ಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ವಿದೇಶಿಯಂತೆ ಕಾಣುವ ಮಹಿಳೆಯೊಬ್ಬರು ಶ್ರೀಕೃಷ್ಣ ಮತ್ತು ಭಗವದ್ಗೀತೆಯನ್ನು ಹೊಗಳಿದ ವೈರಲ್ ವಿಡಿಯೋವೊಂದನ್ನು ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಅರ್ಡೆರ್ನ್ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ವಿಡಿಯೋದಲ್ಲಿ ಮಹಿಳೆಯು, “… ಭಗವದ್ಗೀತೆ ಅಂದರೆ ’ದೇವರ ಹಾಡು ’. ಶ್ರೀ ಕೃಷ್ಣ ಹೇಳಿದ್ದ ಭಗವದ್ಗೀತೆಯು ಅತೀಂದ್ರಿಯ ಬುದ್ಧಿವಂತಿಕೆಯಿಂದ ತುಂಬಿದ್ದು, ಅದು 5,000 ವರ್ಷಗಳ ಹಿಂದೆ ಮಾತನಾಡುವಾಗ ಇದ್ದಂತೆಯೇ ಇಂದಿಗೂ ಪ್ರಸ್ತುತವಾಗಿದೆ” ಎಂದು ಹೇಳುತ್ತಾರೆ.
ಈ ವಿಡಿಯೋವನ್ನುಇಟ್ಟುಕೊಂಡು ಭಗವದ್ಗೀತೆಯ ಮಹತ್ವದ ಬಗ್ಗೆ ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಮಾತನಾಡುತ್ತಿದ್ದಾರೆಂದು ಸಾಮಾಜಿಕ ಜಾಲತಾಣದಲ್ಲಿ ಹಲವರು ಬಳಕೆದಾರರು ಹೇಳುತ್ತಾ ಹಂಚಿಕೊಳ್ಳುತ್ತಿದ್ದಾರೆ. ವಿಡಿಯೋವನ್ನು ಹಲವಾರು ಫೇಸ್‌ಬುಕ್ ಹಾಗೂ ಟ್ವಿಟ್ಟರ್ ಬಳಕೆದಾರರು ಒಂದೇ ರೀತಿಯ ನಿರೂಪಣೆಯೊಂದಿಗೆ ಹಂಚಿಕೊಂಡಿದ್ದಾರೆ.

