Homeಮುಖಪುಟ’ಸಾಲ್ ಮುಬಾರಕ್‌’ ಪದ ಬಳಕೆಗೆ ಆಕ್ಷೇಪ: ಟ್ರೋಲ್‌‌ಗೊಳಗಾದ ಮೋದಿ ಸಮರ್ಥಕ ಮೋಹನ್‌ದಾಸ್‌ ಪೈ!‌

’ಸಾಲ್ ಮುಬಾರಕ್‌’ ಪದ ಬಳಕೆಗೆ ಆಕ್ಷೇಪ: ಟ್ರೋಲ್‌‌ಗೊಳಗಾದ ಮೋದಿ ಸಮರ್ಥಕ ಮೋಹನ್‌ದಾಸ್‌ ಪೈ!‌

ಇನ್ಫೋಸಿಸ್‌‌‌ನ ಮಾಜಿ ನಿರ್ದೇಶಕರೂ ಆಗಿರುವ ಅವರು ಅಮೆರಿಕದ ಹೊಸ ಚುನಾಯಿತ ಅಧ್ಯಕ್ಷ ಹಾಗೂ ಉಪಾಧ್ಯಕ್ಷೆಯನ್ನು ಟ್ರೋಲ್ ಮಾಡಲು ಹೋಗಿ ತಾನೆ ನೆಗೆಪಾಟಲಿಗೀಡಾಗಿದ್ದಾರೆ.

- Advertisement -
- Advertisement -

ಬಿಜೆಪಿ ಹಾಗೂ ಪ್ರಧಾನಿ ಮೋದಿಯ ಸಮರ್ಥಕ, ಇನ್ಫೋಸಿಸ್ ಮಾಜಿ ನಿರ್ದೇಶಕ ಮೋಹನ್‌ದಾಸ್‌ ಪೈ, ಅಮೆರಿಕದ ಹೊಸ ಚುನಾಯಿತ ಅಧ್ಯಕ್ಷ ಹಾಗೂ ಉಪಾಧ್ಯಕ್ಷೆಯನ್ನು ಟ್ರೋಲ್ ಮಾಡಲು ಹೋಗಿ ತಾನೆ ನೆಗೆಪಾಟಲಿಗೀಡಾಗಿದ್ದಾರೆ.

ದೀಪಾವಳಿ ಹಿನ್ನಲೆಯಲ್ಲಿ ಅಮೆರಿಕದ ಹೊಸ ಚುನಾಯಿತ ಅಧ್ಯಕ್ಷ ಜೋ ಬೈಡೆನ್ ಹಾಗೂ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್, ದೀಪಾವಳಿಗೆ ಶುಭಾಶಯ ಕೋರಿ ಕೊನೆಯಲ್ಲಿ “ಸಾಲ್ ಮುಬಾರಕ್”(ಹೊಸವರ್ಷದ ಶುಭಾಶಯ) ಎಂದಿದ್ದರು.

ಆದರೆ ಅದರಲ್ಲಿರುವ “ಸಾಲ್ ಮುಬಾರಕ್” ಎಂಬ ಪದ ಮೋಹನ್‌ದಾಸ್‌ ಪೈ ಅವರಿಗೆ ಅನ್ಯವಾಗಿ ಕಂಡಿದ್ದು, ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿ, “ಭಾರತದಲ್ಲಿ ಯಾರೂ ದೀಪಾವಳಿಗೆ ’ಸಾಲ್ ಮುಬಾರಕ್’ ಎಂದು ಶುಭಾಶಯ ಕೊರುವುದಿಲ್ಲ, ಈ ’ನಕಲಿ’ ಶುಭಾಶಯವನ್ನು ಎಲ್ಲಿಂದ ಆಯ್ಕೆ ಮಾಡಿಕೊಂಡಿರಿ” ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದರು.

ಇದನ್ನೂ ಓದಿ: ಕುನಾಲ್ ಕಮ್ರ ಟ್ವೀಟ್ ಇಷ್ಟವಾಗದಿದ್ದರೆ, ಓದಬೇಡಿ ಅಷ್ಟೇ: ಟ್ವಿಟ್ಟರ್‌ನಲ್ಲಿ ಮತ್ತಷ್ಟು ಟ್ರೋಲ್!

