Homeಕರ್ನಾಟಕಸ್ಟಾರ್ಟ್‌‌ಅಪ್‍: ಮೈಸೂರಿನಲ್ಲಿ ಬಯೋಪಾಲಿಮರ್‌ ಉದ್ಯಮ ಆರಂಭಿಸಿದ ಚೀನಾ ರಿಟರ್ನ್‌ ಗುರುಪ್ರಸಾದ್!

ಸ್ಟಾರ್ಟ್‌‌ಅಪ್‍: ಮೈಸೂರಿನಲ್ಲಿ ಬಯೋಪಾಲಿಮರ್‌ ಉದ್ಯಮ ಆರಂಭಿಸಿದ ಚೀನಾ ರಿಟರ್ನ್‌ ಗುರುಪ್ರಸಾದ್!

ಚೀನಾ ವಿವಿಯಲ್ಲಿ ಸಂಶೋಧನೆ ಮಾಡುತ್ತಿದ್ದ ಬಳ್ಳಾರಿ ಮೂಲದ ವಿದ್ಯಾರ್ಥಿ, ಲಾಕ್‌ಡೌನ್‌ ಸಮಯದಲ್ಲಿ ಮೈಸೂರಿನಲ್ಲಿ ಉಳಿದು ’ನ್ಯಾನೋ ಲೈಫ್’ ಎನ್ನುವ ಬಯೋ ಗಮ್ ತಯಾರಿಕಾ...

- Advertisement -
- Advertisement -

ಚೀನಾ ವಿಶ್ವವಿದ್ಯಾನಿಲಯದಲ್ಲಿ ಪಿಹೆಚ್‌ಡಿ ಮಾಡಲು ಕರ್ನಾಟಕದಿಂದ ಹೋಗಿದ್ದ ಗುರುಪ್ರಸಾದ್, ಕೊರೊನಾ ಕಾರಣದಿಂದ ಹಿಂದಿರುಗಿ, ಲಾಕ್‌ಡೌನ್‌ ಸಮಯದಲ್ಲಿ ’ನ್ಯಾನೋ ಲೈಫ್’ ಎನ್ನುವ ಬಯೋಪಾಲಿಮರ್‌ ಆಧಾರಿತ ಗಮ್ ತಯಾರಿಸುವ ಸ್ಟಾರ್ಟ್‌‌ಅಪ್‍ ಅನ್ನು ಆರಂಭಿಸಿದ್ದಾರೆ.

ಕೊರೊನಾ ಸಾಂಕ್ರಾಮಿಕ ರೋಗದಿಂದ ಇಡೀ ಜಗತ್ತೇ ತತ್ತರಿಸುತ್ತಿದ್ದು, ಬಹುತೇಕ ಕ್ಷೇತ್ರಗಳು ತೊಂದರೆಗೊಳಗಾಗಿವೆ. ಈ ವರ್ಷದ ಆರಂಭದಲ್ಲಿ ತಾವು ವರ್ಷಪೂರ್ತಿ ಮಾಡಬೇಕಾದ ಕೆಲಸಗಳ ಯೋಜನಾ ಪಟ್ಟಿಯನ್ನು ಹಲವರು ಸಿದ್ಧಮಾಡಿಕೊಂಡಿದ್ದರು. ಆದರೆ ಆಕಸ್ಮಿಕವಾಗಿ ಅಪ್ಪಳಿಸಿದ ಕೊರೊನಾದಿಂದ ಆ ಯೋಜನೆಗಳೆಲ್ಲ ತಲೆಕೆಳಗಾಗಿವೆ.

