ಅಸ್ಸಾಂ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಉದ್ಯೋಗ ಕೊಡಿಸುತ್ತೇನೆ ಎಂದು ಜನರನ್ನು ವಂಚಿಸಿದ ಆರೋಪದಲ್ಲಿ ಬಿಜೆಪಿ ಕಾರ್ಯಕರ್ತನನ್ನು ಶನಿವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
“ಗುವಾಹಟಿ ಪೊಲೀಸರ ಅಪರಾಧ ವಿಭಾಗವು ವಂಚನೆ ಮತ್ತು ಇತರ ಸಂಬಂಧಿತ ಆರೋಪಗಳಿಗಾಗಿ ಶುಕ್ರವಾರ ಪ್ರಕರಣ ದಾಖಲಿಸಿದ್ದು, ಬಿಜೆಪಿ ಪಕ್ಷದ ಕಾರ್ಯಕರ್ತರನ್ನು ವಶಕ್ಕೆ ಪಡೆದಿದೆ” ಎಂದು ಅವರು ಹೇಳಿದರು.
“ಅವನ ಹೆಸರು ರಾಜೀವ್ ಪರಾಶರ್, ಇಂದು ಬೆಳಿಗ್ಗೆ ಬಂಧಿಸಲಾಯಿತು. ಆತ ಅಭ್ಯರ್ಥಿಗಳಿಂದ ಹಣವನ್ನು ಸಂಗ್ರಹಿಸಿ, ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಉದ್ಯೋಗ ಕೊಡಿಸುವ ಭರವಸೆ ನೀಡಿದ್ದ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಪೊಲೀಸ್ ತಂಡವು ಆತನ ಬಳಿ ಕೆಲವು ದಾಖಲೆಗಳು ಮತ್ತು ಎಲೆಕ್ಟ್ರಾನಿಕ್ ಸಾಕ್ಷ್ಯಗಳನ್ನು ಸಹ ವಶಪಡಿಸಿಕೊಂಡಿದ್ದು, ತನಿಖೆ ನಡೆಯುತ್ತಿದೆ. ಹೆಚ್ಚಿನ ವಿವರಗಳನ್ನು ಈ ಕ್ಷಣದಲ್ಲಿ ನೀಡಲಾಗುವುದಿಲ್ಲ ಎಂದು ಅವರು ಹೇಳಿದರು.
ಇದನ್ನೂ ಓದಿ: ಪೊಲೀಸ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ: ಅಸ್ಸಾಂ ಬಿಜೆಪಿ ಸದಸ್ಯ, ಮಾಜಿ ಡಿಐಜಿಗೆ ಲುಕ್ ಔಟ್ ನೋಟೀಸ್
ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ವಿವಾದಾತ್ಮಕ ನೇಮಕಾತಿಯಲ್ಲಿಯೂ ಬಿಜೆಪಿ ಸದಸ್ಯ ಭಾಗಿಯಾಗಿದ್ದಾನೆ ಎಂದು ಮತ್ತೊಬ್ಬ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ವಿವಿಧ ಹಂತಗಳಲ್ಲಿ 945 ಹುದ್ದೆಗಳಿಗೆ ಜನರನ್ನು ನೇಮಿಸಿಕೊಳ್ಳಲು ಇಲಾಖೆ 2018 ರ ಮೇ ತಿಂಗಳಲ್ಲಿ ಪರೀಕ್ಷೆ ನಡೆಸಿತ್ತು.
ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ಮತ್ತು ಭ್ರಷ್ಟಾಚಾರವನ್ನು ಆರೋಪಿಸಿ ಪ್ರತಿಪಕ್ಷಗಳು ಅಂದಿನಿಂದಲೂ ಬಿಜೆಪಿ ನೇತೃತ್ವದ ಸರ್ಕಾರದ ಮೇಲೆ ದಾಳಿ ನಡೆಸುತ್ತಿವೆ. ಆದರೆ ಬಿಜೆಪಿ ಈ ಎಲ್ಲಾ ಆರೋಪಗಳನ್ನು ನಿರಾಕರಿಸಿದೆ.
