Homeಅಂತರಾಷ್ಟ್ರೀಯಜೋ ಬೈಡೆನ್‌ ಗೆಲುವು ಸ್ಪಷ್ಟ: ಟ್ರಂಪ್‌ಗೆ ಕಮಲಾ ಹ್ಯಾರಿಸ್ ತಿರುಗೇಟು!

ಜೋ ಬೈಡೆನ್‌ ಗೆಲುವು ಸ್ಪಷ್ಟ: ಟ್ರಂಪ್‌ಗೆ ಕಮಲಾ ಹ್ಯಾರಿಸ್ ತಿರುಗೇಟು!

ಅಮೆರಿಕಾದ ಇತಿಹಾಸದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಮತಗಳನ್ನು ಗಳಿಸಿ ನಾವು ಚುನಾವಣೆಯನ್ನು ನಿರ್ಣಾಯಕವಾಗಿ ಗೆದ್ದಿದ್ದೇವೆ- ಕಮಲಾ ಹ್ಯಾರಿಸ್

- Advertisement -
- Advertisement -

ಅಮೆರಿಕಾ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಜೋ ಬೈಡೆನ್ ಗೆಲುವನ್ನು ಒಪ್ಪಿಕೊಳ್ಳದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ “ಚುನಾವಣೆಯಲ್ಲಿ ಗೆಲುವು ಸಾಧಿಸುತ್ತೇವೆ” ಎಂದು ಹೊಸ ಟ್ವೀಟ್‌ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕಮಲಾ ಹ್ಯಾರಿಸ್, ಜೋ ಬೈಡೆನ್ ಸ್ಪಷ್ಟ, ಅವರು ಗೆಲುವು ಸಾಧಿಸಿದ್ದಾರೆ ಎಂದಿದ್ದಾರೆ.

ಮತ ಎಣಿಕೆಯಲ್ಲಿ ಜೋ ಬೈಡೆನ್‌ ಮುನ್ನಡೆ ಪಡೆದುಕೊಂಡ ದಿನದಿಂದಲೂ ಡೋನಾಲ್ಡ್ ಟ್ರಂಪ್ ತಮ್ಮದೇ ಗೆಲುವು ಎಂದು ಟ್ವೀಟ್‌ ಮಾಡುತ್ತಿದ್ದರು. ತಮ್ಮ ಟ್ವೀಟ್‌ಗಳಲ್ಲಿ ತಮಗೆ “ದೊಡ್ಡ ಗೆಲುವು” ಎಂದು ಹೇಳಿಕೊಳ್ಳುತ್ತಾ, ಡೆಮಾಕ್ರಟಿಕ್ ಪಕ್ಷದ ವಿರುದ್ಧ ವಂಚನೆಯ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ.

ಟ್ರಂಪ್‌ ಟ್ವೀಟ್‌ಗಳಿಒಗೆ ತಿರುಗೇಟು ನೀಡುವಂತೆ ಟ್ವೀಟ್ ಮಾಡಿರುವ ಕಮಲಾ ಹ್ಯಾರಿಸ್‌, ’ಅಮೆರಿಕದವರು ಜೋ ಬೈಡೆನ್ ಅವರನ್ನು ಆಯ್ಕೆ ಮಾಡಿರುವುದು ಸ್ಪಷ್ಟ. ಜೋ ಬೈಡೆನ್‌ಗೆ ದಕ್ಕಿದ ಪ್ರತಿ ಮತವೂ ಕೂಡ ಆರೋಗ್ಯ ರಕ್ಷಣೆಯ ಹಕ್ಕಾಗಿದ್ದು, ಅದು ಸವಲತ್ತಲ್ಲ ಎಂಬುದನ್ನು ತೋರಿಸುತ್ತಿದೆ. ಅಮೆರಿಕಾದ ಇತಿಹಾಸದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಮತಗಳನ್ನು ಗಳಿಸಿ ನಾವು ಚುನಾವಣೆಯನ್ನು ನಿರ್ಣಾಯಕವಾಗಿ ಗೆದ್ದಿದ್ದೇವೆ” ಎಂದಿದ್ದಾರೆ.

