Homeಅಂತರಾಷ್ಟ್ರೀಯಅಮೆರಿಕಾ ಚುನಾವಣೆ: ಬೆಳಗಾವಿ ಮೂಲದ ಶ್ರೀ ಥಾಣೇದಾರ್‌ ’ಪ್ರತಿನಿಧಿ ಸಭೆ’ಗೆ ಆಯ್ಕೆ

ಅಮೆರಿಕಾ ಚುನಾವಣೆ: ಬೆಳಗಾವಿ ಮೂಲದ ಶ್ರೀ ಥಾಣೇದಾರ್‌ ’ಪ್ರತಿನಿಧಿ ಸಭೆ’ಗೆ ಆಯ್ಕೆ

ಈ ವರ್ಷ 14 ಭಾರತೀಯ ಮೂಲದ ಅಭ್ಯರ್ಥಿಗಳು ಅಮೆರಿಕಾ ಚುನಾವಣೆಗೆ ಸ್ಪರ್ಧಿಸಿದ್ದು, ಅವರಲ್ಲಿ ಅರ್ಧದಷ್ಟು ಜನರು ಗೆದ್ದಿದ್ದಾರೆ.

- Advertisement -
- Advertisement -

ಎರಡು ವರ್ಷಗಳ ಹಿಂದೆ ರಾಜ್ಯಪಾಲರಾಗಿ ಸ್ಪರ್ಧಿಸಿದ್ದ ಬೆಳಗಾವಿ ಮೂಲದ ಶ್ರೀಮಂತ ಉದ್ಯಮಿ ಡೆಮಾಕ್ರಟಿಕ್ ಪಕ್ಷದ ಶ್ರೀ ಥಾಣೇದಾರ್‌ 93% ಮತಗಳನ್ನು ಪಡೆದು ಮಿಷಿಗನ್‌ ಕ್ಷೇತ್ರದಿಂದ ಅಮೆರಿಕಾ ಪ್ರತಿನಿಧಿಗಳ ಸಭೆಗೆ ಆಯ್ಕೆಯಾಗಿದ್ದಾರೆ.

65 ರ ವರ್ಷದ ಶ್ರೀ ಥಾಣೇದಾರ್‌ ವಿಜ್ಞಾನಿ ಆಗಿದ್ದು, ಮುಂಬೈ ವಿಶ್ವವಿದ್ಯಾಲಯದಿಂದ ರಸಾಯನ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಉನ್ನತ ವ್ಯಾಸಂಗಕ್ಕಾಗಿ 1979 ರಲ್ಲಿ ಅಮೆರಿಕಕ್ಕೆ ತೆರಳಿದ್ದ ಅವರು ಅಕ್ರೋನ್ ವಿಶ್ವವಿದ್ಯಾಲಯ ಮತ್ತು ಮಿಷಿಗನ್‌ ವಿಶ್ವವಿದ್ಯಾಲಯದಲ್ಲಿ ಅಭ್ಯಾಸ ಮಾಡಿದ್ದರು.

ಇದನ್ನೂ ಓದಿ: ಅಮೆರಿಕಾ ಚುನಾವಣೆ: ಟ್ರಂಪ್ ಕುರಿತು ಬರ್ನಿ ಸ್ಯಾಂಡರ್ಸ್ ನುಡಿದಿದ್ದ ಭವಿಷ್ಯ ಸತ್ಯವಾದಾಗ!

ಶ್ರೀ ಥಾಣೇದಾರ್‌ ಅವರು ತಮ್ಮ ಸ್ವಂತ ಸಂಪತ್ತಿನ ಸುಮಾರು 10 ಮಿಲಿಯನ್ ಡಾಲರ್‌ಗಳನ್ನು 2018 ರ ರಾಜ್ಯಪಾಲ ಹುದ್ದೆಗೆ ಸ್ಪರ್ಧಿಸುತ್ತಿರುವಾಗ ಖರ್ಚು ಮಾಡಿದ್ದರು. ಆದರೆ ಅಂದು ಅವರು ಮೂರನೇ ಸ್ಥಾನ ಪಡೆದಿದ್ದರು. ಶ್ರೀ ಥಾಣೇದಾರ್‌ ಮಾಧ್ಯಮಗಳಿಗೆ ನೀಡಿದ ಇತ್ತೀಚೆಗಿನ ಸಂದರ್ಶನದಲ್ಲಿ ತಾನು ಸಾಂಕ್ರಾಮಿಕ ರೋಗಕ್ಕೆ ಮುಂಚಿತವಾಗಿ ಪ್ರಚಾರವನ್ನು ಪ್ರಾರಂಭಿಸಿದ್ದಾಗಿ ಹೇಳಿದ್ದಾರೆ.

