ಬಿಹಾರ ಚುನಾವಣೆಯ ಮೂರನೇ ಹಂತದ ಮತದಾನಕ್ಕೂ ಮೊದಲು ಮುಖ್ಯಮಂತ್ರಿ ನಿತೀಶ್ ಕುಮಾರ್ ಮೇಲೆ ತೀವ್ರ ವಾಗ್ದಾಳಿ ಮಾಡಿರುವ ಲೋಕ್‌ತಾಂತ್ರಿಕ್ ಜನತಾ ಪಕ್ಷದ ಮುಖ್ಯಸ್ಥ ಚಿರಾಗ್ ಪಾಸ್ವಾನ್, ‘ನವೆಂಬರ್ 10 ರಂದು ಫಲಿತಾಂಶ ಘೋಷಣೆಯ ನಂತರ ರಾಷ್ಟೀಯ ಜನತಾದಳದ ಮುಖ್ಯಸ್ಥ ತೇಜಸ್ವಿ ಯಾದವ್ ಮುಂದೆ ಮಂಡಿಯೂರಲೇ ಬೇಕು” ಎಂದು ಹೇಳಿದ್ದಾರೆ.
ಎಎನ್‌ಐ ಜೊತೆ ಮಾತನಾಡಿದ ಪಾಸ್ವಾನ್, “ನೀವು ಪ್ರಧಾನ ಮಂತ್ರಿಯನ್ನು ಟೀಕಿಸಲು ಎಂದಿಗೂ ಆಯಾಸಗೊಂಡಿರಲಿಲ್ಲ. ಆದರೆ ಈಗ ಅವರೊಂದಿಗೆ ವೇದಿಕೆಯನ್ನು ಹಂಚಿಕೊಳ್ಳುತ್ತಿರುವಾಗ, ನೀವು ಅವರ ಮುಂದೆ ನಮಸ್ಕರಿಸಲು ಹಿಂಜರಿಯುತ್ತಿಲ್ಲ. ಇದು ಅಧಿಕಾರ ಮತ್ತು ಮುಖ್ಯಮಂತ್ರಿ ಹುದ್ದೆಯ ಬಗೆಗಿನ ನಿಮ್ಮ ದುರಾಸೆಯನ್ನು ತೋರಿಸುತ್ತದೆ. ಚುನಾವಣಾ ಫಲಿತಾಂಶದ ನಂತರ, ನೀವು ತೇಜಸ್ವಿ ಯಾದವ್ ಎದುರು ಮಂಡಿಯೂರಲೇ ಬೇಕು” ಎಂದು ಹೇಳಿದರು.
ಇದನ್ನೂ ಓದಿ: ಬಿಹಾರ ಚುನಾವಣೆ: ಮುಖ್ಯಮಂತ್ರಿ ನಿತೀಶ್ ಕುಮಾರ್ ಮೇಲೆ ಈರುಳ್ಳಿ ಎಸೆದು ಆಕ್ರೋಶ!
#WATCH जिस प्रधानमंत्री जी को आप (नीतीश कुमार) कोसते नहीं थक रहे थे आज उनके साथ मंच पर नतमस्तक होते नहीं थक रहे हैं। ये कुर्सी के प्रति आपका प्रेम और लालच दिखाता है। 10 तारीख के बाद ये तेजस्वी के सामने नतमस्तक होते दिखेंगे: LJP प्रमुख चिराग पासवान pic.twitter.com/Mdf6OGzjAz
— ANI_HindiNews (@AHindinews) November 5, 2020
ಇದನ್ನೂ ಓದಿ: ಬಿಹಾರ ಚುನಾವಣೆ: CPI(ML) ಅಭ್ಯರ್ಥಿಯನ್ನು ಬಾಂಬ್ ದಾಳಿ ಆರೋಪಿಯೆಂದು ಸುಳ್ಳು ಹರಡಿದ ಬಿಜೆಪಿ!
