PC: On Manorama

ರಾಜ್ಯದಲ್ಲಿ ಪ್ರಕರಣಗಳ ತನಿಖೆ ನಡೆಸಲು ಕೇಂದ್ರ ತನಿಖಾ ದಳ(CBI) ಕ್ಕೆ ನೀಡಿದ್ದ ’ಸಾಮಾನ್ಯ ಒಪ್ಪಿಗೆ’ಯನ್ನು ಕೇರಳ ಸಚಿವ ಸಂಪುಟ ಹಿಂತೆಗೆದುಕೊಂಡಿದೆ. ಈ ಮೂಲಕ ಈ ತೀರ್ಮಾನ ತೆಗೆದುಕೊಂಡ ಬಿಜೆಪಿಯೇತರ ಆಡಳಿತವಿರುವ ಪಶ್ಚಿಮ ಬಂಗಾಳ, ರಾಜಸ್ಥಾನ, ಛತ್ತೀಸ್‌ಗಡ ಮತ್ತು ಮಹಾರಾಷ್ಟ್ರಗಳ ಪಟ್ಟಿಗೆ ಕೇರಳ ಸೇರಿತು.

ಈ ತೀರ್ಮಾನದಿಂದಾಗಿ ರಾಜ್ಯದಲ್ಲಿ ಮುಂದೆ ಯಾವುದೇ ತನಿಖೆ ನಡೆಸಲು ಸಿಬಿಐಗೆ ರಾಜ್ಯದ ಅನುಮತಿ ಪಡೆಯಬೇಕಾಗುತ್ತದೆ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ CBI ಗೆ ನೀಡಿದ್ದ ತನಿಖಾ ’ಒಪ್ಪಿಗೆ’ಯನ್ನು ಹಿಂತೆಗೆದುಕೊಂಡ ಸರ್ಕಾರ

ಇತ್ತೀಚೆಗೆ, ಮಹಾರಾಷ್ಟ್ರದ ಶಿವಸೇನೆ-ಕಾಂಗ್ರೆಸ್-ಎನ್‌ಸಿಪಿ ಒಕ್ಕೂಟದ ಸರ್ಕಾರವು ಸಿಬಿಐ ಅನ್ನು ನಿರ್ಬಂಧಿಸಲು ಬೇಕಾಗಿ ಈ ತೀರ್ಮಾನ ತೆಗೆದುಕೊಂಡಿತ್ತು. ಮಹಾರಾಷ್ಟ್ರದಲ್ಲಿ ಟಿಆರ್‌ಪಿ ಹಗರಣದ ಬಗ್ಗೆ ತನಿಖೆ ನಡೆಸಲು ಸಿಬಿಐ ನಿರ್ಧರಿಸಿದ ನಂತರ ಮಹಾರಾಷ್ಟ್ರ ಸರ್ಕಾರ ಈ ನಿರ್ಧಾರವನ್ನು ಘೋಷಿಸಿದ್ದು ಭಾರಿ ಸುದ್ದಿಯಾಗಿತ್ತು.

ವಿರೋಧ ಪಕ್ಷಗಳ ಆಡಳಿತವಿರುವ ರಾಜ್ಯಗಳಿಗೆ ಕಿರುಕುಳ ನೀಡಲು CBI ಯನ್ನು ಕೇಂದ್ರವು ದುರುಪಯೋಗಪಡಿಸಿಕೊಂಡಿದೆ ಎಂದು ಆರೋಪಿಸಿ ಪಶ್ಚಿಮ ಬಂಗಾಳ ಮತ್ತು ಆಂಧ್ರಪ್ರದೇಶ ಸಿಬಿಐಗೆ ತನಿಖೆಗೆ ನೀಡಿದ ಸಾಮಾನ್ಯ ಒಪ್ಪಿಗೆಯನ್ನು 2018 ರಲ್ಲಿ ಹಿಂತೆಗೆದುಕೊಂಡಿತ್ತು. ಆದರೆ 2019 ರಲ್ಲಿ ಅಧಿಕಾರಕ್ಕೆ ಬಂದ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರ ಸರ್ಕಾರ ಆಂಧ್ರ ಪ್ರದೇಶದಲ್ಲಿ ನಿರ್ಧಾರವನ್ನು ಹಿಂತೆಗೆದುಕೊಂಡಿತ್ತು.

ಕಾಂಗ್ರೆಸ್ ಆಡಳಿತದಲ್ಲಿದ್ದ ಛತ್ತೀಸ್‌ಗಡ 2019 ರ ಜನವರಿಯಲ್ಲಿ ಸಿಬಿಐಗೆ ನೀಡಿದ ಸಾಮಾನ್ಯ ಒಪ್ಪಿಗೆಯನ್ನು ಹಿಂತೆಗೆದುಕೊಂಡಿತು.  ಜುಲೈ 2020 ರಲ್ಲಿ ರಾಜಸ್ಥಾನದ ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರವು ಇದನ್ನು ಅನುಸರಿಸಿತು.

ಇದನ್ನೂ ಓದಿ: ಸುಪ್ರೀಂ ಕೋರ್ಟ್ ನಿರ್ದೇಶನವನ್ನೇ ಮೀರಿದ ಸಿಬಿಐ ನ್ಯಾಯಾಲಯದ ಬಾಬ್ರಿ ತೀರ್ಪು

LEAVE A REPLY

Please enter your comment!
Please enter your name here