ಎರಡನೇ ಮಗುವೂ ಹೆಣ್ಣಾಗಿ ಹುಟ್ಟಿದ್ದಕ್ಕೆ ಅಸಮಾಧಾನಗೊಂಡ 30 ವರ್ಷದ ಮಹಿಳೆ ಶನಿವಾರ ತನ್ನ ಹಿರಿಯ ಮಗಳನ್ನು (4) ಸ್ನಾನಗೃಹದ ಗೋಡೆಗೆ ಬಡಿದು ಕೊಂದಿದಿರುವ ಭೀಕರ ಘಟನೆ ನಡೆದಿದ್ದು, ಮಹಿಳೆ ಬಿಹಾರ ಮೂಲದ ವಲಸೆ ಕಾರ್ಮಿಕನ ಪತ್ನಿ ಎಂದು ಪೊಲೀಸರು ಹೇಳಿದರು.
“ಸಲೀಮ್ ತಬ್ರಿ ಪ್ರದೇಶದ ನವನೀತ್ ನಗರದಲ್ಲಿರುವ ತನ್ನ ಮನೆಯಲ್ಲಿಯೇ ತನ್ನ 4 ವರ್ಷದ ಮಗಳನ್ನು ಗೋಡೆಗೆ ಬಡಿದು ಕೊಂದಿದ್ದಾಳೆ. ಟಿಂಕು ಯಾದವ್ ಪತ್ನಿ ಪ್ರಿಯಾಂಕಾ, ಎರಡು ತಿಂಗಳ ಹಿಂದೆ ಎರಡನೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಗಂಡು ಮಗು ಜನಿಸದ ಕಾರಣಕ್ಕೆ ಆಕೆ ಅಸಮಾಧಾನಗೊಂಡಿದ್ದಳು” ಎಂದು ಇನ್ಸ್‌ಪೆಕ್ಟರ್ ಗೋಪಾಲ್ ಕ್ರಿಶನ್ ಹೇಳಿದ್ದಾರೆ.
ಇದನ್ನೂ ಓದಿ: ಸಿಎಂ ಮಗ ವಿಜಯೇಂದ್ರ ಮೇಲೆ FIR ದಾಖಲಿಸದ ಇನ್ಸ್‌ಪೆಕ್ಟರ್ ವಿರುದ್ದ ನ್ಯಾಯಾಲಯದಲ್ಲಿ ದೂರು
ಸ್ನಾನ ಮಾಡಿಸುವುದಕ್ಕಾಗಿ ತನ್ನ ಹಿರಿಯ ಮಗಳನ್ನು ಕರೆದೊಯ್ದಳು. ಆದರೆ ಇದ್ದಕ್ಕಿದ್ದಂತೆ ಮಗುಳನ್ನು ಗೋಡೆ ಮತ್ತು ನೆಲಕ್ಕೆ ಬಡಿಯಲು ಪ್ರಾರಂಭಿಸಿದ್ದಾಳೆ. ಆಗ ತಲೆಗೆ ಮಾರಣಾಂತಿಕವಾಗಿ ಪೆಟ್ಟುಬಿದ್ದು, ದರ್ಪನ್ ಎನ್ನುವ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ.
ಮಹಿಳೆಯನ್ನು ಬಂಧಿಸಿ ಕೊಲೆ ಆರೋಪ ಹೊರಿಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಭಾಗೀರಥ್ ಮೀನಾ ತಿಳಿಸಿದ್ದಾರೆ.
ಇದನ್ನೂ ಓದಿ: ನರೇಗಾ: ವಲಸೆ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ?