ದೀಪಾವಳಿಯ ಮರುದಿನ ಗುಜರಾತಿಗಳಿಗೆ ಹೊಸ ವರ್ಷವಾಗಿದ್ದು ಅದನ್ನು ಧರ್ಮಾತೀತವಾಗಿ ಆಚರಿಸುತ್ತಾರೆ. ಈ ಹಿನ್ನಲೆಯಲ್ಲಿ ಅಮೆರಿಕದ ನೂತರ ಚುನಾಯಿತ ಅಧ್ಯಕ್ಷರುಗಳ ಟ್ವೀಟ್‌ಗಳು ಬಂದಿದೆ. ಅಷ್ಟೇ ಅಲ್ಲದೆ ಸ್ವತಃ ಗುಜರಾತಿನವರಾದ ಪ್ರಧಾನಿ ಮೋದಿ ಕೂಡಾ ಹಲವು ವರ್ಷಗಳಿಂದ ’ಸಾಲ್ ಮುಬಾರಕ್’ ಎಂದೇ ಶುಭಾಶಯ ಕೋರಿದ್ದಾರೆ. ಆದರೆ ಇದರ ಅರಿವಿಲ್ಲದ ಮೋಹನ್‌ದಾಸ್‌ ಪೈ ಯಾವುದೊ ಪೂರ್ವಾಗ್ರದಿಂದ ’ಸಾಲ್ ಮುಬಾರಕ್‌‌’ ಎಂಬ ಪದವನ್ನು ಆಕ್ಷೇಪಣೆ ಮಾಡಿ ಟ್ರೋಲ್‌‌ಗೆ ಒಳಗಾಗಿದ್ದಾರೆ.

 

ಇದೀಗ ಮೋಹನ್‌ದಾಸ್‌ ಪೈ ಅವರನ್ನು ಟ್ವಿಟ್ಟರಿಗರು ತರಾಟೆಗೆ ಪಡೆದು, ಟ್ರೋಲ್ ಮಾಡುತ್ತಿದ್ದಾರೆ. ಪತ್ರಕರ್ತೆ ಸಂಧ್ಯಾ, “ಮಾನ್ಯ ಪೈ ಅವರೇ, ಕುಟುಂಬ ಹಾಗೂ ಸ್ನೇಹಿತರ ಸುತ್ತ ನಿಮ್ಮನ್ನು ಮೂರ್ಖರನ್ನಾಗಿ ಮಾಡಿಕೊಳ್ಳುವುದು ಸರಿ. ಯಾಕೆಂದರೆ ಅವರಿಗೆ ನಿಮ್ಮ ಬಗ್ಗೆ ಗೊತ್ತಿದೆ. ಆದರೆ ಅದನ್ನು ಅಮೆರಿಕದ ಚುನಾಯಿತ ಉಪಾಧ್ಯಕ್ಷೆಯ ಮುಂದೆ ಮಾಡಬೇಕೆ?” ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಚಿಲ್ ಡೊನಾಲ್ಡ್ ಚಿಲ್!: ಟ್ರಂಪ್ ಟ್ರೋಲ್ ಮಾಡಿ ಸೇಡು ತೀರಿಸಿಕೊಂಡ ಗ್ರೇಟಾ ಥನ್ಬರ್ಗ್!

ಪತ್ರಕರ್ತೆ ಸುಜಾತ ಆನಂದನ್, ಹಿಲರಿ ಕ್ಲಿಂಟನ್ ಅವರ  “ಸಾಲ್ ಮುಬಾರಕ್” ಶುಭಾಶಯವಿರುವ ಟ್ವೀಟನ್ನು ರೀಟ್ವೀಟ್ ಮಾಡಿ, “ಮೋಹನ್ ದಾಸ್ ಪೈ ಅವರೆ ಇದು ನಿಮಗಾಗಿ ಪ್ರೀತಿಯಿಂದ, ಅಂಕಲ್ ’ಪಿ’ ಆಕಾಶದಲ್ಲಿದ್ದಾರೆ” ಎಂದು ಚುಚ್ಚಿದ್ದಾರೆ.

