Homeಅಂತರಾಷ್ಟ್ರೀಯ’ಉಸಿರು ಬಿಗಿ ಹಿಡಿದ ಅಮೆರಿಕಾ’ - ವಿಶ್ವದ ಪ್ರಮುಖ ಪತ್ರಿಕೆಗಳ ಕಣ್ಣಲ್ಲಿ ಅಮೆರಿಕಾ ಚುನಾವಣಾ ಫಲಿತಾಂಶ!

’ಉಸಿರು ಬಿಗಿ ಹಿಡಿದ ಅಮೆರಿಕಾ’ – ವಿಶ್ವದ ಪ್ರಮುಖ ಪತ್ರಿಕೆಗಳ ಕಣ್ಣಲ್ಲಿ ಅಮೆರಿಕಾ ಚುನಾವಣಾ ಫಲಿತಾಂಶ!

ಹಾಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಮಾಜಿ ಉಪಾಧ್ಯಕ್ಷ ಜೋ ಬೈಡೆನ್‌ ನಡುವಿನ ರಾಜಕೀಯ ಸಮರವನ್ನು ಜಾಗತಿಕ ಮಾಧ್ಯಮ ವಿಶೇಷವಾಗಿ ವರದಿ ಮಾಡಿದೆ.

- Advertisement -
- Advertisement -

ಅಮೆರಿಕಾ ಅಧ್ಯಕ್ಷೀಯ ಚುನಾವಣೆ ರೋಚಕ ಘಟ್ಟ ತಲುಪಿದ್ದು ಇಡೀ ವಿಶ್ವವೇ ಸ್ಪಷ್ಟ ಚಿತ್ರಣಕ್ಕಾಗಿ ಕುತೂಹಲದಿಂದ ಅಮೆರಿಕದತ್ತ ನೋಡುತ್ತಿದೆ. ಇದೇ ಮೊದಲ ಬಾರಿಗೆ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿಯೊಬ್ಬರು ಅತಿ ಹೆಚ್ಚು ಮತ ಪಡೆದ ದಾಖಲೆ ಒಂದೆಡೆಯಾದರೆ, ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನಲೆಯಲ್ಲಿ ಟ್ರಂಪ್ ತಾನು ಸುಪ್ರೀಂಕೋರ್ಟ್‌ಗೆ ಮೊರೆ ಹೋಗುತ್ತೇನೆ ಎಂದು ಹೇಳುತ್ತಿದ್ದಾರೆ.

ಹಾಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಮಾಜಿ ಉಪಾಧ್ಯಕ್ಷ ಜೋ ಬೈಡೆನ್‌ ನಡುವಿನ ರಾಜಕೀಯ ಸಮರವನ್ನು ಜಾಗತಿಕ ಮಾಧ್ಯಮ ವಿಶೇಷವಾಗಿ ವರದಿ ಮಾಡಿದೆ. ಅವುಗಳ ಮುಖಪುಟ ವರದಿ ಹಾಗೂ ಶೀರ್ಷಿಕೆಗಳು ಇಲ್ಲಿವೆ.

ಇದನ್ನೂ ಓದಿ: ಶ್ವೇತಭವನದ ಹೊರಗೆ ಗುಂಡು ಹಾರಾಟ; ಪತ್ರಿಕಾಗೋಷ್ಟಿಯಿಂದ ಹೊರನಡೆದ ಟ್ರಂಪ್

ಅಮೆರಿಕದ ವಾಷಿಂಗ್‌ಟನ್ ಪೋಸ್ಟ್, ಯುಎಸ್‌ಎ ಟುಡೆ, ಸ್ಯಾನ್‌‌ಫ್ರಾನ್ಸಿಸ್ಕೋ ಕ್ರಾನಿಕಲ್, ದಿ ಸನ್ ಸೇರಿದಂತೆ ಅಮೆರಿಕದ ಪ್ರತಿಷ್ಟಿತ ಪತ್ರಿಕೆಗಳು ಚುನಾವಣೆಯನ್ನು ವಿಸ್ತೃತವಾಗಿ ವರದಿ ಮಾಡಿದೆ.

ಇದನ್ನೂ ಓದಿ: ಅಮೆರಿಕಾ ಚುನಾವಣೆ: ಬೆಳಗಾವಿ ಮೂಲದ ಶ್ರೀ ಥಾಣೇದಾರ್‌ ’ಪ್ರತಿನಿಧಿ ಸಭೆ’ಗೆ ಆಯ್ಕೆ

ಇಂಗ್ಲೇಂಡಿನ ಪ್ರತಿಷ್ಟಿತ ಪತ್ರಿಕೆಗಳಾದ ದಿ ಗಾರ್ಡಿಯನ್, ಡೈಲಿ ಟೆಲಿಗ್ರಾಫ್, ಐರಿಷ್ ಟೈಮ್ಸ್ ಹಾಗೂ ದಿ ಟೈಮ್ಸ್ ಕೂಡಾ ಚುನಾವಣೆಯ ಸುದ್ದಿಯನ್ನು ಪ್ರಕಟಿಸಿದೆ.

ದಿ ಟೈಮ್ಸ್ “ಉಸಿರು ಬಿಗಿ ಹಿಡಿದ ಅಮೆರಿಕಾ” ಎಂದು ತನ್ನ ಮುಖಪುಟ ಸುದ್ದಿಗೆ ಶಿರೋನಾಮೆ ನೀಡಿದೆ. ಅಲ್ಲದೆ ಚುನಾವಣೆಯ ವಿಶ್ಲೇಷಣೆಗೆ “ಒಂದು ರಾಷ್ಟ್ರ ವಿಭಜನೆಯಾಗಿದೆ” ಎಂದು ಶಿರ್ಷಿಕೆ ನೀಡಿದೆ.

ಇದನ್ನೂ ಓದಿ: ’ಮೈ ಫ್ರೆಂಡ್ ಭಾರತವನ್ನಷ್ಟೇ ಹೊಲಸು ಎಂದರು; ನನ್ನನ್ನು ಇನ್ನೂ ಪ್ರೀತಿಸುತ್ತಿದ್ದಾರೆ’

ಇಷ್ಟೇ ಅಲ್ಲದೆ ಜಗತ್ತಿನ ಇತರ ಪ್ರಮುಖ ಪತ್ರಿಕೆಗಳಾದ ಗಲ್ಫ್ ನ್ಯೂಸ್, ದಿ ಜಪಾನ್ ಟೈಮ್ಸ್, ದಿ ಆಸ್ಟ್ರೇಲಿಯನ್, ದಿ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಕೂಡಾ ಚುನಾವಣೆಯ ಸುದ್ದಿಯನ್ನು ಪ್ರಕಟಿಸಿದೆ.

 

ಇದನ್ನೂ ಓದಿ: ಅಮೆರಿಕಾ ಚುನಾವಣೆ: ಟ್ರಂಪ್ ಕುರಿತು ಬರ್ನಿ ಸ್ಯಾಂಡರ್ಸ್ ನುಡಿದಿದ್ದ ಭವಿಷ್ಯ ಸತ್ಯವಾದಾಗ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...