Homeಕರೋನಾ ತಲ್ಲಣಕೊರೊನಾ: ಮಕ್ಕಳಿಗಾಗಿ ಜಾಗೃತಿ ಗೇಮ್ ಅಭಿವೃದ್ಧಿಪಡಿಸಿದ ಮದ್ರಾಸ್‌ ಐಐಟಿ ವಿದ್ಯಾರ್ಥಿಗಳು!

ಕೊರೊನಾ: ಮಕ್ಕಳಿಗಾಗಿ ಜಾಗೃತಿ ಗೇಮ್ ಅಭಿವೃದ್ಧಿಪಡಿಸಿದ ಮದ್ರಾಸ್‌ ಐಐಟಿ ವಿದ್ಯಾರ್ಥಿಗಳು!

- Advertisement -
- Advertisement -

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್ (ಐಐಟಿ-ಎಂ) ವಿದ್ಯಾರ್ಥಿಗಳು ಡಿಜಿಟಲ್ ‘ಐಐಟಿ-ಎಂ ಕೋವಿಡ್ ಗೇಮ್’ ಅನ್ನು ಅಭಿವೃದ್ಧಿಪಡಿಸಿದ್ದು, ಈ ಗೇಮ್‌ ಆಡುವುದರಿಂದ ರೋಗದ ವಿರುದ್ಧ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮತ್ತು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದರ ಬಗ್ಗೆ ಸಾರ್ವಜನಿಕರಿಗೆ, ಅದರಲ್ಲೂ ವಿಶೇಷವಾಗಿ ಮಕ್ಕಳಗೆ ಜಾಗೃತಿ ಮೂಡಿಸುತ್ತದೆ ಎಂದು ಸೋಮವಾರ ಸಂಸ್ಥೆ ಹೇಳಿದೆ.

ಈ ಗೇಮ್ ಬ್ರೌಸರ್ ಆಧಾರಿತವಾಗಿದ್ದು, ಕಂಪ್ಯೂಟರ್, ಲ್ಯಾಪ್‌ಟಾಪ್, ಟ್ಯಾಬ್ಲೆಟ್ ಮತ್ತು ಮೊಬೈಲ್ ಫೋನ್‌ಗಳು ಸೇರಿದಂತೆ ಹಲವು ಸಾಧನಗಳಲ್ಲಿ ಆಡಬಹುದು. ಇದು ಉಚಿತವಾಗಿ ಲಭ್ಯವಿದ್ದು, www.letsplaytolearn.com ನ ಮುಖಪುಟದಿಂದ ಆಡಬಹುದು. ಜೊತೆಗೆ https://dost.iitm.ac.in/iitmdost/pages/game-corner ನಲ್ಲಿಯೂ ಲಭ್ಯವಿದೆ.

ವಿಭಿನ್ನ ಪ್ರೇಕ್ಷಕರ ಪ್ರತಿಕ್ರಿಯೆಯ ಆಧಾರದ ಮೇಲೆ, ವಿದ್ಯಾರ್ಥಿ ತಂಡವು, ಎಲ್ಲರಿಗೂ ತಲುಪುವಂತೆ ಮಾಡಲು ಈ ಆಟವನ್ನು ಹಲವಾರು ಭಾರತೀಯ ಪ್ರಾದೇಶಿಕ ಭಾಷೆಗಳಿಗೆ ಅನುವಾದಿಸಿದೆ. ಇಂಗ್ಲಿಷ್ ಸೇರಿದಂತೆ ಈ ಆಟವು 12 ಭಾಷೆಗಳಲ್ಲಿ ಲಭ್ಯವಿದೆ; ಅಸ್ಸಾಮೀಸ್, ಬಂಗಾಳಿ, ಗುಜರಾತಿ, ಹಿಂದಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ಸಂಸ್ಕೃತ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಲಭ್ಯವಿದೆ ಎಂದು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಇದನ್ನೂ ಓದಿ: ಕಂಗನಾ ವಿರುದ್ಧ ವಿಡಿಯೋ ಮಾಡಲು 65 ಲಕ್ಷ ಹಣ ಪಡೆಯಲಾಗಿದೆ: ಧೃವ್ ರಾಠೀ ಕೊಟ್ಟ…

ಈ ಆಟವನ್ನು ‘ಲೆಟ್ಸ್ ಪ್ಲೇ ಟು ಲರ್ನ್’ ಎಂಬ ಕೋರ್ಸ್ ತೆಗೆದುಕೊಂಡ ವಿದ್ಯಾರ್ಥಿಗಳು ರಚಿಸಿದ್ದಾರೆ. ಇದರಲ್ಲಿ ಅವರಿಗೆ ಆಟದ ಆಧಾರಿತ ಕಲಿಕಾ ಪರಿಕರಗಳು ಮತ್ತು ತಂತ್ರಗಳನ್ನು ಕಲಿಸಲಾಗುತ್ತದೆ.

