Homeಅಂಕಣಗಳುಪಂಚರಾಜ್ಯ ಚುನಾವಣಾ ಫಲಿತಾಂಶಗಳ ಸಂದೇಶ

ಪಂಚರಾಜ್ಯ ಚುನಾವಣಾ ಫಲಿತಾಂಶಗಳ ಸಂದೇಶ

- Advertisement -
- Advertisement -

ಪಂಡಿತರ ಮಾತುಗಳಲ್ಲಿ ಅರ್ಧದಷ್ಟನ್ನಾದರೂ ಮತದಾರರು ಸುಳ್ಳಾಗಿಸಿದ್ದಾರೆ. ಮತದಾರರು ನೀಡಿರುವ ತೀರ್ಪಿನಲ್ಲಿ ಹಲವು ಪಾಠಗಳಿವೆ. ಅದನ್ನು ಗಮನಿಸಬೇಕು. ಮತದಾರರೂ ಸುಳ್ಳುಗಳಿಗೆ ಬಲಿಯಾಗುವ ಎಲ್ಲಾ ಸಾಧ್ಯತೆಗಳಿರುವಾಗ ಅವರನ್ನು ಎಚ್ಚರಿಸುವ ಕರ್ತವ್ಯ ವಿದ್ವಾಂಸರಿಗಿರುವುದಿಲ್ಲವೆಂದಲ್ಲ. ಆದರೆ, ಸಮಷ್ಟಿಯಾಗಿ ಜನರು ನೀಡುವ ತೀರ್ಪುಗಳಿಗೆ ಹೆಚ್ಚಿನ ಮಹತ್ವವಿರುತ್ತದೆ. ಅಂತಹ ಹಲವು ಸಂಗತಿಗಳನ್ನು ಈ ಚುನಾವಣೆಯು ಮುಂದಿಟ್ಟಿದೆ.
ತೆಲಂಗಾಣದಲ್ಲಿ ಟಿಆರ್‍ಎಸ್ ಸರ್ಕಾರದಲ್ಲಿ ಎಲ್ಲವೂ ಸರಿಯಿರಲಿಲ್ಲ. ಆದರೆ ಹಲವು ಕಲ್ಯಾಣ ಕಾರ್ಯಕ್ರಮಗಳನ್ನು ಕೆಸಿಆರ್ ವಿನೂತನವಾಗಿ ಜಾರಿಗೊಳಿಸಿದ್ದರು. ಅದಕ್ಕೆದುರಾಗಿ ಕಾಂಗ್ರೆಸ್‍ಗೆ ಸರಿಯಾದ ನಾಯಕತ್ವವೂ ಇರಲಿಲ್ಲ; ಸರಿಯಾದ ಕಾರ್ಯಕ್ರಮವೂ ಇರಲಿಲ್ಲ; ಅಖಿಲ ಭಾರತ ಮಟ್ಟಕ್ಕೆ ಸೂಕ್ತವಾಗಬಹುದಾದ ಮಹಾಘಟಬಂಧನವು, ತೆಲಂಗಾಣಕ್ಕೆ ಪ್ರಜಾಕೂಟಮಿಯಾಗಿ ಒದಗಿ ಬರಲಿಲ್ಲ.
ಇಂತಹ ತೆಲಂಗಾಣದಲ್ಲಿ ಮೊದಲು ಟಿಆರ್‍ಎಸ್ ಗೆಲುವು ಶತಸ್ಸಿದ್ಧ ಎಂದು ಮಾಧ್ಯಮಗಳು ನುಡಿದಿದ್ದವು. ಚಂದ್ರಬಾಬು ನಾಯ್ಡು ಕಾಂಗ್ರೆಸ್ ಜೊತೆ ಸೇರಿದಾಗ ಟಿಆರ್‍ಎಸ್ ಅಧಿಕಾರಕ್ಕೆ ಬರುವುದಿಲ್ಲವೆಂಬ ಸಮೀಕ್ಷೆಗಳು ಬಂದವು. ಈಗ ನೋಡಿದರೆ ಟಿಡಿಪಿಯ ಜೊತೆಗೆ ಹೋಗಿದ್ದರಿಂದಲೇ ಟಿಆರ್‍ಎಸ್ ಇನ್ನೂ ಹೆಚ್ಚು ಸೀಟುಗಳನ್ನು ಪಡೆದುಕೊಂಡಿರಬಹುದು ಎಂದು ಹೇಳಲಾಗುತ್ತಿದೆ. ತೆಲಂಗಾಣ ಸಂಸದೆ ಕೆಸಿಆರ್ ಮಗಳು ಕವಿತಾ ಹೇಳಿದಂತೆ, ‘ಅಲೆ ಮೊದಲಿಂದಲೂ ಟಿಆರ್‍ಎಸ್ ಪರವಾಗಿಯೇ ಇತ್ತು. ಚಂದ್ರಬಾಬು ಮಾಧ್ಯಮಗಳನ್ನು ಮ್ಯಾನೇಜ್ ಮಾಡುವುದರಿಂದ ಅಥವಾ ಮಾಧ್ಯಮಗಳು ಬಯಸುವ ಸಿಇಓ ಅವರಾಗಿದ್ದರಿಂದ ತಪ್ಪಾಗಿ ವ್ಯಾಖ್ಯಾನಿಸಲಾಯಿತು’. ಮಾಧ್ಯಮಗಳು ತಮ್ಮ ಪೂರ್ವಗ್ರಹಕ್ಕೆ ತಕ್ಕಂತೆ ಭಾರೀ ದೊಡ್ಡ ಸುಳ್ಳುಗಳನ್ನು ನಂಬಿಕೊಂಡು ಹೇಳುವ ಸಾಧ್ಯತೆಗಳಿವೆ.
ರಾಜಸ್ತಾನದ ಒನ್ ಟು ಒನ್ ಫೈಟ್‍ನಲ್ಲಿ ಕಾಂಗ್ರೆಸ್ ಭಾರೀ ದೊಡ್ಡ ಗೆಲುವನ್ನು ಪಡೆಯುತ್ತದೆಂಬ ಭವಿಷ್ಯವು ಮೊದಲಿಂದ ಮತಗಟ್ಟೆ ಸಮೀಕ್ಷೆಯವರೆಗೆ ಬರುತ್ತಿತ್ತು. ಜನರಿಗೆ ಬಿಜೆಪಿಯ ಬಗೆಗಿದ್ದ ಸಿಟ್ಟು ಸ್ಪಷ್ಟವಾಗಿ ವ್ಯಕ್ತವಾಗಿದೆ; ಆದರೆ ಕಾಂಗ್ರೆಸ್ ಅವರ ಸ್ಪಷ್ಟ ಆಯ್ಕೆಯಾಗಿಲ್ಲವೆಂಬುದು ಅದರ ತಿಣುಕಾಟದ ಗೆಲುವಿನಲ್ಲೂ, ಇತರ ಸಣ್ಣಪುಟ್ಟ ಪಕ್ಷಗಳು ಮತ್ತು ಪಕ್ಷೇತರರ ಗೆಲುವಿನಲ್ಲೂ ಗೊತ್ತಾಗುತ್ತಿದೆ. ಅಂದರೆ ಹೊಸ ಭರವಸೆ ಇರದೇ ಇದ್ದಲ್ಲಿ, ಒಮ್ಮೆ ಅವರು, ಇನ್ನೊಮ್ಮೆ ಇವರು ಎಂಬುದು ಸಹಜ ಸತ್ಯವಲ್ಲ ಎಂಬುದೇ ಇದರ ಸಾರಾಂಶ.
ಕಾಂಗ್ರೆಸ್‍ನ ತಿಣುಕಾಟಕ್ಕೆ ಟಿಕೆಟ್ ಹಂಚಿಕೆಯಲ್ಲಿನ ಸಮಸ್ಯೆಯೇ ಕಾರಣವೆಂದೂ, ಸ್ಥಳೀಯವಾಗಿ ದೊಡ್ಡ ಜಾತಿಯ ನಾಯಕನನ್ನು ಪ್ರೊಜೆಕ್ಟ್ ಮಾಡದೇ ಇದ್ದುದೇ ಸಮಸ್ಯೆಯೆಂದು ಹೇಳುತ್ತಿರುವುದೂ ವಾಸ್ತವವಲ್ಲ. ಹಾಗೆ ನೋಡಿದರೆ, ಭಾರೀ ಗೆಲುವನ್ನು ಪಡೆದಿರುವ ಛತ್ತೀಸ್‍ಗಢದಲ್ಲಿ ಕಾಂಗ್ರೆಸ್ ಯಾರನ್ನೂ ಪ್ರೊಜೆಕ್ಟ್ ಮಾಡಿರಲಿಲ್ಲ. ಅದರ ಹಿರಿಯ ನಾಯಕ ಅಜಿತ್ ಜೋಗಿ ಪ್ರತ್ಯೇಕ ಪಕ್ಷ ಸ್ಥಾಪಿಸಿ ಬಹಳ ಕಾಲವಾಗಿತ್ತು.