ಸಲಿಂಗಿಗಳು
PC:Marriage Prep101

ಸಲಿಂಗ ದಂಪತಿಗೆ ರಕ್ಷಣೆ ನೀಡುವಂತೆ ಉತ್ತರಪ್ರದೇಶದ ಶಾಮ್ಲಿಯ ಪೊಲೀಸ್ ವರಿಷ್ಠಾಧಿಕಾರಿಗೆ ಅಲಹಾಬಾದ್ ಹೈಕೋರ್ಟ್ ನಿರ್ದೇಶನ ನೀಡಿದೆ. ಶಾಮ್ಲಿಯ ಸುಲ್ತಾನಾ ಮಿರ್ಜಾ ಮತ್ತು ಕಿರಣ್ ರಾಣಿ ದಂಪತಿ ಸಮಾಜ ಮತ್ತು ಕುಟುಂಬದಿಂದ ಬೆದರಿಕೆ ಇದ್ದು, ಭದ್ರತೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್.ಕೆ.ಗುಪ್ತಾ ಮತ್ತು ಪಂಕಜ್ ಭಾಟಿಯಾ ಅವರ ನ್ಯಾಯಪೀಠ, ಸಲಿಂಗ ದಂಪತಿಗರ ಭದ್ರತೆ ಒದಗಿಸುವಂತೆ ಆದೇಶ ನೀಡಿ, ಅರ್ಜಿದಾರರಿಗೆ ಯಾರೂ ಕಿರುಕುಳ ನೀಡದಂತೆ ನೋಡಿಕೊಳ್ಳಲು ಶಾಮ್ಲಿಯ ಪೊಲೀಸ್ ವರಿಷ್ಠಾಧಿಕಾರಿಗೆ ನಿರ್ದೇಶನ ನೀಡಿದೆ ಎಂದು ಬಾರ್ & ಬೆಂಚ್ ವರದಿ ಮಾಡಿದೆ.

ಅರ್ಜಿದಾರರು ತಾವು ಹಲವು ವರ್ಷಗಳಿಂದ ಒಟ್ಟಿಗೆ ವಾಸಿಸುತ್ತಿದ್ದೇವೆ. ಆದರೆ ಸಲಿಂಗಿಗಳಾಗಿರುವುದರಿಂದ ನಮ್ಮ ಕುಟುಂಬಗಳು ಮತ್ತು ಸಮಾಜದಿಂದ ಪ್ರತಿರೋಧವನ್ನು ಎದುರಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಇವರಿಂದ ಜೀವ ಭಯವಿದ್ದು, ರಕ್ಷಣೆ ನೀಡುವಂತೆ ಅರ್ಜಿಯಲ್ಲಿ ತಿಳಿಸಿದ್ದರು. ಜೊತೆಗೆ ನವತೇಜ್ ಸಿಂಗ್ ಜೋಹರ್ ಪ್ರಕರಣವನ್ನು ಉಲ್ಲೇಖಿಸಿದ್ದರು. ಈ ಪ್ರಕರಣದಲ್ಲಿ LGBT ಪರವಾಗಿ ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು.

ಇದನ್ನೂ ಓದಿ: ಸಲಿಂಗ ವಿವಾಹವನ್ನು ನಮ್ಮ ಕಾನೂನು ಮತ್ತು ಸಮಾಜ ಒಪ್ಪುವುದಿಲ್ಲ: ಕೇಂದ್ರ ಸರ್ಕಾರ

ನ್ಯಾಯಪೀಠವು “ಪ್ರಸ್ತುತ ಅರ್ಜಿಯು ಸಮಾಜದ ಸಂಪೂರ್ಣ ವಾಸ್ತವತೆಯನ್ನು ಎತ್ತಿ ತೋರಿಸುತ್ತದೆ, ಅರ್ಜಿದಾರರು ತಮ್ಮ ಲೈಂಗಿಕ ದೃಷ್ಟಿಕೋನದ ಕಾರಣದಿಂದಾಗಿ ಸಮಾಜದಲ್ಲಿ ತಾರತಮ್ಯವನ್ನು ಎದುರಿಸುತ್ತಿದ್ದಾರೆ. ಆದರೆ ಲೈಂಗಿಕ ದೃಷ್ಟಿಕೋನವು ಮಾನವನಿಗೆ ಸಹಜವಾಗಿದೆ” ಎಂದಿದೆ.

ವ್ಯಕ್ತಿಯ ಲೈಂಗಿಕ ದೃಷ್ಟಿಕೋನವನ್ನು ಆಧರಿಸಿದ ಯಾವುದೇ ತಾರತಮ್ಯ ಕೂಡ ಅಸಂವಿಧಾನಿಕವೆಂದು ನವತೇಜ್ ಸಿಂಗ್ ಜೋಹರ್ ಪ್ರಕರಣದಲ್ಲಿ ಪರಿಗಣಿಸಲಾಗಿದ್ದನ್ನು ನ್ಯಾಯಪೀಠ ಗಣನೆಗೆ ತೆಗೆದುಕೊಂಡಿತು.

ಜೊತೆಗೆ “ನ್ಯಾಯಾಲಯವು ಸಾಂವಿಧಾನಿಕ ನ್ಯಾಯಾಲಯವಾಗಿರುವುದರಿಂದ ಸಾಂವಿಧಾನಿಕ ನೈತಿಕತೆ ಮತ್ತು ಲೈಂಗಿಕ ದೃಷ್ಟಿಕೋನದಿಂದಾಗಿ ಮಾತ್ರ ಅಪಾಯದಲ್ಲಿರುವ ನಾಗರಿಕರ ಹಕ್ಕುಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಗಮನಿಸಲು ಬದ್ಧವಾಗಿದೆ” ಎಂದಿದೆ.


ಇದನ್ನೂ ಓದಿ: ಜೈಶ್ರೀರಾಮ್, ಭಾರತ್ ಮಾತಾಕೀ ಜೈ ಘೋಷಣೆ ವಿರೋಧಿಗಳಿಗೆ ಮತ ನೀಡಬೇಕೆ? ಪ್ರಧಾನಿ ಬಾಯಲ್ಲಿ ಎಂತಹ ಮಾತು?

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ನಾನು ಗೌರಿ ಡೆಸ್ಕ್
+ posts

LEAVE A REPLY

Please enter your comment!
Please enter your name here