Homeಮುಖಪುಟಖಿನ್ನತೆಯ ಸುದ್ದಿಯಿಂದ ನಿಮಗ ಖಿನ್ನತೆ ಆತೋ, ಖುಷಿ ಆತೋ?

ಖಿನ್ನತೆಯ ಸುದ್ದಿಯಿಂದ ನಿಮಗ ಖಿನ್ನತೆ ಆತೋ, ಖುಷಿ ಆತೋ?

- Advertisement -
- Advertisement -

ಈ ಲಾಕ್ ಡೌನ್ ಕೀಲಿ ಕೀಟಕ್ ಕಾಲದಾಗ ನಮ್ಮೆಲ್ಲರ ಪ್ರೀತಿಯ ಆಂಟಿ ಸೋಷಿಯಲ್ ಮೀಡಿಯಾದಾಗ ಒಬ್ಬರಿಗೊಬ್ಬರು ಟ್ಯಾಗು ಮಾಡಿ, ನಾಮಿನೇಟು ಮಾಡೋ ಆಟ Y ಹುಡುಗರ ಡುಬ್ಬಾ ಡುಬ್ಬಿ ಆಟ ಇದ್ದಂಗ. ಅದಕ್ಕೇನು ಅರ್ಥ ಇಲ್ಲ ಸ್ವಾರ್ಥ ಇಲ್ಲ. ಆದರ ಒಬ್ಬರಿಂದಾ ಒಬ್ಬರಿಗೆ ಹಬ್ಬಿಕೊಂಡು ನಡದಾದ- ಒಣಾ ಹುಲ್ಲಿಗೆ ಹತ್ತಿದ ಬೆಂಕಿ ಇದ್ದಂಗ.

ಅಂತಹ ಸಮಾಜ ವಿರೋಧಿ ಮಾಧ್ಯಮದಾಗ ಒಬ್ಬರು ಮೊನ್ನೆ ಒಂದು ಪ್ರಶ್ನೆ ಕೇಳಿದರು-

ನಿಮಗೆ ಅತೀವ ಖಿನ್ನತೆ ಉಂಟಾದಾಗ ನಿಮ್ಮನ್ನು ಹುರಿದುಂಬಿಸುವ ವಿಷಯ ಯಾವುದು?. ಅದಕ್ಕ ಕೆಲವರು ನಿಸರ್ಗ, ನದಿ ದಂಡೆ, ಕಾಡು, ಅಡುಗೆ, ಸಂಗೀತ, ನೃತ್ಯ, ಚಿತ್ರಕಲೆ, ನಮ್ಮ ಮನೆಯ ನಾಯಿ ಬೆಕ್ಕು ಅಂತೆಲ್ಲಾ ಉತ್ತರ ಕೊಟ್ಟರು.

ಆದರೆ ಒಬ್ಬರು ಒಂದು ಕುತೂಹಲಕಾರಿ ಉತ್ತರ ಕೊಟ್ಟರು – “ಯಾರಾದರೂ ಪ್ರಖ್ಯಾತರು ಖಿನ್ನತೆಯಿಂದ ಬಳಲುತ್ತಿದ್ದಾರೆ ಅನ್ನೋ ಸುದ್ದಿಯನ್ನು ಓದೋದು’’. ಇದು ಅಪಹಾಸ್ಯದ ಉತ್ತರ ಇರಬಹುದು. ಆದರೆ ಬಹಳ ಮಂದಿಯ ಮನಸಿನೊಳಗ ಇರೋ ಮಾತನ್ನು ಅವರು ಒಡದು ಹೇಳಿದಾರು.

ನಾವು ಯಾವಾಗಲೂ ಹಿಂಗ. ಬೇರೆಯವರು ಬಿದ್ದಾಗ ನಗೋದು ನಮ್ಮ ಸ್ವಭಾವ. ಇನ್ನೊಬ್ಬರು ಗುಂಡಿಯೊಳಗ ಬಿದ್ದಾಗ ಆವರಿಗೆ ಕೈ ಕೊಟ್ಟು ಎತ್ತೋದು ಬಿಟ್ಟು ಮೊಬೈಲಿನಾಗ ವಿಡಿಯೋ ತೆಗಿಯೋದು ನಮ್ಮ ಚಟ.

