Homeಅಂಕಣಗಳುಕಟ್ಟೆಪುರಾಣ: ಕರೋನಾ ಬಂದಿದ್ದು ವಳ್ಳೆದಾಯ್ತು ಕಂಡ್ಳ

ಕಟ್ಟೆಪುರಾಣ: ಕರೋನಾ ಬಂದಿದ್ದು ವಳ್ಳೆದಾಯ್ತು ಕಂಡ್ಳ

“ಅದೆ ಕಂಡ್ಳ ನಾನೇಳಿದ್ದು, ಊರಲ್ಲಿ ಪ್ರಾಯಕ್ಕೆ ಬಂದೆದ್ದೆ ಯಲ್ಲ ಹುಡುಗ್ರು ಬೆಂಗಳೂರು ಸೇರಿಕಂಡಿದ್ರು. ನೋಡೀಗ ಯಲ್ಲ ಬಂದವೆ ಯವಸಾಯ ಮಾಡ್ತ ಅವೆ ಊರಿಗೇ ಒಂದು ಕಳೆ ಬಂದದೆ.”

- Advertisement -
- Advertisement -

ವಾಟಿಸ್ಸೆ ಬಂದ ಕೂಡಲೆ ಜುಮ್ಮಿ ಏನೋ ಹೊಳೆದಂತೆ.

“ಲೇ ವಾಟಿಸ್ಸೆ ಕರೋನಾ ಬಂದಿದ್ದು ವಳ್ಳೆದಾಯ್ತು ಕಂಡ್ಳ” ಎಂದಳು.

“ನಿನಿಗೇನಾಯ್ತಕ್ಕ ಇಂತ ಮಾತಾಡ್ತೀ.”

“ಪ್ರಪಂಚನೆ ಹೆದರಿಕಂಡು ಕುಂತದೆ ಇವುಳಿಗೆ ವಳ್ಳೆದಾಯ್ತಂತೆ ಇದಕೇನೇಳ್ತಿಯಪ್ಪ” ಎಂದ ಉಗ್ರಿ.

“ಅಕ್ಕನೆ ಹೇಳ್ತಳೆ ಬುಡು. ಅದೇನೇಳಕ್ಕ.”

“ನಮ್ಮೂರು ಮಂದ್ಲಿದ್ದಂಗಾಯ್ತು ಕಂಡ್ಳ.”

“ಯಂಗೇ ಅಂತ.”

“ಹೆಚ್ಚುಕಮ್ಮಿ ಇಪ್ಪತ್ತು ಮನೆ ಬಾಗಲಾಕಿದ್ದೊ ಕಂಡ್ಳ, ಅವುರ್ಯಲ್ಲ ಬೆಂಗಳೂರು ಸೇರಿಕಂಡಿದ್ರು. ಈಗ್ಯಲ್ಲ ಬಂದು ಬಾಗಲತಗದವುರೆ ಕತ್ಲೆ ಮನೆ ಬೆಳಕಾದೊ.”

“ಓಟರ್‍ಲಿಸ್ಟು ಪಿಲಪ್ಪಾದ ರಾಜಕಾರಣಿಯಂಗೆ ಖುಷಿಯಾಗಿದ್ದಿಯಲ್ಲಕ್ಕ. ಜನಕೆ ಇದ್ದ ಜಾಗದಲ್ಲಿ ಕ್ಯಲಸಿರಲಿಲ್ಲ. ಯಲ್ಲ ಬೆಂಗಳೂರಿಗೋಗಿದ್ರು, ಕರೋನಾ ಕಾಯಿಲಗೆ ಹೆದರಿ ತಿರಗ ಊರಿಗೆ ಬಂದವುರೆ ಅಷ್ಟೆಯ.”

“ಅದೆ ಕಂಡ್ಳ ನಾನೇಳಿದ್ದು, ಊರಲ್ಲಿ ಪ್ರಾಯಕ್ಕೆ ಬಂದೆದ್ದೆ ಯಲ್ಲ ಹುಡುಗ್ರು ಬೆಂಗಳೂರು ಸೇರಿಕಂಡಿದ್ರು. ನೋಡೀಗ ಯಲ್ಲ ಬಂದವೆ ಯವಸಾಯ ಮಾಡ್ತ ಅವೆ ಊರಿಗೇ ಒಂದು ಕಳೆ ಬಂದದೆ.”

“ಊರಿಗೆ ಕಳೆ ಬರದು ದುಡಿಯೋಕೈಗೆ ಕ್ಯಲಸಿದ್ದಾಗ ಕಣಕ್ಕ. ಕ್ಯಲಸಿಲ್ದೊರ ಮಕ ನೋಡಕ್ಕಾದತೆ?”

“ಅಲ್ಲಾ ಕಣೊ ವಾಟಿಸ್ಸೆ ರಾಜಕಾರಣಿಗಳಿಗ್ಯಾವ ಕ್ಯಲಸದೊ ಆದ್ರು ಅವುರ ಮಕ ನೋಡು ಯಂಗೆ ಲಕಲಕ ಅಂತ ವಳಿತದೆ” ಎಂದ ಉಗ್ರಿ.

