ಗೋರೆಕುಂಟಾ ಗ್ರಾಮದಲ್ಲಿ ಪಶ್ಚಿಮ ಬಂಗಾಳ ಮತ್ತು ತ್ರಿಪುರಕ್ಕೆ ಸೇರಿದ ಒಂಬತ್ತು ವಲಸೆ ಕಾರ್ಮಿಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಾರಂಗಲ್ ನ್ಯಾಯಾಲಯ ಅಪರಾಧಿಗೆ ಮರಣದಂಡನೆ ವಿಧಿಸಿದೆ. ಬಿಹಾರದ ಬೆಗುಸರಾಯ್ ಜಿಲ್ಲೆಯ ನೂರ್ಪುರ್ ಗ್ರಾಮದ ಸಂಜಯ್ ಕುಮಾರ್ ಯಾದವ್ ಎಂಬ 24 ವರ್ಷದ ಯುವಕ ಮೇ 21 ರಂದು ವಾರಂಗಲ್ ಗ್ರಾಮೀಣ ಜಿಲ್ಲೆಯ ಗೀಸುಗೊಂಡ ಮಂಡಲದಲ್ಲಿ 9 ಮಂದಿ ವಲಸೆ ಕಾರ್ಮಿಕರನ್ನು ಹತ್ಯೆ ಮಾಡಿದ್ದರು.
ವಾರಂಗಲ್ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಕೆ.ಜಯಕುಮಾರ್ ಅಪರಾಧಿ ಸಂಜಯ್ ಕುಮಾರ್ ಯಾದವ್‌ರನ್ನು ಗಲ್ಲಿಗೇರಿಸಬೇಕು ಎಂದು ತೀರ್ಪು ನೀಡಿದ್ದಾರೆ. ಗೋರೆಕುಂಟಾದ ಗೋಣಿ ಚೀಲ ಉತ್ಪಾದನಾ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಳದ 56 ವರ್ಷದ ಮಸೂದ್ ಆಲಂ ಅವರ ಇಡೀ ಕುಟುಂಬವನ್ನು ಯಾದವ್ ಕೊಂದಿದ್ದ.
ಯಾದವ್ ಈ ಹಿಂದೆ ಆಂಧ್ರಪ್ರದೇಶದಲ್ಲಿ ಆಲಂ ಕುಟುಂಬಕ್ಕೆ ಸೇರಿದ ಮಹಿಳೆಯೊಬ್ಬರನ್ನು ಕೊಲೆ ಮಾಡಿದ್ದರು. ನಂತರ ಆಕೆಯ ಹತ್ಯೆಯನ್ನು ಮುಚ್ಚಿಹಾಕಲು ಆಲಂ ಮತ್ತು ಅವನ ಕುಟುಂಬದ ಇತರ ಐದು ಸದಸ್ಯರನ್ನು ಕೊಲೆ ಮಾಡಿದ್ದಾರೆ.
ಮೃತ ಆಲಂ ಅವರ ಹೆಂಡತಿ, ಮಗಳು, ಇಬ್ಬರು ಗಂಡು ಮತ್ತು ಮೊಮ್ಮಗಳ ಜೊತೆಗೆ ಕುಟುಂಬಕ್ಕೆ ಸಂಬಂಧವಿಲ್ಲದ ಬಿಹಾರ ಮತ್ತು ಒಬ್ಬರು ತ್ರಿಪುರದ ಇಬ್ಬರು ವಲಸೆ ಕಾರ್ಮಿಕರನ್ನು ಕೊಲೆ ಮಾಡಿದ್ದನು.