ಈ ಆಟವು ಪ್ರಸಿದ್ಧ ಆಟವಾದ ‘ಸೂಪರ್ ಮಾರಿಯೋ’ ಆಟದಿಂದ ಸ್ಫೂರ್ತಿ ಪಡೆದಿದ್ದು, ಮಾಸ್ಕ್‌ ಮತ್ತು ಕೈಗಳನ್ನು ತೊಳೆಯುವುದು ಮುಂತಾದ ವಿವಿಧ ಸನ್ನಿವೇಶಗಳನ್ನು ಎದುರಿಸುವುದನ್ನು ಒಳಗೊಂಡಿದ್ದು, ಹ್ಯಾಂಡ್‌ಶೇಕ್ ಮತ್ತು ಅಪ್ಪಿಕೊಳ್ಳುವ ಕ್ರಿಯೆಗಳನ್ನು ಮಾಡಬಾರದು ಎಂದೂ ತಿಳಿಸುತ್ತದೆ.

ಮಗು ಸರಿಯಾದ ಕೆಲಸಗಳನ್ನು ಮಾಡುತ್ತಿದ್ದಂತೆ ಅಂಕಗಳು ಹೆಚ್ಚಾಗುತ್ತಲೇ ಇರುತ್ತವೆ. ತಪ್ಪು ವಿಷಯವನ್ನು ತಪ್ಪಿಸಲು ಮಗು ವಿಫಲವಾದರೆ, ಪರಿಣಾಮಗಳನ್ನು ತೋರಿಸುವ ಸಲುವಾಗಿ ಅಂಕಗಳನ್ನು ಕಡಿತಗೊಳಿಸಲಾಗುತ್ತದೆ. ಆಟವು 1 ನಿಮಿಷ ಮುಂದುವರಿಯುತ್ತದೆ, ಅಷ್ಟರಲ್ಲಿ ಆಟಗಾರರು ಗರಿಷ್ಠ ಅಂಕಗಳನ್ನು ಗಳಿಸಬೇಕು.


ಇದನ್ನೂ ಓದಿ: ಬಿಹಾರ ಚುನಾವಣೆ: ಮುಖ್ಯಮಂತ್ರಿ ನಿತೀಶ್ ಕುಮಾರ್‌ ಮೇಲೆ ಈರುಳ್ಳಿ ಎಸೆದು ಆಕ್ರೋಶ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮ್ಯಾನೇಜ್‌ಮೆಂಟ್‌ ಸರ್ಕಾರ| ಆಡಿಯೊ ನನ್ನದೇ, ರಾಜೀನಾಮೆ ಕೇಳಿದರೆ ಕೊಡುವೆ- ಮಾಧುಸ್ವಾಮಿ

0
ರಾಜ್ಯದ ಕಾನೂನು ಸಚಿವ ಮಾಧುಸ್ವಾಮಿ ಅವರ ಆಡಿಯೊವೊಂದು ಸೋರಿಕೆಯಾಗಿರುವ ಪರಿಣಾಮ ಬಿಜೆಪಿ ಸರ್ಕಾರ ತೀವ್ರ ಮುಜುಗರಕ್ಕೊಳಗಾಗಿದ್ದು ಸರ್ಕಾರದೊಳಗೆ ಆಕ್ರೋಶ ಭುಗಿಲೆದ್ದಿದೆ. ಬಿಜೆಪಿ ನಾಯಕರು ಮಾಧುಸ್ವಾಮಿ ಹೇಳಿಕೆಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸುತ್ತಿದ್ದು, ಮಾಧುಸ್ವಾಮಿಯವರೂ ಪ್ರಕರಣಕ್ಕೆ ಸಂಬಂಧಿಸಿದಂತೆ...