ಹೆದ್ದಾದಿ ಯೋಜನೆಗಳಲ್ಲಿ ಚೀನಾ ಕಂಪೆನಿಗಳಿಗೆ ಅನುಮತಿ ನೀಡುವುದಿಲ್ಲ: ಕೇಂದ್ರ ಸಚಿವ ನಿತಿನ್ ಗಡ್ಕರಿ

ಜಂಟಿ ಉದ್ಯಮಗಳು ಸೇರಿದಂತೆ ಹೆದ್ದಾರಿ ಯೋಜನೆಗಳಲ್ಲಿ ಚೀನಾ ಕಂಪನಿಗಳಿಗೆ ಭಾರತ ಅವಕಾಶ ನೀಡುವುದಿಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ತಿಳಿಸಿದ್ದಾರೆ. ಅತೀಸಣ್ಣ, ಸಣ್ಣ ಹಾಗೂ ಮಧ್ಯಮ ಉದ್ಯಮ (ಎಂಎಸ್‌ಎಂಇ) ದಂತಹ ವಿವಿಧ ಕ್ಷೇತ್ರಗಳಲ್ಲಿ ಚೀನಾದ ಹೂಡಿಕೆದಾರರಿಗೆ ಅವಕಾಶ ಸಿಗದಂತೆ ಸರ್ಕಾರ ಖಚಿತಪಡಿಸುತ್ತದೆ ಎಂದು ಅವರು ಹೇಳಿದ್ದಾರೆ.

ಕಳೆದ ತಿಂಗಳು ಲಡಾಖ್ ಗಡಿಯಲ್ಲಿ 20 ಭಾರತೀಯ ಸೇನಾ ಸಿಬ್ಬಂದಿಗಳ ಸಾವಿಗೆ ಕಾರಣವಾಗಿದ್ದ ಘರ್ಷಣೆಯ ಹಿನ್ನಲೆಯಲ್ಲಿ ಸಚಿವರ ಪ್ರತಿಪಾದನೆಯು ಮಹತ್ವವನ್ನು ಪಡೆದುಕೊಂಡಿದೆ.

ಉಭಯ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಮಧ್ಯೆ ಭಾರತವು ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಹಾಕಿದೆ ಎಂದು 59 ಚೀನಿ ಆ್ಯಪ್‌ಗಳನ್ನು ನಿಷೇಧಿಸಿದೆ.

ಪಿಟಿಐ ಸಂದರ್ಶನವೊಂದರಲ್ಲಿ ಮಾತನಾಡಿದ ಸಚಿವರು “ರಸ್ತೆ ನಿರ್ಮಾಣಕ್ಕಾಗಿ ಚೀನಾದ ಪಾಲುದಾರರನ್ನು ಹೊಂದಿರುವ ಜಂಟಿ ಉದ್ಯಮಗಳಿಗೆ ನಾವು ಅನುಮತಿ ನೀಡುವುದಿಲ್ಲ. ಅವರು (ಚೀನೀ ಕಂಪನಿಗಳು) ನಮ್ಮ ದೇಶದಲ್ಲಿ ಜಂಟಿ ಉದ್ಯಮದ ಮೂಲಕ ಬಂದರೆ ನಾವು ಅದನ್ನು ಅನುಮತಿಸುವುದಿಲ್ಲ ಎಂದು ನಾವು ದೃಢವಾದ ನಿಲುವನ್ನು ತೆಗೆದುಕೊಂಡಿದ್ದೇವೆ” ಎಂದು ಹೇಳಿದರು.

ಹೆದ್ದಾರಿ ಯೋಜನೆಗಳಲ್ಲಿ ಪಾಲ್ಗೊಳ್ಳಲು ತಮ್ಮ ಅರ್ಹತಾ ಮಾನದಂಡಗಳನ್ನು ವಿಸ್ತರಿಸಿ ಚೀನಾದ ಸಂಸ್ಥೆಗಳನ್ನು ನಿಷೇಧಿಸುವುದು ಮತ್ತು ಭಾರತೀಯ ಕಂಪನಿಗಳಿಗೆ ದಾರಿಗಳನ್ನು ಸಡಿಲಿಸುವುದು ಎಂಬ ನೀತಿಯನ್ನು ಶೀಘ್ರದಲ್ಲೇ ಹೊರಡಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಪ್ರಸ್ತುತ ಈಗಾಗಲೇ ಚೀನಾದ ಕೆಲವು ಪಾಲುದಾರರನ್ನು ಒಳಗೊಂಡಿರುವ ಕೆಲವು ಯೋಜನೆಗಳ ಬಗ್ಗೆ ಕೇಳಿದ ಪ್ರಶ್ನೆಗೆ “ಹೊಸ ನಿರ್ಧಾರವನ್ನು ಪ್ರಸ್ತುತ ಮತ್ತು ಭವಿಷ್ಯದ ಟೆಂಡರ್‌ಗಳಲ್ಲಿ ಜಾರಿಗೆ ತರಲಾಗುವುದು” ಎಂದು ಹೇಳಿದರು.

ಅಸ್ತಿತ್ವದಲ್ಲಿರುವ ಟೆಂಡರ್‌ಗಳು ಮತ್ತು ಭವಿಷ್ಯದ ಬಿಡ್‌ಗಳಿಗೆ ಸಂಬಂಧಿಸಿದಂತೆ, ಚೀನಾದ ಯಾವುದೇ ಜಂಟಿ ಉದ್ಯಮಗಳು ಇದ್ದಲ್ಲಿ ಮರುಬಿಡ್ ಮಾಡಲಾಗುವುದು ಎಂದು ಗಡ್ಕರಿ ಹೇಳಿದರು.

