Homeಮುಖಪುಟ'ಬಾಬಾ ಕಾ ಧಾಬಾ' ವೀಡಿಯೋ ವೈರಲ್: ಸಂಗ್ರಹಿಸಿದ ದೇಣಿಗೆ ಹಣ ದುರುಪಯೋಗ; ದೂರು!

‘ಬಾಬಾ ಕಾ ಧಾಬಾ’ ವೀಡಿಯೋ ವೈರಲ್: ಸಂಗ್ರಹಿಸಿದ ದೇಣಿಗೆ ಹಣ ದುರುಪಯೋಗ; ದೂರು!

ಗೌರವ್ ವಾಸನ್ ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಈ ದಂಪತಿಗಳ ಸಂಕಷ್ಟದ ವೀಡಿಯೋವನ್ನು ಹಂಚಿಕೊಂಡಿದ್ದು, ಈ ದಂಪತಿಗೆ ಸಹಾಯ ಮಾಡುವಂತೆ ವಾಸನ್ ಜನರನ್ನು ಕೇಳಿದ್ದರು.

- Advertisement -
- Advertisement -

ಯೂಟ್ಯೂಬರ್ ಗೌರವ್ ವಾಸನ್ ದೇಣಿಗೆ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ದೆಹಲಿಯ ಮಾಲ್ವಿಯಾ ನಗರದ ಜನಪ್ರಿಯ ಉಪಾಹಾರ ಗೃಹ “ಬಾಬಾ ಕಾ ಧಾಬಾ”ದ ಮಾಲೀಕರು ಆರೋಪಿಸಿದ್ದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

“ಮಾಲ್ವಿಯಾ ನಗರ ಪೊಲೀಸ್ ಠಾಣೆಯಲ್ಲಿ ನಾವು ನಿನ್ನೆ ದೂರು ಸ್ವೀಕರಿಸಿದ್ದೇವೆ ಮತ್ತು ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಪ್ರಕರಣದಲ್ಲಿ ಇನ್ನೂ ಯಾವುದೇ ಎಫ್ಐಆರ್ ದಾಖಲಾಗಿಲ್ಲ” ಎಂದು ಉಪ ಪೊಲೀಸ್ ಆಯುಕ್ತ ಅತುಲ್ ಕುಮಾರ್ ಠಾಕೂರ್ ಹೇಳಿದ್ದಾರೆ.

ಲಾಕ್‌ಡೌನ್ ನಂತರ ತನ್ನ ವ್ಯವಹಾರದಲ್ಲಿನ ಕುಸಿತದ ಬಗ್ಗೆ ಕಾಂತಾ ಪ್ರಸಾದ್ ಮತ್ತು ಅವರ ಪತ್ನಿ ಮಾತನಾಡುತ್ತಿರುವ ವೀಡಿಯೋವನ್ನು   ಚಿತ್ರೀಕರಿಸಿದ ನಂತರ, ಗ್ರಾಹಕರ ಕೊರತೆಯಿಂದಾಗಿ ದಂಪತಿಗಳು ತಮ್ಮ ರೆಸ್ಟೋರೆಂಟ್ ನಡೆಸಲು ಕಷ್ಟಪಡುತ್ತಿದ್ದಾರೆ ಎಂಬ ಕಾರಣಕ್ಕೆ ಚಾಲ್ತಿಯಲ್ಲಿದ್ದರು.

ಇದನ್ನೂ ಓದಿ: ಸ್ಟಾರ್ಟ್‌‌ಅಪ್‍: ಮೈಸೂರಿನಲ್ಲಿ ಬಯೋಪಾಲಿಮರ್‌ ಉದ್ಯಮ ಆರಂಭಿಸಿದ ಚೀನಾ ರಿಟರ್ನ್‌ ಗುರುಪ್ರಸಾದ್!

ಗೌರವ್ ವಾಸನ್ ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಈ ವೀಡಿಯೋವನ್ನು ಹಂಚಿಕೊಂಡ ನಂತರ ಇದು ವೈರಲ್ ಆಗಿದೆ. ದಂಪತಿಗೆ ಸಹಾಯ ಮಾಡುವಂತೆ ವಾಸನ್ ಜನರನ್ನು ಕೇಳಿದ್ದರು. ವೈರಲ್ ವೀಡಿಯೊದ ಒಂದು ದಿನದ ನಂತರ, # ಬಾಬಾ ಕಾ ಧಾಬಾ ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್ ಆಗಿತ್ತು.

