Homeಮುಖಪುಟಪೊಲೀಸ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ: ಅಸ್ಸಾಂ ಬಿಜೆಪಿ ಸದಸ್ಯ, ಮಾಜಿ ಡಿಐಜಿಗೆ ಲುಕ್‌ ಔಟ್ ನೋಟೀಸ್

ಪೊಲೀಸ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ: ಅಸ್ಸಾಂ ಬಿಜೆಪಿ ಸದಸ್ಯ, ಮಾಜಿ ಡಿಐಜಿಗೆ ಲುಕ್‌ ಔಟ್ ನೋಟೀಸ್

ಭರ್ಗಬ್ ಗ್ರ್ಯಾಂಡ್ ಹೋಟೆಲ್‍ಗೆ ಪೊಲೀಸರು ದಾಳಿ ನಡೆಸಿದಾಗ, ಅಭ್ಯರ್ಥಿಗಳ ರಸೀದಿ ಹಾಗೂ 445 ಖಾಲಿ ಪ್ರವೇಶಪತ್ರಗಳು ಹಾಗೂ ರೂ. 5.45 ಲಕ್ಷ ಹಣ ಪತ್ತೆಯಾಗಿತ್ತು.

- Advertisement -
- Advertisement -

ಬಿಜೆಪಿಯ ಕಿಸಾನ್ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿ ಸದಸ್ಯನೆಂದು ಹೇಳಿಕೊಂಡಿರುವ ದಿಬೇನ್ ದೇಕಾ ಹಾಗೂ ಮಾಜಿ ಡಿಐಜಿ ಪಿ.ಕೆ.ದತ್ತಾ ವಿರುದ್ಧ ಅಸ್ಸಾಂ ಪೊಲೀಸರು ಲುಕ್ ಔಟ್ ನೋಟಿಸ್ ನೀಡಿದ್ದು, ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿನ ಪ್ರಶ್ನೆಪತ್ರಿಕೆ ಸೋರಿಕೆಯ ಹಗರಣಕ್ಕೆ ಸಂಬಂಧಿಸಿದಂತೆ ಈ ಇಬ್ಬರ ಕುರಿತು ಮಾಹಿತಿ ನೀಡಿದವರಿಗೆ ಒಂದು ಲಕ್ಷ ನಗದು ಬಹುಮಾನವನ್ನು ಘೋಷಿಸಿದ್ದಾರೆ.

ಇದನ್ನೂ ಓದಿ: ಪಂಜಾಬ್‌: ರೈತರ ಪ್ರತಿಭಟನೆ ತೀವ್ರಗೊಳಿಸಲು ಬಿಜೆಪಿ ನಾಯಕರ ಮನೆ, ಕಛೇರಿ, ಮಾಲ್‌ಗಳಿಗೆ ಮುತ್ತಿಗೆ

ಸೆಪ್ಟೆಂಬರ್ 20ರಂದು ನಡೆಯಬೇಕಿದ್ದ ಪೊಲೀಸ್ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ ಎಂದು ತಿಳಿಯುತ್ತಿದ್ದಂತೆಯೇ ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ಇಲ್ಲಿಯವರೆಗೆ 19 ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಸ್ಕ್ರಾಲ್.ಇನ್ ವರದಿ ಮಾಡಿದೆ.

ಇದನ್ನೂ ಓದಿ: ಬಿಜೆಪಿಯೆಂದರೆ ಬ್ರಾಹ್ಮಣ-ಬನಿಯಾ ಕ್ಲಬ್: ಅವರಿಂದ `ಒಳ’ಮೀಸಲಾತಿ ಸಾಧ್ಯವೇ?

“ಭರ್ಗಬ್ ಗ್ರ್ಯಾಂಡ್ ಹೋಟೆಲ್‍ಗೆ ಪೊಲೀಸರು ದಾಳಿ ನಡೆಸಿದಾಗ, ಅಭ್ಯರ್ಥಿಗಳ ರಸೀದಿ ಹಾಗೂ 445 ಖಾಲಿ ಪ್ರವೇಶಪತ್ರಗಳು ಹಾಗೂ ರೂ. 5.45 ಲಕ್ಷ ಹಣ ಪತ್ತೆಯಾಗಿತ್ತು. ಈ ಹೊಟೇಲ್‍ಗೆ ಸೆಪ್ಟೆಂಬರ್ 19ರಂದು ಆಗಮಿಸಿದ್ದ ಹಲವು ಪರೀಕ್ಷಾ ಅಭ್ಯರ್ಥಿಗಳು ಸೆಪ್ಟೆಂಬರ್ 20ರಂದು ಬೆಳಿಗ್ಗೆ 7 ಗಂಟೆಗೆ ಅಲ್ಲಿಂದ ಹೊರ ಹೋಗಿದ್ದರು” ಎಂದು ಇನ್ಸ್‌ಪೆಕ್ಟರ್ ಜನರಲ್ ಸುರೇಂದ್ರ ಕುಮಾರ್ ಹೇಳಿದ್ದಾರೆ.

“ನಾವು ಲಾಡ್ಜ್‌ನಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆದುಕೊಂಡಿದ್ದು, ಸಿಬ್ಬಂದಿಯನ್ನು ಈಗಾಗಲೇ ಬಂಧಿಸಲಾಗಿದೆ” ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಜಿ.ಪಿ.ಸಿಂಗ್ ಹೇಳಿದರು.

ಈ ಪರೀಕ್ಷೆಗಳನ್ನು ಅಕ್ಟೋಬರ್ 25 ಕ್ಕೆ ಮರು ನಿಗದಿಪಡಿಸಲಾಗಿದೆ.


ಇದನ್ನೂ ಓದಿ: ಭೂಸುಧಾರಣಾ ಕಾಯ್ದೆ ತಿದ್ದುಪಡಿ: ಬಿಜೆಪಿಯವರು ಕಾಂಗ್ರೆಸ್‌ನವರನ್ನು ಪೇಚಿಗೆ ಸಿಲುಕಿಸಿದ್ದು ಹೇಗೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಆಂಧ್ರದಲ್ಲಿ ಎಸ್‌ಸಿ, ಎಸ್‌ಟಿ ಮೀಸಲಾತಿ ಕಡಿತಗೊಳಿಸಿ ಮುಸ್ಲಿಮರಿಗೆ ನೀಡಲಾಗಿದೆ ಎಂಬ...

0
"ಮುಸ್ಲಿಂ ಮೀಸಲಾತಿಯನ್ನು ಜಾರಿಗೊಳಿಸಲು ಕಾಂಗ್ರೆಸ್ ಆಂಧ್ರ ಪ್ರದೇಶದಲ್ಲಿ ಎಸ್‌ಸಿ/ಎಸ್‌ಟಿ ಮೀಸಲಾತಿಯನ್ನು ಕಡಿಮೆ ಮಾಡಿದೆ. ಇದೊಂದು ಪ್ರಮುಖ ಯೋಜನೆಯಾಗಿದ್ದು, ಇದನ್ನು ಇಡೀ ದೇಶದಾದ್ಯಂತ ಜಾರಿಗೆ ತರಲು ಕಾಂಗ್ರೆಸ್ ಬಯಸಿದೆ" ಎಂದು ಟೋಂಕ್‌ನಲ್ಲಿ ಮಂಗಳವಾರ (ಏ.23)...