ಅಮೆರಿಕಾದಲ್ಲಿ ಭಾರತೀಯ ಮತದಾರರನ್ನು ಒಲಿಸಲು ಬೇಕಾಗಿ ಎರಡು ಪ್ರಮುಖ ಪಕ್ಷಗಳು ಭಾರಿ ಕಸರತ್ತು ನಡೆಸಿದೆ. ಟ್ರಂಪ್ ಭಾರತದ ಪ್ರಧಾನಿಯನ್ನೇ ತನ್ನ ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡಿದ್ದರೆ, ಡೆಮಾಕ್ರೆಟಿಕ್ ಪಕ್ಷವು ಉಪಾಧ್ಯಕ್ಷ ಸ್ಥಾನಕ್ಕೆ ಭಾರತೀಯ ಮೂಲದ ಕಮಲಾ ಹಾರಿಸ್ ಅವರನ್ನು ಆಯ್ಕೆ ಮಾಡಿತ್ತು.

ಆದಾಗ್ಯೂ, ಕಮಲಾ ಹ್ಯಾರಿಸ್ ಮಾತ್ರ ಅಮೆರಿಕಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಏಕೈಕ ಸದಸ್ಯೆಯಲ್ಲ. ಅಲ್ಲಿ ಈ ವರ್ಷ, ಸರಿಸುಮಾರು 14 ಭಾರತೀಯ ಮೂಲದ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದು, ಅವರಲ್ಲಿ ಸರಿಸುಮಾರು ಅರ್ಧದಷ್ಟು ಜನರು ಗೆದ್ದಿದ್ದಾರೆ.

ಡೆಮಾಕ್ರಟಿಕ್ ಪಕ್ಷದಿಂದ ಡಾ.ಅಮಿ ಬೇರಾ, ಪ್ರಮಿಲಾ ಜಯಪಾಲ್, ರೋ ಖನ್ನಾ ಮತ್ತು ರಾಜ ಕೃಷ್ಣಮೂರ್ತಿ ಅಮೆರಿಕಾ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ಗೆ ಮರು ಆಯ್ಕೆ ಆಗಿದ್ದಾರೆ

ಇದನ್ನೂ ಓದಿ: ಅಮೆರಿಕಾ ಚುನಾವಣೆ: ಹೊಸ ಭರವಸೆಯಿತ್ತ ನಾಲ್ವರು ಪ್ರಗತಿಪರ ಮಹಿಳೆಯರ ಗೆಲುವು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2023ರಲ್ಲಿ ತೀವ್ರ ಹಸಿವಿನಿಂದ ತತ್ತರಿಸಿದ 282 ಮಿಲಿಯನ್ ಜನರು: ಆಹಾರದ ಅಭಾವಕ್ಕೆ ವಿಶ್ವಸಂಸ್ಥೆ ಉಲ್ಲೇಖಿಸಿದ...

0
ಕಳೆದ ವರ್ಷ ಪ್ರಪಂಚದಾದ್ಯಂತ ಆಹಾರ ಅಭದ್ರತೆ ಸ್ಥಿತಿ ಭಾರೀ ಹದಗೆಟ್ಟಿದೆ, 2023ರಲ್ಲಿ ಸುಮಾರು 282 ಮಿಲಿಯನ್ ಜನರು ತೀವ್ರ ಹಸಿವಿನಿಂದ ಬಳಲಿದ್ದಾರೆ, ಇದರಲ್ಲಿ ವಿಶೇಷವಾಗಿ ಯುದ್ಧಪೀಡಿತ ಗಾಝಾ ಮತ್ತು ಸುಡಾನ್‌ನಲ್ಲಿ ಹೆಚ್ಚಿನ ಜನರು...