ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಬಿಜೆಪಿಯೊಂದಿಗೆ ಸರ್ಕಾರ ರಚಿಸುವುದಾಗಿ ಹೇಳಿದ್ದ ಎಲ್‌ಜೆಪಿ ಮುಖ್ಯಸ್ಥ ಚಿರಾಗ್ ಪಾಸ್ವಾನ್, “ಈ ಚುನಾವಣೆಯಲ್ಲಿ ಜೆಡಿಯು ಪಕ್ಷವನ್ನು ಸೋಲಿಸುವುದೇ ನನ್ನ ಗುರಿಯಾಗಿತ್ತು” ಎಂದು ಹೇಳಿದ್ದಾರೆ.
ಈ ಚುನಾವಣೆಯಲ್ಲಿ 137 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಸ್ಪರ್ಧೆಗೆ ಇಳಿಸಿದ್ದ ಚಿರಾಗ್ ಪಾಸ್ವಾನ್ ಕೇವಲ 1 ಕ್ಷೇತ್ರದಲ್ಲಿ ಮಾತ್ರ ಗೆಲುವು ಸಾಧಿಸಿದ್ದಾರೆ. ಆದರೆ ಇವರ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಿದ್ದ ಕನಿಷ್ಟ 20 ಕ್ಷೇತ್ರಗಳಲ್ಲಿ ಜೆಡಿಯು ಸೋತಿರುವುದು ಗಮನಾರ್ಹ. ಆದರೆ ಈ ಕ್ಷೇತ್ರಗಳಲ್ಲಿ ಬಿಜೆಪಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ. ಈ ನಡೆಯಿಂದಾಗಿ ಸುಮಾರು 40 ಸ್ಥಾನಗಳನ್ನು ಜೆಡಿಯು ಕಳೆದುಕೊಂಡಿರಬಹುದು.
ಇದನ್ನೂ ಓದಿ: ಬಿಹಾರ ಚುನಾವಣೆ: ಸಾಮಾಜಿಕ ಜಾಲತಾಣಗಳಲ್ಲಿ’ಎಣಿಕೆ ನಿಲ್ಲಿಸಿ’ ಟ್ರೋಲ್!
“ಈ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಇನ್ನಷ್ಟು ಬಲಿಷ್ಠವಾಗಿ ಹೊರಹೊಮ್ಮಬೇಕು ಎಂದು ನಾನು ಬಯಸಿದ್ದೆ. ಈ ನಿಟ್ಟಿನಲ್ಲಿ ನನ್ನ ಪಕ್ಷವು ಬೀರಿರುವ ಪರಿಣಾಮ ನನಗೆ ತೃಪ್ತಿಯನ್ನುಂಟು ಮಾಡಿದೆ” ಎಂದು ಎಎನ್‌ಐಗೆ ಹೇಳಿದರು.
There will never be my support for Nitish Kumar and Sushil Modi. If he continues to become the Chief Minister of my state, there will not be my support at the state level…We will continue supporting PM Modi at the centre: LJP president Chirag Paswan#BiharElection2020 https://t.co/yHsTK3TGi4
— ANI (@ANI) November 11, 2020
‘ಎಲ್ಲ ಪಕ್ಷಗಳಂತೆ ನಾನೂ ಸಾಧ್ಯವಿರುವಷ್ಟು ಸ್ಥಾನಗಳನ್ನು ಗೆಲ್ಲಲು ಬಯಸಬಹುದಿತ್ತು. ಆದರೆ ಬಿಜೆಪಿ ರಾಜ್ಯದಲ್ಲಿ ಬಲಿಷ್ಠ ಪಕ್ಷವಾಗಿ ಹೊರಹೊಮ್ಮುವಂತೆ ಮಾಡುವುದು ನನ್ನ ಚುನಾವಣಾ ಉದ್ದೇಶವಾಗಿತ್ತು ’ಎಂದರು.