ಮೊನ್ನೆ ಸುಶಾಂತ ಸಿಂಗ್ ರಜಪೂತ ಅವರ ಸಾವು ಪತ್ರಿಕೆ, ಚಾನೆಲ್, ವೆಬ್‌ಸೈಟುಗಳಲ್ಲಿ ರಾರಾಜಿಸಿತು. ಕ್ರಿಕೆಟ್ ಆಟಗಾರ ಎಂ.ಎಸ್ ಧೋನಿ ಅವರ ಪಾತ್ರ ವಹಸಿದ್ದ ಯುವ ಕಲಾವಿನದ ಸಾವಿನ, ಆರೋಪಿತ ಆತ್ಮ ಹತ್ಯೆಯ ಬಗ್ಗೆ ಅನೇಕ ಆಧಾರ ರಹಿತ ವಿಷಯಗಳು ಚರ್ಚೆಗೆ ಬಂದವು.

ಒಂದು ರೀತಿಯೊಳಗ ಆ ಸಾವು ಎರಡು- ಮೂರು ದಿನಗಳ ಮಟ್ಟಿಗೆ ಸುದ್ದಿ ವಾಹಿನಿಗಳನ್ನ ಮನೋರಂಜನೆ ವಾಹಿನಿಗಳನ್ನಾಗಿ ಬದಲಾಯಿಸಿಬಿಟ್ಟಿತು.

ಒಂದು ಹಿಂದಿ ವಾಹಿನಿಯಂತೂ `ತೆರೆಯ ಮೇಲಿನ ಧೋನಿಯ ಹಿಟ್ ವಿಕೆಟ್ಟು ಆಗಿದ್ದು ಹೇಗೆ?’ ಅಂತ ಚೀರಾಡಿಕೊಂಡಿತು. ಆ ವಾಹಿನಿಯ ಮೇಲೆ ಈಗ ಕಾನೂನು ಕ್ರಮ ಆರಂಭ ಆಗೇದ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಆತ್ಮಹತ್ಯೆಯನ್ನು ಮಾಧ್ಯಮಗಳು ಹೇಗೆ ವರದಿ ಮಾಡಬೇಕು ಅಂತ ಅನುಸೂಚಿಗಳು ಇವೆ. ಅದನ್ನು ಕೆಲವರು ಪಾಲಿಸುತ್ತಾರೆ, ಕೆಲವರು ಪಾಲಿಸುವುದಿಲ್ಲ.

ಅದರ ಪ್ರಕಾರ ಸುದ್ದಿ ಶೀರ್ಷಿಕೆಯೊಳಗ, ಅಥವಾ ಮೊದಲನೇ ಸಾಳಿನೊಳಗ ಆತ್ಮಹತ್ಯೆ ಅನ್ನೋ ಪದ ಇರಬಾರದು. ಮತ್ತು ಅವರು ಹೇಗೆ ಆತ್ಮಹತ್ಯೆ ಮಾಡಿಕೊಂಡರು ಅನ್ನೋ ವಿವರ ಇರಬಾರದು.

ಅದು ಯಾಕ ಅಂದ್ರ ಖಿನ್ನತೆಯಿಂದ ಬಳಲುತ್ತಿರುವ ಜನ ಆತ್ಮಹತೆಯ ಸುದ್ದಿ ಓದಿದಾಗ ತಾವೂ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನ ಮಾಡ್ತಾರೆ ಅಂತ ಅಧ್ಯಯನದಿಂದ ತಿಳದು ಬಂದದ. ವಿವರ ತಿಳಿಸಿದರ ಅದೇ ರೀತಿಯೊಳಗ ತಾವೂ ಮಾಡಿಕೊಳ್ಳಲಿಕ್ಕೆ ಪ್ರಯತ್ನ ಮಾಡ್ತಾರ.

ಇನ್ನು ಸುದ್ದಿಯ ಕೊನೆಗೆ ಖಿನ್ನತೆ ಅಥವಾ ಇತರ ಮಾನಸಿಕ ತೊಂದರೆಗೆ ಒಳಗಾದವರಿಗೆ ಸಲಹೆ ನೀಡುವಂತಹ ಯಾವುದಾದರೂ ಸಂಸ್ಥೆಯ ಟೆಲಿಫೋನ್ ಸಂಖ್ಯೆ ಕೊಡಬೇಕು ಅಂತನೂ ಅದ. ಇದನ್ನು ಎಷ್ಟು ಪತ್ರಿಕೆಯವರು, ಟೀವಿಯವರು ಮಾಡತಾರ?

