Homeಮುಖಪುಟವಿದ್ಯಾರ್ಥಿಗಳ ಕನಸು ನನಸಾಗಿಸುವ ಶಾಹೀನ್: ವಿದ್ಯಾರ್ಥಿಗಳ ಮನದಾಳದ ಮಾತು

ವಿದ್ಯಾರ್ಥಿಗಳ ಕನಸು ನನಸಾಗಿಸುವ ಶಾಹೀನ್: ವಿದ್ಯಾರ್ಥಿಗಳ ಮನದಾಳದ ಮಾತು

ಶಾಹೀನ್ ವಿದ್ಯಾಲಯದೊಳಗೆ ಯಾವುದೇ ರೀತಿಯ ಅಸಮಾನತೆ ಇಲ್ಲ. ಅಲ್ಲಿ ದ್ವೇಷದ ಪಾಠವೂ ಕಲಿಸುವುದಿಲ್ಲ. ಬದಲಾಗಿ, ಜಾತ್ಯತೀತ ಮೌಲ್ಯಗಳ ಮೇಲೆ ನಿಂತಿದೆ- ವಿದ್ಯಾರ್ಥಿಗಳು

- Advertisement -
- Advertisement -

ಬೀದರ್ ಶಾಹೀನ್ ಶಿಕ್ಷಣ ಸಮೂಹ ಸಂಸ್ಥೆ ಮತ್ತೊಮ್ಮೆ ಮುನ್ನೆಲೆಯ ಚರ್ಚೆಯಲ್ಲಿದೆ. ಶಾಹೀನ್ ಸಂಸ್ಥೆಯಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳಾದ ಕಾರ್ತಿಕ್ ರೆಡ್ಡಿ ನೀಟ್‌ನಲ್ಲಿ 720 ಅಂಕಗಳಿಗೆ 710 ಅಂಕ ಗಳಿಸಿ ಕರ್ನಾಟಕದ ಟಾಪರ್‌ ಆಗಿದ್ದಲ್ಲದೇ ಅಖಿಲ ಭಾರತ ಮಟ್ಟದಲ್ಲಿ 9ನೇ ರ್‍ಯಾಂಕ್ ಪಡೆದು ಮಿಂಚಿದ್ದಾರೆ. ಅಲ್ಲದೇ ಅರ್ಬಜ್ ಅಹ್ಮದ್ ಎಂಬ ಲಾರಿ ಚಾಲಕನ ಮಗ 700 ಅಂಕಗಳೊಂದಿಗೆ ಕರ್ನಾಟಕದ 3ನೇ ಟಾಪರ್ ಆಗಿ ಹೊರಹೊಮ್ಮಿದ್ದರು.

ಇಂದು ಬೆಂಗಳೂರಿನ ಖಾಸಗಿ ಹೋಟೆಲ್‍ನಲ್ಲಿ ಶಾಹೀನ್ ಶಿಕ್ಷಣ ಸಮೂಹ ಸಂಸ್ಥೆಯ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಟಾಪರ್‌ಗಳು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಸಂಸ್ಥೆಯಲ್ಲಿ ಜಾತ್ಯತೀತ, ಧರ್ಮಾತೀತ ವಾತಾವರಣ ಇದೆ ಎಂದು ನೀಟ್ ಟಾಪರ್‌ ಕಾರ್ತಿಕ್ ರೆಡ್ಡಿ ಅಭಿಪ್ರಾಯಪಟ್ಟರು.

ಶಾಹೀನ್ ವಿದ್ಯಾಲಯದೊಳಗೆ ಯಾವುದೇ ರೀತಿಯ ಅಸಮಾನತೆ ಇಲ್ಲ. ಅಲ್ಲಿ ದ್ವೇಷದ ಪಾಠವೂ ಕಲಿಸುವುದಿಲ್ಲ. ಬದಲಾಗಿ, ಜಾತ್ಯತೀತ ಮೌಲ್ಯಗಳ ಮೇಲೆ ನಿಂತಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ನೀಟ್ ಪರೀಕ್ಷೆಯ ಸಾಧನೆ ಕುರಿತು ಪ್ರತಿಕ್ರಿಯಿಸಿದ ಅವರು, ಲಾಕ್‍ಡೌನ್ ಅವಧಿ ನನಗೆ ಅವಕಾಶವಾಗಿ ಪರಿಣಮಿಸಿತು. ಈ ಅವಧಿಯಲ್ಲಿ ನಿತ್ಯ 10-12 ಗಂಟೆಗಳು ಅಭ್ಯಾಸ ಮಾಡುತ್ತಿದೆ ಎಂದಿದ್ದಾರೆ. ನನ್ನ ಓದಿಗೆ ಶಾಹೀನ್ ಶಿಕ್ಷಣ ಸಂಸ್ಥೆಯ ಶಿಕ್ಷಕರು ಮತ್ತು ಪೋಷಕರ ಮಾರ್ಗದರ್ಶನ ತುಂಬಾ ಸಹಾಯವಾಯಿತು ಎಂದು ಹೇಳಿದರು.

ಇದನ್ನೂ ಓದಿ: CAA ವಿರೋಧಿ ನಾಟಕಕ್ಕೆ ದೇಶದ್ರೋಹದ ಪ್ರಕರಣ ಎದುರಿಸಿದ್ದ ಶಾಹೀನ್ ಸಂಸ್ಥೆ ವಿದ್ಯಾರ್ಥಿ ಕರ್ನಾಟಕ NEET ಟಾಪರ್!

