ಇಂದು ಹತ್ರಾಸ್‌ಗೆ ಭೇಟಿ ನೀಡಿದ ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್ ಮೇಲೆ ಮಸಿ ಎರಚಲಾಗಿದೆ. ತಮ್ಮ ನಿಯೋಗದೊಂದಿಗೆ ಸಂತ್ರಸ್ತರ ಭೇಟಿಗೆ ಬಂದಿದ್ದ ಸಂಸದರು ಮಾಧ್ಯಮಗಳೊಂದಿಗೆ ಮಾತನಾಡುತ್ತಿರುವಾಗ ವ್ಯಕ್ತಿಯೊಬ್ಬ ದಿಢೀರನೆ ಮಸಿ ಎರಚಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋ ನೋಡಿ.
ಇದನ್ನೂ ಓದಿ: ಮಹಿಳಾ ನಾಯಕಿ ಬಟ್ಟೆಗೆ ಕೈಹಾಕಲು ಆತನಿಗೆಷ್ಟು ಧೈರ್ಯ..?- ಬಿಜೆಪಿಯ ಚಿತ್ರಾ ವಾಘ್ ಆಕ್ರೋಶ
#WATCH: An unidentified person throws ink at the Aam Aadmi Party (AAP) delegation that is in Hathras to meet the family members of the alleged gangrape victim. pic.twitter.com/mth5GtkXBN
— ANI UP (@ANINewsUP) October 5, 2020
ಸಂಸದ ಸಂಜಯ್ ಸಿಂಗ್ ಮೇಲೆ ಮಸಿ ಎರಚಿದವನನ್ನು ದೀಪಕ್ ಶರ್ಮಾ ಎಂದು ಗುರುತಿಸಲಾಗಿದ್ದು, ಆತನನ್ನು ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ
ಈ ಕುರಿತು ಸಂಸದ ಸಂಜಯ್ ಸಿಂಗ್ ಟ್ವೀಟ್ ಮಾಡಿರುವ ಅವರು “ಯೋಗಿ ಆದಿತ್ಯನಾಥ್ ಠಾಕೂರ್ ಅಲ್ಲ, ಅವರೊಬ್ಬ ಹೇಡಿ” ಎಂದಿದ್ದಾರೆ.
हाथरस में कायराना हरकत पुलिस अपनी सुरक्षा में गुड़िया के घर लेकर गई लौटते समय हमला हुआ MLA राखी बिडलान अजय दत्त व फ़ैसल लाला साथ थे,योगी जी आप “ठाकुर नही कायर हो” मुझ पर चाहे जितने मुक़दमे लिखो जेल भेजो लाठी चलाओ या हत्या करवा दो लेकिन गुड़िया के लिये न्याय की लड़ाई जारी रहेगी pic.twitter.com/8DA9ln4ZYo
— Sanjay Singh AAP (@SanjayAzadSln) October 5, 2020
’ಹತ್ರಾಸ್‌ನಲ್ಲಿ ಶಾಸಕ ರಾಖಿ ಬಿಡ್ಲಾನ್ ಅಜಯ್ ದತ್, ಫೈಸಲ್ ಲಾಲಾ ಜೊತೆಗೆ ಮೃತ ಸಂತ್ರಸ್ತ ಯುವತಿಯ ಮನೆಯಿಂದ ಹಿಂದಿರುಗುವಾಗ ಹೇಡಿಗಳು ದಾಳಿ ಮಾಡಿದ್ದಾರೆ. ಯೋಗಿ ಜಿ, ನೀವು ಠಾಕೂರ್ ಅಲ್ಲ ಹೇಡಿ”. ನನ್ನ ವಿರುದ್ಧ ಯಾವುದೇ ಮೊಕದ್ದಮೆ ಹಾಕಿರಿ, ಲಾಠಿಚಾರ್ಜ್ ಮಾಡಿ ಅಥವಾ ನನ್ನನ್ನು ಕೊಲ್ಲಿ, ಆದರೆ ಸಂತ್ರಸ್ತ ಯುವತಿಯ ನ್ಯಾಯಕ್ಕಾಗಿ ನನ್ನ ಹೋರಾಟ ಮುಂದುವರಿಯುತ್ತದೆ’ ಎಂದಿದ್ದಾರೆ.
ಘಟನೆ ಕುರಿತು ದೆಹಲಿ ಮುಖ್ಯಮಂತ್ರಿ, ಆಪ್ ಮುಖಂಡ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿ’ ನೀವು ಸರಿಯಾದ ದಾರಿಯಲ್ಲಿದ್ದಿರಿ’ ಎಂದು ಸಂಸದ ಸಂಜಯ್ ಸಿಂಗ್ ಅವರನ್ನು ಪ್ರಶಂಸಿಸಿದ್ದಾರೆ.
संजय जी UP सरकार के अन्याय और अत्याचार के ख़िलाफ़ आप निडर हो कर बोलते रहे हैं
उन्होंने आप पर 14 FIR की, दफ़्तर सील किया पर आपको गिरफ़्तार करने की हिम्मत नहीं कर पाए तो आज हमला करवा दिया। ये UP सरकार में बैठे लोगों की पराजय और बदहवासी दिखाता है
इसका मतलब आप सही रास्ते पर हैं https://t.co/ANqmR0kZOO
— Arvind Kejriwal (@ArvindKejriwal) October 5, 2020
ಟ್ವೀಟ್‌ನಲ್ಲಿ ’ಸಂಜಯ್ ಜಿ, ಯುಪಿ ಸರ್ಕಾರದ ಅನ್ಯಾಯ ಮತ್ತು ದೌರ್ಜನ್ಯದ ವಿರುದ್ಧ ನೀವು ನಿರ್ಭಯವಾಗಿ ಮಾತನಾಡುತ್ತಿದ್ದೀರಿ. ಅವರು ನಿಮ್ಮ ಮೇಲೆ 14 ಎಫ್‌ಐಆರ್‌ಗಳನ್ನು ಹಾಕಿದ್ದಾರೆ, ಕಚೇರಿಗೆ ಮೊಹರು ಹಾಕಿದರು ಆದರೆ ನಿಮ್ಮನ್ನು ಬಂಧಿಸುವ ಧೈರ್ಯ ಮಾಡಲಿಲ್ಲ. ಇಂದು ಕೂಡ ನಿಮ್ಮ ಮೇಲೆ ಹಲ್ಲೆ ನಡೆಸಿದರು. ಇದು ಯುಪಿ ಸರ್ಕಾರದ ಸೋಲು ಮತ್ತು ಅವಮಾನವನ್ನು ತೋರಿಸುತ್ತದೆ. ಇದರರ್ಥ ನೀವು ಸರಿಯಾದ ಹಾದಿಯಲ್ಲಿದ್ದೀರಿ’ ಎಂದು ಹೇಳಿದ್ದಾರೆ.
ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಲು ಬಂದಿದ್ದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್, ತೃಣಮೂಲ ಕಾಂಗ್ರೆಸ್ ನಿಯೋಗ, ಸಮಾಜವಾದಿ ಪಕ್ಷದ ನಿಯೋಗಗಳ ಮೇಲೂ ಪೊಲೀಸರು ಹಲ್ಲೆ ಮಾಡಿದ್ದರು.