“ಅದೇನೊ ನಿಜ ಆ ಸಿ.ಟಿ ರವಿ ಅನ್ನೊ ಮಿನಿಸ್ಟ್ರಿಗೆ ಪಾಪ ಏನೂ ಕ್ಯಲಸಿಲ್ಲ ಅದ್ಕೆ ಲೇಖನ ಬರಿತ ಕುಂತವುನೆ.”

“ಏನು ಬರದವುನೆ.”

“ನಾವು ಚೀಣಾ ದೇಸದ ಪದಾರ್ಥ ಬಳಸಬಾರ್ದು ನಾವೇ ತಯಾರು ಮಾಡಿಕಬೇಕು ಅಂತ ಬರದವುನೆ.”

“ಅಲ್ಲಾ ಕಣೊ ವಾಟಿಸ್ಸೆ ಅವುನ ಮನೆಲಿರೊ ಅರ್ದಕ್ಕರ್ದ ಪದಾರ್ಥ ಚೀಣಾ ದೇಸದ ಪದಾರ್ಥ. ಅಂತದ್ರಲ್ಲಿ ಲೇಖನ ಬರಿತನೆ ಅಂದ್ರೆ, ಅವುನ ಮನೆಲಿರೊ ಚೀಣಾ ದೇಸದ ಪದಾರ್ಥವ ವರಿಕಾಕಿ ಬೆಂಕಿ ಹಚ್ಚಿ ಅಮ್ಯಾಲೆ ಲೇಖನ ಪಾಕನ ಬರಿಬೇಕಲವೇನೊ.”

“ಬಿಜೆಪಿಗಳೇ ಅಂಗಲವೇನೊ, ಹೇಳದೊಂದು ಮಾಡದೊಂದು. ಯಲ್ಲಾನು ನಾವೇ ತಯಾರು ಮಾಡಿಕಬೇಕು ಅಂದ್ರೆ ಈ ಚೆಡ್ಡಿಗಳ ಕೈಲಿ ಏನಾಯ್ತದಪ್ಪಾ ಅಂದ್ರೇ, ಅವು ಕುಂಕುಮ ಗಂಧವ ಅವೇ ತಯಾರಿಸತ್ತವೆ? ಮಡಿ ಪಂಚೆ, ಟವಲ್ಲು, ಗಂಟೆ, ಮಂಗಳಾರತಿ ತಟ್ಟೆ ಕರ್ಪೂರನು ಬೇಕಾದ್ರೆ ಮಾಡಿಕತ್ತವೆ. ಇನ್ನುಳದಂಗೆ ಪೂಜಾರಿ ಕೈಲಿರೊ ಮೊಬೈಲು, ಗಡಿಯಾರ, ಮಂಗಳಾರತಿ ತಟ್ಟಿಗೆ ಬಿದ್ದ ಕಾಸಿನ ಲೆಕ್ಕ ಬರಿಯೋ ಪೆನ್ನೂ ಕೂಡ ಚೀಣಾ ದೇಸದ್ದೆಯಪ್ಪ ಅಂತದರಲ್ಲಿ ಚೀಣಾ ದೇಸದಿಂದ ಬರೋ ಪದಾರ್ಥವ ತಾವೇ ತಯಾರಿಸಿಕೊಳಕ್ಕಾದತೆ.”

“ಸಿ.ಟಿ ರವಿ ಅಂದ್ರೆ ಅವುನ್ಯಾರ್ಲ.”

“ಇದೇನಕ್ಕ ಹಿಂಕೇಳ್ತಿ ಅವುನು ಚಿಕ್ಕಮಗಳೂರು ಕಡೆ ರಾಜಕಾರಣಿ. ಬಾಬಾಬುಡನ್‍ಗಿರಿಯ ದತ್ತಪೀಠ ಮಾಡಕ್ಕೊಗಿ ಗಲಾಟೆ ಎಬ್ಬಿಸಿ ಎಮ್ಮೆಲ್ಲೆ ಆದೋನು. ಈಗ ಮಂತ್ರಿಯಾಗ್ಯವುನೆ, ಕರೋನಾ ಕಾಯ್ಲದ ಕಾರಣಕ್ಕೆ ಕ್ಯಲಸಕ್ಕೆ ಬಾರದೋನಂಗಾಗ್ಯವುನೆ.”

“ಅದ್ಯಾಕಂಗಾದ.”