ಹಾಗೆಯೇ ಛತ್ತೀಸ್‍ಗಢದಲ್ಲಿ ರಮಣ್‍ಸಿಂಗ್ ಗೆಲ್ಲುತ್ತಾರೆ ಎಂಬುದನ್ನು ಬಹುತೇಕರು ಬಿಂಬಿಸುತ್ತಿದ್ದರು. ಕಾಂಗ್ರೆಸ್‍ಗಿದ್ದ ಅನಾನುಕೂಲತೆಗಳ ನಡುವೆಯೂ ಇದಕ್ಕೇನು ಕಾರಣ ಎಂಬುದನ್ನು ಸರಿಯಾಗಿ ವಿಶ್ಲೇಷಿಸುವ ಅಗತ್ಯವಿದೆ. ತಾನು ಇದ್ದುದರಲ್ಲಿ ಸೇಫ್ ಆದ ಭವಿಷ್ಯ ನುಡಿಯಬೇಕೆಂದು ಕರ್ನಾಟಕದ ಸಂದೀಪ್ ಶಾಸ್ತ್ರಿಯವರು ತನ್ನ ಲೇಖನದಲ್ಲಿ ಹಿಂದಿ ರಾಜ್ಯಗಳ ಚುನಾವಣೆಯ ಫಲಿತಾಂಶ 2:1 ಆಗಿರುತ್ತದೆ ಅಂದಿದ್ದರು. ಅದೂ ಸುಳ್ಳಾಯಿತು.ಅದೇನೇ ಇರಲಿ, ಇದು ಮೋದಿ ಮಾದರಿಯ ರಾಜಕಾರಣದ ವಿರುದ್ಧದ ಸ್ಪಷ್ಟ ಸಂದೇಶವಾಗಿದೆ. ರಾಹುಲ್‍ಗಾಂಧಿ ಭರವಸೆ ಮೂಡಿಸಿದ್ದಾರಾದರೂ ಅವರಿಗೆ ಈ ಚುನಾವಣೆಯು ಹಲವು ಎಚ್ಚರಿಕೆಗಳನ್ನು ನೀಡಿದೆ. ರಾಜಸ್ತಾನವು ಒಂದು ಎಚ್ಚರಿಕೆಯಾಗಿದ್ದರೆ, ಮಿಜೋರಾಂ ಇನ್ನೊಂದು ಎಚ್ಚರಿಕೆಯಾಗಿದೆ. ದೇಶವು ಕಾಂಗ್ರೆಸ್ ಮುಕ್ತವಾಗಿರದಿದ್ದರೂ ಈಶಾನ್ಯ ಭಾರತವು ಕಾಂಗ್ರೆಸ್ ಮುಕ್ತವಾಗಿದೆ. ಬಹುತೇಕ ಬುಡಕಟ್ಟು ಜನರು, ಕ್ರಿಶ್ಚಿಯನ್ನರು ಇರುವ ಈ ಪ್ರದೇಶದಲ್ಲಿ ಕಾಂಗ್ರೆಸ್ ‘ಸಹಜ ಆಯ್ಕೆ’ಯಲ್ಲ ಎಂಬುದು ಗಮನಾರ್ಹ. ಆ ಭಾಗದಲ್ಲಿ ಮುಂಚಿನಿಂದಲೂ ಹಲವು ಬಗೆಯ ‘ವಿಚ್ಛಿದ್ರತೆ’ಗೆ ಸ್ವತಃ ಕಾಂಗ್ರೆಸ್ಸೇ ಕಾರಣವಾಗಿತ್ತು. ಈಗದು ಅವಕಾಶವಾದಿತನಕ್ಕೆ ಕಾರಣವಾಗಿದ್ದು, ಅದರ ನೇರ ಹೊಣೆಯನ್ನು ಕಾಂಗ್ರೆಸ್ಸೇ ಹೊರಬೇಕು.
ಇದರೊಂದಿಗೆ ಇನ್ನೊಂದು ಅಂಶ, ದಕ್ಷಿಣ ಭಾರತವು ಕಾಂಗ್ರೆಸ್ ಮತ್ತು ಬಿಜೆಪಿ ಎರಡರಿಂದಲೂ ಮುಕ್ತವಾಗಿದೆ. ಕರ್ನಾಟಕದಲ್ಲಿ ಇವೆರಡೂ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲು ಸಾಧ್ಯವಾಗಿಲ್ಲ. ಕರ್ನಾಟಕದಲ್ಲಿ ಎರಡೂ ದೊಡ್ಡ ಪಕ್ಷಗಳು ಎಂದು ಹೇಳಿಕೊಳ್ಳಬಹುದು ಮತ್ತು ಕೇರಳದಲ್ಲಿ ಪ್ರತಿ ಎರಡು ಚುನಾವಣೆಯಲ್ಲಿ ಒಂದು ಸಾರಿ ಗೆಲ್ಲುತ್ತೇನೆಂದು ಭಾವಿಸಬಹುದಾದರೂ ಈ ಸದ್ಯ ಎರಡೂ ಪಕ್ಷಗಳಿಗೆ ದಕ್ಷಿಣ ಭಾರತದಲ್ಲಿ ಮುಖ್ಯಮಂತ್ರಿಗಳಿಲ್ಲ. ಅಂದರೆ, ತಾವು ಅಖಿಲ ಭಾರತ ಪಕ್ಷ ಎಂದು ಹೆಚ್ಚು ಕೊಚ್ಚಿಕೊಳ್ಳುವಂತಿಲ್ಲ.
