Homeಮುಖಪುಟಬಿಜೆಪಿಯೆಂದರೆ ಬ್ರಾಹ್ಮಣ-ಬನಿಯಾ ಕ್ಲಬ್: ಅವರಿಂದ `ಒಳ’ಮೀಸಲಾತಿ ಸಾಧ್ಯವೇ?

ಬಿಜೆಪಿಯೆಂದರೆ ಬ್ರಾಹ್ಮಣ-ಬನಿಯಾ ಕ್ಲಬ್: ಅವರಿಂದ `ಒಳ’ಮೀಸಲಾತಿ ಸಾಧ್ಯವೇ?

ಬಿಜೆಪಿಯ 36 ರಾಜ್ಯ ಘಟಕಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಬಿಜೆಪಿ ಅಧ್ಯಕ್ಷರಲ್ಲಿ ಏಳು ಮಂದಿ ಬ್ರಾಹ್ಮಣರು, 17 ಮಂದಿ ಇತರ ಜಾತಿಗಳಿಗೆ ಸೇರಿದವರು, ಆರು ಮಂದಿ ಎಸ್‍ಟಿಗಳು, ಐದು ಮಂದಿ ಒಬಿಸಿಗಳು ಮತ್ತು ಒಬ್ಬರು ಮುಸ್ಲಿಂ. ಇದರಲ್ಲಿ ಶೇಕಡಾ 66 ಕ್ಕಿಂತ ಹೆಚ್ಚು ಜನರು ಮೇಲ್ಜಾತಿಯವರು.

- Advertisement -
- Advertisement -

ಇದೀಗ ಪರಿಶಿಷ್ಠ ಜಾತಿಯ ಮೀಸಲಾತಿಯಲ್ಲಿ ಒಳ ಮೀಸಲಾತಿಯ ಚರ್ಚೆಗಳು ಮುನ್ನಲೆಗೆ ಬಂದಿವೆ. ಈ ಮೀಸಲಾತಿಗೆ ಒಳಗಾಗುವ ಸಮುದಾಯಗಳು ಒಂದು ರಾಜಕೀಯ ಪಕ್ಷದ `ಒಳ’ ಮೀಸಲಾತಿಯಲ್ಲಿ ಯಾವ ಸ್ಥಾನ ಪಡೆದಿವೆ ಎನ್ನುವುದು ಕುತೂಹಲದ ವಿಷಯ. 2018ರ ಆಗಸ್ಟ್ 1 ರಂದು `ದಿ ಪ್ರಿಂಟ್’ ರುಹಿ ತಿವಾರಿ ಮತ್ತು ಪ್ರ್ರಾಗ್ಯ ಕೌಶಿಕ್ ಅವರುಗಳು ಬರೆದ ಸಂಶೋಧನ ವರದಿಯೊಂದನ್ನು ಪ್ರಕಟಿಸಿತ್ತು. ಇದು ಒಂದು ಸಾವಿರ ಬಿಜೆಪಿ ನಾಯಕರುಗಳನ್ನು ಸಮೀಕ್ಷೆಗೆ ಒಳಪಡಿಸಿ ಬಿಜೆಪಿಯು `ಬ್ರಾಹ್ಮಣ-ಬನಿಯಾ ಕ್ಲಬ್’ ಎಂದು ವಿಶ್ಲೇಷಿಸಿತು. ಈ ಎರಡು ವರ್ಷದ ಅವಧಿಯಲ್ಲಿ ಅಂಕೆಸಂಖ್ಯೆಗಳು ಚೂರು ಬದಲಾಗಿದ್ದರೂ ಈ ಬ್ರಾಹ್ಮಣ-ಬನಿಯಾ ಕ್ಲಬ್ ಮಾದರಿ ಹಿಡಿತ ಸಡಿಲವಾಗಿಲ್ಲ. ಈ ವರದಿಯ ಕೆಲವು ಮುಖ್ಯಾಂಶಗಳು ಈ ಕೆಳಗಿನಂತಿವೆ.

