Homeಮುಖಪುಟಬಿಹಾರ: ಸಿಎಂ ನಿತೀಶ್‌ ಅನ್ನು ನಿಯಂತ್ರಿಸುವ ರಿಮೋಟ್ ಬೇರೆಯವರ ಬಳಿಯಿದೆ- ತಾರಿಖ್ ಅನ್ವರ್

ಬಿಹಾರ: ಸಿಎಂ ನಿತೀಶ್‌ ಅನ್ನು ನಿಯಂತ್ರಿಸುವ ರಿಮೋಟ್ ಬೇರೆಯವರ ಬಳಿಯಿದೆ- ತಾರಿಖ್ ಅನ್ವರ್

ಇತ್ತೀಚೆಗೆ ನಿತೀಶ್ ಕುಮಾರ್ ಎನ್‌ಡಿಎ ಮೈತ್ರಿಕೂಟದ ಉತ್ತಮ ನಾಯಕರಾಗಿದ್ದರು. ಆದರೆ ಈ ಬಾರಿಯ ಸಂದರ್ಭ ಮೊದಲಿನಂತಿಲ್ಲ. ಬಿಜೆಪಿಯ ಒಳ ಮರ್ಮದಿಂದ ಅವರನ್ನು ನಿಶಕ್ತಿಗೊಳಿಸಲಾಗಿದೆ

- Advertisement -
- Advertisement -

ಬಿಹಾರದ ಮುಖ್ಯಮಂತ್ರಿಯಾಗಿ ನಿತೀಶ್‌ ಕುಮಾರ್ ಅವರ ಹೆಸರನ್ನು ಅಧಿಕೃತವಾಗಿ ಘೋಷಿಸಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡರಾದ ತಾರಿಖ್ ಅನ್ವರ್ ಪ್ರತಿಕ್ರಿಯಿಸಿ, “ನಿತೀಶ್‌ ಮುಖ್ಯಂತ್ರಿಯಾದರೂ, ಅವರನ್ನು ನಿಯಂತ್ರಿಸುವ ರಿಮೋಟ್‌ ಬೇರೆಯವರ ಬಳಿಯಿದೆ” ಎಂದಿದ್ದಾರೆ.

ಈ ಕುರಿತು ಅವರು ನೀಡಿರುವ ಹೇಳಿಕೆಯನ್ನು ಟ್ವೀಟ್ ಮಾಡಿರುವ ಎಎನ್‌ಐ, “ಇತ್ತೀಚೆಗೆ ನಿತೀಶ್ ಕುಮಾರ್ ಎನ್‌ಡಿಎ ಮೈತ್ರಿಕೂಟದ ಉತ್ತಮ ನಾಯಕರಾಗಿದ್ದರು. ಆದರೆ ಈ ಬಾರಿಯ ಸಂದರ್ಭ ಮೊದಲಿನಂತಿಲ್ಲ. ಬಿಜೆಪಿಯ ಒಳ ಮರ್ಮದಿಂದ ಅವರನ್ನು ನಿಶಕ್ತಿಗೊಳಿಸಲಾಗಿದೆ. ಈಗ ಅವರು ಎನ್‌ಡಿಎ ನಾಯಕರಾಗಿ ಅಥವಾ ಬಿಹಾರದ ಮುಖ್ಯಮಂತ್ರಿಯಾದರೂ ಸಹ, ಇವರನ್ನು ನಿಯಂತ್ರಿಸುವ ರಿಮೋಟ್‌ ಬೇರೆಯವರ ಬಳಿಯಿರುತ್ತದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ನೆರೆ ಪರಿಹಾರ ಕೊಡದಿದ್ದರೆ ರಾಜ್ಯದಾದ್ಯಂತ ತೀವ್ರ ಹೋರಾಟ – ಕರವೇ ಟಿ.ಎ.ನಾರಾಯಣಗೌಡರು

ಇದನ್ನೂ ಓದಿ: ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಪಿಎಚ್‌‌ಡಿ, ಎಂಫಿಲ್ ಫೆಲೋಶಿಪ್ ಕಡಿತಗೊಳಿಸಿದ ಸರ್ಕಾರ!