ಇದರಿಂದ ಆರ್ಥಿಕ ಮತ್ತು ಶಿಕ್ಷಣ ಕ್ಷೇತ್ರ ದೊಡ್ಡಮಟ್ಟದ ನಷ್ಟವನ್ನು ಎದುರಿಸುತ್ತಿದೆ. ಆದರೂ ಸಹ ಕೆಲವರು ತಮ್ಮ ವ್ಯಾಪ್ತಿಯಲ್ಲಿಯೇ ಏನನ್ನಾದರೂ ಮಾಡಬೇಕು ಎಂದು ತಮ್ಮ ಬತ್ತಳಿಕೆಯಲ್ಲಿದ್ದ ಹೊಸ ಹೊಸ ಯೋಚನೆಗಳಿಗೆ ರೂಪ ಕೊಡಲು ಆರಂಭಿಸಿದ್ದಾರೆ. ಇದರ ಪ್ರತಿಫಲವೇ ಇಂದು ನೂರಾರು ಯುವ ಮನಸ್ಸುಗಳು ಸ್ವಂತ ಚಿಂತನೆಯನ್ನು ಕಾರ್ಯರೂಪಕ್ಕಿಳಿಸಿ ರಚನಾತ್ಮಕ ಕ್ರಿಯೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಇದನ್ನೂ ಓದಿ: ಆರ್ಥಿಕತೆಯಲ್ಲಿ ಭಾರತವನ್ನು ಹಿಂದಿಕ್ಕಲಿರುವ ಬಾಂಗ್ಲಾದೇಶ!

ಈ ನಿಟ್ಟಿನಲ್ಲಿ ಕೊರೊನಾ ವೈರಸ್‌ ತವರಾದ ಚೀನಾದಲ್ಲಿ ಸಂಶೋಧನೆ ಮಾಡಲು ಹೋಗಿದ್ದ ಬಳ್ಳಾರಿ ಮೂಲದ ಗುರುಪ್ರಸಾದ್.ಕೆ.ವೈ ಎಂಬುವವರು ಪ್ರಸ್ತುತ ಮೈಸೂರಿನಲ್ಲಿ “ನ್ಯಾನೋ ಲೈಫ್” ಎನ್ನುವ ಬಯೋಪಾಲಿಮರ್ ಆಧಾರಿತ ಉದ್ಯಮವೊಂದನ್ನು ಆರಂಭಿಸಿದ್ದಾರೆ.

ಜಗತ್ತಿನ ಪ್ರತಿಷ್ಟಿತ 100 ವಿಶ್ವವಿದ್ಯಾನಿಲಯಗಳ ಪೈಕಿ 52ನೇ ಸ್ಥಾನದಲ್ಲಿರುವ ಹ್ಯಾಂಗ್‌ಜ಼ೂ ವಿವಿಯಲ್ಲಿ ಸಂಶೋಧನಾ ಕೋರ್ಸನ್ನು ಮುಗಿಸಿ ರಜೆಗೆಂದು ಭಾರತಕ್ಕೆ ಮರಳಿದ್ದ ಇವರು ಕೊರೊನಾ ಕಾರಣಕ್ಕಾಗಿ ಹೇರಲಾದ ಲಾಕ್‌ಡೌನ್‌ನಿಂದ ಭಾರತದಲ್ಲೇ ಉಳಿಯಬೇಕಾಯಿತು. ಈ ಸಂದರ್ಭವನ್ನು ತಮ್ಮ ಚಿಂತನೆಗಳಿಗೆ ಮೂರ್ತರೂಪ ನೀಡುವ ಸಲುವಾಗಿ ಉಪಯೋಗಿಸಿಕೊಂಡು ಸ್ಟಾರ್ಟ್‌‌ಅಪ್‍ ಒಂದನ್ನು ಗೆಳಯರೊಡಗೂಡಿ ಆರಂಭಿಸಿದ್ದಾರೆ.

ಇದನ್ನೂ ಓದಿ: ಭಾರತವು ವಿಶ್ವದ ಆರ್ಥಿಕತೆಯಲ್ಲಿ 3ನೇ ಸ್ಥಾನಕ್ಕೆ ಬರಲು ಇನ್ನೂ 30 ವರ್ಷ ಬೇಕು: ಅಧ್ಯಯನ

ಕನ್ನಡದ ಖ್ಯಾತ ಗಾಯಕ ನವೀನ್ ಸಜ್ಜು ಮತ್ತು ಗುರುಪ್ರಸಾದ್ ಜಂಟಿಯಾಗಿ ಇದಕ್ಕೆ ಬಂಡವಾಳ ಹೂಡಿದ್ದು, ಮೈಸೂರಿನ ಎಂ.ಎಂ.ಸುಗುಣ ಅವರ ಮುಂದಾಳತ್ವದಲ್ಲಿ ಆಕರ್ಷ್‌ ಕುಮಾರ್‌ ಸೇರಿದಂತೆ ಕೆಲವು ಗೆಳಯರು ಒಟ್ಟಾಗಿ ಈ ಉದ್ಯಮವನ್ನು ಆರಂಭಿಸಿದ್ದಾರೆ.

