Homeಮುಖಪುಟಡ್ರಗ್ ಕೇಸ್: ಎನ್‌ಸಿಬಿಯಿಂದ ನಟಿ ದೀಪಿಕಾ ಪಡುಕೋಣೆ ಮ್ಯಾನೇಜರ್‌ ವಿಚಾರಣೆ

ಡ್ರಗ್ ಕೇಸ್: ಎನ್‌ಸಿಬಿಯಿಂದ ನಟಿ ದೀಪಿಕಾ ಪಡುಕೋಣೆ ಮ್ಯಾನೇಜರ್‌ ವಿಚಾರಣೆ

ಕರಿಷ್ಮಾ ಅವರು ಬುಧವಾರ ಎನ್‌ಸಿಬಿ ಕಚೇರಿಗೆ ಬರುವ ಮುನ್ನವೇ ನಿರೀಕ್ಷಿತ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಆಕೆಯನ್ನು ನವೆಂಬರ್ 7 ರವರೆಗೆ ಬಂಧಿಸದಂತೆ ಮುಂಬೈ ನ್ಯಾಯಾಲಯ ಆದೇಶಿಸಿದೆ.

- Advertisement -
- Advertisement -

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರ ಮ್ಯಾನೇಜರ್ ಕರಿಷ್ಮಾ ಪ್ರಕಾಶ್ ಅವರು ಮುಂಬೈನ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ. ಕರಿಷ್ಮಾ ನಿವಾಸದ ಮೇಲೆ ದಾಳಿ ನಡೆಸಿದಾಗ 1.7 ಗ್ರಾಂ ಮಾದಕ ವಸ್ತು ವಶಪಡಿಸಿಕೊಂಡಿದ್ದಾಗಿ ಕರಿಷ್ಮಾ ಪ್ರಕಾಶ್ ಅವರನ್ನು ಎನ್‌ಸಿಬಿ ಕರೆಸಿತ್ತು.

ಎನ್‌ಸಿಬಿ, ಕರಿಷ್ಮಾ ಪ್ರಕಾಶ್‌ಗೆ ಸಂಬಂಧಿಸಿರುವ ಮನೆ-ಕಚೇರಿಗಳಲ್ಲಿ ಶೋಧ ನಡೆಸಿ, ಆಕೆಗೆ ಸಮನ್ಸ್ ಜಾರಿಗೊಳಿಸಿತ್ತು. ಶೋಧದಲ್ಲಿ ಎನ್‌ಸಿಬಿ ಅಧಿಕಾರಿಗಳು ಆಕೆಯ ಮನೆಯಿಂದ ಕೆಲವು ವಸ್ತುಗಳನ್ನು ವಶಪಡಿಸಿಕೊಂಡಿರುವುದಾಗಿ ತಿಳಿಸಿದ್ದರು. ಏಜೆನ್ಸಿಯ ಸಮನ್ಸ್‌ಗೆ ಉತ್ತರಿಸದೆ ಕರಿಷ್ಮಾ ಪ್ರಕಾಶ್ ನಾಪತ್ತೆಯಾಗಿದ್ದಾರೆ ಎಂದು ಈ ಹಿಂದೆ ಎನ್‌ಸಿಬಿ ಹೇಳಿತ್ತು.

ಕರಿಷ್ಮಾ ಅವರು ಬುಧವಾರ ಎನ್‌ಸಿಬಿ ಕಚೇರಿಗೆ ಬರುವ ಮುನ್ನವೇ ನಿರೀಕ್ಷಿತ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಆಕೆಯನ್ನು ನವೆಂಬರ್ 7 ರವರೆಗೆ ಬಂಧಿಸದಂತೆ ಮುಂಬೈ ನ್ಯಾಯಾಲಯ ಆದೇಶಿಸಿದೆ.

ಇತ್ತ ಕರಿಷ್ಮಾ ಈಗಾಗಲೇ ಪ್ರತಿಭಾ ಸಂಸ್ಥೆ “ಕ್ವಾನ್‌”(KWAN Talent Management Agency Private Limited) ಗೆ ರಾಜೀನಾಮೆ ನೀಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಆದ್ದರಿಂದ, ಇನ್ನು ಮುಂದೆ ದೀಪಿಕಾ ಪಡುಕೋಣೆ ಜೊತೆ ಯಾವುದೇ ಸಂಬಂಧ ಹೊಂದಿಲ್ಲ ಎಂದು ಕ್ವಾನ್ ಸಂಸ್ಥೆ ಹೇಳಿದೆ.