ಇದನ್ನೂ ಓದಿ: ಅಮೆರಿಕಾ ಚುನಾವಣೆ: ಇನ್ನೂ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಟ್ರಂಪ್- ಸರಣಿ ಟ್ವೀಟ್!

ಇತ್ತ ಟ್ರಂಪ್ ಮತ್ತಷ್ಟು ಟ್ವಿಟ್‌ಗಳನ್ನು ಮಾಡುತ್ತಲೇ ಇದ್ದಾರೆ. ಇಂದು ಬೆಳಿಗ್ಗೆ ಟ್ವೀಟ್ ಮಾಡಿರುವ ಟ್ರಂಪ್, “ಈ ಜಟಿಲ ಚುನಾವಣೆಯನ್ನು ಜನರು ಸ್ವೀಕರಿಸುವುದಿಲ್ಲ” ಎಂದು ಬರೆದುಕೊಂಡಿದ್ದಾರೆ.

ಚುನಾವಣೆ ಫಲಿತಾಂಶದಿಂದಲೂ ಇದೇ ರೀತಿಯ ಆರೋಪಗಳನ್ನು ಮಾಡುತ್ತಾ ಡೋನಾಲ್ಡ್ ಟ್ರಂಪ್ ಸುಮಾರು 30 ಟ್ವೀಟ್‌ಗಳನ್ನು ಮಾಡಿದ್ದಾರೆ. ಅವುಗಳಲ್ಲಿ ಸುಮಾರು 13 ಟ್ವೀಟ್‌ಗಳನ್ನು ಟ್ವಿಟರ್‌ ಕಂಪನಿ ಈಗಾಗಲೇ ನಿರ್ಬಂಧಿಸಿದೆ.

ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡೆನ್‌ ಅವರು 7.64 ಕೋಟಿ ಮತಗಳನ್ನು ಪಡೆದಿದ್ದಾರೆ. ಇವು ಟ್ರಂಪ್‌ಗಿಂತ 4 ಮಿಲಿಯನ್ ಹೆಚ್ಚು ಅಂತರದ ಮತಗಳಾಗಿವೆ.  ಈವರೆಗೆ 538 ಎಲೆಕ್ಟೋರ್‌ ಮತಗಳ ಪೈಕಿ 279 ಎಲೆಕ್ಟೋರ್‌ ಮತಗಳನ್ನು ಪಡೆದಿದ್ದಾರೆ ಎಂದು ನ್ಯೂಯಾರ್ಕ್‌ ಟೈಮ್ಸ್‌ ವರದಿ ಮಾಡಿದೆ.


ಇದನ್ನೂ ಓದಿ: ದೇಶವನ್ನು ಒಗ್ಗೂಡಿಸಿ ಮುನ್ನಡೆಸಲು ಜೋ ಬೈಡೆನ್ ಉತ್ತಮ ವ್ಯಕ್ತಿ- ಮಾಜಿ ಅಧ್ಯಕ್ಷ ಜಾರ್ಜ್ ಬುಷ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಎಎಪಿಯನ್ನು ಹತ್ತಿಕ್ಕಲು ಬಿಜೆಪಿ ಆಪರೇಷನ್ ಜಾದು ಆರಂಭಿಸಿದೆ..’; ಅರವಿಂದ್ ಕೇಜ್ರಿವಾಲ್

0
"ಪ್ರಧಾನಿ ನರೇಂದ್ರ ಮೋದಿ ಅವರು ಯಾರನ್ನಾದರೂ ಜೈಲಿಗೆ ಕಳುಹಿಸಬಹುದು" ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಆಮ್ ಆದ್ಮಿ ಪಕ್ಷದ (ಎಎಪಿ) ಹಿರಿಯ ನಾಯಕರೊಂದಿಗೆ ಇಂದು ಬಿಜೆಪಿ ಕೇಂದ್ರ ಕಚೇರಿಗೆ ಯೋಜಿತ...