ಇದನ್ನೂ ಓದಿ: ’ಕನ್ನಡ ಕಂಕಣ ದಿನ’; ಕರ್ನಾಟಕ ರಣಧೀರ ಪಡೆಯಿಂದ ವಿಭಿನ್ನ ರಾಜ್ಯೋತ್ಸವ!

ಕಾಂತಾ ಪ್ರಸಾದ್ ಪೊಲೀಸರಿಗೆ ನೀಡಿದ ದೂರಿನಲ್ಲಿ, “ಉದ್ದೇಶಪೂರ್ವಕವಾಗಿ ಗೌರವ್ ವಾಸನ್ ತನ್ನ ಮತ್ತು ತನ್ನ ಕುಟುಂಬ ಅಥವಾ ತನ್ನ ಸ್ನೇಹಿತರ ಬ್ಯಾಂಕ್ ವಿವರಗಳು ಮತ್ತು ಮೊಬೈಲ್ ಸಂಖ್ಯೆಗಳನ್ನು ದಾನಿಗಳೊಂದಿಗೆ ಹಂಚಿಕೊಂಡಿದ್ದಾನೆ. ಇದರಿಂದ ವಿವಿಧ ರೀತಿಯಲ್ಲಿ ಅಪಾರ ಪ್ರಮಾಣದ ದೇಣಿಗೆ ಸಂಗ್ರಹಿಸಿದ್ದು, ಇದರ ಬಗ್ಗೆ ನನಗೆ ಮಾಹಿತಿ ನೀಡಿಲ್ಲ. ಜೊತೆಗೆ ಹನಕಾಸು ವಹಿವಾಟಿನ ವಿವರಗಳನ್ನು ನೀಡುತ್ತಿಲ್ಲ”  ಎಂದು ಆರೋಪಿಸಿದರು.

“ವಾಸನ್‌ನಿಂದ ಕೇವಲ 2 ಲಕ್ಷ ರೂ.ಗಳ ಚೆಕ್ ಪಡೆದುಕೊಂಡಿದ್ದೇನೆ. ಈಗ ಹೆಚ್ಚಿನ ಗ್ರಾಹಕರು ಬರುತ್ತಿಲ್ಲ. ಬರುವವರೂ ಸೆಲ್ಫಿ ತೆಗೆದುಕೊಳ್ಳಲು ಇಲ್ಲಿಗೆ ಬರುತ್ತಾರೆ. ಈ ಮೊದಲು ನಾನು ದಿನಕ್ಕೆ 10,000 ರೂ. ಗಳಿಸುತ್ತಿದ್ದೆ. ಈಗ ಅದು 3,000 ರೂ. 5,000 ರೂಗಳಿಗೆ ಇಳಿದಿದೆ” ಎಂದು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಹೇಳಿದರು.

ಈ ಆರೋಪಗಳನ್ನು ನಿರಾಕರಿಸಿದ ವಾಸನ್, “ನಾನು ಚಿತ್ರೀಕರಿಸಿದ ಈ ವೀಡಿಯೋ ಇಷ್ಟುಮಟ್ಟಿಗೆ ವೈರಲ್ ಆಗುತ್ತದೆ ಎಂದು ಭಾವಿಸಿರಲಿಲ್ಲ. ಜನರು ಬಾಬಾಗೆ ತೊಂದರೆ ನೀಡಬಾರದು ಎಂಬ ಕಾರಣಕ್ಕೆ ನನ್ನ ಬ್ಯಾಂಕ್ ವಿವರಗಳನ್ನು ಹಂಚಿಕೊಂಡಿದ್ದೆ” ಎಂದು ತಿಳಿಸಿದರು.


ಇದನ್ನೂ ಓದಿ: ’ಕೈ’ಗೆ ಮತ ನೀಡಿ ಎಂದು ಬಿಜೆಪಿ ರ್‍ಯಾಲಿಯಲ್ಲಿ ಸಿಂಧಿಯಾ ಮತ ಯಾಚನೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read