ಉದ್ಯಮಿ ಸುಭಜಿತ್ ರಾಯ್, “ಸಾಲ್ ಮುಬಾರಕ್ ಎನ್ನುವುದು ಗುಜರಾತಿಗಳ ಶುಭಾಶಯ. ಗುಜರಾತಿ ಹೊಸ ವರ್ಷದ ಶುಭಕೋರಲು ಬಳಸಲಾಗುತ್ತದೆ, ಇದು ದೀಪಾವಳಿಯ ನಂತರದ ದಿನ ಬರುರುತ್ತದೆ. ನಿಮಗಿದು ತಿಳಿದಿರಲಿ ಎಂದು ಹಾರೈಸುತ್ತೇನೆ” ಎಂದು ಸಾಲ್ ಮುಬಾರಕ್ ಬಗ್ಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಅರ್ನಾಬ್ ಬಂಧನ ಖಂಡಿಸಿ ಟ್ರೋಲ್‌ಗೊಳಗಾದ ಬೆಂಗಳೂರು ಎಡಿಟರ್ಸ್‌ ಗಿಲ್ಡ್!

ಸಾಮಾಜಿಕ ಕಾರ್ಯಕರ್ತೆ ಸಂಜುಕ್ತಾ ಬಸು ಪ್ರಧಾನಿ ಮೋದಿ ಈ ಹಿಂದೆ ಸಾಲ್ ಮುಬಾರಕ್ ಎಂದು ಶುಭಾಶಯ ಕೋರಿರುವ ಟ್ವೀಟ್‌‌ನ ಸ್ಕ್ರೀನ್ ಶಾರ್ಟ್ ಹಾಕಿ, “ಇದು ತುಂಬಾ ಕೆಟ್ಟದಾಗಿದೆ. ಮೊದಿ ಪ್ರತಿ ವರ್ಷ ಸಾಲ್ ಮುಬಾರಕ್ ಹೇಳುತ್ತಾರೆ. ಪಾಪಾದ ಮೋಹನ್ ದಾಸ್ ಜೊ ಬೈಡೆನ್ ಮತ್ತು ಕಮಲಾ ಹ್ಯಾರಿಸ್ ಬಗ್ಗೆ ಮಾತನಡುತ್ತಿರಲು ಕಾರಣ, ಅವರಿಬ್ಬರು ’ನಮಸ್ತೆ ಟ್ರಂಪ್ ಮತ್ತು ಹೌಡಿ ಮೋದಿ’ಯನ್ನು ಸೋಲಿಸಿದ್ದಾರೆ” ಎಂದು ವ್ಯಂಗ್ಯವಾಡಿದ್ದಾರೆ.

ಪನ್ಸ್ಟಾರ್‌ ಎನ್ನುವ ಟ್ವಿಟ್ಟರ್‌ ಹ್ಯಾಂಡಲ್, “ಕ್ಷಮಿಸಿ ಮೋಹನ್‌ದಾಸ್‌ ಪೈ, ಭಾರತದ ಕೆಲವರು ಸಾಲ್ ಮುಬಾರಕ್‌ ಎಂದೇ ಶುಭಾಶಯ ಕೋರಿದ್ದಾರೆ. ಬಹುಷಃ ಕಮಲಾ ಹ್ಯಾರಿಸ್ ಆ ’ನಕಲಿ ಶುಭಾಶಯ’ ವನ್ನು ಇಲ್ಲಿಂದಲೇ ತೆಗೆದು ಕೊಂಡಿದ್ದಾರೆ” ಎಂದು ಪ್ರಧಾನಿ ಮೋದಿ ಮಾಡಿರುವ ಟ್ವೀಟ್‌‌ನ ಸ್ಕ್ರೀನ್ ಶಾರ್ಟ್ ಹಾಕಿದ್ದಾರೆ.

ಇದನ್ನೂ ಓದಿ: ಸಿವಿಲ್ ವಾರ್‌ ಸುದ್ದಿ: ಭಾರತೀಯ ಮಾಧ್ಯಮವನ್ನು ಟ್ರೋಲ್ ಮಾಡುತ್ತಿರುವ ಪಾಕಿಸ್ತಾನಿಯರು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...