Homeಮುಖಪುಟಇಂದು ಸಮಾಜವಾದಿ ನಾಯಕ ಜಯಪ್ರಕಾಶ್ ನಾರಾಯಣ ಜನ್ಮ ದಿನಾಚರಣೆ

ಇಂದು ಸಮಾಜವಾದಿ ನಾಯಕ ಜಯಪ್ರಕಾಶ್ ನಾರಾಯಣ ಜನ್ಮ ದಿನಾಚರಣೆ

 1970 ರ ದಶಕದಲ್ಲಿ ಅವರು ಜೆಪಿ ಚಳವಳಿ ಅಥವಾ ಬಿಹಾರ ಚಳವಳಿ ಎಂದೂ ಕರೆಯಲ್ಪಡುವ ಜನಪ್ರಿಯ ಜನರ ಚಳವಳಿಯಲ್ಲಿ ಜಯಪ್ರಕಾಶ್ ನಾರಾಯಣ ಪ್ರಮುಖ ಪಾತ್ರ ವಹಿಸಿದ್ದರು.

- Advertisement -
- Advertisement -

ಇಂದು ಭಾರತೀಯರು ಪ್ರೀತಿಯಿಂದ ಜೆ.ಪಿ. ಎಂದು ಕರೆಯಲ್ಪಡುವ ಸಮಾಜವಾದಿ ನಾಯಕ ಮತ್ತು ಸ್ವಾತಂತ್ರ್ಯ ಹೋರಾಟಗಾರ ಜಯಪ್ರಕಾಶ್‌ ನಾರಾಯಣ ಅವರ ಜನ್ಮ ದಿನಾಚರಣೆ.  ಪ್ರಧಾನ ಮಂತ್ರಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ದೇವೇಗೌಡರು, ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು  ಸೇರಿದಂತೆ ಹಲವು ಗಣ್ಯರು ಜೆ.ಪಿ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.

ಲೋಕ ನಾಯಕ ಮತ್ತು ಜೆ.ಪಿ ಎಂದು ಪ್ರಸಿದ್ಧರಾಗಿರುವ ಜಯಪ್ರಕಾಶ್‌ ನಾರಾಯಣ‌ ಅವರು ಬಿಹಾರದ ಸರಾನ್‌ನಲ್ಲಿ 1902ರ ಅಕ್ಟೋಬರ್‌ 11ರಂದು ಜನಿಸಿದರು. ಅಪ್ರತಿಮ ದೇಶಪ್ರೇಮಿ, ಅನ್ಯಾಯದ ವಿರುದ್ಧ ಸತತವಾಗಿ ಹೋರಾಟ ನಡೆಸಿದವರು. ಸ್ವಾತಂತ್ರ ಚಳುವಳಿಯಲ್ಲಿ ಪಾತ್ರವಹಿಸಿದ ಇವರು ಮಹಾತ್ಮ ಗಾಂಧಿ ಮತ್ತು ಎಂ.ಎನ್.ರಾಯ್ ಅವರ ವಿಚಾರಗಳಿಂದ ಪ್ರಭಾವಿತರಾಗಿದ್ದರು.

ಇದನ್ನೂ ಓದಿ: ನಾನು ಸರ್ವಾಧಿಕಾರಿಯಾಗಲು ಇಚ್ಚಿಸುತ್ತೇನೆ: ವಿಜಯ್ ದೇವರಕೊಂಡ ವಿವಾದಾತ್ಮಕ ಹೇಳಿಕೆ

ಜೆ.ಪಿ ಅವರು ಅಮೆರಿಕದಲ್ಲಿ ಸತತ ಎಂಟು ವರ್ಷಗಳವರೆಗೆ ನೆಲೆಸಿದ್ದು, ವಿಶ್ವವಿದ್ಯಾಲಯಗಳಲ್ಲಿ ವಿಜ್ಞಾನ, ಸಮಾಜವಿಜ್ಞಾನಗಳ ಅಧ್ಯಯನ ಮಾಡಿದ್ದಾರೆ. ಪ್ರತಿಭಾಶಾಲಿ ವಿದ್ಯಾರ್ಥಿಯಾಗಿದ್ದ ಜಯಪ್ರಕಾಶರು ಅಮೆರಿಕದಲ್ಲಿ ಮ್ಮ ಜೀವನ ಮತ್ತು ಶಿಕ್ಷಣದ ವೆಚ್ಚವನ್ನು ನಿರ್ವಹಿಸಲು ಕಾರ್ಖಾನೆಗಳಲ್ಲಿ, ಹೋಟೆಲುಗಳಲ್ಲಿ, ಹೊಲಗಳಲ್ಲಿ ದುಡಿದಿದ್ದರು.