ಮೂಲತಃ ಜೀವರಾಸಾಯನಿಕ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ, ಅದರಲ್ಲಿಯೇ ಸಂಶೊಧನೆ ಮಾಡುತ್ತಿದ್ದ ಗುರುಪ್ರಸಾದ್, ತಮ್ಮ ಈ ಹೊಸ ಉದ್ಯಮದ ಮೂಲಕ ಗೆಣಸುಗಳಿಂದ ’ಗಮ್’ (ಅಂಟು) ತಯಾರಿಸಲು ಮುಂದಾಗಿದ್ದಾರೆ. ಇಂತಹ ಉದ್ಯಮಗಳು ಕರ್ನಾಟಕದಾದ್ಯಂತ ಕೇವಲ ಬೆರಳೆಣಿಕೆಯಷ್ಟಿದ್ದು ಮಾರುಕಟ್ಟೆಯಲ್ಲಿರುವ ಈ ಗಮ್‌ ಬೇಡಿಕೆಯನ್ನು ಕೇವಲ 8-10 ಉದ್ಯಮಗಳಷ್ಟೆ ಪೂರೈಸುತ್ತಿವೆ. ಅದರಲ್ಲೂ ಮೈಸೂರಿನಲ್ಲಂತೂ ಒಂದು ಕಂಪನಿ ಮಾತ್ರ ಈ ಗಮ್ ತಯಾರಿಕೆಯಲ್ಲಿ ತೊಡಗಿಸಿಕೊಂಡಿದೆ.

ಇದರ ಕುರಿತು ನಾನುಗೌರಿ.ಕಂ ಜೊತೆ ಮಾತನಾಡಿದ ಗುರುಪ್ರಸಾದ್, “ವಿಜ್ಞಾನ ವಿದ್ಯಾರ್ಥಿಯಾಗಿ ವಿಜ್ಞಾನವನ್ನು ಜನರೆಡೆಗೆ ತಲುಪಿಸುವ ಕೆಲಸವನ್ನು ಮಾಡಬೇಕೆಂಬುದು ನನ್ನ ಉದ್ದೇಶ. ಇದರ ಭಾಗವಾಗಿಯೇ ಮೊದಲ ಸಣ್ಣ ಪ್ರಯತ್ನ ಇದು. ಈ ಉದ್ಯಮದಲ್ಲಿ ಕೆಲಸ ಆರಂಭವಾದ ಕೆಲವು ದಿನಗಳ ನಂತರ ನನ್ನ ಸಂಶೋಧನೆಯನ್ನು ಮುಕ್ತಾಯಗೊಳಿಸಲು ಮತ್ತೆ ಚೀನಾಕ್ಕೆ ಹೋಗುತ್ತೇನೆ” ಎಂದು ಹೇಳಿದರು.

ಇದನ್ನೂ ಓದಿ: ಲಾಕ್‌ಡೌನ್‌ನಿಂದಾಗಿ ಆರ್ಥಿಕತೆ ನೆಲಕಚ್ಚಿದ್ದಾಗ ಅಂಬಾನಿ ಪ್ರತಿ ಗಂಟೆಗೆ ಸಂಪಾದಿಸಿದ್ದು ಎಷ್ಟು ಗೊತ್ತೇ?

