Homeಅಂತರಾಷ್ಟ್ರೀಯಶ್ವೇತಭವನದ ಹೊರಗೆ ಗುಂಡು ಹಾರಾಟ; ಪತ್ರಿಕಾಗೋಷ್ಟಿಯಿಂದ ಹೊರನಡೆದ ಟ್ರಂಪ್

ಶ್ವೇತಭವನದ ಹೊರಗೆ ಗುಂಡು ಹಾರಾಟ; ಪತ್ರಿಕಾಗೋಷ್ಟಿಯಿಂದ ಹೊರನಡೆದ ಟ್ರಂಪ್

- Advertisement -
- Advertisement -

ಶ್ವೇತಭವನದ ಹೊರಗೆ ಗುಂಡು ಹಾರಾಟ ನಡೆದದ್ದರಿಂದ ಅಮರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಸೋಮವಾರ ಶ್ವೇತಭವನದ ಪತ್ರಿಕಾಗೋಷ್ಠಿ ಕೊಠಡಿಯಿಂದ ಥಟ್ಟನೆ ಸ್ಥಳಾಂತರಿಸಲಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಇದಾಗಿ ನಿಮಿಷಗಳ ನಂತರ ಕೋಣೆಗೆ ಮರಳಿದ ಅವರು ಶ್ವೇತಭವನದ ಹೊರಗೆ ಸೀಕ್ರೆಟ್ ಸರ್ವಿಸ್‌ನವರು ಯಾರನ್ನೋ ಶೂಟ್ ಮಾಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

“ಇದು ಶ್ವೇತಭವನದ ಹೊರಗೆ ನಡೆದ ಗುಂಡು ಹಾರಾಟ, ಪ್ರಸ್ತುತ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ತೋರುತ್ತದೆ … ಆದರೆ ನಿಜವಾದ ಗುಂಡು ಹಾರಟ ನಡೆದಿದೆ, ಯಾರನ್ನೋ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ವ್ಯಕ್ತಿಯ ಪರಿಸ್ಥಿತಿಯ ಬಗ್ಗೆ ನನಗೆ ತಿಳಿದಿಲ್ಲ” ಎಂದು ಟ್ರಂಪ್ ಹೇಳಿದ್ದಾರೆ.

ಸೀಕ್ರೆಟ್ ಸರ್ವಿಸ್ ಸಿಬ್ಬಂದಿಗಳನ್ನು ಟ್ರಂಪ್ “ಅವರು ಅದ್ಭುತ ಜನರು” ಎಂದು ಶ್ಲಾಘಿಸಿದ್ದಾರೆ. ಈ ಘಟನೆಯಿಂದ ಅವರು ಗಲಾಟೆ ಮಾಡಿದ್ದಾರೆಯೇ ಎಂದು ಮಾಧ್ಯಮದವರು ಪ್ರಶ್ನಿಸಿದಾಗ, “ನನಗೆ ಗೊತ್ತಿಲ್ಲ, ನಾನು ಗಲಾಟೆ ಮಾಡುತ್ತಿದ್ದೇನೆಯೆ?” ಎಂದು ತಿರುಗಿ ಟ್ರಂಪ್ ಪ್ರಶ್ನಿಸಿದ್ದಾರೆ.

ಅವರನ್ನು ಹೊರಗೆ ಕರೆದೊಯ್ಯುವ ಸ್ವಲ್ಪ ಸಮಯದ ಮೊದಲು ಶ್ವೇತಭವನದ ಪತ್ರಿಕಾಗೋಷ್ಠಿ ಕೋಣೆಯ ಬಾಗಿಲುಗಳನ್ನು ಲಾಕ್ ಮಾಡಿ, ಅವರನ್ನು ಶ್ವೇತಭವನದ ಪಶ್ಚಿಮ ವಿಭಾಗದಲ್ಲಿರುವ ಓವಲ್ ಕಚೇರಿಗೆ ಕರೆದೊಯ್ಯಲಾಯಿತು.

ಶ್ವೇತಭವನದ ಬ್ಲಾಕ್‌ಗಳಲ್ಲಿ ಒಂದಾಗಿರುವ 17 ನೇ ಬೀದಿ ವಾಯುವ್ಯ ಮತ್ತು ಪೆನ್ಸಿಲ್ವೇನಿಯಾ ಅವೆನ್ಯೂ ವಾಯುವ್ಯದಲ್ಲಿ ನಡೆದ ಶೂಟಿಂಗ್‌ನಲ್ಲಿ ಅಧಿಕಾರಿಯೊಬ್ಬರು ಭಾಗಿಯಾಗಿದ್ದಾರೆ ಎಂದು ಸೀಕ್ರೆಟ್ ಸರ್ವಿಸ್ ಟ್ವೀಟ್ ಮಾಡಿದೆ.

“ಯುಎಸ್ಎಸ್ಎಸ್ [ಯುನೈಟೆಡ್ ಸ್ಟೇಟ್ಸ್ ಸೀಕ್ರೆಟ್ ಸರ್ವಿಸ್] ಅಧಿಕಾರಿಯೊಬ್ಬರ ತನಿಖೆ ನಡೆಯುತ್ತಿದೆ” ಎಂದು ಅದು ಹೇಳಿದೆ.


ಓದಿ: ಟಿಕ್‌ಟಾಕ್, ವೀಚಾಟ್ ಜೊತೆಗಿನ ವಹಿವಾಟುಗಳ ನಿಷೇಧ: ಡೊನಾಲ್ಡ್ ಟ್ರಂಪ್ ಸಹಿ


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಕಲ್ಕತ್ತಾ ಹೈಕೋರ್ಟ್ ಮಾರಾಟ ಆಗಿದೆ’ ಎಂದ ಮಮತಾ ಬ್ಯಾನರ್ಜಿ ವಿರುದ್ಧ ಕ್ರಮಕ್ಕೆ ವಕೀಲರ ಗುಂಪು...

0
‘ಹೈಕೋರ್ಟ್ ಮಾರಾಟ ಆಗಿದೆ' ಎಂದು ಹೈಕೋರ್ಟ್‌ ವಿರುದ್ಧ ಟೀಕೆಯನ್ನು ಮಾಡಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಬೇಕೆಂದು ವಕೀಲರ ಗುಂಪು ಗುರುವಾರ ಕಲ್ಕತ್ತಾ ಹೈಕೋರ್ಟ್‌ಗೆ ಒತ್ತಾಯಿಸಿದೆ. ಶಾಲಾ ಉದ್ಯೋಗಿಗಳ...