ಬಿಹಾರ ಚುನಾವಣೆಯಲ್ಲಿನ ಸೋಲಿನ ನಂತರ ಮಹಾಘಟಬಂಧನ್ ಸೌಹಾರ್ದತೆಯ ನಡುವಿನ ಬಿರುಕುಗಳು ಭಾನುವಾರ ಬೆಳಕಿಗೆ ಬಂದಿದ್ದು, ತೇಜಸ್ವಿ ಯಾದವ್ ನೇತೃತ್ವದ ರಾಷ್ಟ್ರೀಯ ಜನತಾದಳದ (RJD) ಹಿರಿಯ ಮುಖಂಡರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
“ಮಹಾಘಟಬಂಧನ್‌ಗೆ ಕಾಂಗ್ರೆಸ್ ಪಕ್ಷವೇ ಮುಳುವಾಯಿತು. ಅವರು 70 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಆದರೆ 70 ಸಾರ್ವಜನಿಕ ರ್ಯಾಲಿಗಳನ್ನೂ ಸಹ ನಡೆಸಲಿಲ್ಲ. ರಾಹುಲ್ ಗಾಂಧಿ ಮೂರು ದಿನಗಳ ಕಾಲ ಬಂದರು, ಪ್ರಿಯಾಂಕಾ ಗಾಂಧಿ ಬರಲೇ ಇಲ್ಲ. ಬಿಹಾರದ ಪರಿಚಯವೇ ಇಲ್ಲದವರು ಇಲ್ಲಿಗೆ ಬಂದರು. ಇದು ಸರಿಯಲ್ಲ” ಎಂದು ಶಿವಾನಂದ್ ತಿವಾರಿ ಅಭಿಪ್ರಾಯ ವ್ಯಕ್ತಪಡಿಸಿದರು.
RJD, ಕಾಂಗ್ರೆಸ್ ಮತ್ತು ಎಡ ಪಕ್ಷಗಳ ಮಹಾ ಮೈತ್ರಿ ಅಥವಾ ಮಹಾಘಟಬಂಧನ್ ಬಹುಮತದ ಕೊರತೆಯಿಂದಾಗಿ ಸೋಲನ್ನು ಅನುಭವಿಸಿದೆ. ಚುನಾವಣಾ ಎಕ್ಸಿಟ್ ಪೋಲ್ ಸಮೀಕ್ಷೆಗಳು ತಲೆಕೆಳಗಾಗಿವೆ.
ಇದನ್ನೂ ಓದಿ: ಬಿಹಾರ: ಕೇವಲ 40 ಸ್ಥಾನ ಪಡೆದ ಜನಾದೇಶವಿಲ್ಲದವರು ಹೇಗೆ ಸಿಎಂ ಆಗುತ್ತಾರೆ?- RJD ಪ್ರಶ್ನೆ
243 ಸ್ಥಾನಗಳ ಪೈಕಿ 70 ಸ್ಥಾನಗಳಲ್ಲಿ ಸ್ಪರ್ಧಿಸಿ ಕೇವಲ 19 ಸ್ಥಾನಗಳನ್ನು ಮಾತ್ರ ಪಡೆದುಕೊಂಡು, ಮೈತ್ರಿಯ ಹಿನ್ನಡೆಗೆ ಕಾರಣವಾಗಿದ್ದಕ್ಕಾಗಿ ಕಾಂಗ್ರೆಸ್ ಪಕ್ಷವು ವ್ಯಾಪಕ ಟೀಕೆಗೆ ಒಳಗಾಯಿತು.
“ಇದು ಬಿಹಾರದಲ್ಲಿ ಮಾತ್ರ ಅಲ್ಲ ಎಂದು ನಾನು ಭಾವಿಸುತ್ತೇನೆ. ಇತರ ರಾಜ್ಯಗಳಲ್ಲಿಯೂ ಸಹ ಕಾಂಗ್ರೆಸ್ ಗರಿಷ್ಠ ಸಂಖ್ಯೆಯ ಸ್ಥಾನಗಳಿಗೆ ಸ್ಪರ್ಧಿಸಲು ಹೆಚ್ಚಿನ ಒತ್ತು ನೀಡುತ್ತದೆ. ಆದರೆ ಗರಿಷ್ಠ ಸಂಖ್ಯೆಯ ಸ್ಥಾನಗಳನ್ನು ಗೆಲ್ಲುವಲ್ಲಿ ಅವರು ವಿಫಲರಾಗುತ್ತಾರೆ. ಕಾಂಗ್ರೆಸ್ ಈ ಬಗ್ಗೆ ಯೋಚಿಸಬೇಕು” ಎಂದು ತಿವಾರಿ ಹೇಳಿದರು.
ಇದನ್ನೂ ಓದಿ: ಬಿಹಾರ: ಸಿಎಂ ನಿತೀಶ್ ಅನ್ನು ನಿಯಂತ್ರಿಸುವ ರಿಮೋಟ್ ಬೇರೆಯವರ ಬಳಿಯಿದೆ- ತಾರಿಖ್ ಅನ್ವರ್
“ಇಲ್ಲಿ ಚುನಾವಣೆಗಳು ಭರದಿಂದ ಸಾಗಿತ್ತು. ಆದರೆ ರಾಹುಲ್ ಗಾಂಧಿ ಶಿಮ್ಲಾದ ಪ್ರಿಯಾಂಕಾ ಜಿ ಅವರ ಮನೆಯಲ್ಲಿ ಪಿಕ್‌ನಿಕ್ ಮಾಡುತ್ತಿದ್ದರು. ಪಕ್ಷವು ಹಾಗೇ ನಡೆಯುತ್ತದೆಯೇ? ಕಾಂಗ್ರೆಸ್ ಪಕ್ಷವನ್ನು ನಡೆಸುತ್ತಿರುವ ರೀತಿ ಬಿಜೆಪಿಗೆ ಲಾಭವಾಗುತ್ತಿದೆ” ಎಂದು ಆರೋಪಿಸಿದರು.
ಇದೇ ರೀತಿಯ ಅಭಿಪ್ರಾಯವನ್ನು RJD ಮುಖಂಡ ತಾರಿಖ್ ಅನ್ವರ್ ಕೂಡ ವ್ಯಕ್ತಪಡಿಸಿದ್ದರು. ನಿನ್ನೆ ಎನ್‌ಡಿಎ ಕೂಡದಿಂದ ನಿತೀಶ್ ಕುಮಾರ್ ಅವರನ್ನು ಮುಖ್ಯಮಂತ್ರಿಯಾಗಿ ಒಮ್ಮತದಿಂದ ಘೊಷಿಸಲಾಯಿತು. ಇದಾದ ನಂತರ ಈ ಬಿರುಕು ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಬಿಜೆಪಿಯ ಫ್ಯಾಸಿಸ್ಟ್ ಆಕ್ರಮಣವನ್ನು ಹಿಮ್ಮೆಟ್ಟಿಸಲು ಹೋರಾಟಕ್ಕೆ ಸಿದ್ಧರಾಗಿ: ಬಿಹಾರದ ಮುಂಚೂಣಿ ಎಡಪಕ್ಷ ಸಿಪಿಐ(ಎಂಎಲ್) ಕರೆ