ಫ್ಯಾಕ್ಟ್‌ಚೆಕ್
ವೀಡಿಯೊದಲ್ಲಿ ಇರುವುದು ವಿದೇಶಿ ಮಹಿಳೆ ಎಂಬುವುದು ನಿಜವಾಗಿದೆ. ಅದರಂತೆ ಈ ವಿಡಿಯೋ ಎಡಿಟ್ ಮಾಡಿದ ವಿಡಿಯೋ ಕೂಡಾ ಅಲ್ಲ. ಆದರೆ ವಿಡಿಯೋದಲ್ಲಿ ಇರುವ ಮಹಿಳೆಯು ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಅರ್ಡೆರ್ನ್ ಅಲ್ಲ, ಬದಲಾಗಿ ಅಮೆರಿಕಾದ ಜನಪ್ರತಿನಿಧಿ ತುಳಸಿ ಗಬ್ಬಾರ್ಡ್ ಎಂಬವರಾಗಿದ್ದಾರೆ.
ಇದನ್ನೂ ಓದಿ: ಅಯೋಧ್ಯೆಯ ಮಸೀದಿ ಜಾಗದಲ್ಲಿ ಬಾಬ್ರಿ ಆಸ್ಪತ್ರೆ ಸ್ಥಾಪನೆ? ಈ ಸುದ್ದಿ ನಿಜವೆ?
ಆಗಸ್ಟ್ 11 ರಂದು ಕೃಷ್ಟ ಜನ್ಮಾಷ್ಟಮಿ ಸಂದರ್ಭದಲ್ಲಿ ತುಳಸಿ ಗಬ್ಬಾರ್ಡ್ ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಹ್ಯಾಂಡಲ್‌ಗಳಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದ್ದರು.
ಅಷ್ಟೇ ಅಲ್ಲದೆ ತಮ್ಮ ಟ್ವಿಟ್ಟರ್‌ನಲ್ಲಿ “ಪ್ರಪಂಚದಾದ್ಯಂತ ಜನ್ಮಾಷ್ಟಮಿ ಆಚರಿಸುವ ಎಲ್ಲರಿಗೂ ಶುಭಾಶಯಗಳನ್ನು ಕೋರುತ್ತೇನೆ! ನಾವು ಯಾವಾಗಲೂ ಶ್ರೀ ಕೃಷ್ಣನ ಸ್ಮರಣೆ, ಅವನ ಬೇಷರತ್ತಾದ ಪ್ರೀತಿ ಮತ್ತು ಅವನ ಅತೀಂದ್ರಿಯ ದೃಷ್ಟಿಯ ಆಶೀರ್ವದ ಪಡೆಯೋಣ. ಜೈ ಶ್ರೀ ಕೃಷ್ಣ! ” ಎಂದು ಬರೆದು ತಮ್ಮ ಈ ವಿಡಿಯೋವನ್ನು ಹಂಚಿದ್ದಾರೆ.
To all celebrating around the world, I want to wish you a very Happy Janmashtami! May we always be blessed with remembrance of Sri Krishna, His unconditional love, and His transcendental appearance in this world. Jai Sri Krishna! #HappyJanmashtami #KrishnaJanmashtami pic.twitter.com/gh69gw5Xe4
— Tulsi Gabbard ? (@TulsiGabbard) August 11, 2020
ತುಳಸಿ ಗಬ್ಬಾರ್ಡ್ ಡೆಮೋಕ್ರಾಟಿಕ್ ಪಕ್ಷದ ಅಮೇರಿಕನ್ ರಾಜಕಾರಣಿ, 2013 ರಿಂದ ಹವಾಯಿಯ 2 ನೇ ಕಾಂಗ್ರೆಸ್ ಜಿಲ್ಲೆಯ ಅಮೆರಿಕಾ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹವಾಯಿಯ ಒಂದು ಕ್ಷೇತ್ರವನ್ನು ಪ್ರತಿನಿಧಿಸುವ ಗಬ್ಬಾರ್ಡ್ ಭಾರತೀಯ ಮೂಲದವರಲ್ಲ ಮತ್ತು ಅವರ ಪೋಷಕರು ಇಬ್ಬರೂ ಹಿಂದೂಗಳಲ್ಲ, ಆದರೆ ಅವರು ಹಿಂದೂ ಧರ್ಮವನ್ನು ಆಚರಣೆ ಮಾಡುತ್ತಾರೆ.
ಇದನ್ನೂ ಓದಿ: ಭೂಮಿಪೂಜೆಯಂದು ಇಂಗ್ಲೆಂಡ್ ಪ್ರಧಾನಿ ರಾಮನ ವಿಗ್ರಹಕ್ಕೆ ಅಭಿಷೇಕ ಮಾಡಿದರೆ?
ನ್ಯೂಜಿಲೆಂಡ್ ಪ್ರಧಾನಿ ಮತ್ತು ಅಮೆರಿಕಾ ಪ್ರತಿನಿಧಿಯ ಮುಖದ ವ್ಯತ್ಯಾಸವನ್ನು ಕೆಳಗಿನ ಚಿತ್ರದಲ್ಲಿ ನೋಡಬಹುದಾಗಿದೆ.

ಆದರೆ ನ್ಯೂಜಿಲೆಂಡ್ ಪ್ರಧಾನಿ ಆಗಸ್ಟ್ 6 ರಂದು ಆಕ್ಲೆಂಡ್‌ನ ರಾಧಾ ಕೃಷ್ಣ ದೇವಸ್ಥಾನಕ್ಕೆ ಒಂದು ಸಣ್ಣ ಭೇಟಿ ನೀಡಿದ್ದರು.
Some precious moments with Hon. PM of New Zealand @jacindaardern at @indiannewslink event on 6 Aug 2020. She paid a short visit to Radha Krishna Mandir and enjoyed a simple Indian vegetarian meal- Puri, Chhole and Daal. ? pic.twitter.com/Adn25UE1cO
— Muktesh Pardeshi (@MukteshPardeshi) August 8, 2020
ಅಮೆರಿಕಾದ ರಾಜಕಾರಣಿ ತುಳಸಿ ಗಬ್ಬಾರ್ಡ್ ಬಿಡುಗಡೆ ಮಾಡಿರುವ ವಿಡಿಯೋವನ್ನು ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಅರ್ಡೆರ್ನ್ ಅವರದ್ದೆಂದು ತಪ್ಪಾಗಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿದ್ದಾರೆ.
ಓದಿ: ರಾಮ ಮಂದಿರದ ಜಾಹಿರಾತು ಹಾಕದಂತೆ ಒತ್ತಡ ಹಾಕಿದ್ದು ಮುಸ್ಲಿಂ ಸಂಘಟನೆಗಳು ಮಾತ್ರವೆ?



Hindu dharmada virodhi modi virodhi dhorane beda..nivu adannu tulidastu adu hemmaravaguttade