Homeಕರೋನಾ ತಲ್ಲಣಅಂತಾರಾಷ್ಟ್ರೀಯ ವಿಮಾನಯಾನಕ್ಕೆ ನ.30ರವರೆಗೆ ನಿರ್ಬಂಧ ವಿಸ್ತರಣೆ

ಅಂತಾರಾಷ್ಟ್ರೀಯ ವಿಮಾನಯಾನಕ್ಕೆ ನ.30ರವರೆಗೆ ನಿರ್ಬಂಧ ವಿಸ್ತರಣೆ

- Advertisement -
- Advertisement -

ಕೊರೊನಾ ಸಾಂಕ್ರಾಮಿಕ ರೋಗದ ಸೋಂಕು ಹರಡುತ್ತಿರುವ ಹಿನ್ನೆಲೆ, ಸೋಂಕು ನಿಯಂತ್ರಣಕ್ಕೆ ಅಂತಾರಾಷ್ಟ್ರೀಯ ವಿಮಾನಯಾನದ ಮೇಲೆ ವಿಧಿಸಿರುವ ನಿರ್ಬಂಧ ನವೆಂಬರ್‌ 30ರವರೆಗೆ ವಿಸ್ತರಿಸಲಾಗಿದೆ. ಈ ಕುರಿತು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಬುಧವಾರ ದೃಢಪಡಿಸಿದೆ.

MHA ಮತ್ತು DGCA ಅನುಮೋದಿಸಿದ ಅಂತಾರಾಷ್ಟ್ರೀಯ ಪ್ರಯಾಣಿಕರ ವಿಮಾನಗಳ ಕಾರ್ಯನಿರ್ವಹಣೆ ಮುಂದುವರಿಯುತ್ತವೆ ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ. ಜೊತೆಗೆ ಅಂತಾರಾಷ್ಟ್ರೀಯ ಸರಕು ಸಾಗಣೆ ವಿಮಾನಗಳಿಗೆನಿರ್ಬಂಧಗಳು ಅನ್ವಯಿಸುವುದಿಲ್ಲ ಎಂದು ಡಿಜಿಸಿಎ ತಿಳಿಸಿದೆ.

ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಕಳೆದ ಮಾರ್ಚ್ 23ರಿಂದ ಅಂತಾರಾಷ್ಟ್ರೀಯ ವಿಮಾನ ಯಾನವನ್ನು ನಿಷೇಧಿಸಲಾಗಿದೆ. ಆದರೆ ಮೇ ತಿಂಗಳಿನಿಂದ ವಂದೇ ಭಾರತ್ ಮಿಷನ್ ಅಡಿಯಲ್ಲಿ ವಿಶೇಷ ಅಂತಾರಾಷ್ಟ್ರೀಯ ವಿಮಾನಗಳು ಕಾರ್ಯನಿರ್ವಹಿಸುತ್ತಿವೆ.

ಕಳೆದ ತಿಂಗಳು ಸಿನೆಮಾ ಮಂದಿರ, ಕ್ರೀಡಾ ತರಬೇತಿಗಾಗಿ ಈಜುಕೊಳಗಳು ಹಾಗೂ ಹಲವು ನಿರ್ಬಂಧಗಳೊಂದಿಗೆ ಸಭೆಗಳಿಗೆ ಅನುಮತಿಸಿದ್ದ ಅನ್‌‌ಲಾಕ್‌‌ 5 ಮಾರ್ಗಸೂಚಿಗಳು, ನವೆಂಬರ್ 30 ರವರೆಗೆ ಮುಂದುವರೆಯುತ್ತದೆ ಎಂದು ಗೃಹ ಸಚಿವಾಲಯ ನಿನ್ನೆ ಆದೇಶಿಸಿದೆ.

“30.09.2020 ರಂದು ಹೊರಡಿಸಲಾದ ಅನ್‌‌ಲಾಕ್‌‌ 5 ಮಾರ್ಗಸೂಚಿಗಳನ್ನು 30.11.2020 ರವರೆಗೆ ಜಾರಿಗೆ ತರಲು ಗೃಹ ಸಚಿವಾಲಯ ಇಂದು ಆದೇಶ ಹೊರಡಿಸಿದೆ” ಎಂದು PIB ಪ್ರಕಟಣೆ ತಿಳಿಸಿತ್ತು.


ಇದನ್ನೂ ಓದಿ: ಮೋದಿಗೆ 8,400 ಕೋಟಿ ರೂ. ವಿಮಾನ; ಸೈನಿಕರಿಗೆ ಬುಲ್ಲೆಟ್‌ಪ್ರೂಫ್ ರಹಿತ ಟ್ರಕ್!: ರಾಹುಲ್ ಗಾಂಧಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...