ಭಾರತೀಯ ಮೂಲದ ಡೆಮಾಕ್ರಟಿಕ್ ಸಂಸತ್ ಸದಸ್ಯ ರಾಜ ಕೃಷ್ಣಮೂರ್ತಿ ಅವರನ್ನು ಸತತ ಮೂರನೇ ಬಾರಿಗೆ ಅಮೆರಿಕಾ ಪ್ರತಿನಿಧಿಗಳ ಸದನಕ್ಕೆ ಮರು ಆಯ್ಕೆ ಮಾಡಲಾಗಿದೆ.
ನವದೆಹಲಿಯಲ್ಲಿ ಜನಿಸಿದ ರಾಜ ಕೃಷ್ಣಮೂರ್ತಿ (47), ಲಿಬರ್ಟೇರಿಯನ್ ಪಕ್ಷದ ಪ್ರೆಸ್ಟನ್ ನೆಲ್ಸನ್ ಅವರನ್ನು ಸುಲಭವಾಗಿ ಸೋಲಿಸಿದರು. ಅಂತಿಮ ವರದಿಗಳು ಪ್ರಕಾರ, ಒಟ್ಟು ಮತಗಳಲ್ಲಿ ಸುಮಾರು 71 ಪ್ರತಿಶತದಷ್ಟು ಮತಗಳನ್ನು ಅವರು ಹೊಂದಿದ್ದರು ಎಂದು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಅವರ ಪೋಷಕರು ತಮಿಳುನಾಡು ಮೂಲದವರಾಗಿದ್ದು, ಕೃಷ್ಣಮೂರ್ತಿ ಅವರು 2016 ರಲ್ಲಿ ಮೊದಲ ಬಾರಿಗೆ ಪ್ರತಿನಿಧಿ ಸಭೆಗೆ ಆಯ್ಕೆಯಾಗಿದ್ದರು.
ಇದನ್ನೂ ಓದಿ: ಅಮೇರಿಕಾ ಚುನಾವಣೆ: ಶೇಕಡ 69 ರಷ್ಟು ಮುಸ್ಲಿಮರು ಜೋ ಬೈಡೆನ್ ಪರ; ಸಮೀಕ್ಷೆ!
ಕ್ಯಾಲಿಫೋರ್ನಿಯಾ ಮತ್ತು ವಾಷಿಂಗ್ಟನ್ ಎರಡೂ ರಾಜ್ಯಗಳಲ್ಲಿ ಮತದಾನ ಎಣಿಕೆ ಮುಂದುವರೆದಿದೆ ಮತ್ತು ಫಲಿತಾಂಶಗಳನ್ನು ಕೆಲವೇ ಗಂಟೆಗಳಲ್ಲಿ ಘೋಷಿಸುವ ನಿರೀಕ್ಷೆಯಿದೆ.
ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ಎಣಿಕೆ ಪ್ರಾರಭವಾಗಿದ್ದು, ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಗ್ಗರಿಸುತ್ತಿದ್ದು, ಇತ್ತೀಚೆಗಿನ ವರದಿಯಂತೆ ಡೆಮಾಕ್ರೆಟಿಕ್ ಪಕ್ಷದ ಜೋ ಬೈಡನ್ ಸ್ಪಷ್ಟ ಮುನ್ನಡೆ ಸಾಧಿಸುತ್ತಿದ್ದಾರೆ.
ಕೊರೊನಾ ನಡುವೆಯು ಅಮೆರಿಕಾದಲ್ಲಿ ನಿನ್ನೆ ಚುನಾವಣೆ ನಡೆದಿದ್ದು 10 ಕೋಟಿಗೂ ಅಧಿಕ ಮತದಾರರು ಮತ ಚಲಾಯಿಸಿದ್ದರು.
ಇದನ್ನೂ ಓದಿ: ಆಸ್ಟ್ರೀಯಾ: ರಾಜಧಾನಿ ವಿಯೆನ್ನಾದ 6 ಸ್ಥಳಗಳಲ್ಲಿ ಗುಂಡಿನ ದಾಳಿ; 3 ಸಾವು