2011ರ ಜನಗಣತಿಯ ಪ್ರಕಾರ ದಲಿತರು ದೇಶದ ಜನಸಂಖ್ಯೆಯ ಶೇಕಡಾ 16.6ರಷ್ಟಿದ್ದರೆ, ಪರಿಶಿಷ್ಟ ಪಂಗಡಗಳ ಜನಸಂಖ್ಯೆ ಶೇಕಡಾ 8.6 ರಷ್ಟಿದೆ. ಮುಸ್ಲಿಮರು ಶೇಕಡಾ 14ರಷ್ಟಿದ್ದರೆ, 2007ರಲ್ಲಿ ರಾಷ್ಟ್ರೀಯ ಮಾದರಿ ಸಮೀಕ್ಷಾ ಸಂಸ್ಥೆ (ಎನ್‍ಎಸ್‍ಎಸ್‍ಒ) ನಡೆಸಿದ ಸಮೀಕ್ಷೆಯ ಪ್ರಕಾರ ಒಬಿಸಿ ಜನಸಂಖ್ಯೆ ಶೇಕಡಾ 41ರಷ್ಟಿದೆ. ಈ ಪ್ರಾತಿನಿಧ್ಯಕ್ಕೆ ತಕ್ಕ ಹಾಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ರಾಜಕೀಯ ಪಕ್ಷವೊಂದು ಪ್ರಾತಿನಿಧ್ಯ ನೀಡಿದೆಯೇ?

36 ರಾಜ್ಯ ಘಟಕಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಬಿಜೆಪಿ ಅಧ್ಯಕ್ಷರಲ್ಲಿ ಯಾರೂ ದಲಿತರಿಲ್ಲ. ಏಳು ಮಂದಿ ಬ್ರಾಹ್ಮಣರು, 17 ಮಂದಿ ಇತರ ಜಾತಿಗಳಿಗೆ ಸೇರಿದವರು, ಆರು ಮಂದಿ ಎಸ್‍ಟಿಗಳು, ಐದು ಮಂದಿ ಒಬಿಸಿಗಳು ಮತ್ತು ಒಬ್ಬರು ಮುಸ್ಲಿಂ. ಇದರಲ್ಲಿ ಶೇಕಡಾ 66 ಕ್ಕಿಂತ ಹೆಚ್ಚು ಜನರು ಮೇಲ್ಜಾತಿಯವರು. ಜಿಲ್ಲಾ ಮಟ್ಟದಲ್ಲಿಯೂ ಸಹ, ಪಕ್ಷದ ಅಧ್ಯಕ್ಷರಲ್ಲಿ 65 ಪ್ರತಿಶತ ಜನರು ಮೇಲ್ಜಾತಿಯವರಾಗಿದ್ದು, ಅವರಲ್ಲಿ ನಾಲ್ಕನೇ ಒಂದು ಭಾಗದಷ್ಟು ಬ್ರಾಹ್ಮಣರಾಗಿದ್ದಾರೆ. ಬಿಜೆಪಿಯಲ್ಲಿ 752 ಜಿಲ್ಲಾಧ್ಯಕ್ಷರು ಇರಬೇಕಿದ್ದರೆ, ಮೂರು ಹುದ್ದೆಗಳು ಖಾಲಿ ಇರುವುದರಿಂದ 746 ಕ್ಕೆ ದತ್ತಾಂಶಗಳು ಲಭ್ಯವಿದ್ದು, ಮೂವರು ಜಿಲ್ಲಾಧ್ಯಕ್ಷರ ಜಾತಿಗಳು ಸ್ಪಷ್ಟವಾಗಿಲ್ಲ. ಈ ಪೈಕಿ 487 ಮೇಲ್ಜಾತಿಯವರಾಗಿದ್ದರೆ, ಶೇಕಡಾ 25 ರಷ್ಟು ಒಬಿಸಿ, ಬಿ.ಸಿ, ಎಂಬಿಸಿ ವರ್ಗಗಳಿಗೆ ಸೇರಿದವರಾಗಿದ್ದಾರೆ. ಶೇಕಡಾ 4 ಕ್ಕಿಂತ ಕಡಿಮೆ ಎಸ್‍ಸಿಗಳು. ಶೇಕಡಾ 2 ರಷ್ಟು ಸಹ ಅಲ್ಪಸಂಖ್ಯಾತ ಸಮುದಾಯಗಳಿಂದ ಬಂದವರಿಲ್ಲ. ಇವುಗಳಲ್ಲಿ ಯಾವುದೂ ಜನಸಂಖ್ಯೆಯನ್ನಾಧರಿಸಿದ ಪಾಲುದಾರಿಕೆಯಿಲ್ಲ.