“ಕರಿಷ್ಮಾ ಪ್ರಕಾಶ್ ಅವರು ಅಕ್ಟೋಬರ್ 21 ರಂದು ತಮ್ಮ ರಾಜೀನಾಮೆ ನೀಡಿದ್ದಾರೆ. ಆಕೆಗೆ ಈಗ ಕ್ವಾನ್‌ ಅಥವಾ ದೀಪಿಕಾ ಪಡುಕೋಣೆ ಸೇರಿದಂತೆ ಏಜೆನ್ಸಿ ಪ್ರತಿನಿಧಿಸುವ ಯಾವುದೇ ಕಲಾವಿದರೊಂದಿಗೆ ಯಾವುದೇ ಸಂಬಂಧವಿಲ್ಲ. ನಡೆಯುತ್ತಿರುವ ತನಿಖೆಗಳು ಕರಿಷ್ಮಾ ಪ್ರಕಾಶ್ ಅವರ ಮೇಲೆ ನಡೆಯುತ್ತಿವೆ” ಕ್ವಾನ್‌ನ ಸಹ ಸಂಸ್ಥಾಪಕ ಮತ್ತು ಸಿಇಒ ವಿಜಯ್ ಸುಬ್ರಮಣ್ಯಂ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಕಂಗನಾ ವಿರುದ್ಧ ವಿಡಿಯೋ ಮಾಡಲು 65 ಲಕ್ಷ ಹಣ ಪಡೆಯಲಾಗಿದೆ: ಧೃವ್ ರಾಠೀ ಕೊಟ್ಟ…

ಎನ್‌ಸಿಬಿ ಬಾಲಿವುಡ್ ಚಿತ್ರರಂಗಕ್ಕೆ ಸಂಬಂಧಿಸಿರುವ ಡ್ರಗ್ಸ್ ಪ್ರಕರಣದ ತನಿಖೆ ನಡೆಸುತ್ತಿದ್ದು, ನಟಿಯರಾದ ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್, ರಕುಲ್‌ಪ್ರೀತ್ ಸಿಂಗ್ ಮತ್ತು ಶ್ರದ್ಧಾ ಕಪೂರ್ ಸೇರಿದಂತೆ ಹಲವಾರು ನಟ ನಟಿಯರನ್ನು ಪ್ರಶ್ನಿಸಿದೆ.

ಪ್ರಕರಣದಲ್ಲಿ ಬಂಧಿತರಾಗಿದ್ದ ನಟಿ ರಿಯಾ ಚಕ್ರವರ್ತಿಯವರ ಫೋನ್‌ನಿಂದ ವಶಪಡಿಸಿಕೊಳ್ಳಲಾಗಿದ್ದ ಎಂದು ಹೇಳಲಾದ “ಡ್ರಗ್ ಚಾಟ್‌ಗಳ” ಹಿನ್ನೆಲೆಯಲ್ಲಿ ಎನ್‌ಸಿಬಿ ತನಿಖೆ ನಡೆಸುತ್ತಿದೆ.

ಅದೇ ಸಮಯದಲ್ಲಿ, ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದ ಕೆಲವು ವಾಟ್ಸಾಪ್ ಗುಂಪಿನಲ್ಲಿ ದೀಪಿಕಾ ಪಡುಕೋಣೆ ಮತ್ತು ಆಕೆಯ ಮ್ಯಾನೇಜರ್ ಕರಿಷ್ಮಾ ಪ್ರಕಾಶ್ ಇಬ್ಬರ ಹೆಸರುಗಳೂ ಬಂದಿದ್ದವು ಎಂದು ಆರೋಪಿಸಿ ಎನ್‌ಸಿಬಿ ಈ ಸೆಪ್ಟೆಂಬರ್‌ನಲ್ಲಿ ಅವರನ್ನು ವಿಚಾರಿಸಿತ್ತು.


ಇದನ್ನೂ ಓದಿ: ಅಮೆರಿಕ ಚುನಾವಣೆ: ಕಮಲಾ ಹ್ಯಾರಿಸ್ ಗೆಲುವಿಗಾಗಿ ತಮಿಳುನಾಡಲ್ಲಿ ವಿಶೇಷ ಪೂಜೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಇವಿಎಂ’ ತಿರುಚಲು ಶಿವಸೇನಾ ನಾಯಕನಿಗೆ 2.5 ಕೋಟಿ ರೂ.ಬೇಡಿಕೆ ಇಟ್ಟ ಯೋಧ!

0
ವಿದ್ಯುನ್ಮಾನ ಮತಯಂತ್ರಗಳನ್ನು(ಇವಿಎಂ) ತಿರುಚಲು ಶಿವಸೇನಾ ಉದ್ಧವ್‌ ಬಣದ ನಾಯಕ ಅಂಬಾದಾಸ್ ದನ್ವೆ ಅವರಿಂದ 2.5 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದಕ್ಕಾಗಿ ಮಹಾರಾಷ್ಟ್ರ ಪೊಲೀಸರು ಛತ್ರಪತಿ ಸಂಭಾಜಿನಗರದಲ್ಲಿ ಸೇನಾ ಯೋಧನೋರ್ವನನ್ನು ಬಂಧಿಸಿದ್ದಾರೆ. ಮಾರುತಿ ಧಕ್ನೆ(42) ವಿರುದ್ಧ ದೂರು...