಾರದರ್ಶಕವಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ತಳ ಸಂಸ್ಕೃತಿ ಉಳಿದುಕೊಳ್ಳುತ್ತದೆ ಅಂತ ಅವರ ಅನಿಸಿಕೆ. ಇನ್ನು ಗುಡಿ ಕೈಗಾರಿಕೆ ಹಾಗೂ ಗೃಹ ಕೈಗಾರಿಕೆ, ಗ್ರಾಮೋದ್ಯೋಗ ಇವಕ್ಕೆ ಉತ್ತೇಜನ ಕೊಡಬೇಕು, ಖಾದಿ ಉಳಿಸಬೇಕು, ಯಂತ್ರಗಳ ಬಳಕೆ ಕಮ್ಮಿ ಆಗಬೇಕು, ಜಾನಪದ ಸಂಸ್ಕೃತಿ ಉಳಿದು – ಬೆಳೆಯಬೇಕು ಅಂತ ಕೆಲವರು ಹೇಳತಾರ.

ಏ ಅದೇನು ಹಚ್ಚೀರಿ? ಯುದ್ಧ ವಿಮಾನ ಏನು ಹಳ್ಳಿಯೊಳಗ ಮಾಡಲಿಕ್ಕೆ ಬರತೇತೇನು? ಯಂತ್ರಗಳಿಲ್ಲದೇ ಉಪಗ್ರಹ ಉಡಾವಣೆ ಮಾಡೋದು ಅಂದರ ಅದೇನು ಬಿದರಿನ ಕಂಬದ ಮ್ಯಾಲೆ ಮಾಡಾಕ ಆಕಾಶ ಬುಟ್ಟಿ ಬಿಟ್ಟಂಗೇನು ಅಂತ ಇನ್ನ ಕೆಲವರು ಅಂತಾರು.

ಈ ಭಿನ್ನಾಭಿಪ್ರಾಯದಿಂದಾಗಿ ಅವರಿಗೂ- ಇವರಿಗೂ ಜಗಳ ಆಗತಾ ಇರತೇತಿ. ಅವರನ್ನ ಇವರು ಅಪ್ರಾಯೋಗಿಕರು ಅಂತ, ಇವರನ್ನ ಅವರು ನಿಜ ಜೀವನದಿಂದ ದೂರ ಇರೋ ರಮ್ಯತಾವಾದಿಗಳು ಅಂತ ಬೈಕೋತ ಇರತಾರ. ಪ್ರತಿಯೊಂದು ಕ್ಷೇತ್ರದೊಳಗ ಕೇವಲ ನಾಲ್ಕು ಸರಕಾರಿ ಸಂಸ್ಥೆಗಳು ಇರಬೇಕು, ಉಳಿದದ್ದನ್ನ ಖಾಸಗಿ ಸಂಸ್ಥೆಗಳು ನೋಡಿಕೋಬೇಕು ಅಂತ ಹಣಕಾಸು ಸಚಿವರಾದ ನಿರ್ಮಲಾ ಅಕ್ಕೋರು ಹೇಳಿದಾರು. ಇದು ತಪ್ಪು, ಸರಕಾರಿ- ಖಾಸಗಿ ಸಂಸ್ಥೆಗಳು ಸಹಭಾಗಿತ್ವ ಇರಬೇಕು ಅಂತ ಕೆಲವರು ಅಂತಾರ. ಬರೇ ಸರಕಾರಿ ಸಂಸ್ಥೆಗಳು ಇರಬೇಕು. ಇಲ್ಲಾ ಅಂದರ ಬರೇ ಖಾಸಗಿ ಸಂಸ್ಥೆಗಳಿಗೆ ಬಿಟ್ಟು ಬಿಟ್ಟರ ಅವರು ಅದನ್ನು ಒಲಿಗಾರ್ಕಿ ಅಥವಾ ಮಿತ ಜನತಂತ್ರ, ಅಲ್ಪಸಂಖ್ಯಾತರ ಪ್ರಭುತ್ವ ಅಥವಾ ಕೂಟಾಳ್ವಿಕೆ ಮಾಡಿಬಿಡತಾರ. ಆಮ್ಯಾಲೆ ಪ್ರತೀ ಕ್ಷೇತ್ರದೊಳಗ ಕೇವಲ ನಾಲ್ಕು ಖಾಸಗಿ ಸಂಸ್ಥೆಗಳು ಉಳಿಯೋ ಹಂಗ ಆಗತೇತಿ ಅಂತ ಇನ್ನ ಕೆಲವರು ಅಂತಾರು.

