ಆಶ್ಚರ್ಯವಾದರೂ ನಂಬಲೇಬೇಕಾದ ವಿಷಯವಿದು. ಬಾಲಿವುಡ್ ಸ್ಟಾರ್ ದೀಪಿಕಾ ಪಡುಕೋಣೆ ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ಹಳ್ಳಿಯೊಂದರಲ್ಲಿ ನರೇಗಾ ವಲಸೆ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದು, ಅವರ ಛಾಯಾಚಿತ್ರವನ್ನು ಹೊಂದಿರುವ ಉದ್ಯೋಗಖಾತ್ರಿ ಯೋಜನೆಯ (MNREGA) ಜಾಬ್ ಕಾರ್ಡ್‌ಗಳು ಆನ್‌ಲೈನ್‌ನಲ್ಲಿ ಪತ್ತೆಯಾಗಿವೆ.

ಮಧ್ಯಪ್ರದೇಶ ಸರಕಾರದ ನರೇಗಾ ದಾಖಲೆಗಳಲ್ಲಿ ಬಾಲಿವುಡ್ ನಟಿಯರಾದ ದೀಪಿಕಾ ಪಡುಕೋಣೆ ಹಾಗೂ ಜಾಕ್ವೆಲಿನ್ ಫರ್ನಾಂಡಿಸ್ ಅವರ ಭಾವ ಚಿತ್ರಗಳು ಸೇರಿಕೊಂಡಿವೆ. ಈ ದಾಖಲೆಗಳ ಪ್ರಕಾರ ಖಾರ್ಗೋನ್ ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ (MNREGA) ಕೆಲಸ ಮಾಡುತ್ತಿದ್ದು ಜೂನ್ ಮತ್ತು ಜುಲೈ ತಿಂಗಳ ವೇತನ ಕೂಡ ಅವರಿಗೆ ಸಂದಾಯವಾಗಿದೆ ಎಂದು ದಾಖಲೆಗಳು ಹೇಳುತ್ತವೆ.

ಇದನ್ನೂ ಓದಿ: ಜಿಗ್ನೇಶ್ ಮೇವಾನಿ ಸಂಘಟನೆಯ ನೇತೃತ್ವದಲ್ಲಿ ಬಾಲಕಿಯರಿಗೆ ಸ್ವರಕ್ಷಣಾ ತರಬೇತಿ

ಝಿರ್ನಿಯಾ ಪಂಚಾಯತ್‌ನ ಕುಗ್ರಾಮವಾದ ಪೀರ್ಪಖೇಡಾ ನಾಕ ಎಂಬಲ್ಲಿ ಕನಿಷ್ಠ 11 ನರೇಗಾ ಫಲಾನುಭವಿಗಳ ಉದ್ಯೋಗ ಕಾರ್ಡ್‌ಗಳಲ್ಲಿ ಬಾಲಿವುಡ್ ನಟಿಯರ ಚಿತ್ರಗಳಿದ್ದು, ಇವು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಕೂಡ ಆಗಿವೆ. ಮಹಿಳೆಯರ ಉದ್ಯೋಗ ಕಾರ್ಡ್ ಮಾತ್ರವಲ್ಲದೆ, ಪುರುಷರ ಉದ್ಯೋಗ ಕಾರ್ಡ್ ಗಳಲ್ಲಿ ದೀಪಿಕಾ ಮತ್ತು ಜಾಕ್ವೆಲಿನ್ ಅವರ ಚಿತ್ರಗಳಿವೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಈ ಕಾರ್ಡ್‌ಗಳನ್ನು ಹೇಗೆ ಮುದ್ರಿಸಲಾಗಿದೆ ಮತ್ತು ಹೇಗೆ ವೇತನವನ್ನು ಬಿಡುಗಡೆ ಮಾಡಲಾಗಿದೆ ಎಂಬ ಬಗ್ಗೆ ತನಿಖೆ ಮಾಡಲಾಗುವುದು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯತ್ ಸಿಇಒ ಗೌರವ್ ಬನಾಲ್ ಹೇಳಿದ್ದಾರೆ.

ಹೀಗೆ ನೂರಾರು ಜನರ ಹೆಸರಿನಲ್ಲಿ ಸುಳ್ಳು ಜಾಬ್‌ಕಾರ್ಡ್‌ಗಳನ್ನು ಮಾಡಿ, ಅವರ ಹೆಸರಿನಲ್ಲಿ ವೇತನವೂ ಪಾವತಿಯಾಗಿದೆ. ಮೇಲು ನೋಟಕ್ಕೆ ಇದು ತಮಾಶೆಯಾಗಿ ಕಂಡುಬಂದರೂ ಇದರ ಹಿಂದೆ ದೊಡ್ಡ ಹಗರಣವೊಂದಿದೆ ಎಂಬುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ.

ಇತ್ತೀಚೆಗೆ ಗುಜರಾತ್‌ನಲ್ಲಿಯೂ ಇಂತಹ ಹಗರಣವನ್ನು ಜಿಗ್ನೇಶ್ ಮೇವಾನಿ ಬಯಲಿಗೆಳೆದಿದ್ದರು.


ಇದನ್ನೂ ಓದಿ: ಸಮುದಾಯಗಳ ನಡುವೆ ದ್ವೇಷ ಬಿತ್ತುವ ಆರೋಪ: ಕಂಗನಾ ವಿರುದ್ಧ FIR ದಾಖಲಿಸಲು ಕೋರ್ಟ್ ಸೂಚನೆ

Donate

ಈ ಲೇಖನ, ಈ ವೆಬ್‌ಸೈಟ್ ನಿಮಗೆ ಇಷ್ಟವಾಯಿತೇ? ನಿಮ್ಮ ಬೆಂಬಲ ಇದಕ್ಕೆ ಅಗತ್ಯ.

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

+ posts

LEAVE A REPLY

Please enter your comment!
Please enter your name here