ಕಾಂಗ್ರೆಸ್ ಮತ್ತು ಬಿಜೆಪಿಗಳಾಚೆ ಇರುವ ಬಹುತೇಕ ಪ್ರಾದೇಶಿಕ ಪಕ್ಷಗಳಲ್ಲಿ ಇರುವ ಸಮಾನ ಅಂಶವೆಂದರೆ ಅವೆಲ್ಲವೂ ವ್ಯಕ್ತಿ ಅಥವಾ ಕುಟುಂಬವೊಂದರ ಕಪಿಮುಷ್ಟಿಯಲ್ಲಿರುವ ಪಕ್ಷಗಳು. ತೆಲಂಗಾಣದಲ್ಲಿ ಗೆದ್ದಿರುವ ಟಿಆರ್‍ಎಸ್ ಸೇರಿದಂತೆ. ಇದನ್ನು ದಾಟಿ ನಿಜಕ್ಕೂ ಫೆಡರಲ್ ಆದ ಪರ್ಯಾಯ ಶಕ್ತಿಗೆ ದೇಶದಲ್ಲಿ ಅವಕಾಶ ಈಗಲೂ ಉಳಿದುಕೊಂಡಿದೆ.
ಅಂತಿಮವಾಗಿ, ಪ್ರಗತಿಪರ ಆಲೋಚನೆಯುಳ್ಳವರಿಗೆ ಈ ಫಲಿತಾಂಶವು ನೆಮ್ಮದಿ ತಂದಿರಬಹುದು. ಇದರೊಂದಿಗೆ 2014-16ಕ್ಕೆ ಹೋಲಿಸಿದರೆ ಬಿಜೆಪಿ ದುರ್ಬಲವೂ ಆಗಬಹುದು. ಆದರೆ, 2009ರ ಚುನಾವಣೆಯವರೆಗೆ ಒಂದು ರೀತಿಯ ಮತಗಳಿಕೆಯ ಸ್ಥಗಿತತೆ ಮತ್ತು ಕೆಲವು ಜಾತಿಕೋಟೆಗಳನ್ನು ದಾಟಲಾಗಿರದ ಬಿಜೆಪಿಯು 2014ರ ನಂತರ ಅವೆಲ್ಲವನ್ನೂ ದಾಟಿತು ಮತ್ತು ದೇಶದ ಮೂಲೆಮೂಲೆಗಳಲ್ಲೂ ಬಲ ಪಡೆದುಕೊಂಡಿತು. ಬಿಜೆಪಿ ಮಾತ್ರವಲ್ಲದೇ, ಆರೆಸ್ಸೆಸ್‍ನ ಮತೀಯ ರಾಜಕಾರಣ ಹಾಗೂ ಸುಳ್ಳಿನ ಬಲ ಹೆಚ್ಚಾಗುತ್ತಿರುವುದು ನಿಜಕ್ಕೂ ಆತಂಕಕಾರಿಯಾಗಿದೆ.
ಇಂತಹ ಪ್ರಜಾತಂತ್ರ ವಿರೋಧಿ ವಿದ್ಯಮಾನಗಳನ್ನು ಸೋಲಿಸಿ, ನಿಜವಾದ ಪ್ರಜಾಪ್ರಭುತ್ವವನ್ನು ನೆಲೆಗೊಳಿಸಲು ಭಿನ್ನ ಹೊಸದಾರಿಯನ್ನು ತುಳಿಯುವುದು ಪ್ರಜ್ಞಾವಂತರ ಕರ್ತವ್ಯವಾಗಿದೆ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರೂರ್ ಕಾಲ್ತುಳಿತ : ಸಿಬಿಐ ಮುಂದೆ ವಿಚಾರಣೆಗೆ ಹಾಜರಾದ ನಟ ವಿಜಯ್

