ಜನಪ್ರಕಾಶನ ಪ್ರಕಟಿಸುತ್ತಿರುವ ಕರ್ನಾಟಕ ಹೈಕೋರ್ಟ್‌ನ ವಿಶ್ರಾಂತ ನ್ಯಾಯಮೂರ್ತಿ ಹೆಚ್. ಎನ್. ನಾಗಮೋಹನ ದಾಸ್ ಅವರು ಬರೆದಿರುವ ’ರೈತರ ಭದ್ರತೆ ದೇಶದ ಭದ್ರತೆ’ ಪುಸ್ತಕ ಬಿಡುಗಡೆ ಹಾಗೂ ವಿಚಾರ ಗೋಷ್ಠಿ ಸೆಪ್ಟೆಂಬರ್ 13 ರ ಭಾನುವಾರ 11 ಗಂಟೆಗೆ ಬೆಂಗಳೂರಿನ ಕುಮಾರ ಕೃಪ ರಸ್ತೆಯ ಗಾಂಧಿ ಭವನದಲ್ಲಿ ನಡೆಯಲಿದೆ.
ಪರಿಸರ ತಜ್ಞರಾದ ಡಾ. ಅ.ನಾ. ಯಲ್ಲಪ್ಪ ರೆಡ್ಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಪುಸ್ತಕವನ್ನು ಲೋಕಾರ್ಪಣೆ ಮಾಡಲಿದ್ದಾರೆ. ವಿಚಾರ ಗೋಷ್ಠಿಯಲ್ಲಿ ಪುಸ್ತಕದ ಲೇಖಕರಾದ ನ್ಯಾಯಮೂರ್ತಿ ನಾಗಮೋಹನ್ ದಾಸ್ ರವರು ವಿಚಾರ ಮಂಡನೆ ಮಾಡಲಿದ್ದಾರೆ.
ಇದನ್ನೂ ಓದಿ: ಸಂವಿಧಾನದ ಮುನ್ನುಡಿಯಿಂದ ’ಸಮಾಜವಾದಿ’ ಪದವನ್ನು ಕಿತ್ತೊಗೆಯುವ ನಿರ್ಣಯ ಮಂಡನೆಗೆ ಬಿಜೆಪಿ ಸಜ್ಜು
ಮುಖ್ಯ ಅಥಿತಿಗಳಾಗಿ ಕರ್ನಾಟಕ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಎಸ್. ಆರ್. ಪಾಟಿಲ್ ಮತ್ತು ಮಾಜಿ ಮುಖ್ಯಮಂತ್ರಿಯಾದ ಹೆಚ್.ಡಿ. ಕುಮಾರಸ್ವಾಮಿ ಭಾಗವಹಿಸಲಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘದ ಬಡಗಲಪುರ ನಾಗೇಂದ್ರ ಅವರು ಸ್ವಾಗತ ಮಾಡಿಲಿದ್ದು, ಪ್ರಸ್ತಾವನೆಯನ್ನು ಕೃಷಿ ಆರ್ಥಿಕ ತಜ್ಞರಾದ ಡಾ. ಟಿ.ಎನ್. ಪ್ರಕಾಶ್ ಕಮ್ಮರಡಿ ನಡೆಸಿಕೊಡಲಿದ್ದಾರೆ.
ಇದನ್ನೂ ಓದಿ: ಮಾಧ್ಯಮಗಳೇ ಸಂದೇಶವಾದರೆ ಸಂವಿಧಾನದ ಆಶಯಗಳೇ ಪತನ!
ರಾಜ್ಯ ಕಬ್ಬು ಬೆಳೆಗಾರರ ಸಂಘದ ಕುರುಬೂರು ಶಾಂತಕುಮಾರ್, ದಲಿತ ಸಂಘರ್ಷ ಸಮಿತಿಯ ಗುರುಪ್ರಸಾದ್ ಕೆರಗೋಡು, ರಾಜ್ಯ ಪ್ರಾಂತ್ಯ ರೈತ ಸಂಘದ ಬಯ್ಯಾರೆಡ್ಡಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)ದ ಮಾವಳ್ಳಿ ಶಂಕರ್, “ನಮ್ಮೂರ ಭೂಮಿ ನಮಗಿರಲಿ’ ಅಭಿಯಾನದ ವಿ. ಗಾಯತ್ರಿ, ಗ್ರಾಮೀಣ ಕೂಲಿಕಾರರ ಸಂಘಟನೆಯ ಸ್ವರ್ಣ ಭಟ್, ಸೆಂಟರ್ ಫಾರ್ ಇಂಡಿಯನ್ ಟ್ರೇಡ್ ಯೂನಿಯನ್ ಕಾಂಗ್ರೆಸ್‌ನ ಮೀನಾಕ್ಷಿ ಸುಂದರಂ ವಿಚಾರ ಮಂಡನೆಗೆ ಪ್ರತಿಕ್ರಿಯೆ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ಕಡಿದಾಳು ಶಾಮಣ್ಣ, ಡಾ. ವಿಜಯಮ್ಮ, ಮೈಕೆಲ್ ಬಿ ಫರ್ನಾಂಡಿಸ್, ಬಿ.ಆರ್ ಪಾಟೀಲ್, ಚಾಮರಸ ಮಾಲಿಪಾಟೀಲ್, ಲಕ್ಷ್ಮೀನಾರಾಯಣ ನಾಗವಾರ, ವಿ. ನಾಗರಾಜ್, ಎಂ. ಶಿವಪ್ರಕಾಶ್, ನಂದಿನಿ ಜಯರಾಮ್, ಬಿ. ರಾಜಶೇಖರ ಮೂರ್ತಿ, ಯಶೋದಮ್ಮ, ಟಿ. ಯಶವಂತ್, ಶಾರದ ಗೋಪಾಲ್, ನಾಗರತ್ನಮ್ಮ ಬಿ. ಪಾಟೀಲ್, ಚಂದ್ರಶೇಖರ ಮೇಟಿ, ವಿನಯ್ ಶ್ರೀನಿವಾಸ್ ಮುಂತಾದವರು ಉಪಸ್ಥಿತರಿರಲಿದ್ದಾರೆ.
ಕಾರ್ಯಕ್ರಮವನ್ನು ಕರ್ನಾಟಕದ ರೈತ, ದಲಿತ, ಕಾರ್ಮಿಕ ಚಳುವಳಿಗಳು ಮತ್ತು ಪ್ರಗತಿಪರ
ಸಂಘಟನೆಗಳ ಐಕ್ಯ ಹೋರಾಟ ವೇದಿಕೆ ಆಯೋಜಿಸಿದೆ.
ಇದನ್ನೂ ಓದಿ: ದೇಶ ವಿಭಜನೆ ಕಾಲದ ನಿರಾಶ್ರಿತರಿಗೆ ಪೌರತ್ವದ ಕುರಿತು ಸಂವಿಧಾನ ಸಭೆಯಲ್ಲಿ ಕಾವೇರಿದ ಚರ್ಚೆ: ಯುದ್ಧವಿನ್ನೂ ಮುಗಿದಿಲ್ಲ