Photo Courtesy: The Print

ಬಿಜೆಪಿಯ 50 ರಾಷ್ಟ್ರೀಯ ಪದಾಧಿಕಾರಿಗಳಲ್ಲಿ 17 ಮಂದಿ ಬ್ರಾಹ್ಮಣರು, 21 ಮಂದಿ ಇತರ ಮುಂದುವರಿದ ಬಲಾಢ್ಯ ಜಾತಿ, ನಾಲ್ಕು ಒಬಿಸಿಗಳು, ಮೂವರು ಪರಿಶಿಷ್ಟ ಜಾತಿ, ಇಬ್ಬರು ಪರಿಶಿಷ್ಟ ಪಂಗಡ, ಇಬ್ಬರು ಮುಸ್ಲಿಂ ಸಮುದಾಯದವರು, ಮತ್ತು ಒಬ್ಬರು ಸಿಖ್. ಬಿಜೆಪಿಯ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸ್ಥಾನದಲ್ಲಿ ಅಲ್ಪಸಂಖ್ಯಾತರ ಕನಿಷ್ಠ ಪ್ರಾತಿನಿಧ್ಯ ಇದೆ: ಮೂವರು ದಲಿತರಲ್ಲಿ ಒಬ್ಬರು ಪಕ್ಷದ ಎಸ್‍ಸಿ ಮೋರ್ಚಾದ ಮುಖ್ಯಸ್ಥರಾಗಿದ್ದರೆ, ಇಬ್ಬರು ಮುಸ್ಲಿಮರಲ್ಲಿ ಒಬ್ಬರು ಅಲ್ಪಸಂಖ್ಯಾತ ಮೋರ್ಚಾದ ಮುಖ್ಯಸ್ಥರಾಗಿದ್ದಾರೆ. ಬುಡಕಟ್ಟು ಪ್ರತಿನಿಧಿಗಳ ವಿಷಯದಲ್ಲಿ ಇದು ಇನ್ನೂ ಕೆಟ್ಟದಾಗಿದೆ, ಏಕೆಂದರೆ ಒಬ್ಬರು ಪಕ್ಷದ ಎಸ್‍ಟಿ ಮೋರ್ಚಾದ ಮುಖ್ಯಸ್ಥರಾಗಿದ್ದರೆ, ಇನ್ನೊಬ್ಬರು ಮಧ್ಯಪ್ರದೇಶದ ಜ್ಯೋತಿ ಧ್ರುವೆ. ರಾಜ್ಯ ಸರ್ಕಾರ ಆಕೆಯ ಎಸ್‍ಟಿ ಪ್ರಮಾಣಪತ್ರವನ್ನು ರದ್ದುಪಡಿಸಿದೆ. ಈ ವಿಷಯ ಇನ್ನೂ ನ್ಯಾಯಾಲಯದಲ್ಲಿದೆ. ಪರಿಣಾಮ, ಪಕ್ಷದ ರಾಷ್ಟ್ರೀಯ ಪದಾಧಿಕಾರಿಗಳಲ್ಲಿ ಶೇಕಡಾ 76 ರಷ್ಟು ಮೇಲ್ಜಾತಿಯವರಾಗಿದ್ದರೆ, ಕೇವಲ ಶೇ.8ರಷ್ಟು ಮಾತ್ರ ಒಬಿಸಿ ಮತ್ತು ಶೇ.6ರಷ್ಟು ಎಸ್‍ಸಿ. ಇನ್ನು ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿರುವ 97 ಸದಸ್ಯರಲ್ಲಿ 29 ಮಂದಿ ಬ್ರಾಹ್ಮಣರು, 37 ಮಂದಿ ಇತರ ಮೇಲ್ಜಾತಿಯವರು, 18 ಮಂದಿ ಒಬಿಸಿಗಳು ಅಥವಾ ಬಿ.ಸಿ.ಗಳು, ಏಳು ಮಂದಿ ಪರಿಶಿಷ್ಟ ಜಾತಿ, ಮೂವರು ಅಲ್ಪಸಂಖ್ಯಾತ ಸಮುದಾಯಗಳು, ಒಬ್ಬರು ಸಿಖ್ ಮತ್ತು ಒಬ್ಬರು ಎಸ್.ಟಿ. ಪರಿಣಾಮವಾಗಿ, ಶೇಕಡಾ 69 ರಷ್ಟು ಜನರು ಮುಂದುವರಿದ ಜಾತಿಗಳಿಂದ ಬಂದವರು ಮತ್ತು ಕೇವಲ 27 ಪ್ರತಿಶತದಷ್ಟು ಜನರು ಇತರ ಸಮುದಾಯಗಳಿಂದ ಬಂದವರು.