ಕರೂರ್ ಕಾಲ್ತುಳಿತ ಘಟನೆಗೆ ಸಂಬಂಧಪಟ್ಟಂತೆ ನಟ ಹಾಗೂ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮುಖ್ಯಸ್ಥ ವಿಜಯ್ ಸೋಮವಾರ (ಜ.12) ದೆಹಲಿಯ ಕೇಂದ್ರ ತನಿಖಾ ದಳ (ಸಿಬಿಐ) ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದಾರೆ. ಚಾರ್ಟರ್ಡ್ ವಿಮಾನದಲ್ಲಿ...

ಜೂನ್‌ ಅಂತ್ಯದೊಳಗೆ ಜಿಬಿಎ ವ್ಯಾಪ್ತಿಯ ಪಾಲಿಕೆಗಳಿಗೆ ಚುನಾವಣೆ : ಗಡುವು ವಿಧಿಸಿದ ಸುಪ್ರೀಂ ಕೋರ್ಟ್

ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ಜೂನ್ ಅಂತ್ಯದೊಳಗೆ ಚುನಾವಣೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೋಮವಾರ (ಜ.12) ನಿರ್ದೇಶನ ನೀಡಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಸುಪ್ರೀಂ ಕೋರ್ಟ್ ನಲ್ಲಿ ಮಮತಾ ವಿರುದ್ಧ ಎಫ್‌ಐಆರ್ ದಾಖಲಿಸಲು ನಿರ್ದೇಶನ ಕೋರಿ ಅರ್ಜಿ ಸಲ್ಲಿಸಿದ ಇಡಿ

ನವದೆಹಲಿ: ಐ-ಪಿಎಸಿ ವಿರುದ್ಧದ ಬಹು-ರಾಜ್ಯ ಹಣ ವರ್ಗಾವಣೆ ಪ್ರಕರಣದಲ್ಲಿ ತನಿಖೆಗೆ ಅಡ್ಡಿಪಡಿಸಿದ, ಸಾಕ್ಷ್ಯಗಳನ್ನು ತಿರುಚಿದ ಮತ್ತು ನಾಶಪಡಿಸಿದ ಆರೋಪದ ಮೇಲೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಡಿಜಿಪಿ ಮತ್ತು ಕೋಲ್ಕತ್ತಾ ಪೊಲೀಸ್...