ಎಲ್ಲಾ ವಿಷಯಗಳಲ್ಲಿ ಇದ್ದಂತೆ ಇದರಲ್ಲಿಯೂ ಯಾವುದೋ ಒಂದು ಮಂತ್ರದಂಡ ಅಂತ ಇಲ್ಲ. ಎಲ್ಲಾ ಸಮಸ್ಯೆಗಳಿಗೆ ಒಂದೇ ಪರಿಹಾರ ಇಲ್ಲ, ಇರಲಿಕ್ಕೆ ಸಾಧ್ಯ ಇಲ್ಲ. ಆಯಾ ಕ್ಷೇತ್ರದ ಅವಶ್ಯಕತೆಗಳಿಗೆ ತಕ್ಕಂತೆ ಇದನ್ನು ಒಂದು ಸ್ವಲ್ಪು ಅದನ್ನ ಒಂದು ಸ್ವಲ್ಪು ಉಪಯೋಗಿಸಿಕೊಂಡು ಎಲ್ಲರಿಗೂ ಸಮಾವಕಾಶ ಕಲ್ಪಿಸುವ ಸಮ ಸಮಾಜದ ಕಡೆ ಹೋಗಬೇಕು. ಜನ ಬರೇ ಮತದಾರರಾಗಿ ಉಳಿಯಬಾರದು. ನಾಗರಿಕರಾಗಿ ವಿಕಾಸಗೊಳ್ಳಬೇಕು. ನಾಗರಿಕರು ತಮ್ಮನ್ನಾಳುವವರು ದಾರಿ ತಪ್ಪಿದಾಗ ಅವರನ್ನ ಸರಿ ಮಾಡಬೇಕು. ತಿದ್ದಿ ಹೇಳಿದ್ದು ಕೇಳದಾಗ, ತಮ್ಮ ಮಾತು ಕೇಳುವವರನ್ನು ಆರಿಸಿ ತರಬೇಕು.

`ಅರ್ಥ ಶಾಸ್ತ್ರ ಎನ್ನುವುದು ಊರ ಮುಂದಿನ ಜಾತ್ರೆ ಇದ್ದಂತೆ. ಎಲ್ಲರೂ ತಮಗೆ ತಿಳಿದದ್ದನ್ನ ಜೋರಾಗಿ ಮಾತಾಡೋದಕ್ಕೆ ಯಾರ ಮಾತೂ ಯಾರಿಗೂ ತಿಳಿಯೋದಿಲ್ಲ’ ಅಂತ ಯುವ ಅರ್ಥ ಶಾಸ್ತ್ರಜ್ಞ ಸ್ಟೀಫನ್ ಲೆವಿಟ್ ಹೇಳಿದಾರು. ಈ ಮಾತು ನಾವು ನೆನಪು ಇಟಗೋಬೇಕು. ಒಳ್ಳೆಯ ವಿಚಾರಗಳು ಎಲ್ಲರಿಗೂ ತಲುಪಬೇಕು. ಅವರು ಒಪ್ಪಲಿ – ಬಿಡಲಿ ಚರ್ಚೆ ಆಗಬೇಕು. ಸಕಲ ಕಲ್ಯಾಣಕ್ಕೆ ಕಾರಣವಾಗೋ ವಿಚಾರಗಳನ್ನ ಜಾರಿ ಮಾಡೋ ಪ್ರಯತ್ನ ಮಾಡಬೇಕು. ಅಲ್ಲವೇ, ಮನೋಲ್ಲಾಸಿನಿ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...