ಅಮೆರಿಕವನ್ನು ಬಿಡುವ ಹೊತ್ತಿಗೆ ಜಯಪ್ರಕಾಶರು ಮಾರ್ಕ್ಸ್‌ವಾದಿಯಾಗಿದ್ದರು. ಎಂ. ಎನ್.ರಾಯರ ವಿಚಾರಧಾರೆ ಇವರ ರಾಜಕೀಯ ಪ್ರಜ್ಞೆಯ ಮೇಲೆ ಪ್ರಭಾವ ಬೀರಿತು. 1970 ರ ದಶಕದಲ್ಲಿ ಅವರು ಜೆಪಿ ಚಳವಳಿ ಅಥವಾ ಬಿಹಾರ ಚಳವಳಿ ಎಂದೂ ಕರೆಯಲ್ಪಡುವ ಜನಪ್ರಿಯ ಜನರ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

1965 ರಲ್ಲಿ ಜಯಪ್ರಕಾಶ್ ನಾರಾಯಣ್  ಅವರಿಗೆ ಸಾರ್ವಜನಿಕ ಸೇವೆಗಾಗಿ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ನೀಡಲಾಯಿತು. ಮರಣೋತ್ತರವಾಗಿ 1999ರಲ್ಲಿ ಭಾರತ್ ರತ್ನ ನೀಡಿ ಗೌರವಿಸಲಾಗಿದೆ.

ಸಮಾಜವಾದಿ ನಾಯಕರ ಜನ್ಮದಿನದ ಅಂಗವಾಗಿ ಪ್ರಧಾನಿ ಮೋದಿ ಟ್ವಿಟ್ ಮಾಡಿ ’ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮತ್ತು ಪ್ರಜಾಪ್ರಭುತ್ವದ ನೀತಿಗಳು ಆಕ್ರಮಣಕ್ಕೊಳಗಾದಾಗ, ಅದನ್ನು ರಕ್ಷಿಸಲು ಅವರು ಬಲವಾದ ಜನಾಂದೋಲನವನ್ನು ನಡೆಸಿದರು. ಅವರಿಗೆ ರಾಷ್ಟ್ರೀಯ ಹಿತಾಸಕ್ತಿ ಮತ್ತು ಜನರ ಕಲ್ಯಾಣಕ್ಕಿಂತ ಮುಖ್ಯವಾದದ್ದು ಏನೂ ಇರಲಿಲ್ಲ’ ಎಂದು ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ:  ನೆಟ್‌ವರ್ಕ್ ಸಮಸ್ಯೆ: ಆನ್‌ಲೈನ್ ತರಗತಿಗಾಗಿ 5 ಕಿಮೀ ನಡೆಯುವ ವಿದ್ಯಾರ್ಥಿಗಳು!

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಕೂಡ ಜೆ.ಪಿ.ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.’ಜಯಪ್ರಕಾಶ್ ನಾರಾಯಣ್ ಜನರ ನಾಯಕರಾಗಿದ್ದರು. ಇಂದಿಗೂ ಅವರ ಆಲೋಚನೆಗಳು ಲಕ್ಷಾಂತರ ಜನರನ್ನು ಪ್ರೇರೆಪಿಸುತ್ತಿವೆ’ ಎಂದಿದ್ದಾರೆ.

ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಲೋಕನಾಯಕ ಜಯಪ್ರಕಾಶ್ ನಾರಾಯಣ‌ ಅವರ ಜನ್ಮ ದಿನಾಚರಣೆಯಂದು ಗೌರವ ಅರ್ಪಿಸಿದ್ದಾರೆ. ’ಪ್ರಜಾಪ್ರಭುತ್ವದ ರಕ್ಷಣೆ ಮತ್ತು ಭ್ರಷ್ಟಾಚಾರದ ವಿರುದ್ಧದ ಅವರ ಹೋರಾಟವನ್ನು ಎಂದೂ ಮರೆಯಲು ಸಾಧ್ಯವಿಲ್ಲ. ಅವರ ಹೋರಾಟವು ಜನರ ಮನಸ್ಸಿನಲ್ಲಿ ಅಳಿಸಲಾಗದೆ ಉಳಿದಿದೆ ಎಂದು ನಾಯ್ಡು ಅವರು ಬಣ್ಣಿಸಿದ್ದಾರೆ’ ಎಂದು ಉಪರಾಷ್ಟ್ರಪತಿ ಸಚಿವಾಲಯ ಟ್ವೀಟ್‌ ಮಾಡಿದೆ.


ಇದನ್ನೂಓದಿ: ವಿಷಕಾರುವ, ದ್ವೇಷ ಹರಡುವ ಚಾನೆಲ್‌ಗಳಿಗೆ ಜಾಹೀರಾತು ನೀಡುವುದಿಲ್ಲ: ರಾಜೀವ್‌ ಬಜಾಜ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಆರೋಪಿ ಲೊಕೇಶನ್‌ ಪಿನ್ ಹಂಚಿಕೊಳ್ಳಬೇಕೆಂಬ ಜಾಮೀನು ಷರತ್ತು ಗೌಪ್ಯತೆ ಹಕ್ಕಿಗೆ ಧಕ್ಕೆ ತರುತ್ತದೆ: ಸುಪ್ರೀಂ...

0
ಆರೋಪಿ ಗೂಗಲ್ ಲೊಕೇಷನ್‌ ಪಿನ್ ಹಂಚಿಕೊಳ್ಳಬೇಕೆಂಬ ಜಾಮೀನು ಷರತ್ತು ಸಂವಿಧಾನದ 21ನೇ ವಿಧಿಯಡಿ ಒದಗಿಸಲಾದ ಗೌಪ್ಯತೆಯ ಹಕ್ಕಿಗೆ ಧಕ್ಕೆ ತರುತ್ತದೆ ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಮೌಖಿಕವಾಗಿ  ಹೇಳಿದೆ. ಗೂಗಲ್ ಲೊಕೇಷನ್‌ ಪಿನ್ ಹಂಚಿಕೊಳ್ಳಲು...