ಭಾರತಕ್ಕಿಂತ ಯಾವುದೇ ಪಾಲುದಾರ ದೇಶ ಮುಖ್ಯವಲ್ಲ, ವ್ಯಾಪಾರ ಮಾತುಕತೆ ಪುನರಾರಂಭ: ಅಮೆರಿಕ ರಾಯಭಾರಿ ಸೆರ್ಗಿಯೊ ಗೋರ್

"ವಾಷಿಂಗ್ಟನ್‌ಗೆ ಭಾರತಕ್ಕಿಂತ ಅಗತ್ಯವಾದ ದೇಶ ಇನ್ನೊಂದಿಲ್ಲ ಮತ್ತು ಎರಡೂ ಕಡೆಯವರು ವ್ಯಾಪಾರ ಒಪ್ಪಂದವನ್ನು ದೃಢೀಕರಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ" ಎಂದು ಅಮೆರಿಕದ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್ ಸೋಮವಾರ ಹೇಳಿದ್ದಾರೆ. ಅಮೆರಿಕ ರಾಯಭಾರ ಕಚೇರಿಯ ನೌಕರರು...

ಬಿಷಪ್ ಫ್ರಾಂಕೊ ಮುಲಕ್ಕಲ್ ಅತ್ಯಾಚಾರ ಪ್ರಕರಣ : ಒಂಬತ್ತು ವರ್ಷಗಳ ಬಳಿಕ ಮೌನ ಮುರಿದ ಸಂತ್ರಸ್ತೆ, ಕಾನೂನು ಹೋರಾಟ ಮುಂದುವರಿಸುವುದಾಗಿ ಹೇಳಿಕೆ

ಬಿಷಪ್ ಫ್ರಾಂಕೊ ಮುಲಕ್ಕಲ್ ವಿರುದ್ದದ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಕ್ರೈಸ್ತ ಸನ್ಯಾಸಿನಿ ಒಂಬತ್ತು ವರ್ಷಗಳ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾತನಾಡಿದ್ದು, ಫ್ರಾಂಕೊ ಮುಲಕ್ಕಲ್ ಅವರನ್ನು ನ್ಯಾಯಾಲಯ ಖುಲಾಸೆಗೊಳಿಸಿದ್ದಕ್ಕೆ ನಾನು ದಂಗಾಗಿದ್ದೇನೆ. ನ್ಯಾಯಕ್ಕಾಗಿ...

‘ವೆನೆಜುವೆಲಾದ ಹಂಗಾಮಿ ಅಧ್ಯಕ್ಷ’ ಎಂದು ಘೋಷಿಸಿಕೊಂಡ ಡೊನಾಲ್ಡ್ ಟ್ರಂಪ್ 

ಸೋಮವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ರುತ್ ಸೋಶಿಯಲ್‌ನಲ್ಲಿ ತಮ್ಮದೇ ಆದ ವಿಕಿಪೀಡಿಯಾ ಪುಟದ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ, ಅದರಲ್ಲಿ "ವೆನೆಜುವೆಲಾದ ಹಂಗಾಮಿ ಅಧ್ಯಕ್ಷ" ಎಂಬ ಹುದ್ದೆಯನ್ನು ಹೊಂದಿರುವ ಅವರ ಚಿತ್ರವಿದೆ. ಪೋಸ್ಟ್‌ನಲ್ಲಿ ಟ್ರಂಪ್...

ಪೊಲೀಸ್ ತುರ್ತು ವಾಹನದ ಚಾಲಕ ಸೇರಿ ಐವರಿಂದ ಯುವತಿ ಮೇಲೆ ಅತ್ಯಾಚಾರ!

ಪೊಲೀಸ್ ತುರ್ತು ಸೇವೆ (112) ವಾಹನದ ಚಾಲಕ ಸೇರಿದಂತೆ ಐವರು ಪುರುಷರು 19 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಛತ್ತೀಸ್‌ಗಢದ ಕೋರ್ಬಾ ಜಿಲ್ಲೆಯ ಬಂಕಿಮೊಂಗ್ರ ಪ್ರದೇಶದಲ್ಲಿ ನಡೆದಿದೆ. ಜನವರಿ...

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...

ದಾಳಿ ನಡೆಸಿದರೆ ನಮ್ಮ ನೇರ ಗುರಿಯಾಗುತ್ತೀರಿ : ಅಮೆರಿಕ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಇರಾನ್

ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ತಿರುಗೇಟು ನೀಡಿದೆ. ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ "ಅಮೆರಿಕ ಇರಾನ್ ಮೇಲೆ...