ಇಂದು ಬಿಹಾರ ಮುಖ್ಯಮಂತ್ರಿ ಮತ್ತು ಇತರೆ ಅಂಶಗಳನ್ನು ನಿರ್ಧರಿಸಲು ಎನ್‌ಡಿಎ ಸಭೆ ಸೇರಿತ್ತು. ನಿತೀಶ್‌ ಕುಮಾರ್ ಅವರೇ ಮುಖ್ಯಮಂತ್ರಿ ಎಂಬುದನ್ನು ಬಿಜೆಪಿಯ ಉನ್ನತ ನಾಯಕರು ಸೇರಿದಂತೆ ಬಹುಪಾಲು ನಾಯಕರು ಖಚಿತಪಡಿಸಿದ್ದಾರೆ. ಇದೀಗ ಎನ್‌ಡಿಎ ವತಿಯಿಂದ ಮೈತ್ರಿಕೂಟದ ಎಲ್ಲಾ ಪಕ್ಷಗಳೂ ಸಭೆ ಸೇರಿ ಒಮ್ಮತ ನಿರ್ಧಾರಕ್ಕೆ ಬಂದಿದ್ದು, ನಿತೀಶ್‌ ಕುಮಾರ್ ಬಿಹಾರದ ಮುಖ್ಯಮಂತ್ರಿ ಎಂದು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ.

ಈ ನಡುವೆ ಆರ್‌ಜೆಡಿ ಮುಖಂಡರಾದ ಮನೋಜ್ ಝಾ ಮಾತನಾಡಿ, “ಕೇವಲ 40 ಸೀಟುಗಳನ್ನು ಗೆದ್ದಿರುವವರು ಹೇಗೆ ಮುಖ್ಯಮಂತ್ರಿಯಾಗಲು ಸಾಧ್ಯ? ಜನಾದೇಶವು ಆತನ ವಿರುದ್ಧವಾಗಿದೆ. ಆತ ನಿರ್ಣಾಮವಾಗುತ್ತಾನೆ ಮತ್ತು ಅದನ್ನು ನಿರ್ಧರಿಸಬೇಕಿದೆ. ಬಿಹಾರವು ಸ್ವಯಂಪ್ರೇರಿತವಾಗಿ ತನ್ನ ಪರ್ಯಾಯವನ್ನು ಕಂಡುಕೊಳ್ಳುತ್ತದೆ. ಇದಕ್ಕೆ ಒಂದು ವಾರ ತೆಗೆದುಕೊಳ್ಳಬಹುದು, ಹತ್ತು ದಿನ ಅಥವಾ 1 ತಿಂಗಳು ತೆಗೆದುಕೊಳ್ಳಬಹುದು. ಆದರೆ ಇದು ಖಂಡಿತ ಸಂಭವಿಸುತ್ತದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಿಹಾರ ಫಲಿತಾಂಶ: ಜನ ಕೆಲವೊಮ್ಮೆ ಎರಡನೇ ಅವಕಾಶ ನೀಡುತ್ತಾರೆ- ಸೋನು ಸೂದ್