“ತಯಾರಾಗಿರುವ ಯಾವುದೇ ವಸ್ತುಗಳನ್ನು ಕೊನೆಯ ಹಂತದಲ್ಲಿ ರಟ್ಟಿನ ಬಾಕ್ಸ್‌ನಲ್ಲಿ ಪ್ಯಾಕ್ ಮಾಡಲಾಗುತ್ತದೆ. ತೆಳುವಾದ ಹಾಳೆಗಳನ್ನು ಅಂಟಿಸಿ ಅಗತ್ಯಕ್ಕೆ ತಕ್ಕ ಗಾತ್ರದಲ್ಲಿ ಈ ರಟ್ಟನ್ನು ತಯಾರಿಸಲಾಗುತ್ತದೆ. ಈ ಹಾಳೆಗಳನ್ನು ಅಂಟಿಸುವ ಗಮ್ ಅನ್ನು ಆಲೂಗೆಡ್ಡೆಯಂತಹ ಸಿಹಿಗೆಣಸು ಮತ್ತು ಕಾಳುಗಳಿಂದ ತಯಾರಿಸುವ ಈ ಪೌಡರ್‌ ಅನ್ನು ನಮ್ಮ ’ನ್ಯಾನೋ ಲೈಫ್‌’ನಲ್ಲಿ ತಯಾರಿಸಲಾಗುತ್ತದೆ. ಗೆಣಸು ಮತ್ತು ಕಾಳುಗಳನ್ನು ರಾಸಾಯನಿಕ ಕ್ರಿಯೆಗೆ ಒಳಪಡಿಸಿ, ಗಮ್ ಪೌಡರ್‌ ತಯಾರಿಸಿ ಮಾರುಕಟ್ಟಗೆ ವಿತರಿಸಲಾಗುತ್ತದೆ. ಇದು ನಮ್ಮ ಸ್ಟಾರ್ಟ್‌‌ಅಪ್‍ ನಿರ್ವಹಿಸುವ ಕೆಲಸ” ಎಂದು ಹೇಳಿದರು.

“ಭವಿಷ್ಯದಲ್ಲಿ ಭಾರತ ಸೇರಿದಂತೆ ಇಡೀ ಜಗತ್ತೇ ಆರ್ಥಿಕ ಕುಸಿತದ ಸುಳಿಯಲ್ಲಿ ಸಿಲುಕಿ, ಮಧ್ಯಮ ಮತ್ತು ಕೆಳಮಧ್ಯಮ ವರ್ಗ ಸಂಕಷ್ಟಕ್ಕೆ ಒಳಗಾಗುವ ಸಾಧ್ಯತೆಯಿದೆ. ಇಂತಹ ಸಂದರ್ಭದಲ್ಲಿ ಈ ಸ್ಟಾರ್ಟ್‌‌ಅಪ್‌ಗಳು ನನಗೆ ಭರವಸೆಯಾಗಿ ಕಂಡಿತು. ಇದು ನಿಜವಾದ ಆತ್ಮನಿರ್ಭರತೆ ಅಥವಾ ಗಾಂಧಿ ಕನಸಿನ ಸ್ವಾಯತ್ತ ಸಮಾಜದ ಆಶಯವಾಗಿದೆ. ಆದರೆ ಸರ್ಕಾರಗಳ ಆಶ್ವಾಸನೆಗಳು ಕೇವಲ ಆಶ್ವಾಸನೆಗಳಾಗಿ ಅಥವಾ ಪೇಪರ್‌ಗಳಲ್ಲಿ ಉಳಿದುಕೊಂಡಿವೆಯೇ ಹೊರತು ಯುವ ಸಮೂಹಕ್ಕೆ ಬೆಳಕಾಗಿಲ್ಲ. ಇಂದಿನ ಯುವ ಭಾರತ ಎದುರಿಸುತ್ತಿರುವ ನಿರುದ್ಯೋಗದ ಸಮಸ್ಯೆಯನ್ನು ಕೇವಲ ಆಶ್ವಾಸನೆಯ ಆತ್ಮನಿರ್ಭರತೆ ನಿವಾರಿಸಲು ಸಾಧ್ಯವಿಲ್ಲ. ಬದಲಿಗೆ ಇಂತಹ ಪ್ರಯತ್ನಗಳಿಗೆ ಸರ್ಕರದಿಂದ ಸಿಗುವ ಬೆಂಬಲ ಯುವಜನತೆಯ ಆತ್ಮವಿಶ್ವಾಸವನ್ನು ಹೆಚ್ಚಿಸುವುದರ ಮೂಲಕ ಬೃಹತ್ ಮಾನವ ಸಂಪನ್ಮೂಲದ ಹೊಸ ಆಲೋಚನೆಗಳನ್ನು ಜಾಗತಿಕವಾಗಿ ತೆರೆದಿಡುತ್ತದೆ. ಆಗ ಮಾತ್ರ ವೈಯಕ್ತಿಕವಾಗಿ ನಾವೂ ಮತ್ತು ದೇಶವೂ ಅಭಿವೃದ್ಧಿಯ ಪಥದತ್ತ ಸಾಗಲು ಸಾಧ್ಯ” ಎಂದು ಹೇಳಿದರು.