“ಅವುನೊಬ್ಬನೆ ಅಂಗಾಗಿಲ್ಲ ಕಣಕ್ಕ ಇಡೀ ಎಡೂರಪ್ಪನ ಸಂಪುಟವೇ ಅಂಗಾಗ್ಯದೆ. ಮಂತ್ರಿಗಳಾಗಿ ಮ್ಯರಿತ ಸನ್ಮಾನ ಮ್ಯರವಣಿಗೆ ದೇಸಭಕ್ತಿ ಬಾಸಣ ಮಾಡಿಕಂಡು ಮೋದಿ ಹೊಗಳಿಕಂಡು ಮ್ಯರಿಯನ ಅಂತ ಇದ್ದೊರಿಗೆ ಶನಿ ವಕ್ರಿಸಿದಂಗೆ ಕರೋನಾ ವಕ್ರಿಸಿಬುಡ್ತು ಹಂಗಾಗಿ ಯಲ್ಲ ಡಲ್ಲಾಗ್ಯವುರೆ.”

“ಎಡೂರಪ್ಪನೆ ಡಲ್ಲಾಗ್ಯವುರೆ.”

“ಅವುನ್ಯಾವತ್ತು ಲವುಲವಿಕೆ ಆಗಿದ್ನೊ ಪಾಪ ಮೊದಲ ಬಾರಿ ಮುಖ್ಯಮಂತ್ರಿಯಾದಾಗ ಪೈಲ್ಸ್ ತರ ಶೋಭಾ ಕಾಡಿದ್ಲು, ಈಗ ಕರೋನಾ ಕಾಡ್ತಾ ಅದೆ. ಮುಖ್ಯಮಂತ್ರಿ ಪದವಿಯ ಎಂಜಾಯ್ ಮಾಡಕ್ಕೆ ಆಗಲಿಲ್ಲ.”

“ಮುಖ್ಯಮಂತ್ರಿ ಪದವಿಯ ಎಂಜಾಯ್ ಮಾಡಿದೋರು ಅಂದ್ರೆ ಸಿದ್ದರಾಮಯ್ಯ, ಕುಮಾರಣ್ಣ ಕಣೊ.”

“ಸಿದ್ದರಾಮಯ್ಯನಿಗಿಂತ ಕುಮಾರಣ್ಣ ಕಣೊ ಎಂಜಾಯ್ ಮಾಡಿದ್ದು.”

“ಅದ್ಯಂಗ್ಲಾ ಎಂದಳು ಜುಮ್ಮಿ.”

“ಕುಮಾರಣ್ಣ ಕ್ಯಲಸದ ಒತ್ತಡ ಜಾಸ್ತಿಯಾಯ್ತು ಅಂದ್ರೆ ರಾಧಿಕನ ಮನೆಗೋಗಿ ಮನಗಿಬುಡತಿದ್ದ. ಆಗ ಎಂ.ಪಿ ಪ್ರಕಾಸಿದ್ರು ಯಲ್ಲನು ನೋಡಿಕಳರು. ಈಗ ಹೋಟ್ಳಲ್ಲಿದ್ದ ಕಣಕ್ಕ ಮುಖ್ಯಮಂತ್ರಿಯಾದೊನು ಹೋಟ್ಳಲ್ಲಿರತರೇನಕ್ಕ ಅದ್ಕೆ ಪವರ್ ಕಳಕಂಡ.”

“ಆ ಹೋಟ್ಳು ರೂಮು ದೆಸೆರೂಮಂತೆ ಕಣೊ. ಅದರಲ್ಲಿದ್ದಾಗ ಮುಖ್ಯಮಂತ್ರಿಯಾದೆ ಅದಕೆ ಅದರೊಳಗಿದ್ದಿನಿ ಅಂದಿದ್ದ.”

“ಸರಿಯಪ್ಪ ಆ ರೂಮಲ್ಲೆ ಇದ್ದಾಗ ಮುಖ್ಯಮಂತ್ರಿಗಿರಿ ಕಳಕಂಡನಲ್ಲ ಅದಕೇನೇಳ್ತನೆ.”

“ಅದನ್ನ ತಗದು ಶಾಸಕರ ಮ್ಯಾಲಾಕ್ತನೆ. ಏನೇ ಆಗ್ಲಿ ಕುಮಾರಣ್ಣ ಅವುರ್ಯಲ್ಲ ಈ ಬಿಜೆಪಿಗಳಷ್ಟು ಕ್ಯಟ್ಟೊರಲ್ಲ ಕಣೊ ಈ ಮುಂಡೆ ಮಕ್ಕಳು ಭ್ಯಳೆಮ್ಯಾಲೆ ಎರಗತಾಯಿರೋ ಮಿಡತೆ ದಂಡಿದ್ದಂಗೆ. ಯಲ್ಲನು ವಕ್ಕತಿಂದ ಸರ್ವನಾಶ ಮಾಡ್ತರೆ ನೋಡ್ತಾಯಿರು.”

“ !?


ಇದನ್ನು ಓದಿ:

ಕಟ್ಟೆಪುರಾಣ: ಮೋದಿಗೆ ಬುದ್ದಿಲ್ಲ, ಶಾಗೆ ತಲಿಲ್ಲ. ಅದ್ಕೆ ಇಂತ ಕಾನೂನು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...