2018 ರಲ್ಲಿ `ದಿ ಪ್ರಿಂಟ್’ ಪತ್ರಿಕೆ ಮಾಡಿರುವ ಈ ಸರ್ವೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಈ ದೇಶದ ದಲಿತರು, ದಮನಿತರು, ಬುಡಕಟ್ಟು ಅಲೆಮಾರಿಗಳು, ಅಲ್ಪಸಂಖ್ಯಾತರನ್ನು ಬಹಳ ಪೂರ್ವಯೋಜಿತವಾಗಿ ಒಂದು ಪ್ರಭಾವಿ ರಾಜಕೀಯ ಪಕ್ಷ ದೂರ ಇಡಲಾಗಿರುವುದು ಕಣ್ಣಿಗೆ ರಾಚುವಂತೆ ಕಾಣುತ್ತದೆ. ದೇಶವನ್ನು ಆಳುವ ರಾಜಕೀಯ ಪಕ್ಷವೊಂದು ತನ್ನ ಆಂತರಿಕ ಆಡಳಿತದಲ್ಲಿ ಹೀಗೆ ಎಸ್‍ಸಿ/ಎಸ್‍ಟಿ/ಒಬಿಸಿ/ಅಲ್ಪಸಂಖ್ಯಾತ/ಮಹಿಳಾ ಪ್ರಾತಿನಿಧ್ಯವನ್ನು ಕಡಿತಗೊಳಿಸಿದರೆ, ಈ ಪಕ್ಷದ ಆಡಳಿತವಿರುವ ಸರಕಾರದ ಆದ್ಯತೆಯೇನು ಎಂದು ಬಿಡಿಸಿ ಹೇಳುವ ಅಗತ್ಯವಿಲ್ಲ. ನಮ್ಮ ಸಂವಿಧಾನಬದ್ಧ ಪಾಲನ್ನೆ ಇಲ್ಲವಾಗಿಸುತ್ತಿರುವ ಈ ಬಿಜೆಪಿಗರು ಮೀಸಲಾತಿ, ಒಳ ಮೀಸಲಾತಿ ನೀಡುವರೆ ಎಂಬುದು ಪ್ರಶ್ನೆಯಾಗಿದೆ.


ಇದನ್ನೂ ಓದಿ: ಒಳಮೀಸಲಾತಿಯ ಕುರಿತು ಡಾ. ಬಿ.ಆರ್. ಅಂಬೇಡ್ಕರ್‌ರವರ ಆಶಯ ಎನು? – ಡಾ.ನರಸಿಂಹ ಗುಂಜಹಳ್ಳಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದಲಿತ ವಿದ್ಯಾರ್ಥಿನಿ ಕೊಲೆ ಪ್ರಕರಣ: ಪ್ರತಿಭಟನಾಕಾರರ ಮೇಲೆ ಪೊಲೀಸ್ ಲಾಠಿಚಾರ್ಜ್; ಯೋಗಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ

ನವದೆಹಲಿ: ಜುಲೈ 8 ರಂದು ಮೀರತ್‌ನಲ್ಲಿ ನಡೆದ ದಲಿತ ವಿದ್ಯಾರ್ಥಿನಿಯ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ದಲಿತ ಕಾರ್ಯಕರ್ತರು ಮತ್ತು ಮೃತರ ಕುಟುಂಬ ಸದಸ್ಯರ ಮೇಲೆ ಉತ್ತರ ಪ್ರದೇಶ ಪೊಲೀಸರು ಭೀಕರ ಹಲ್ಲೆ,...

