ಗುರೇಜ್ ಸೆಕ್ಟರ್‌ನಿಂದ ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್‌ವರೆಗೆ ನಿಯಂತ್ರಣ ರೇಖೆ (ಎಲ್‌ಒಸಿ) ಉದ್ದಕ್ಕೂ ಪಾಕಿಸ್ತಾನ ಪಡೆಗಳು ನಡೆಸಿದ ಕದನ ವಿರಾಮ ಉಲ್ಲಂಘನೆಯಲ್ಲಿ ಬಿಎಸ್‌ಎಫ್ ಸಬ್ ಇನ್ಸ್‌ಪೆಕ್ಟರ್ ಸೇರಿದಂತೆ ನಾಲ್ವರು ಭದ್ರತಾ ಪಡೆಗಳ ಸಿಬ್ಬಂದಿ ಶುಕ್ರವಾರ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾಕಿಸ್ತಾನದ ಗುಂಡಿನ ದಾಳಿಯಲ್ಲಿ ಮೂವರು ನಾಗರಿಕರು ಸಾವನ್ನಪ್ಪಿದ್ದಾರೆ. ಉರಿಯ ಕಮಲ್‌ಕೋಟ್‌ನಲ್ಲಿ ಇಬ್ಬರು ಮತ್ತು ಬಾಲ್ಕೋಟ್‌ನಲ್ಲಿ ಇನ್ನೊಬ್ಬ ಮಹಿಳೆ ಸಹ ಸಾವನ್ನಪ್ಪಿದ್ದಾರೆ. ಆಕ್ರಮಣದಲ್ಲಿ ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾಕಿಸ್ತಾನದ ಗುಂಡಿನ ದಾಳಿಯಲ್ಲಿ ಹುತಾತ್ಮರಾದ ನಾಲ್ವರು ಭದ್ರತಾ ಸಿಬ್ಬಂದಿಗಳಲ್ಲಿ, ಉರಿಯಲ್ಲಿ ಮೂವರು ಸೇನಾ ಸೈನಿಕರು ಸಾವನ್ನಪ್ಪಿದ್ದಾರೆ ಮತ್ತು ಹಾಜಿ ಪೀರ್ ವಲಯದಲ್ಲಿ ಬಿಎಸ್ಎಫ್ ಸಬ್ ಇನ್ಸ್‌ಪೆಕ್ಟರ್ ಸಹ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾರಾಮುಲ್ಲಾದ ಎಲ್‌ಒಸಿಯಲ್ಲಿ ನಿಯೋಜಿಸಲಾಗಿದ್ದ ಎಸ್‌ಐ ರಾಕೇಶ್ ದೋವಲ್ (39)ಗೆ ದಾಳಿಯಲ್ಲಿ ತಲೆಗೆ ತೀವ್ರವಾದ ಗಾಯಗಳಾಗಿದ್ದು, ನಂತರ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಟ್ರಂಪ್ ಸೋತರೂ, ಟ್ರಂಪ್‌ಯಿಸಂ ಉಳಿದಿದೆ: ಆದರೂ ಯುವ ಅಮೆರಿಕ ಭರವಸೆ ಮೂಡಿಸಿದೆ
4 people who were injured during the ceasefire violation by Pakistan are admitted to the Uri sub-district hospital: Reyaz Ahmad Malik, SDM Baramulla district #JammuAndKashmir pic.twitter.com/7bYe7z2xq0
— ANI (@ANI) November 13, 2020
ಉರಿಯ ವಿವಿಧ ಸ್ಥಳಗಳ ಹೊರತಾಗಿ, ಬಂಡಿಪೋರಾ ಜಿಲ್ಲೆಯ ಗುರೆಜ್ ವಲಯದ ಇಜ್ಮಾರ್ಗ್ ಮತ್ತು ಕುಪ್ವಾರಾ ಜಿಲ್ಲೆಯ ಕೇರನ್ ವಲಯದಲ್ಲೂ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡಿರುವುದು ವರದಿಯಾಗಿದೆ.
ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು. ನಮಗೆ ತುಂಬಾ ಭಯವಾಗುತ್ತಿದೆ. ಗುಂಡಿನ ದಾಳಿ ತಕ್ಷಣ ನಿಲ್ಲಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.
“ನಮ್ಮ ಸೈನಿಕರು ಇಂದು ಕೇರನ್ ಸೆಕ್ಟರ್‌ನಲ್ಲಿ (ಉತ್ತರ ಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿ) ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಇರುವ ಪೋಸ್ಟ್‌ಗಳಲ್ಲಿ ಅನುಮಾನಾಸ್ಪದ ಚಲನೆಯನ್ನು ಗಮನಿಸಿ, ಶಂಕಿತರ ಒಳನುಸುಳುವಿಕೆಯನ್ನು ವಿಫಲಗೊಳಿಸಲಾಗಿದೆ ”ಎಂದು ಶ್ರೀನಗರ ಮೂಲದ ರಕ್ಷಣಾ ವಕ್ತಾರ ಕರ್ನಲ್ ರಾಜೇಶ್ ಕಾಲಿಯಾ ಹೇಳಿದ್ದಾರೆ.
ಒಂದು ವಾರದೊಳಗೆ ನಡೆದ ಎರಡನೇ ಒಳನುಸುಳುವಿಕೆ ಪ್ರಯತ್ನ ಇದಾಗಿದ್ದು. ನವೆಂಬರ್ 7- 8 ರ ಮಧ್ಯರಾತ್ರಿಯಲ್ಲಿ ಮಚಿಲ್ ವಲಯದಲ್ಲಿ ಈ ಹಿಂದೆ ನಡೆದ ದಾಳಿಯಲ್ಲಿ, ಮೂವರು ಉಗ್ರರನ್ನು ಹತ್ಯೆ ಮಾಡಲಾಗಿತ್ತು.