“ನಮ್ಮ ಕಂಪನಿಗಳು ದೊಡ್ಡ ಯೋಜನೆಗಳಲ್ಲಿ ಬಿಡ್ಡಿಂಗ್ ಮಾಡಲು ಅರ್ಹತೆ ಹೊಂದಿದೆಯೆ ಎಂದು ಖಚಿತಪಡಿಸಿಕೊಳ್ಳಲು ನಾವು ನಿಯಮಗಳನ್ನು ಸಡಿಲಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ತಾಂತ್ರಿಕ ಮತ್ತು ಆರ್ಥಿಕ ಮಾನದಂಡಗಳನ್ನು ಸಡಿಲಿಸಲು ಸಭೆ ನಡೆಸಲು ನಾನು ಹೆದ್ದಾರಿಗಳ ಕಾರ್ಯದರ್ಶಿ (ಗಿರಿಧರ್ ಅರಮನೆ) ಮತ್ತು ಎನ್‌ಎಚ್‌ಎಐ ಅಧ್ಯಕ್ಷ (ಎಸ್‌ಎಸ್ ಸಂಧು) ಅವರಿಗೆ ನಿರ್ದೇಶನ ನೀಡಿದ್ದೇನೆ. ಆದ್ದರಿಂದ ನಮ್ಮ ಕಂಪನಿಗಳು ಕೆಲಸ ಮಾಡಲು ಅರ್ಹತೆ ಪಡೆಯಬಹುದು “ಎಂದು ಅವರು ಹೇಳಿದರು.

ನಿರ್ಧಾರವನ್ನು ವಿಸ್ತಾರವಾಗಿ ವಿವರಿಸಿದ ಗಡ್ಕರಿ, ಗುತ್ತಿಗೆದಾರನು ಸಣ್ಣ ಯೋಜನೆಗೆ ಅರ್ಹತೆ ಗಳಿಸಬಹುದಾದರೆ, ಅವನು ದೊಡ್ಡ ಯೋಜನೆಗೆ ಅರ್ಹತೆ ಪಡೆಯಬಹುದು ಎಂದು ಹೇಳಿದರು. “ನಿರ್ಮಾಣ ಮಾನದಂಡಗಳು ಉತ್ತಮವಾಗಿಲ್ಲ, ಹಾಗಾಗಿ ಅದನ್ನು ಬದಲಾಯಿಸಲು ನಾನು ಕೇಳಿದ್ದೇನೆ. ನಾವು ಅದನ್ನು ಬದಲಾಯಿಸುತ್ತಿದ್ದೇವೆ ಇದರಿಂದ ನಾವು ಭಾರತೀಯ ಕಂಪನಿಗಳನ್ನು ಪ್ರೋತ್ಸಾಹಿಸಬಹುದು” ಎಂದು ಅವರು ಹೇಳಿದರು.

“ನಾವು ತಂತ್ರಜ್ಞಾನ, ಸಲಹೆ ಅಥವಾ ವಿನ್ಯಾಸ ಕ್ಷೇತ್ರಗಳಲ್ಲಿ ವಿದೇಶಿ ಜಂಟಿ ಉದ್ಯಮದೊಂದಿಗೆ ಸೇರಲೆಬೇಕೆಂದಿದ್ದರೂ, ನಾವು ಚೀನೀಯರನ್ನು ಅನುಮತಿಸುವುದಿಲ್ಲ” ಎಂದು ಸಚಿವರು ಹೇಳಿದರು.

ಎಂಎಸ್‌ಎಂಇ ವಲಯದ ಬಗ್ಗೆ, ಸ್ಥಳೀಯ ಉತ್ಪಾದನೆಯ ಸಾಮರ್ಥ್ಯವನ್ನು ಹೆಚ್ಚಿಸುವ ಪ್ರಯತ್ನವಾಗಿದೆ ಆದರೆ ಅದೇ ಸಮಯದಲ್ಲಿ ವಿದೇಶಿ ಹೂಡಿಕೆಯನ್ನು ಉತ್ತೇಜಿಸಲಾಗುತ್ತಿದೆ ಎಂದು ಗಡ್ಕರಿ ಹೇಳಿದರು.

ಆದರೆ, ವಿದೇಶಿ ಹೂಡಿಕೆಗೆ ಉತ್ತೇಜನ ನೀಡುವ ನಿರ್ಧಾರವಿದ್ದರೂ, ಚೀನಾದ ಹೂಡಿಕೆದಾರರಿಗೆ ಅವಕಾಶ ನೀಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.


ಓದಿ: ಚೀನಾ ಪಡೆಗಳನ್ನು ಹೇಗೆ ಮತ್ತು ಯಾವಾಗ ಹೊರಹಾಕಲಾಯಿತು ಬಹಿರಂಗಪಡಿಸಿ: ಕೇಂದ್ರಕ್ಕೆ ಸೋನಿಯಾ ಗಾಂಧಿ ಒತ್ತಾಯ


ವಿಡಿಯೋ ನೋಡಿ:

ಗುರುದೇವ ರವೀಂದ್ರ ಠಾಗೋರ್‌ ಅವರ ‘ಅಂತರಂಗವನು ಅರಳಿಸು!’ ಎಂ ಡಿ ಪಲ್ಲವಿ ಕಂಠಸಿರಿಯಲ್ಲಿ

https://www.youtube.com/watch?v=p_R2MaHz4K8

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here