ಒಮಾನ್ ಕರಾವಳಿಯಲ್ಲಿ ಮತ್ತೊಂದು ಹಡಗಿನ ಮೇಲೆ ದಾಳಿ: ಭಾರತೀಯ ಪ್ರಜೆ ನಾಪತ್ತೆ, 10 ಜನರ ರಕ್ಷಣೆ: ವಿದೇಶಾಂಗ ಸಚಿವಾಲಯ ಮಾಹಿತಿ

ನವದೆಹಲಿ: ಜುಲೈ 12 ರಂದು ಒಮಾನ್ ಕರಾವಳಿಯ ಅಂತರರಾಷ್ಟ್ರೀಯ ಜಲಮಾರ್ಗದಲ್ಲಿ ಸಾಗುತ್ತಿದ್ದ ‘ಜಿಎಫ್‌ಎಸ್ ಗ್ಯಾಲಕ್ಸಿ’ (GFS Galaxy) ಎಂಬ ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಯನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ. ಭೀಕರ...

SIR ಪ್ರಕ್ರಿಯೆಯಲ್ಲಿ ಎಐ ಬಳಕೆ, ಭಾರೀ ಪ್ರಮಾಣದಲ್ಲಿ ಮತದಾರರ ಹೆಸರು ಡಿಲೀಟ್ : ಕಳವಳ ವ್ಯಕ್ತಪಡಿಸಿದ ವಿಶ್ವಸಂಸ್ಥೆಯ ವಿಶೇಷ ವರದಿಗಾರರು

ಭಾರತೀಯ ಚುನಾವಣಾ ಆಯೋಗ (ಇಸಿಐ) ಕೈಗೊಂಡ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು (ಎಸ್‌ಐಆರ್) ವ್ಯಾಪಕ ಪ್ರಮಾಣದಲ್ಲಿ ಮತದಾರರ ಹೆಸರುಗಳ ಅಳಿಸುವಿಕೆಗೆ ಕಾರಣವಾಗಿದೆ ಮತ್ತು ಇದು ಮುಸ್ಲಿಮರು ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯಗಳ...

ಮಹಾರಾಷ್ಟ್ರ: ನಂದೂರ್ಬಾರ್‌ನ ಸರ್ಕಾರಿ ಹಾಸ್ಟೆಲ್‌ನಲ್ಲಿ ಕಲುಷಿತ ಆಹಾರ ಸೇವಿಸಿ 40 ವಿದ್ಯಾರ್ಥಿಗಳು ಅಸ್ವಸ್ಥ; ತೀವ್ರಗೊಂಡ ತನಿಖೆ 

ನಂದೂರ್ಬಾರ್ (ಮಹಾರಾಷ್ಟ್ರ): ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯ ಶಹಾಡಾ ತಾಲೂಕಿನಲ್ಲಿರುವ ಸರ್ಕಾರಿ ಸಮಾಜ ಕಲ್ಯಾಣ ಇಲಾಖೆಯ ವಸತಿನಿಲಯದಲ್ಲಿ ಶಂಕಿತ ವಿಷಪೂರಿತ ಆಹಾರ ಸೇವಿಸಿ ಸುಮಾರು 40 ವಿದ್ಯಾರ್ಥಿಗಳು ತೀವ್ರವಾಗಿ ಅಸ್ವಸ್ಥಗೊಂಡಿರುವ ಕಳವಳಕಾರಿ ಘಟನೆ ವರದಿಯಾಗಿದೆ.  ಹಾಸ್ಟೆಲ್‌ನಲ್ಲಿ...

ಇರಾನ್‌ನ 140 ಸ್ಥಳಗಳನ್ನು ಗುರಿಯಾಗಿಸಿ ಅಮೆರಿಕದಿಂದ ದಾಳಿ : ಬಹ್ರೇನ್, ಕತಾರ್, ಯುಎಇ ಮೇಲೆ ಇರಾನ್‌ನಿಂದ ಪ್ರತಿದಾಳಿ

ಹಾರ್ಮುಝ್ ಜಲಸಂಧಿಯಲ್ಲಿ ಇರಾನ್ ನಡೆಸಿದ ದಾಳಿಯಿಂದಾಗಿ ಸರಕು ಸಾಗಣೆ ಹಡಗೊಂದು ಹೊತ್ತಿ ಉರಿದು, ಅದರಲ್ಲಿದ್ದ ಸಿಬ್ಬಂದಿ ಹಡಗು ಬಿಟ್ಟು ಹೊರಡುವಂತಾಗಿತ್ತು. ಈ ಘಟನೆಯನ್ನು ಖಂಡಿಸಿ ಅಮೆರಿಕ ಭಾನುವಾರ (ಜು.12) ಮುಂಜಾನೆ ಇರಾನ್ ಮೇಲೆ...

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...