ಇದು ಕೇವಲ ಭಾರತೀಯರ ಸಮಸ್ಯೆ ಅಲ್ಲ. ನೀವು ಹಾಲಿವುಡ್ ನಟರ ವಿವರಗಳನ್ನು ವಿಕಿಪೀಡಿಯಾದಾಗ ನೋಡಿದರ ಸರಾಸರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಕೈಯಾರೆ ತಮ್ಮ ಜೀವ ತೊಗೊಂಡವರು ಆದ್ರಗ ಸಿಗತಾರ. ಅವರಿಗೆ ಇನ್ನೂ ಕಮ್ಮಿ ಆಗಿತ್ತು? ಅವರ ಹತ್ತರ ಹಣ, ಯಶಸ್ಸು, ಅನಗತ್ಯ ಪ್ರಚಾರ, ಎಲ್ಲಾ ಇತ್ತು. ಮರಲಿನ ಮನರೋ ರೀತಿಯ ನಟಿಯರು ಈ ಪರಬೇಧದಾಗ ಬರ್ತಾರ.

ಇನ್ನೊಂದು ಕಡೆ ಕೆಲವು ನಟ- ನಟಿಯರು ಇರತಾರ. ಅವರು ನೂರಕ್ಕೂ ಹೆಚ್ಚು ವರ್ಷ ಆರಾಮಾಗಿ ಇರ್ತಾರ, ಸಾಯೋ ತನಕ ಸಿನಿಮಾ- ರಂಗಭೂಮಿದಾಗ ಚಾಲತಿ ಒಳಗ ಇರ್ತಾರ. ಇಲ್ಲಾ ಅಂದ್ರ ಸಮಾಜ ಸೇವೆ, ಸಾಲವೆಶನ ಆರ್ಮಿಯಂತಹ ಧಾರ್ಮಿಕ ಸಂಸ್ಥೆಗಳು, ವಿಶ್ವ ಸಂಸ್ಥೆ, ಅಥವಾ ರಾಜಕೀಯ ಇಂತದರಾಗ ಬಿಸಿ ಆಗಿ ಬಿಡತಾರ. ಜೂಲಿ ಅಂಡರೂಸ್, ಆಡರಿ ಹೆಪಬರ್ನ ನಂತವರು ಈ ಕೆಟಗರಿ ಒಳಗ ಬರ್ತಾರ.

ಈ ಎರಡನೇ ರೀತಿಯ ನಟ- ನಟಿಯರ, ಯಶಸ್ಸಿನ ಗುಟ್ಟು ಏನು?

ನಟ ಮನೋಜ್ ಬಾಜಪೇಯಿ ಹೇಳಿದಂತೆ ಮೊದಲನೇ ರೀತಿಯ ನಟರು ತಮ್ಮ ತೆರೆಯ ಮೇಲಿನ ಜೀವನವನ್ನೇ ನಿಜಜೀವನ ಅಂತ ತಿಳಕೊಂಡರು, ಎರಡನೇ ರೀತಿಯವರು ತಮ್ಮ ಜೀವನದಿಂದ ಅತಿ ಮಾನುಷ ಅಪೇಕ್ಷೆಗಳನ್ನು ಇಟ್ಟುಕೊಳ್ಳಲಿಲ್ಲ.

ನಮ್ಮ ಮಾಧ್ಯಮಗಳಿಂದ ನಾವು ಕೇವಲ ಹುಲು ಮಾನವ ಅಪೇಕ್ಷೆಗಳನ್ನು ಇಟ್ಟುಕೊಳ್ಳಬಹುದಲ್ಲವೇ ಮನೋಲ್ಲಾಸಿನಿ?‌

  • ಐ ವಿ ಗೌಲ್

ಇದನ್ನೂ ಓದಿ: ಸುಶಾಂತ್ ಸಿಂಗ್ ಸಾವಿಗೆ ಕಾರಣ ತಿಳಿಯಬೇಕಾದರೆ ಬಾಲಿವುಡ್ ಎಂಬ ಚಕ್ರವ್ಯೂಹ ಅರಿಯಿರಿ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. After looking over a handful of the blog posts
    on your web page, I honestly appreciate your way of writing a blog.
    I book-marked it to my bookmark webpage list
    and will be checking back soon. Please check out my website too and
    let me know what you think.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...