ಇದನ್ನೂ ಓದಿ: ಬಿಹಾರ: ‘ವಲಸೆ ಕಾರ್ಮಿಕರು’ ನಿತೀಶ್ ಕುಮಾರ್ ವಿರುದ್ಧ ಮತಚಲಾಯಿಸಿದ್ದಾರೆ- ತಜ್ಞರು
ಚಿರಾಗ್ ಪಾಸ್ವಾನ್ ತನ್ನ ಅಭ್ಯರ್ಥಿಗಳನ್ನು ನಿತೀಶ್ ಎದುರು ನಿಲ್ಲಿಸಿರುವುದೇ ಬಿಜೆಪಿಯನ್ನು ಇನ್ನಷ್ಟು ಬಲಪಡಿಸಲು ಎಂದು ಹಲವು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದರು.
2015ರ ಚುನಾವಣೆಯಲ್ಲಿ 71 ಕ್ಷೇತ್ರಗಳಲ್ಲಿ ಗೆದ್ದಿದ್ದ ಜೆಡಿಯು ಬಲ ಈ ಚುನಾವಣೆಯಲ್ಲಿ 43 ಸ್ಥಾನಗಳಿಗೆ ಕುಸಿದಿದ್ದರೆ, ಆಗ 53 ಸ್ಥಾನಗಳನ್ನು ಹೊಂದಿದ್ದ ಬಿಜೆಪಿ ಈಗ ತನ್ನ ಗೆಲುವನ್ನು 74ಕ್ಕೆ ಹೆಚ್ಚಿಸಿಕೊಂಡಿದೆ. ನಿತೀಶ್‌ಗೆ ಅಡ್ಡಗಾಲು ಹಾಕಲು ಬಿಜೆಪಿಯೇ ಚಿರಾಗ್ ಪಾಸ್ವಾನ್‌ಗೆ ಅವಕಾಶ ಕಲ್ಪಿಸಿತ್ತು ಎಂಬ ಊಹಾಪೋಹಗಳಿಗೆ ಇದು ಪುಷ್ಟಿ ನೀಡಿದೆ.
ಇದನ್ನೂ ಓದಿ: ಬಿಹಾರ: ಈ ಗೆಲುವು ಮೋದಿಯವರದ್ದು; ನಿತೀಶ್‌ಗೆ ಒಳ ಏಟು ನೀಡಿದ ಚಿರಾಗ್ ಪಾಸ್ವಾನ್?
ಪಕ್ಷದ ಹೀನಾಯ ಸೋಲಿನ ಕುರಿತು ಸುದ್ದಿಗಾರರ ಪ್ರಶ್ನೆಗೆ ಚಿರಾಗ್, ಸೋಲಿನ ವ್ಯಾಖ್ಯೆ ಏನು? ಎಲ್‌ಜೆಪಿ ತನ್ನ ಮತಗಳಿಕೆಯನ್ನು ಹೆಚ್ಚಿಸಿಕೊಂಡಿದೆ ಎಂದು ಉತ್ತರಿಸಿದರು.
ಮಿತ್ರಪಕ್ಷ ಎನ್‌ಡಿಎ ಬಗ್ಗೆ ಜೆಡಿಯು ಅಸಮಾಧಾನಗೊಂಡಿದೆ ಎಂದು ಮಂಗಳವಾರ ಸಂದರ್ಶನದಲ್ಲಿ ಸುಳಿವು ನೀಡಿದ್ದ ಪಕ್ಷದ ವಕ್ತಾರ ಕೆ.ಸಿ.ತ್ಯಾಗಿ, ಚಿರಾಗ್ ಪಾಸ್ವಾನ್‌ರನ್ನು ಆರಂಭದಲ್ಲಿಯೇ ಖಂಡಿಸಬೇಕಿತ್ತು ಮತ್ತು ನಿಯಂತ್ರಿಸಬೇಕಿತ್ತು ಎಂದು ಹೇಳಿದ್ದರು.
ಇದನ್ನೂ ಓದಿ: ಟ್ರಂಪ್ ನಿರ್ಗಮನದ ದಿನ ಎಣಿಸಲೆಂದೇ ಒಂದು ವೆಬ್‌ಸೈಟ್!