ಇದನ್ನೂ ಓದಿ: #MigrantLivesStillMatter: ವಲಸೆ ಕಾರ್ಮಿಕರ ಗೋಳು ಕೇಳಿ – ಟ್ವಿಟ್ಟರ್ ಅಭಿಯಾನ
ಅಪರಾಧಿ ಯಾದವ್ ಗೋಣಿ ಚೀಲಗಳ ಉತ್ಪಾದನಾ ಘಟಕದಲ್ಲಿ ನಡೆಯುತ್ತಿದ್ದ ಆಲಂ ಅವರ ಹುಟ್ಟುಹಬ್ಬದ ಸಂತೋಷಕೂಟದಲ್ಲಿ ಪಾಲ್ಗೊಂಡಿದ್ದರು. ಆತ ಊಟದಲ್ಲಿ ನಿದ್ರೆ ಮಾತ್ರೆಗಳನ್ನು ಬೆರೆಸಿ, ಎಲ್ಲರೂ ಪ್ರಜ್ಞೆ ತಪ್ಪಿದ ಬಳಿಕ ಒಬ್ಬೊಬ್ಬರನ್ನೇ ಬಾವಿಗೆ ಎಸೆದಿದ್ದರು. ಇದರಲ್ಲಿ ಆಲಂ ಕುಟುಂಬದ ಜೊತೆಗೆ ಇಬ್ಬರು ಕಾರ್ಮಿಕರು ಇದ್ದರು.
ಪೊಲೀಸರು ಜುಲೈ 28 ರಂದು ಚಾರ್ಜ್‌ಶೀಟ್ ಸಲ್ಲಿಸಿದ್ದರೆ, ನ್ಯಾಯಾಂಗ ಅಧಿಕಾರಿಗಳು ಸೆಪ್ಟೆಂಬರ್ 21 ರಂದು ವಿಚಾರಣೆಯನ್ನು ಪ್ರಾರಂಭಿಸಿದರು. 48 ದಿನಗಳಲ್ಲಿ ಪ್ರಕರಣವನ್ನು ತಾರ್ಕಿಕ ತೀರ್ಮಾನಕ್ಕೆ ತರಲಾಯಿತು. ಪೊಲೀಸರು ಸೆಕ್ಷನ್ ಐಪಿಸಿ 449, 328, 380, 404, 302 ಮತ್ತು 366 ಸಿಆರ್‌ಪಿಸಿ ಮತ್ತು 425 ಸಿಆರ್‌ಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.
ಈ ಪ್ರಕರಣದಲ್ಲಿ ಅಂತಿಮ ತೀರ್ಪಿಗಾಗಿ ನ್ಯಾಯಾಲಯದ ಆವರಣದಲ್ಲಿ ಹಲವಾರು ಮಂದಿ ಜಮಾಯಿಸಿದ್ದರು. ನ್ಯಾಯಾಲಯವು ಮರಣದಂಡನೆ ವಿಧಿಸಿದ ವಿಷಯ ತಿಳಿದು ಹರ್ಷ ವ್ಯಕ್ತಪಡಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ವಾರಂಗಲ್ ಪೊಲೀಸರ ಶ್ರಮ ನಿಜಕ್ಕೂ ಪ್ರಶಂಸನೀಯ. ಪೊಲೀಸರು 67ಕ್ಕೂ ಹೆಚ್ಚು ಸಾಕ್ಷಿಗಳನ್ನು ಒಟ್ಟುಗೂಡಿಸಿದರು. ಎಲ್ಲಾ ಸಾಕ್ಷಿಗಳನ್ನು ವೈಜ್ಞಾನಿಕ ರೀತಿಯಲ್ಲಿ ಸಂಗ್ರಹಿಸಿದ್ದರು. ಮರಣೋತ್ತರ ಪರೀಕ್ಷೆ ವರದಿಗಳು ಮತ್ತು ವಿಧಿವಿಜ್ಞಾನ ವರದಿಗಳು ಮತ್ತು ವೈಜ್ಞಾನಿಕ ಪುರಾವೆಗಳು ಯಾವುದನ್ನು ಪೊಲೀಸರು ಬಿಟ್ಟಿರಲಿಲ್ಲ. ಇದರಿಂದಾಗಿ ಅಪರಾಧಿ ಕಾನೂನಿನ ಪ್ರಕಾರ ಗರಿಷ್ಠ ಶಿಕ್ಷೆ ಸಾಧ್ಯವಾಗಿದೆ.