ಇನ್ನು ಶಾಹೀನ್ ಶಿಕ್ಷಣ ಸಂಸ್ಥೆಯ ನೆರವಿನಿಂದ ವೈದ್ಯಕೀಯ ಸೀಟು ಪಡೆದ ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯ ಕುತೆಸ್ರಾ ಗ್ರಾಮದ ಮಹಮ್ಮದ್ ಅನಸ್ ಆರನೇ ಪ್ರಯತ್ನದಲ್ಲಿ ಪ್ರಸಕ್ತ ಸಾಲಿನ ನೀಟ್‍ನಲ್ಲಿ 663 ಅಂಕ (1,876ನೇ ರ್‍ಯಾಂಕ್) ಗಳಿಸಿ ಗಮನ ಸೆಳೆದಿದ್ದಾರೆ.

ರೈತರಾಗಿರುವ ಮಹಮ್ಮದ್ ಕಾಮಿಲ್ ಅವರ ನಾಲ್ಕನೆಯ ಪುತ್ರ ಮಹಮ್ಮದ್ ಅನಸ್, ಕುಟುಂಬದಲ್ಲೇ ವೈದ್ಯಕೀಯ ಕೋರ್ಸ್‍ಗೆ ಪ್ರವೇಶ ಪಡೆಯಲಿರುವವರಲ್ಲಿ ಮೊದಲಿಗರಾಗಿದ್ದಾರೆ. ಉತ್ತರಪ್ರದೇಶದ ವಿದ್ಯಾರ್ಥಿಯೊಬ್ಬರಿಂದ ಮಾಹಿತಿ ಪಡೆದು ನೀಟ್ ತರಬೇತಿಗಾಗಿ ಬೀದರ್‌ನ ಶಾಹೀನ್ ಕಾಲೇಜಿಗೆ ಬಂದೆ. ಇದೆಲ್ಲಾ ಸಾಧ್ಯವಾಗಿದ್ದು ಶಾಹೀನ್‌ನಿಂದ ಎಂದು ಹೆಮ್ಮೆಯಿಂದ ತಿಳಿಸುತ್ತಾರೆ.

ಶಾಹೀನ್‌ ಶಿಕ್ಷಣ ಸಂಸ್ಥೆಯು ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಕನಸು ನನಸಾಗಿಸಲು ಸರ್ವ ಪ್ರಯತ್ನ ನಡೆಸುತ್ತಿದೆ. ಪ್ರಸಕ್ತ ಸಾಲಿನ ನೀಟ್‌ ದೀರ್ಘ ಕಾಲದ ರಿಪೀಟರ್‌ ತರಬೇತಿ ಹಾಗೂ ಇತರ ಕೋರ್ಸ್‌ಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ 5 ಕೋಟಿ ರೂಪಾಯಿ ವಿದ್ಯಾರ್ಥಿ ವೇತನ ಪ್ರಕಟಿಸಿದೆ.

ದೇಶದ ಸಂಸ್ಥೆಯ ಎಲ್ಲ ಶಾಖೆಗಳಲ್ಲೂ ವಿದ್ಯಾರ್ಥಿ ವೇತನ ನೀಡಲಾಗುವುದು. ಕಲ್ಯಾಣ ಕರ್ನಾಟಕದ ಗ್ರಾಮೀಣ ಭಾಗದ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ವಿಶೇಷ ಆದ್ಯತೆ ಕೊಡಲಾಗುವುದು ಎಂದು ಶಾಹೀನ್‌ ಶಿಕ್ಷಣ ಸಮೂಹ ಸಂಸ್ಥೆಯ ಅಧ್ಯಕ್ಷ ಡಾ.ಅಬ್ದುಲ್‌ ಖದೀರ್‌ ತಿಳಿಸಿದ್ದಾರೆ.

ವಿದ್ಯಾರ್ಥಿಗಳು ವೆಬ್‌ಸೈಟ್‌ www.shaheengroup.org ನಲ್ಲಿ ಉಚಿತವಾಗಿ ಹೆಸರು ನೋಂದಾಯಿಸಿ ವಿದ್ಯಾರ್ಥಿ ವೇತನದ ಲಾಭ ಪಡೆದುಕೊಳ್ಳಬಹುದು. 32 ವರ್ಷಗಳ ಹಿಂದೆ 16 ಮಕ್ಕಳಿಂದ ಆರಂಭವಾಗಿರುವ ಶಾಹೀನ್‌ ಶಿಕ್ಷಣ ಸಂಸ್ಥೆಯಲ್ಲಿ ಇಂದು 17 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.


ಇದನ್ನೂ ಓದಿ: ಶಾಹೀನ್‌ ಶಾಲೆಯಲ್ಲಿ ಸಿಎಎ ವಿರೋಧಿ ನಾಟಕ: ಇದು ದೇಶದ್ರೋಹದ ಪ್ರಕರಣ ಅಲ್ಲ ಎಂದ ಕೋರ್ಟ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಯುಎಸ್ ಮಾನವ ಹಕ್ಕುಗಳ ವರದಿಯಲ್ಲಿ ಮಣಿಪುರ ಹಿಂಸಾಚಾರ, ಹರ್ದೀಪ್ ಸಿಂಗ್‌ ಹತ್ಯೆ ಬಗ್ಗೆ ಉಲ್ಲೇಖ

0
ಯುನೈಟೆಡ್ ಸ್ಟೇಟ್ಸ್ ತನ್ನ 2023ರ ಮಾನವ ಹಕ್ಕುಗಳ ವರದಿಯಲ್ಲಿ ಮಣಿಪುರ ಹಿಂಸಾಚಾರ, BBC ಮೇಲೆ ತೆರಿಗೆ ಅಧಿಕಾರಿಗಳ ದಾಳಿ, ನಡಾದಲ್ಲಿ ಸಿಖ್ ಕಾರ್ಯಕರ್ತ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಂತಹ ಭಾರತಕ್ಕೆ ಸಂಬಂಧಿಸಿದ ಪ್ರಮುಖ...