ಇದನ್ನೂ ಓದಿ: ಕೊರೊನಾ ಪ್ಯಾಕೇಜ್‌ ಅಸಮರ್ಪಕ, ದೇಶದ ಆರ್ಥಿಕತೆ ಕುಸಿಯುತ್ತಿದೆ: ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಹ್ಮಣ್ಯನ್‌ ಸ್ವಾಮಿ

ಪ್ರಸ್ತುತ ನಮ್ಮ ದೇಶದಲ್ಲಿ, ಸರ್ಕಾರದ ಅವೈಜ್ಞಾನಿಕ ನೀತಿಗಳಿಂದ ಭಾರತದ ಆರ್ಥಿಕತೆ ನೆಲಕಚ್ಚಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿಯು ಶೇ -23ಕ್ಕೆ ಕುಸಿದಿತ್ತು. ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ ಕಳೆದ ತಿಂಗಳು ಬಿಡುಗಡೆ ಮಾಡಿದ ವರದಿಯಲ್ಲಿ ಏಷ್ಯಾದ ರಾಷ್ಟ್ರಗಳ ಪೈಕಿ ಭಾರತದ ಆರ್ಥಿಕತೆಯು ಅತ್ಯಂತ ಕಳಪೆ ಮಟ್ಟದಲ್ಲಿದೆ ಎಂದು ಹೇಳಿತ್ತು. ಇನ್ನು ಆರ್‌ಬಿಐನ ಉಪ ಗವರ್ನರ್‌ ಇತ್ತೀಚೆಗೆ, ಭಾರತದ ಆರ್ಥಿಕತೆ ಚೇತರಿಸಿಕೊಳ್ಳಲು ಕೆಲವು ವರ್ಷಗಳೇ ಬೇಕಾಗಬಹುದು ಎಂದಿದ್ದರು.

ಇಂತಹ ಸಂರ್ಭದಲ್ಲಿ ಈ ಬೆಳವಣಿಗೆಗಳು ಸ್ವಲ್ಪಮಟ್ಟಿಗೆ ಆಶಾದಾಯಕವೆನಿಸುತ್ತದೆ. ಹಾಗಾಗಿ ಈ ತಲೆಮಾರಿನ ಹೊಸ ಆಲೋಚನೆಗಳಿಗೆ ರಚನಾತ್ಮಕ ರೂಪ ಕೊಡುವ ಜವಾಬ್ದಾರಿ ನಮ್ಮ ಸರ್ಕಾರ ಸೇರಿದಂತೆ ಇಡೀ ಸಮಾಜದ ಮೇಲಿದೆ.


ಇದನ್ನೂ ಓದಿ: ದೋಷಪೂರಿತ ಜಿಎಸ್‌ಟಿ ದೇಶದ ಆರ್ಥಿಕತೆಯನ್ನು ನಾಶಮಾಡಿದೆ: ರಾಹುಲ್ ಗಾಂಧಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪೆನ್‌ಡ್ರೈವ್‌ ಬಿಡುಗಡೆಯಲ್ಲಿ ಕುಮಾರಸ್ವಾಮಿ, ಬಿಜೆಪಿ ನಾಯಕರ ಕೈವಾಡ: ಡಿ.ಕೆ.ಸುರೇಶ್

0
ಪೆನ್ ಡ್ರೈವ್ ವಿಚಾರ ಎಲ್ಲರಿಗಿಂತ ಮೊದಲೇ ಕುಮಾರಸ್ವಾಮಿ ಹಾಗೂ ಬಿಜೆಪಿ ನಾಯಕರಿಗೆ ತಿಳಿದಿತ್ತು. ಈ ಪ್ರಕರಣದಿಂದ ನುಣುಚಿಕೊಳ್ಳಲು ಕಾಂಗ್ರೆಸ್ ಹಾಗೂ ಶಿವಕುಮಾರ್ ಅವರ ಮೇಲೆ ಆರೋಪ ಮಾಡುತ್ತಿದ್ದಾರೆ. ಪೆನ್‌ ಡ್ರೈವ್‌ ಬಿಡುಗಡೆಯಲ್ಲಿ ಮೈತ್ರಿ...