ಕೊರೊನಾ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವಲ್ಲಿನ ವಿಫಲತೆ, ಹೆಚ್ಚುತ್ತಿರುವ ನಿರುದ್ಯೋಗ ಮತ್ತು ರಾಜ್ಯದಲ್ಲಿ ಅಭಿವೃದ್ಧಿಯ ಕೊರತೆಯನ್ನು ಉಲ್ಲೇಖಿಸಿ ಚಿರಾಗ್ ಪಾಸ್ವಾನ್ ಬಿಹಾರ ಸಿಎಂ ಮೇಲೆ ವಾಗ್ದಾಳಿ ನಡೆಸಿದ್ದಾರೆ.
आदरणीय @NitishKumar जी आदरणीय प्रधानमंत्री @narendramodi जी के नाम पर और महागठबंधन का डर दिखा कर चुनाव जीतना चाहतें हैं।खुद 5 साल क्या किया है यह राज़ किसी को नहीं पता।जे॰डी॰यू॰ के नेता आते है सिर्फ़ केंद्र सरकार की योजना गिनवा कर चले जाते हैं।जेडीयू ने प्रदेश को बर्बाद किया है। pic.twitter.com/M4mLM5jU0T
— युवा बिहारी चिराग पासवान (@iChiragPaswan) November 4, 2020
ಇದನ್ನೂ ಓದಿ: ಬಿಹಾರ ಚುನಾವಣೆ: #BiharRejectsModi ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್!
ಬಿಹಾರ ಸಿಎಂ ನಿತೀಶ್ ಕುಮಾರ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಟ್ವಿಟ್ಟರ್ ಖಾತೆಗಳನ್ನು ಟ್ಯಾಗ್ ಮಾಡಿ, “ನಿತೀಶ್ ಕುಮಾರ್ ಪ್ರಧಾನಿ ಮೋದಿ ತಂದ ಯೋಜನೆಗಳನ್ನು ಉಲ್ಲೇಖಿಸಿ ಅಥವಾ ಮಹಾಘಟಬಂಧನ್ ಬಗ್ಗೆ ಸುಳ್ಳು ಹೇಳುವ ಮೂಲಕ ಮತಗಳನ್ನು ಕೋರುತ್ತಿದ್ದಾರೆ. ಹಾಗಾಗಿ ಕಳೆದ 5 ವರ್ಷಗಳಲ್ಲಿ ನಿತೀಶ್ ಕುಮಾರ್ ಏನು ಮಾಡಿದ್ದಾರೆ ಎಂಬುದು ಬಗೆಹರಿಯದ ರಹಸ್ಯವಾಗಿ ಉಳಿದಿದೆ. ಜೆಡಿಯು ರಾಜ್ಯವನ್ನು ನಾಶಪಡಿಸಿದೆ” ಎಂದು ಪಾಸ್ವಾನ್ ಟ್ವೀಟ್ ಮಾಡಿದ್ದಾರೆ.
ರಾಜ್ಯದ ಚುನಾವಣೆಯಲ್ಲಿ ಮಹತ್ವದ ಪಾತ್ರವಹಿಸಿರುವ ತೇಜಸ್ವಿ ಯಾದವ್ ಮತ್ತು ಚಿರಾಗ್ ಪಾಸ್ವಾನ್ ಒಟ್ಟಾಗಿ ನಿತೀಶ್ ಕುಮಾರ್ ಮೇಲೆ ದಾಳಿ ನಡೆಸುತ್ತಿದ್ದು, ಈ ಬಾರಿ ನಿತೀಶ್ ಕುಮಾರ್ ಆಯ್ಕೆಯಾಗುವುದಿಲ್ಲ ಎಂದು ಹಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈಗಾಗಲೇ 2 ಹಂತದ ಮತದಾನ ಮುಗಿದಿದ್ದು, ನವೆಂಬರ್ 7 ರಂದು ನಡೆಯಲಿರುವ ಅಂತಿಮ ಹಂತದ ಮತದಾನಕ್ಕೆ ಬಿಹಾರ ಸಜ್ಜಾಗುತ್ತಿದೆ. ನವೆಂಬರ್ 10 ರಂದು ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ.
ಇದನ್ನೂ ಓದಿ: ಬಿಹಾರ ಚುನಾವಣೆ: ಉಚಿತ ಕೊರೊನಾ ಲಸಿಕೆ ಪ್ರಸ್ತಾಪ; ಟ್ರೋಲ್ ಆದ ಬಿಜೆಪಿ ಪ್ರಣಾಳಿಕೆ!