ಸರ್ಬಾನಂದ ಸೋನೊವಾಲ್ ಸರ್ಕಾರವೂ ಅಸ್ಸಾಂ ಪೊಲೀಸರ ಉದ್ಯೋಗ ಹಗರಣದಲ್ಲಿ ಸಿಲುಕಿದೆ.
ನಿವೃತ್ತ ಡಿಐಜಿ ಪ್ರಶಾಂತ್ ಕುಮಾರ್ ದತ್ತಾ, ಹಿರಿಯ ಪೊಲೀಸ್ ಅಧಿಕಾರಿ ಕುಮಾರ್ ಸಂಜಿತ್ ಕೃಷ್ಣ, ಅಸ್ಸಾಂ ಮುಖ್ಯ ಕಾರ್ಯದರ್ಶಿ ಕುಮಾರ್ ಸಂಜಯ್ ಕೃಷ್ಣ ಅವರ ಸಹೋದರ ಮತ್ತು ಪಕ್ಷದಿಂದ ಹೊರಹಾಕಲ್ಪಟ್ಟ ಬಿಜೆಪಿ ನಾಯಕ ದಿಬನ್ ದೇಕಾ ಸೇರಿದಂತೆ 52 ಜನರನ್ನು, ಪೊಲೀಸ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಈವರೆಗೆ ರಾಜ್ಯ ಪೊಲೀಸರ ಅನೇಕ ಏಜೆನ್ಸಿಗಳು ಬಂಧಿಸಿವೆ.
ಇದನ್ನೂ ಓದಿ: ಅಸ್ಸಾಂ ಚುನಾವಣೆ: ಹೊಸ ಪ್ರಾದೇಶಿಕ ಪಕ್ಷ ಸ್ಥಾಪನೆ. ಅಖಿಲ್ ಗೊಗೊಯ್ ಸಿಎಂ ಅಭ್ಯರ್ಥಿ!
ಸೆಪ್ಟೆಂಬರ್ 20 ರಂದು, ಅಸ್ಸಾಂ ನಿರಾಯುಧ ಸಬ್ ಇನ್ಸ್ಪೆಕ್ಟರ್ಗಳ 597 ಹುದ್ದೆಗಳ ಲಿಖಿತ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿತ್ತು. ನಂತರ ರಾಜ್ಯ ಮಟ್ಟದ ಪೊಲೀಸ್ ನೇಮಕಾತಿ ಮಂಡಳಿ (ಎಸ್ಎಲ್ಪಿಆರ್ಬಿ), ಪರೀಕ್ಷೆ ಪ್ರಾರಂಭವಾದ ಕೆಲವೇ ನಿಮಿಷಗಳಲ್ಲಿ ಅದನ್ನು ರದ್ದುಗೊಳಿಸಿತ್ತು.
ಬಿಜೆಪಿ “ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಜಾಬ್ ಸಿಂಡಿಕೇಟ್” ನಡೆಸುತ್ತಿದೆ ಎಂದು ಅಸ್ಸಾಂ ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕ ದೇವವ್ರತ ಸೈಕಿಯಾ ಶುಕ್ರವಾರ ಆರೋಪಿಸಿದ್ದು, ಕಳೆದ ನಾಲ್ಕೂವರೆ ವರ್ಷಗಳಲ್ಲಿ ಮಾಡಿದ ಎಲ್ಲಾ ನೇಮಕಾತಿಗಳ ಬಗ್ಗೆ ಗೌಹಾತಿ ಹೈಕೋರ್ಟ್ನ ನ್ಯಾಯಾಧೀಶರು ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ಇದನ್ನೂ ಓದಿ: ಅಸ್ಸಾಂ ಪ್ರವಾಹ: 26 ಜಿಲ್ಲೆಗಳ 26 ಲಕ್ಷ ಜನರು ಸಂಕಷ್ಟದಲ್ಲಿ!



ಬ್ರಶ್ಟಾಚಾರ..corruption..ನಡೆಗೇಡಿತನ,ಲಂಚಗುಳಿತನ
ಆರ್ಥಿಕ.. ಹಣಕಾಸು
ನಿರಂತರ..ಎಡೆಬಿಡದ,ಎಡೆಯಿರದ,ಸತತ