ಕೊರೊನಾ, ಲಾಕ್‌ಡೌನ್‌ಗಳ ನಡುವೆಯೇ ಕನ್ನಡ ಚಿತ್ರರಂಗ, ಕಿರುತೆರೆಗಳಲ್ಲಿ ಮದುವೆ ಸಂಭ್ರಮಗಳು ನಡೆಯುತ್ತಲೇ ಇವೆ. ಇವುಗಳ ಸಾಲಿಗೆ ಮತ್ತೊಂದು ತಾರಾ ಜೋಡಿ ಸೇರ್ಪಡೆಯಾಗಲಿದ್ದಾರೆ. ’ಲವ್ ಮಾಕ್‌ಟೈಲ್’ ಜೋಡಿ ಹಸೆಮಣೆ ಏರಲು ರೆಡಿಯಾಗಿದ್ದಾರೆ.
ಹೌದು, ಕೆಲವು ವರ್ಷಗಳಿಂದ ಲವ್ ಬರ್ಡ್ಸ್ ಆಗಿರುವ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ತಾರಾ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲು ನಿರ್ಧರಿಸಿದೆ. ಲವ್ ಮಾಕ್‌ಟೈಲ್ ಚಿತ್ರದಿಂದ ಖ್ಯಾತಿ ಪಡೆದ ಈ ಜೋಡಿ ತಾವು ಹೊಸಬಾಳಿಗೆ ಕಾಲಿಡಲು ಆರಿಸಿಕೊಂಡಿರುವ ದಿನ ಕೂಡ ವಿಶೇಷವಾಗಿದೆ.
2021 ರ ಪ್ರೇಮಿಗಳ ದಿನದಂದೇ ಕೃಷ್ಣ-ಮಿಲನಾ ಮದುವೆಯಾಗಲಿದ್ದಾರೆ. ತಮ್ಮ ಮದುವೆಗೆ ಫೆಬ್ರವರಿ 14ನೇ ಆಯ್ಕೆ ಮಾಡಿಕೊಂಡು ನಮ್ಮನ್ನು ಆಶೀರ್ವದಿಸಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ ಈ ಲವ್ ಮಾಕ್‌ಟೈಲ್‌ನ ಲವ್ ಬರ್ಡ್ಸ್.
ಇದನ್ನೂ ಓದಿ: ‘Serious Men’ Review: `ಸೀರಿಯಸ್ ಮೆನ್’ನ ಘನ ಜಾತೀಯತೆ!
ನಮ್ಮ ಮದುವೆ 14 ಫೆಬ್ರವರಿ 2021, ನಮ್ಮನ್ನು ಆಶೀರ್ವದಿಸಿ
I am happy to announce that, We are getting married on Feb 14th 2021, Bless us pic.twitter.com/Ey3VfIJKr0— darling krishna (@darlingkrishnaa) November 3, 2020
ಚಾರ್ಲಿ ಕೃಷ್ಣ ಮತ್ತು ಮಿಲನಾ ನಾಗರಾಜ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಮದುವೆ ವಿಷಯವನ್ನು ಶೇರ್ ಮಾಡಿಕೊಂಡಿದ್ದಾರೆ. ಸುಂದರ ಚಿತ್ರದೊಂದಿಗೆ ನಮ್ಮ ಮದುವೆ ಎಂದು ಬರೆದಿರುವ ಬೋರ್ಡ್, ಕೇಕ್, ಫೆಬ್ರವರಿ 14 ಅಂತ ಬರೆದಿರುವ ಹಾರ್ಟ್ ಶೇಪ್ಡ್ ಟೆಂಪ್ಲೇಟ್ಸ್ ಜೊತೆ ಫೋಟೋ ಪೋಸ್ಟ್ ಮಾಡಿದ್ದಾರೆ.
ನಟಿ ಜೊತೆಗೆ ನಿರ್ಮಾಪಕಿಯಾಗಿಯೂ ಬಡ್ತಿ ಪಡೆದಿರುವ ಮಿಲನಾ ನಾಗರಾಜ್, ‘ಲವ್ ಮಾಕ್‌ಟೈಲ್- 2’ ಸಿನಿಮಾ ನಿರ್ಮಾಣದ ಜತೆ ನಟನೆಯಲ್ಲೂ ಬ್ಯುಸಿ ಆಗಿದ್ದಾರೆ. ಇಬ್ಬರ ನಟನೆಯ ಈ ಸಿನಿಮಾವೂ ಮುಂದಿನ ವರ್ಷ ತೆರೆ ಕಾಣಲಿದೆ. ಸದ್ಯ ಮಿಲನಾ ‘ಫಾರ್ ರಿಜಿಸ್ಪ್ರೇಷನ್’, ‘ಚತುಷ್ಪಥ’ ಇನ್ನೂ ಹೆಸರಿಡದ ಚಿತ್ರಗಳಲ್ಲಿ ಬ್ಯುಸಿ ಆಗಿದ್ದಾರೆ.


