ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಶತಾಯುಷಿ ಎಚ್.ಎಸ್ ದೊರೆಸ್ವಾಮಿಯವರ ಹೋರಾಟ ಜೀವನದ ಕುರಿತ ‘ಮಹಾನ್ ತಾತ’ ಸಾಕ್ಷ್ಯಚಿತ್ರವನ್ನು 103 ವರ್ಷದ ದೊರೆಸ್ವಾಮಿಯವರ ಗೌರವಾರ್ಥವಾಗಿ ನಿನ್ನೆ ರಾಜ್ಯದ 103 ಕಡೆಗಳಲ್ಲಿ ಪ್ರದರ್ಶನ ಮಾಡಲಾಗಿದೆ.
ಭೂಹೀನರು, ಗುಡಿಸಲುವಾಸಿಗಳು, ಅಲೆಮಾರಿಗಳು, ಕಾಲೇಜು ವಿದ್ಯಾರ್ಥಿಗಳು, ಗಾಂಧಿವಾದಿಗಳು ಹೀಗೆ ಸಮಾಜದ ನಾನಾ ವಿಭಾಗದ ಜನ ದೊರೆಸ್ವಾಮಿಯವರ ಜೀವನ ಚಿತ್ರಣವನ್ನು ಕಣ್ತುಂಬಿಕೊಂಡಿದ್ದಾರೆ.
ಬಳ್ಳಾರಿ ಜಿಲ್ಲೆಯ ಕಂಪ್ಲಿಯಲ್ಲಿ, ಚಾಮರಾಜನಗರದಲ್ಲಿ, ಶಿಕಾರಿ ಪುರದ ಖಾಸಗಿ ಬಸ್ ನಿಲ್ದಾಣದಲ್ಲಿ, ಬೆಂಗಳೂರಿನ ಅರಮನೆ ರಸ್ತೆಯ ಕರ್ನಾಟಕ ಸ್ಕೌಟ್ಸ್ ಅಂಡ್ ಗೈಡ್ಸ್ ಸಭಾಂಗಣದಲ್ಲಿ ಹೀಗೆ ನಾನಾ ಕಡೆ ಹಿರಿಯ ಚೇತನ ನಾಡಿನ ಸಾಕ್ಷಿಪ್ರಜ್ಞೆ ದೊರೆಸ್ವಾಮಿಯ ಸಾಕ್ಷ್ಯಚಿತ್ರವನ್ನು ಪ್ರದರ್ಶನ ಮಾಡಲಾಗಿದೆ.
ಇನ್ನು ಸಾಗರದಲ್ಲಿ ಪ್ರಜ್ಞಾ ರಂಗತಂಡ ಕ.ರಾ.ದಲಿತ ಸಂಘರ್ಷ ಸಮಿತಿ ಸಹಯೋಗದಲ್ಲಿ ಸ್ವಾತಂತ್ರ್ಯ ಸೇನಾನಿ ಎಚ್.ಎಸ್ ದೊರೆಸ್ವಾಮಿಯವರ ಹೋರಾಟದ ಹೆಜ್ಜೆಗಳ ಮಹಾನ್ ತಾತ ಸಾಕ್ಷ್ಯಚಿತ್ರವನ್ನು ಇಂದಿನಿಂದ ಒಂದು ವಾರಗಳ ಕಾಲ ಸಾಗರದ ಸುತ್ತು ಮುತ್ತಲಿನ ಹತ್ತು ಮನೆಗಳನ್ನು ಗುರುತಿಸಿ ಪ್ರತಿ ದಿನ ಸುತ್ತಮುತ್ತಲಿನ ನಾಗರಿಕರನ್ನು ಒಳಗೊಂಡು ಪ್ರದರ್ಶನ ಮಾಡಲು ಯೋಜಿಸಲಾಗಿದೆ.
ಇದನ್ನೂ ಓದಿ: ಹೊಸ ತಲೆಮಾರು ಅಂಬೇಡ್ಕರ್–ಗಾಂಧಿ ಸಮನ್ವಯದ ಬಗ್ಗೆ ಚಿಂತಿಸಲಿ: ದೊರೆಸ್ವಾಮಿ
ಇಂದು ಹಲವು ಜಿಲ್ಲೆಗಳಲ್ಲಿ ನಡೆದ ಸಾಕ್ಷ್ಯಚಿತ್ರ ಪ್ರದರ್ಶನದ ಆಕರ್ಷಕ ಫೋಟೊ ಗ್ಯಾಲರಿ ಇಲ್ಲಿದೆ ನೋಡಿ.
ಬಳ್ಳಾರಿಯ ಕಂಪ್ಲಿ

ಇದನ್ನೂ ಓದಿ: ಅನನ್ಯ ಸ್ವಾತಂತ್ರ್ಯ ಸೇನಾನಿ ದೊರೆಸ್ವಾಮಿಯವರ ಸಂಘರ್ಷಗಾಥೆ: ‘ಮಹಾನ್ ತಾತ’ ಸಾಕ್ಷ್ಯಚಿತ್ರ ಬಿಡುಗಡೆ
ಮಂಡ್ಯ

ಇದನ್ನೂ ಓದಿ: ಅಂಬೇಡ್ಕರ್‌ರವರ ಆರ್ಥಿಕ ಚಿಂತನೆಗಳು ದಾರಿಯಾಗಲಿ – ಎಚ್. ಎಸ್ ದೊರೆಸ್ವಾಮಿ
ಮೈಸೂರು

ಇದನ್ನೂ ಓದಿ: ಹೊಲಸು ಚುನಾವಣಾ ಆಯೋಗದ ನೀತಿಗೆ ಇತಿಶ್ರೀ ಹಾಡಬೇಡವೇ? – ಎಚ್.ಎಸ್ ದೊರೆಸ್ವಾಮಿ
ಸಿಂಧನೂರು

ಇದನ್ನೂ ಓದಿ: ಪ್ರಧಾನಿಗಳನ್ನು ನಾನು ನಂಬುತ್ತೇನೆ, ಅವರು ಹೇಳಿದ್ದೆಲ್ಲವನ್ನೂ ನಂಬುತ್ತೇನೆ – ಎಚ್ ಎಸ್ ದೊರೆಸ್ವಾಮಿ