ಬಿಹಾರ ಚುನಾವಣೆಯಲ್ಲಿ ಆರ್‌ಜೆಡಿ ಪಕ್ಷವು ರಾಜ್ಯದ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, 75 ಸ್ಥಾನಗಳನ್ನು ಗೆದ್ದುಕೊಂಡಿದೆ. ನಂತರದ ಸ್ಥಾನದಲ್ಲಿ ಬಿಜೆಪಿಯು 74 ಸ್ಥಾನಗಳನ್ನು ಗೆದ್ದುಕೊಂಡಿದೆ. ನಿತೀಶ್‌ ಕುಮಾರ್ ನೇತೃತ್ವದ ಜೆಡಿಯು ಪಕ್ಷವು ಕೇವಲ 43 ಸ್ಥಾನಗಳನ್ನು ಗೆದ್ದುಕೊಂಡಿದೆ. ಆದರೆ ಎನ್‌ಡಿಎ ಮೈತ್ರಿ ಪಕ್ಷವು 125 ಸ್ಥಾನಗಳನ್ನು ಗೆದ್ದುಕೊಂಡು ಸ್ಪಷ್ಟ ಬಹುಮತವನ್ನು ಪಡೆದುಕೊಂಡಿದೆ.

ತೇಜಸ್ವಿ ಯಾದವ್ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ, ಮತ ಮರು ಎಣಿಕೆಗೆ ಒತ್ತಾಯಿಸಿ ಅಭಿಯಾನವನ್ನು ಆರಂಭಿಸಿದ್ದಾರೆ. ಮತ್ತೊಂದು ಕಡೆ ಈ ಬಾರಿ ನಿತೀಶ್‌ ಕುಮಾರ್‌ಗೆ ಮುಖ್ಯಮಂತ್ರಿ ಸ್ಥಾನ ಸಿಗುವುದಿಲ್ಲ ಎಂದು ಹಲವರು ಅಭಿಪ್ರಾಯಪಟ್ಟಿದ್ದರು.

ಆರ್‌ಜೆಡಿ ನೇತೃತ್ವದ ಮಹಾಘಟಬಂಧನ್ 110 ಸ್ಥಾನಗಳನ್ನು ಗೆದ್ದುಕೊಂಡಿದ್ದು, ಬಹುಮತದ ಅಂಚಿಗೆ ಬಂದು ಕೆಳಗಿಳಿದಿತ್ತು. ಇದರ ನಡುವೆ ಬಿಹಾರದಲ್ಲಿ ಎಡ ಪಕ್ಷಗಳಾದ ಸಿಪಿಐ (ಎಂ-ಎಲ್) ಬಹುತೇಕ ಮುಂಚೂಣಿಯ ಪಕ್ಷಗಳಾಗಿ ಹೊರಹೊಮ್ಮಿವೆ. ಇನ್ನು ಓವೈಸಿ ನೇತೃತ್ವದ ಪಕ್ಷವು ಸುಮಾರು 5 ಸ್ಥಾನಗಳನ್ನು ಗೆದ್ದುಕೊಂಡಿದೆ.


ಇದನ್ನೂ ಓದಿ: ಬಿಹಾರ: ಕೇವಲ 40 ಸ್ಥಾನ ಪಡೆದ ಜನಾದೇಶವಿಲ್ಲದವರು ಹೇಗೆ ಸಿಎಂ ಆಗುತ್ತಾರೆ?- RJD ಪ್ರಶ್ನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದಲಿತ ಕುಟುಂಬದ ಮೂವರ ಹತ್ಯೆ ಪ್ರಕರಣ: ಪೊಲೀಸರ ವರ್ಗಾವಣೆ

0
ಉತ್ತರಪ್ರದೇಶದ ಕೌಶಂಬಿ ಜಿಲ್ಲೆಯ ಸಂದೀಪನ್ ಘಾಟ್ ಪ್ರದೇಶದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿ ದಲಿತ ಕುಟುಂಬದ ಮೂವರು ಸದಸ್ಯರ ಹತ್ಯೆ ನಡೆದಿದ್ದು, ಇದೀಗ ಸ್ಥಳೀಯ ಪೊಲೀಸ್ ಠಾಣಾಧಿಕಾರಿ ಮತ್ತು ಹೊರಠಾಣೆ ಪ್ರಭಾರ ಅಧಿಕಾರಿಯನ್ನು ವರ್ಗಾಯಿಸಲಾಗಿದೆ. ಸಾಂದೀಪನ್...